Priyanka Chopra: ಗಂಡ, ಮಗಳೊಂದಿಗೆ ರಾಮನ ದರ್ಶನ ಪಡೆದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

ಅಯೋಧ್ಯೆ, ಮಾರ್ಚ್ 20: ಇತ್ತೀಚೆಗೆ ದುಬೈನಲ್ಲಿ ರಜೆಯ ದಿನಗಳನ್ನು ಆನಂದಿಸುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ತಮ್ಮ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿ ಅವರೊಂದಿಗೆ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಬಾಲ ರಾಮನ ದರ್ಶನಕ್ಕೆ ಬಂದ

ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದ ನಟಿ ಪ್ರಿಯಾಂಕಾ ಚೋಪ್ರಾ ಅವರ ಕುಟುಂಬದ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸ್ಟಾರ್ ದಂಪತಿ ಭಾರತೀಯ ಬಟ್ಟೆಗಳನ್ನು ಧರಿಸಿರುವುದನ್ನು ಕಾಣಬಹುದು. ಹಳದಿ ಸೀರೆಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಪಕ್ಕಾ ದೇಸಿ ಗರ್ಲ್ ರೀತಿ ಕಾಣಿಸಿಕೊಂಡಿದ್ದಾರೆ. ಮೂವರನ್ನು ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಭದ್ರತೆಯಿಂದ ಕಾರಿಗೆ ಕರೆದೊಯ್ಯಲಾಯಿತು.

Bollywood Actress Priyanka Chopra Nick Jonas visit Ayodhya s Ram Mandir with daughter Malti

ಜನವರಿ 22, 2024 ರಂದು ರಾಮಮಂದಿರ ಉದ್ಘಾಟನೆಯಾದಾಗ ನಟಿ ಪ್ರಿಯಾಂಕಾ ಚೋಪ್ರಾ ಭಾರತದಲ್ಲಿರಲಿಲ್ಲ. ಸದ್ಯ ಭಾರತಕ್ಕೆ ವಾಪಸ್ ಆಗಿದ್ದು, ತನ್ನ ಗಂಡ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿ ಜೋನಸ್ ಜೊತೆಗೆ ಅಯೋಧ್ಯೆಗೆ ಭೇಟಿ ನೀಡಿ ಬಾಲ ರಾಮನ ದರ್ಶನ ಪಡೆದಿದ್ದಾರೆ.

ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಹಳದಿ ಸೀರೆಯಲ್ಲಿ ಮುದ್ದಾಗಿ ಕಾಣುತ್ತಿದ್ದರು. ಮಾಲ್ತಿ ಸ್ಲೀವ್‌ಲೇಸ್ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಮುದ್ದಾಗಿ ಕಾಣುತ್ತಿದ್ದರು. ನಿಕ್ ಜೋನಾಸ್ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಪ್ರಿಂಟೆಡ್ ಕುರ್ತಾ ಧರಿಸಿದ್ದರು. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಮತ್ತು ಮಾಲ್ತಿ ರಾಮ್ ಲಲ್ಲಾ ಅವರ ಆಶೀರ್ವಾದ ಪಡೆಯುತ್ತಿರುವ ಹಲವಾರು ಫೋಟೋಗಳನ್ನು ದೇವಾಲಯದ ಅರ್ಚಕ ಪ್ರದೀಪ್ ದಾಸ್ ಅವರು ಪೋಸ್ಟ್ ಮಾಡಿದ್ದಾರೆ.

ರಾಮಮಂದಿರ ಉದ್ಘಾಟನೆ ಭಾರತದ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಆಯುಷ್ಮಾನ್ ಖುರಾನಾ, ಕಂಗನಾ ರನೌತ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ರಣಬೀರ್ ಕಪೂರ್, ಆಲಿಯಾ ಭಟ್, ಮಾಧುರಿ ದೀಕ್ಷಿತ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Bollywood Actress Priyanka Chopra Nick Jonas visit Ayodhya s Ram Mandir with daughter Malti

ಇನ್ನು, ನಟಿ ಪ್ರಿಯಾಂಕಾ ಚೋಪ್ರಾ ಮಾರ್ಚ್ 15 ರಂದು ಮಗಳೂ ಮಾಲ್ತಿಯೊಂದಿಗೆ ಮುಂಬೈಗೆ ಬಂದಿದ್ದರು. ಅವರು ಮೊದಲು ಬಲ್ಗರಿ ಈವೆಂಟ್‌ಗೆ ಹಾಜರಾಗಿದ್ದರು, ನಂತರ ಪ್ರೈಮ್ ವಿಡಿಯೋ ಬಿಡುಗಡೆಗಳಲ್ಲಿ ಭಾಗವಾಗಿದ್ದರು. ವರದಿಯ ಪ್ರಕಾರ, ನಟಿ ಹೋಳಿ ತಹಬ್ಬ ಮುಗಿಯುವವರೆಗೂ ಭಾರತದಲ್ಲಿರುತ್ತಾರೆ. ಜನವರಿಯಲ್ಲಿ, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ತಮ್ಮ ಮಗಳ ಎರಡನೇ ಹುಟ್ಟುಹಬ್ಬವನ್ನು ಲಾಸ್ ಏಂಜಲೀಸ್‌ನ ದೇವಸ್ಥಾನದಲ್ಲಿ ಆಚರಿಸಿದ್ದರು.

ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಕೊನೆಯದಾಗಿ ಸ್ಯಾಮ್ ಹ್ಯೂಘನ್ ಜೊತೆಗೆ ಲವ್ ಎಗೇನ್ ಎಂಬ ರೋಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು 2016 ರ ಜರ್ಮನ್ ಚಲನಚಿತ್ರ SMS ಫರ್ ಡಿಚ್‌ನ ಇಂಗ್ಲಿಷ್ ರಿಮೇಕ್ ಆಗಿದೆ. ಮುಂದೆ ಪ್ರಿಯಾಂಕಾ ಆಕ್ಷನ್ ಕಾಮಿಡಿ ಚಿತ್ರವಾದ ಹೆಡ್ಸ್ ಆಫ್ ಸ್ಟೇಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+