ಕೆಕೆಆರ್ ತಂಡಕ್ಕೆ ಶಾರುಖ್-ಜೂಹಿ ಚಾವ್ಲಾ ಮಾಡಿದ ಹೂಡಿಕೆ ಎಷ್ಟು? ಈ ತಂಡದ ಮೌಲ್ಯವೆಷ್ಟು?
2026ರ ಐಪಿಎಲ್ ಪಂದ್ಯಗಳು ಆರಂಭ ಆಗುವುದಕ್ಕೂ ಮುನ್ನ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯುತ್ತಿದೆ. ಎಲ್ಲಾ ಐಪಿಎಲ್ ತಂಡಗಳು ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವುದಕ್ಕೆ ಭರ್ಜರಿ ಪೈಪೋಟಿ ನಡೆಸಿದ್ದಾರೆ. ಕೆಲವರಿಗೆ ಅಂದುಕೊಂಡು ಆಟಗಾರರು ಸಿಕ್ಕರೆ, ಮತ್ತೆ ಕೆಲವರಿಗೆ ನಿರಾಸೆಯಾಗಿದೆ. ಯಾವ್ಯಾವ ಆಟಗಾರರು ಐಪಿಎಲ್ ತಂಡ ಸೇರಿಕೊಳ್ಳುತ್ತಾರೆ ಅನ್ನೋ ಕುತೂಹಲದ ಜೊತೆಗೆ ಐಪಿಎಲ್ ತಂಡಗಳನ್ನು ಖರೀದಿಸಿರುವ ಸಿನಿಮಾ ತಾರೆಯರ ಲಾಭ-ನಷ್ಟಗಳ ಬಗ್ಗೆನೂ ಚರ್ಚೆಯಾಗುತ್ತಿದೆ.
ಒಂದು ಕಾಲದಲ್ಲಿ ಕ್ರಿಕೆಟ್ ಹಾಗೂ ಸಿನಿಮಾ ಕ್ಷೇತ್ರಕ್ಕೆ ಸೇರಿದವರ ಹೆಸರುಗಳು ಲವ್ ಸ್ಟೋರಿ, ಗಾಸಿಪ್ಗಳಿಗಷ್ಟೇ ಮೀಸಲಾಗಿರುತ್ತಿತ್ತು. ಆದ್ರೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಸಿನಿಮಾ ಸ್ಟಾರ್ಗಳು ಕ್ರಿಕೆಟ್ ತಂಡವನ್ನು ಖರೀದಿ ಮಾಡಿ ಸಾವಿರಾರು ಕೋಟಿ ಲಾಭ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹಾಗೂ ಜೂಹಿ ಚಾವ್ಲಾ ಕೂಡ ಸೇರಿಕೊಂಡಿದ್ದಾರೆ.

ಐಪಿಎಲ್ನ ಯಶಸ್ಸಿ ತಂಡಗಳಲ್ಲಿ ಕೆಕೆಆರ್ ಕೂಡ ಒಂದು. ಮೂರು ಬಾರಿ ಐಪಿಎಲ್ ಪಂದ್ಯಾವಳಿಯನ್ನು ಗೆದ್ದಿರುವ ಈ ತಂಡ ಕ್ರಿಕೆಟ್ ಪ್ರಿಯರ ನೆಚ್ಚಿನ ತಂಡಗಳಲ್ಲಿ ಒಂದು. 2008ರಲ್ಲಿ ಕೆಕೆಆರ್ ತಂಡವನ್ನು ಶಾರುಖ್ ಖಾನ್ ಹಾಗೂ ಜೂಹಿ ಚಾವ್ಲಾ ಜಂಟಿಯಾಗಿ ಖರೀದಿ ಮಾಡಿದ್ದರು. 17 ವರ್ಷಗಳ ಹಿಂದೆ ಎಷ್ಟಕ್ಕೆ ಖರೀದಿ ಮಾಡಿದ್ದರು? ಈಗ ಆ ತಂಡದ ಮೌಲ್ಯ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
ಶಾರುಖ್-ಜೂಹಿ ಕೆಕೆಆರ್ ಖರೀದಿಸಿದ್ದು ಎಷ್ಟಕ್ಕೆ?
ಕೆಕೆಆರ್ ತಂಡ ಖರೀದಿ ಮಾಡಿದ್ದಕ್ಕೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಶಾರುಖ್ ಖಾನ್ಗೆ ಐಪಿಎಲ್ ತಂಡವನ್ನು ಖರೀದಿ ಮಾಡಬೇಕು ಎನ್ನುವ ಆಸೆಯಿತ್ತು. ಇತ್ತ ಜೂಹಿ ಚಾವ್ಲಾ ಪತಿ ಜೈ ಮೆಹ್ತಾ ಕೂಡ ಐಪಿಎಲ್ ತಂಡ ಖರೀದಿ ಬಗ್ಗೆ ಒಲವು ತೋರಿಸಿದ್ದರು. ಆದರೆ, ಆ ಸಮಯದಲ್ಲಿ ಜೈ ಮೆಹ್ತಾ ಬ್ಯುಸಿನೆಸ್ ಸರಿಯಾಗಿ ನಡೆಯುತ್ತಿರಲಿಲ್ಲ. ಹೀಗಾಗಿ ತನ್ನ ಪಾರ್ಟ್ನರ್ಗಳಿಗೆ ಹೂಡಿಕೆ ಮಾಡುವುದಕ್ಕೆ ಮನವಿ ಮಾಡಿದ್ದರು. ಆದರೆ, ಅವರಿಗೆ ಐಪಿಎಲ್ ಕಲ್ಪನೆ ಅರ್ಥ ಆಗಿರಲಿಲ್ಲ. ಇತ್ತ ಜೂಹಿ ಚಾವ್ಲಾಗೂ ಇಷ್ಟವಿರಲಿಲ್ಲ. ಕೊನೆಗೂ ಶಾರುಖ್ ಖಾನ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಶಾರುಖ್ ಖಾನ್ನ ರೆಡ್ ಚಿಲ್ಲೀಸ್ ಹಾಗೂ ಜೈ ಮೆಹ್ತಾ ಕಂಪನಿ ಜಂಟಿಯಾಗಿ $75 ಮಿಲಿಯನ್ ಡಾಲರ್, ಅಂದರೆ ₹623 ಕೋಟಿಗೆ ಖರೀದಿ ಮಾಡಿತ್ತು.
ಈಗ 'ಕೆಕೆಆರ್' ಮೌಲ್ಯವೇನು?
ಶಾರುಖ್ ಖಾನ್ ಹಾಗೂ ಜೂಹಿ ಚಾವ್ಲಾ ಇಬ್ಬರೂ ಜಂಟಿಯಾಗಿ ₹623 ಕೋಟಿಗೆ ಖರೀದಿಸಿದ ತಂಡ ಇಂದು ಸಾವಿರಾರು ಕೋಟಿ ಬೆಲೆ ಬಾಳುತ್ತಿದೆ. ಕೆಲ ಮಾಧ್ಯಮಗಳು ಈಗಾಗಲೇ ವರದಿ ಮಾಡಿರುವ ಪ್ರಕಾರ, ಕೆಕೆಆರ್ ತಂಡದ ಇಂದಿನ ಮೌಲ್ಯ ಬರೋಬ್ಬರು ₹1919 ಕೋಟಿ ರೂಪಾಯಿ ಆಗಿದೆ ಎಂದು ದಿ ಕ್ರಿಕೆಟ್ ಪಾಂಡ ವರದಿ ಮಾಡಿದೆ. ಇಂದು ಇವರಿಬ್ಬರೂ ನಟರನ್ನು ಸಾವಿರಾರು ಕೋಟಿಗಳ ಒಡೆಯನನ್ನಾಗಿ ಮಾಡಿದೆ. ಕೆಕೆಆರ್ ತಂಡದಲ್ಲಿ ಶಾರುಖ್ ಖಾನ್ ಶೇ.55ರಷ್ಟು ಶೇರುಗಳನ್ನು ಹೊಂದಿದ್ದು, ಮೆಹ್ತಾ ಗ್ರೂಪ್ ಶೇ.45ರಷ್ಟು ಶೇರುಗಳನ್ನು ಹೊಂದಿದೆ ಎಂದು ಇಕ್ವೆಂಟೀಸ್ ವರದಿ ಮಾಡಿದೆ.
ಭಾರತದ ಟಾಪ್ 2 ನಟರು ಇವರೇ
ಕೆಕೆಆರ್ ತಂಡ ಖರೀದಿ ಮಾಡಿದ್ದು, ಶಾರುಖ್ ಖಾನ್ ಹಾಗೂ ಜೂಹಿ ಚಾವ್ಲಾ ಅವರನ್ನು ಭಾರತದ ಶ್ರೀಮಂತರ ಕಲಾವಿದರನ್ನಾಗಿ ಮಾಡಿದೆ. ಸುಮಾರು ₹7300 ಕೋಟಿ ಆಸ್ತಿ ಹೊಂದಿರುವ ಶಾರುಖ್ ಖಾನ್ ಭಾರತದ ಶ್ರೀಮಂತ ಕಲಾವಿದನಾಗಿದ್ದರೆ, ₹4600 ಕೋಟಿ ಆಸ್ತಿಯ ಮೂಲಕ ಜೂಹಿ ಚಾವ್ಲಾ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಎರಡನೇ ಸ್ಥಾನದಲ್ಲಿದ್ದ ಅಮಿತಾಭ್ ಬಚ್ಚನ್ ಅವರನ್ನೂ ಹಿಂದಿಕ್ಕಿದ್ದಾರೆ.
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications