ಬಿಜೆಪಿಗೆ ಚಿರಂಜೀವಿ ಎಂಟ್ರಿ, ಮೆಗಾಸ್ಟಾರ್‌ಗೆ ರಾಜ್ಯಸಭಾ ಪಟ್ಟ?
ನಟ ಚಿರಂಜೀವಿಗೆ ಇದೀಗ ಅದೃಷ್ಟ ಒಲಿದು ಬಂದಿದ್ದು 68ರ ಹರಯದ ಚಿರಂಜೀವಿ ತಮ್ಮ ಅಭಿಮಾನಿಗಳಿಗೆ ನೂರಾರು ಸಿನಿಮಾ ಮೂಲಕ ಮನರಂಜನೆ ನೀಡಿದ್ದಾರೆ. 1978ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಮುಂದೆ, 2009ರ ತನಕ ಬಿಡುವು ಇಲ್ಲದಂತೆ ಸಿನಿಮಾ ಕ್ಷೇತ್ರಕ್ಕೆ ಕಲಾ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲೇ ಬಿಗ್ ಬ್ರೇಕ್ ಪಡೆದು 2013ರಲ್ಲಿ ದೊಡ್ಡ ಮಟ್ಟದ ಕಂಬ್ಯಾಕ್ ಮಾಡಿದ್ದರು ಮೆಗಾಸ್ಟಾರ್ ಚಿರಂಜೀವಿ ಅವರು. ಇದೀಗ ಮತ್ತೆ, ರಾಜಕೀಯಕ್ಕೆ ರೀ ಎಂಟ್ರಿ ಕೊಡ್ತಿದ್ದಾರಂತೆ ಚಿರಂಜೀವಿ, ಅದು ಬಿಜೆಪಿ ಮೂಲಕ!?
ಲೋಕಸಭೆ ಚುನಾವಣೆ ಸಮಯದಲ್ಲೇ ನಟ ಚಿರಂಜೀವಿ ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡಲು ಬಿಜೆಪಿ ನಾಯಕರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈ ಮೂಲಕ ಚಿರಂಜೀವಿ & ಅವರ ರಾಜಕೀಯ ಬಲವನ್ನು ಆಂಧ್ರದಲ್ಲಿ ಹಾಗೂ ತೆಲಂಗಾಣದಲ್ಲಿ ಬಳಸಿಕೊಳ್ಳುವ ಹೊಸ ರಣತಂತ್ರ ರೂಪಿಸಲಾಗಿದೆ ಎಂಬ ಮಾತು ಕೂಡ ಕೇಳಿಬಂದಿದೆ. ಆದರೆ, ಇಲ್ಲಿನ ವಿಶೇಷತೆ ಏನಂದ್ರೆ ಚಿರಂಜೀವಿ ಅವರು ತೆಲುಗು ರಾಜ್ಯಗಳಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ಬದಲಾಗಿ ಚಿರಂಜೀವಿ ಅವರು ಉತ್ತರ ಪ್ರದೇಶ ರಾಜ್ಯದಿಂದ ಬಿಜೆಪಿ ಪಕ್ಷದಿಂದ ರಾಜ್ಯಸಭೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ.

ಬಿಜೆಪಿ + ಚಿರಂಜೀವಿ = ಲೆಕ್ಕಾಚಾರ ಏನು?
ಹೌದು, ಇದೀಗ ಚುನಾವಣಾ ಆಯೋಗ ನಿಗದಿ ಮಾಡಿರುವ ಪ್ರಕಾರ ಒಟ್ಟಾರೆ 56 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ದೇಶದ ಒಟ್ಟು 15 ರಾಜ್ಯಗಳಲ್ಲಿ ರಾಜ್ಯಸಭೆ ಎಲೆಕ್ಷನ್‌ಗೆ ಈಗ ಮುಹೂರ್ತ ಫಿಕ್ಸ್ ಆಗಿದೆ. ಈ ಪೈಕಿ ಉತ್ತರ ಪ್ರದೇಶದಲ್ಲಿ ಒಟ್ಟು 10 ಸ್ಥಾನ ಇದ್ದು, ಇಲ್ಲಿಂದಲೇ ಮೆಗಾಸ್ಟಾರ್ ಚಿರಂಜೀವಿ ಅವರು ಸ್ಪರ್ಧೆ ಮಾಡಬಹುದು ಎನ್ನಲಾಗಿದೆ. ಹೀಗೆ ಚಿರಂಜೀವಿ ಅವರು ಕೂಡ ಬಿಜೆಪಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದರೆ ಹೊಸ ಸಂಚಲನ ಸೃಷ್ಟಿ ಆಗಲಿದೆ. ಹೀಗಾಗಿ ಬಿಜೆಪಿ ಕೇಂದ್ರ ನಾಯಕರ ನಡೆ ಭಾರಿ ಕೂತುಹಲವನ್ನು ಕೆರಳಿಸಿದೆ.
ಹೊಸ ಸಿನಿಮಾ ಕೂಡ ಬರಲಿದೆ!
2023ರ ಸಂಕ್ರಾಂತಿಗೆ ಅಭಿಮಾನಿಗಳಿಗೆ ನಟ ಚಿರಂಜೀವಿ ಭರ್ಜರಿ ಗಿಫ್ಟ್ ನೀಡಿದ್ದರು. ವಾಲ್ಟೇರ್ ವೀರಯ್ಯ ಮೂಲಕ ಕಳೆದ ಸಂಕ್ರಾಂತಿ ಹಬ್ಬಕ್ಕೆ ಮನರಂಜನೆ ಬಾಡೂಟ ಬಡಿಸಿದ್ದ ಮೆಗಾಸ್ಟಾರ್ ಚಿರಂಜೀವಿ, ಈ ವರ್ಷ ವಿಶ್ವಂಭರ ಟೈಟಲ್ ಟೀಸರ್ ಮೂಲಕ ಸುಗ್ಗಿ ಸಂಭ್ರಮವನ್ನು ಡಬಲ್ ಮಾಡಿದ್ದಾರೆ. ಅಷ್ಟಕ್ಕೂ ಚಿರು ನಟಿಸುತ್ತಿರುವ 156ನೇ ಸಿನಿಮಾ ಟೈಟಲ್ ಟೀಸರ್ ಸಂಕ್ರಾಂತಿ ವಿಶೇಷವಾಗಿ ರಿಲೀಸ್ ಆಗಿ ಸದ್ದು ಕೂಡ ಮಾಡ್ತಿದೆ. ಇದೇ ಸಮಯದಲ್ಲಿ ಚಿರಂಜೀವಿ ಅವರು ರಾಜಕೀಯ ಅಖಾಡಕ್ಕೆ ಮರುಪ್ರವೇಶ ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡ ಸಂಚಲನವನ್ನ ಸೃಷ್ಟಿ ಮಾಡಿದೆ.

ಫ್ಯಾಂಟಸಿ ಸಿನಿಮಾದಲ್ಲಿ ಚಿರು ಅಬ್ಬರ
ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾ ಬಳಿಕ ಚಿರಂಜೀವಿ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ವಿಶ್ವಂಭರ' ಟೈಟಲ್ ಇಡಲಾಗಿದ್ದು ಈ ಟೈಟಲ್ ಟೀಸರ್ ನಲ್ಲಿ ಗ್ರಾಫಿಕ್ಸ್ ಕೆಲಸ ಸಖತ್ ಆಗಿದೆ. ಈ ಮೆಗಾ ಫ್ಯಾಂಟಸಿ ಸಾಹಸವನ್ನು, ಬಿಂಬಿಸಾರ ಖ್ಯಾತಿ ವಸಿಷ್ಠ ಯುವಿ ಕ್ರಿಯೇಷನ್ಸ್ ಅಡಿ ನಿರ್ದೇಶಿಸಿದ್ದಾರೆ. ವಿಕ್ರಮ್, ವಂಶಿ & ಪ್ರಮೋದ್ ಈ ಸಿನಿಮಾಗಾಗಿ ಬಂಡವಾಳ ಹಾಕುತ್ತಿದ್ದು, ನಟ ಚಿರಂಜೀವಿ ಸಿನಿ ಕರಿಯರ್‌ನಲ್ಲೇ ಅತ್ಯಂತ ದುಬಾರಿ ವೆಚ್ಚದ ಚಿತ್ರ ಇದಾಗಲಿದೆ ಎನ್ನುವ ಮಾಹಿತಿ ಕೂಡ ಕುತೂಹಲ ಹೆಚ್ಚು ಮಾಡಿದೆ.
ವಿಶ್ವಂಭರ ಸಿನಿಮಾಗೆ ಎಂಎಂ ಕೀರವಾಣಿ ಮ್ಯೂಸಿಕ್ ಇರಲಿದ್ದು, ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣ ಇದೆ. ಎಎಸ್ ಪ್ರಕಾಶ್ ನಿರ್ಮಾಣ ವಿನ್ಯಾಸ ಹಾಗೂ ಸುಶ್ಮಿತಾ ಕೊನಿಡೇಲ ವಸ್ತ್ರ ವಿನ್ಯಾಸ ಮಾಡಲಿದ್ದು. ಕೋಟಗಿರಿ ವೆಂಕಟೇಶ್ವರ ರಾವ್ & ಸಂತೋಷ್ ಕಾಮಿರೆಡ್ಡಿ ಸಿನಿಮಾಗೆ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಚಿರಂಜೀವಿ ಅವರು ರಾಜ್ಯಸಭೆಗು ಆಯ್ಕೆಯಾಗಿ ಹೋದರೆ ಆಂಧ್ರ & ತೆಲಂಗಾಣ ರಾಜಕೀಯದಲ್ಲಿ ಹೊಸ ಸಂಚಲನ ಪಕ್ಕಾ.












Click it and Unblock the Notifications