CCL 2025: ಡಾರ್ಲಿಂಗ್ ಕೃಷ್ಣ ಶತಕ; ಮುಂಬೈ ಹೀರೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್‌ಗೆ ಭಾರಿ ಮುನ್ನಡೆ

ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈ ರ್‍ಹಿನೋಸ್ ವಿರುದ್ದ ಅಬ್ಬರಿಸಿದ್ದ ಕರ್ನಾಟಕ ಬುಲ್ಡೋಜರ್ಸ್ ಶನಿವಾರ ಮುಂಬೈ ಹೀರೋಸ್ ವಿರುದ್ಧ ಸೆಣೆಸುತ್ತಿದ್ದು ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಡಾರ್ಲಿಂಗ್ ಕೃಷ್ಣ ಅಬ್ಬರದ ಬ್ಯಾಟಿಂಗ್ ಎದರು ಮುಂಬೈ ಹಿರೋಸ್ ತತ್ತರಿಸಿ ಹೋಗಿದೆ. ಮೊದಲ 10 ಓವರ್ ಗಳಲ್ಲೇ ಕರ್ನಾಟಕ ಬುಲ್ಡೋಜರ್ಸ್‌ 171 ರನ್‌ ಕಲೆಹಾಕಿದ್ದು, ಡಾರ್ಲಿಂಗ್ ಕೃಷ್ಣ ಅಮೋಘ ಶತಕ ಸಿಡಿಸಿ ಮಿಂಚಿದರು. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಮುಂಬೈ ಹೀರೋಸ್ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 100 ರನ್ ಗಳಿಸುವ ಮೂಲಕ 71 ರನ್‌ಗಳ ಹಿನ್ನಡೆ ಸಾಧಿಸಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರು ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಹೀರೋಸ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್‌ನ 10 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.

ccl 2025 karnataka bulldozers vs mumbai heros darling krishna century

ಡಾಲಿಂಗ್ ಕೃಷ್ಣ ಮುಂಬೈ ಹೀರೋಸ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. 36 ಎಸೆತಗಳಲ್ಲಿ 11 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 111 ರನ್ ಗಳಿಸಿದರು. ರಾಜೀವ್ ಹನು 24 ಎಸೆತಗಳಲ್ಲಿ 6 ಬೌಂಡರಿ ಸಹಿತ 37 ರನ್ ಗಳಿಸಿದರು. ಮುಂಬೈ ಹೀರೋಸ್ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದಲ್ಲದೆ ಬರೋಬ್ಬರಿ 21 ವೈಡ್ ಸಹಿತ 22 ರನ್ ಇತರ ರನ್ ಬಿಟ್ಟುಕೊಟ್ಟಿತು.

ಬೃಹತ್ ಮುನ್ನಡೆ ಪಡೆದ ಸುದೀಪ್ ಪಡೆ

171 ರನ್‌ಗಳನ್ನು ಬಿಟ್ಟುಕೊಟ್ಟ ಬಳಿಕ ಬ್ಯಾಟಿಂಗ್ ಆರಂಭಿಸಿದ ಮುಂಬೈ ಹೀರೋಸ್ ಕರ್ನಾಟಕ ಬುಲ್ಡೋಜರ್ಸ್ ಬೌಲಿಂಗ್ ಎದುರು ದೊಡ್ಡ ಸ್ಕೋರ್ ಕಲೆ ಹಾಕಲು ಪರದಾಡಿತು. 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 100 ರನ್ ಮಾತ್ರ ಗಳಿಸಿತು. ಶಬೀರ್ ಅಹ್ಲುವಾಲಿಯಾ 16 ಎಸೆತಗಳಲ್ಲಿ 35 ರನ್ ಗಳಿಸಿ ಮುಂಬೈ ಹೀರೋಸ್‌ಗೆ ನೆರವಾದರು. ರಾಜೀವ್ ಗೋವಿಂದ್ 17 ರನ್ ಗಳಿಸಿದರೆ, ಸಿದ್ದಾರ್ಥ್ 11 ರನ್ ಗಳಿಸಿದರು. ಇವರನ್ನು ಹೊರತುಪಡಿಸಿದರೆ ಉಳಿದ ಆಟಗಾರರು ಎರಡಂಕಿ ರನ್ ಗಳಿಸುವಲ್ಲಿ ವಿಫಲವಾದರು.

ಕರಣ್ ಆರ್ಯನ್‌ 2 ಓವರ್ ಗಳಲ್ಲಿ 16 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು. ಕಾರ್ತಿಕ್ ಜಯರಾಮ್ 2 ವಿಕೆಟ್ ಪಡೆದರೆ, ಸುನೀಲ್ ರಾವ್ ಮತ್ತು ಮಂಜುನಾಥ್ ಗೌಡ ತಲಾ ಒಂದು ವಿಕೆಟ್ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+