ಒಂದು ಕಿಸ್ ಸೀನ್‌ಗಾಗಿ 37 ರೀಟೇಕ್ ತೆಗೆದುಕೊಂಡಿದ್ದ ನಟ!
ಸಿನಿಮಾಗಳ ಶೂಟಿಂಗ್ ಸಮಯದಲ್ಲಿ ರೀಟೇಕ್ ತೆಗೆದುಕೊಳ್ಳುವುದು ಹೊಸ ವಿಷಯವೇನಲ್ಲ. ಅನುಭವಿ ಹಾಗೂ ಸಿನಿಮಾರಂಗದಲ್ಲಿ ದಶಕಗಳ ಕಾಲ ಇರುವ ಸಿನಿಮಾ ನಟ ಹಾಗೂ ನಟಿಯುರು ಕೂಡ ಕೆಲವೊಂದು ಸೀನ್‌ಗಳಿಗೆ ರೀಟೇಕ್ ತೆಗೆದುಕೊಳ್ಳುವುದು ಇದೆ. ಸಿನಿಮಾದ ಯಾವುದಾದರು ದೃಶ್ಯಗಳು ಸರಿಯಾಗಿ ಬರದಿದ್ದರೆ. ರೀಟೇಕ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ.
ಆದರೆ, ರೊಮ್ಯಾನ್ಸ್ ಅಥವಾ ಕಿಸ್ಸಿಂಗ್ ಸೀನ್‌ಗಳನ್ನು ರೀಟೇಕ್ ತೆಗೆದುಕೊಳ್ಳುವುದು ಬೇರೆಯದೇ ಕಾರಣಕ್ಕೆ ಸುದ್ದಿಯಾಗುತ್ತೆ. ಈ ತರದ ಸೀನ್‌ಗಳು ರಿಪೀಟ್ ಆದಾಗ ಜನ ನಟ, ನಟಿಯರ ನಡುವೆ ಗಾಸಿಪ್ ಇದೆ ಎಂದುಕೊಳ್ಳುವುದು ಇದೆ. ಬಾಲಿವುಡ್‌ನ ನಟರೊಬ್ಬರು ಸಿನಿಮಾವೊಂದರಲ್ಲಿ ಕಿಸ್‌ಸೀನ್‌ಗಾಗಿ 37 ರೀಟೇಕ್ (ರೀ ಶಾಟ್)ಗಳನ್ನು ತೆಗೆದುಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

ಕನ್ನಡ ಸೇರಿದಂತೆ ಯಾವುದೇ ಸಿನಿಮಾಗಳು ಇರಲಿ. ಆ ಸಿನಿಮಾಗಳ ಶೂಟಿಂಗ್ ಸಂದರ್ಭದಲ್ಲಿ ರೀಟೇಕ್ ಅನ್ನೋದು ಸಾಮಾನ್ಯ. ಆದರೆ, ಇಲ್ಲೊಬ್ಬ ನಟ ಕಿಸ್ಸಿಂಗ್ ಸೀನ್‌ಗಾಗಿ ಬರೋಬ್ಬರಿ 37ಕ್ಕೂ ಹೆಚ್ಚು ಬಾರಿ ಶಾಟ್‌ಗಳನ್ನು ತೆಗೆದುಕೊಂಡಿರುವುದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಾಲಿವುಡ್ ಚಾಕಲೇಟ್ ಬಾಯ್ ಅಂತಲೇ ಫೇಮಸ್ ಆಗಿರುವ ಕಾರ್ತಿಕ್ ಆರ್ಯನ್.
ಬಾಲಿವುಡ್‌ನಲ್ಲಿ ಫೇಮಸ್ ಆಗಿರುವ ಈ ನಟ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇನ್ನು ಕಾರ್ತಿಕ್ ಆರ್ಯನ್ ಅವರು ಕಿಸ್ ಸೀನ್‌ಗಾಗಿ ಹಲವು ರೀಟೇಕ್ ತೆಗೆದುಕೊಂಡಿದ್ದರು. ಆ ಬಗ್ಗೆ ಅವರೇ ಮಾತನಾಡಿದ್ದಾರೆ. ಅವರು ಕೊಟ್ಟಿರುವ ಸ್ಪಷ್ಟನೆ ವಿಡಿಯೋ ಇದೀಗ ವೈರಲ್ ಆಗ್ತಿದ್ದು, ಎಲ್ಲರು ಸಿನಿಮಾದ ನಟಿಯ ಕಡೆ ನೋಡುತ್ತಿದ್ದಾರೆ.

ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಕಿಸ್ ಸೀನ್‌ಗಾಗಿ ಏನೆಲ್ಲ ಕಷ್ಟ ಆಯ್ತು ಅಂತ ಅವರು ಹೇಳಿಕೊಂಡಿದ್ದಾರೆ. 2014ರಲ್ಲಿ ತೆರೆಕಂಡ ಬಾಲಿವುಡ್ ಸಿನಿಮಾ ಕಾಂಚಿ: ದಿ ಅನ್ಬ್ರೇಕಬಲ್ ನಟಿ ಮಿಶ್ತಿ ಚಕ್ರವರ್ತಿ ಅವರ ಜೊತೆ ಕಾರ್ತಿಕ್ ಆರ್ಯನ್ ಅವರು ನಟಿಸಿದ್ದರು. ಕಾರ್ತಿಕ್ ಅವರು ನಟಿಸಿರುವ ಬಹುತೇಕ ಸಿನಿಮಾಗಳು ಲವರ್ ಬಾಯ್ ಪಾತ್ರವಾಗಿವೆ. ಇವರು ಲವರ್ ಬಾಯ್ ಆಗಿ ನಟಿಸಿರುವ ಹಲವು ಸಿನಿಮಾಗಳು ಹಿಟ್ ಆಗಿವೆ.
ಕಟುಮಸ್ತಾದ ದೇಹ ಹಾಗೂ ಉತ್ತಮ ನಟನೆಯಿಂದ ಕಾರ್ತಿಕ್ ಫೇಮಸ್ ಆಗಿದ್ದಾರೆ. ಆದರೆ ಅವರಿಗೆ ಕಿಸ್ ಸೀನ್ ತುಂಬಾ ಕಷ್ಟ ಆಗಿತ್ತಂತೆ. ಸಿನಿಮಾದ ನಿರ್ದೇಶಕರನ್ನು ಸರ್ ಪ್ಲೀಸ್ ನನಗೆ ಹೆಂಗೆ ಕಿಸ್ ಮಾಡ್ಬೇಕು ಅಂತ ತೋರಿಸಿ ಅಂತ ಕೇಳುವಷ್ಟು ನಾನು ಸುಸ್ತಾಗಿ ಹೋಗಿದ್ದೆ ಎಂದು ಅವರು ಹೇಳಿದ್ದಾರೆ.
ನಟಿಯದ್ದೇ ತಪ್ಪು ಎಂದ ನಟ ಕಾರ್ತಿಕ್ ಆರ್ಯನ್
ಈ ಸಿನಿಮಾದಲ್ಲಿ ಲಿಪ್‌ಲಾಕ್ ದೃಶ್ಯಗಳನ್ನು ರೀಟೇಕ್ ತೆಗೆದುಕೊಳ್ಳುವುದಕ್ಕೆ ಸಿನಿಮಾದ ನಟಿ ಮಿಶ್ತಿ ಅವರೇ ಕಾರಣ ಅಂತ ಕಾರ್ತಿಕ್ ಆರ್ಯನ್ ಹೇಳಿದ್ದಾರೆ. ನನಗೆ ಆ ಕಿಸ್ ಸೀನ್ ತುಂಬಾನೇ ತಲೆನೋವಾಗಿ ಹೋಗಿತ್ತು. ಸಿನಿಮಾದ ಶೂಟಿಂಗ್‌ನಲ್ಲಿ ಪ್ರೇಮಿಗಳ ಸೀನ್ ಇತ್ತು.
ಆ ಒಂದೇ ಒಂದು ಸೀನ್‌ಗಾಗಿ ನಾವು ಬರೋಬ್ಬರಿ 37 ರೀಟೇಕ್‌ಗಳನ್ನು ಕೊಟ್ಟೆವು. ನಿರ್ದೇಶಕ ಸುಭಾಷ್ ಅವರು, ಸೀನ್ ಓಕೆ ಎಂದಾಗ ಸಮಾಧಾನದ ನಿಟ್ಟುಸಿರುವ ಬಿಟ್ಟಿದ್ದೆವು. ಬಹುಶಃ ಮಿಶ್ತಿ ಆ ಸಮಯದಲ್ಲಿ ಬೇಕಂತಲೇ ತಪ್ಪು ಮಾಡಿರಬೇಕು. ಯಾಕೆಂದರೆ ಸಿನಿಮಾದ ನಿರ್ದೇಶಕರು ಭಾವೋದ್ರಿಕ್ತ ಕಿಸ್ ಕೊಡಿ ಅಂತ ಹೇಳಿದ್ದರು. ಆ ದೃಶ್ಯ ಇಬ್ಬರಿಗೂ ಕಷ್ಟವಾಗಿತ್ತು ಎಂದಿದ್ದಾರೆ.












Click it and Unblock the Notifications