ಬಾಲಿವುಡ್‌ ನಟ ಅಜಯ್‌ ದೇವಗನ್‌ ಭೇಟಿಯಾದ ʼಸು ಫ್ರಮ್‌ ಸೋʼ ಚಿತ್ರ ತಂಡ : ಚರ್ಚೆ ಆಗಿದ್ದೇನು?

ಬೆಂಗಳೂರು, ಆಗಸ್ಟ್‌ 13: 'ಸು ಫ್ರಮ್ ಸೋ' ಸಿನಿಮಾ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ರಾಜ್ ಬಿ. ಶೆಟ್ಟಿ ನಿರ್ಮಾಣದ, ಜೆಪಿ ತುಮಿನಾಡ್ ನಿರ್ದೇಶನದ ಸು ಫ್ರಮ್ ಸೋ ಸಿನಿಮಾ ಕನ್ನಡದ ಜನತೆಗೆ ಮಾತ್ರವಲ್ಲದೆ, ಪರಭಾಷೆಯವರಿಗೂ ಹೆಚ್ಚು ಇಷ್ಟ ಆಗಿದೆ. ಈಗ ಸಿನಿಮಾ ಕಡೆಯಿಂದ ಹೊಸ ಅಪ್ಡೇಟ್ ಒಂದು ಬಂದಿದೆ. ಈ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಲು ಬೇಕಿರೋದು ಇನ್ನು ಕೆಲವೇ ಕೋಟಿ ರೂಪಾಯಿಗಳು ಮಾತ್ರ. ಸದ್ಯ ಕನ್ನಡ ಚಿತ್ರರಂಗದಲ್ಲಿ 'ಸು ಪ್ರಮ್ ಸೋ' ಚಿತ್ರದ್ದೇ ಸುದ್ದಿಯಾಗಿದೆ.

'ಸು ಪ್ರಮ್ ಸೋ' ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ಸು ಕಂಡಿರುವ ಸಿನಿಮಾ, ಬಿಡುಗಡೆಯಾದ ಮೂರನೇ ವಾರದಲ್ಲೂ ಹಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ 'ಸು ಫ್ರಮ್ ಸೋ' ಚಿತ್ರ ತಂಡ ಮುಂಬೈನಲ್ಲಿ ಬಾಲಿವುಡ್‌ ನಟ ಅಜಯ್ ದೇವಗನ್ ಅವರನ್ನು ಭೇಟಿಯಾಗಿದೆ. ಈ ಕುರಿತು ನಿರ್ದೇಶಕ ಜೆ.ಪಿ.ತೂಮಿನಾಡು ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Bollywood actor Ajay Devgn meets the team of Su From So

ನಟ ಅಜಯ್‌ ದೇವಗನ್‌ ಅವರಿಗೆ ನಮ್ಮ 'ಸು ಪ್ರಮ್ ಸೋ' ಚಿತ್ರ ತುಂಬಾ ಇಷ್ಟವಾಗಿತ್ತು, ಹೀಗಾಗಿ ಅದರ ಬಗ್ಗೆ ಮಾತನಾಡಲು ನಮ್ಮನ್ನು ಆಹ್ವಾನಿಸಿದ್ದರು. ಮಾತುಕತೆ ವೇಳೆ ಅವರ ಅದ್ಭುತ ವ್ಯಕ್ತಿತ್ವದ ಪರಿಚಯವಾಯಿತು. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ನಿರ್ದೇಶಕ ಜೆ.ಪಿ.ತೂಮಿನಾಡು ಅವರು ಬರೆದುಕೊಂಡಿದ್ದು, ಅವರ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ಜೆ.ಪಿ.ತೂಮಿನಾಡು ನಿರ್ದೇಶನದ, ಶಶಿಧರ್ ಶೆಟ್ಟಿ ಬರೋಡ, ರವಿ ರೈ ಕಳಸ, ರಾಜ್ ಬಿ.ಶೆಟ್ಟಿ ಸೇರಿ ಹಲವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಸು ಫ್ರಮ್‌ ಸೋ ಚಿತ್ರ ಜುಲೈ 25ರಂದು ತೆರೆಕಂಡಿತ್ತು. ಇದೇ ವೇಳೆ ಬಿಡುಗಡೆಯಾದ ಹಿಂದಿಯ 'ಸೈಯಾರಾ', ಹಾಲಿವುಡ್‌ನ 'ಎಫ್1' ಹಾಗೂ ತೆಲುಗಿನ 'ಹರಿ ಹರ ವೀರಮಲ್ಲು' ನಡುವೆಯೂ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿದೆ. ಇದೀಗ ಅಜಯ್‌ ದೇವಗನ್‌ ಭೇಟಿಯ ಬೆನ್ನಲ್ಲೇ 'ಸು ಪ್ರಮ್ ಸೋ' ಹಿಂದಿಗೂ ರೀಮೇಕ್ ಆಗುತ್ತಾ ಎನ್ನುವ ಕುತೂಹಲ ಸಿನಿಪ್ರಿಯರಲ್ಲಿ ಹುಟ್ಟಿಕೊಂಡಿದೆ. ಅಜಯ್ ದೇವಗನ್ ಈ ಕನ್ನಡ ಚಿತ್ರದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಇತ್ತ ತುಮಿನಾಡ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ಅಭಿನಂದನೆಗಳು ಸರ್. ನೀವು ಅದ್ಭುತ ನಿರ್ದೇಶಕ ಮತ್ತು ನಟ ಮತ್ತು ಅದಕ್ಕಿಂತ ಹೆಚ್ಚಾಗಿ ನೀವು ಸುಂದರವಾಗಿಯೂ ಕಾಣುತ್ತೀರಿ ಎಂದು ಬರೆದಿದ್ದಾರೆ. ಇನ್ನೊಬ್ಬ ಅಭಿಮಾನಿ, ರೀಮೇಕ್ ಹಕ್ಕುಗಳನ್ನು ಮಾರಾಟ ಮಾಡುವ ಬದಲು ಚಿತ್ರವನ್ನು ಹಿಂದಿಗೆ ಡಬ್ ಮಾಡುವಂತೆ ತುಮಿನಾಡ್ ಅವರನ್ನು ಒತ್ತಾಯಿಸಿದ್ದಾರೆ. "ಹಕ್ಕುಗಳನ್ನು ನೀಡಬೇಡಿ! ಡಬ್ ಮಾಡಿದ ಚಿತ್ರವನ್ನು ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆ ಮಾಡಿ ಎಂದು ಹೇಳಿದ್ದಾರೆ. ಮತ್ತೊಬ್ಬ ಅಭಿಮಾನಿ, "ಸೂಪರ್ ಸರ್" ಎಂದು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+