Get Updates
Get notified of breaking news, exclusive insights, and must-see stories!

Karthik Mahesh: ನಮ್ರತಾ ಗೌಡ ಜೊತೆ ಮದುವೆ ಫಿಕ್ಸ್‌ ಆಗಿದ್ಯಾ? ಬಿಗ್‌ಬಾಸ್‌ ವಿನ್ನರ್‌ ಕಾರ್ತಿಕ್ ಏನಂದ್ರು?

ಬಿಗ್‌ಬಾಸ್‌ ವಿನ್ನರ್‌ ಹಾಗೂ ಕಿರುತೆರೆ ನಟ ಕಾರ್ತಿಕ್‌ ಮಹೇಶ್‌ ಹಾಗೂ ಕರ್ಣ ಸೀರಿಯಕಲ್‌ ನಟಿ ನಮ್ರತಾ ಗೌಡ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಕಾರ್ತಿಕ್‌ ಹಾಗೂ ನಮ್ರತಾ "ನೋಡಯ್ಯಾ ಕೋಟೆ ಲಿಂಗವೇ...." ಹಾಡಿಗೆ ಮಾಡಿದ್ದ ರೀಲ್‌ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದಾದ ಬಳಿಕ ಇವರಿಬ್ಬರ ಮದುವೆ ಗಾಸಿಪ್‌ ಸದ್ದು ಮಾಡಿತ್ತು. ಇದೀಗ ನಮ್ರತಾ ಗೌಡ ಜೊತೆಗಿನ ಮದುವೆ ವಿಚಾರದ ಬಗ್ಗೆ ಖುದ್ದು ಕಾರ್ತಿಕ್‌ ಮಹೇಶ್‌ ಅವರೇ ಮೌನ ಮುರಿದಿದ್ದಾರೆ.

'ನಮ್ಮಿಬ್ಬರ ನಡುವೆ ಈ ವಿಚಾರದ ಬಗ್ಗೆ ಹಬ್ಬಿರುವ ವದಂತಿ, ಪೋಸ್ಟ್‌ಗಳು, ಕಾಮೆಂಟ್‌ ನೋಡಿದ್ರೆ ಖುಷಿಯಾಗುತ್ತೆ. ಒಬ್ಬರ ಜೊತೆ ಮಾತ್ರವಲ್ಲ, ಸುಮಾರು ಮಂದಿಯ ಜೊತೆ ಇದೇ ರೀತಿ ಕಲ್ಪಿಸಿ ಮಾತನಾಡುತ್ತಾರೆ. ಅವರನ್ನು ಖುಷಿಪಡಿಸುವುದಕ್ಕೇ ನಾವಿರೋದು. ಹಾಗಾಗಿ ಅವರೆಲ್ಲರೂ ಖುಷಿಯಾಗಿರಲಿ. ನಾನು ನಮ್ರತಾ ಕೂಡ ಇದರ ಬಗ್ಗೆ ಆಗಾಗ ಮಾತನಾಡುತ್ತಲೇ ಇರ್ತೀವಿ' ಎಂದಿದ್ದಾರೆ ಕಾರ್ತಿಕ್‌.

Bigg Boss Winner Karthik Mahesh Marriage Rumours With Namratha Gowda

'ಖುಷಿಗೆ ಹೀಗೆಲ್ಲ ಮಾಡ್ತಾರೆ'

'ಇನ್ನು ಕಾಮೆಂಟ್‌ಗಳ ಬಗ್ಗೆ ನಾವೇನೂ ಮಾತನಾಡೋಕೆ ಆಗಲ್ಲ, ನನ್ನ ಕೈಯಲ್ಲಿ ಯಾವುದೇ ಬ್ಯಾಂಡ್‌ ಇಲ್ಲ. ಇಬ್ಬರೂ ಪ್ರೀತಿಯಲ್ಲಿದ್ದೀವಿ ಅನ್ನೋ ರೀತಿ ಏನಿಲ್ಲ. ಒಂದು ವೇಳೆ ಇದ್ದರೆ ನಾವೇ ಹೇಳ್ತೀವಿ. ಈ ಸುದ್ದಿ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಅಭಿಮಾನಿಗಳು ನಮ್ಮಿಬ್ಬರ ಬಗ್ಗೆ ಈ ರೀತಿ ಎಲ್ಲ ಮಾತನಾಡುತ್ತಿರುತ್ತಾರೆ. ಅವರ ಖುಷಿಗೆ ಇದನ್ನೆಲ್ಲ ಮಾಡುತ್ತಾರೆ. ಅವರ ನಿರೀಕ್ಷೆಯಂತೆ ಇದು ನಿಜ ಆದರೆ ಖುಷಿ ಪಡ್ತಾರೆ. ಆ ರೀತಿ ಏನೇ ಇದ್ದರೂ ನಾವೇ ಹೇಳ್ತೀವಿ' ಎಂದಿದ್ದಾರೆ.

ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಇಬ್ಬರೂ ಬಿಗ್‌ಬಾಸ್‌ ಸ್ಪರ್ಧಿಗಳಾಗಿ ಗಮನ ಸೆಳೆದಿದ್ದರು. ಬಿಗ್‌ಬಾಸ್‌ ಮೂಲಕವೇ ಇಬ್ಬರ ಮಧ್ಯೆ ಫ್ರೆಂಡ್‌ಶಿಪ್‌ ಬೆಳೆದಿತ್ತು. ಬಿಗ್‌ಬಾಸ್‌ನಿಂದ ಹೊರಬಂದ ನಂತರವೂ ಈ ಇಬ್ಬರ ಸ್ನೇಹ ಗಟ್ಟಿಯಾಗಿತ್ತು. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ವಿನ್ನರ್‌ ಆಗಿರುವ ನಟ ಕಾರ್ತಿಕ್ ಮಹೇಶ್‌ ಹುಟ್ಟುಹಬ್ಬಕ್ಕೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ನಮ್ರತಾ ಗೌಡ ಶುಭ ಕೋರಿದ್ದರು.

ಸೋಷಿಯಲ್‌ ಮೀಡಿಯಾದಲ್ಲಿ ನಮ್ರತಾ ಹಂಚಿಕೊಂಡಿದ್ದ ವಿಡಿಯೋ ವೈರಲ್‌ ಕೂಡ ಆಗಿತ್ತು. ನಮ್ರತಾ ಹಂಚಿಕೊಂಡ ವಿಡಿಯೋದಲ್ಲಿ ಕಾರ್ತಿಕ್ ಮಹೇಶ್‌ ಜೊತೆಗಿದ್ದರು. 'ಹುಟ್ಟುಹಬ್ಬದ ಶುಭಾಶಯಗಳು ಸ್ಟಾರ್' ಎಂದು ನಮ್ರತಾ ಬರೆದಿದ್ದರು. ಇದಾದ ಬಳಿಕ ಇವರಿಬ್ಬರು ಪ್ರೀತಿಯಲ್ಲಿದ್ದು, ಸದ್ಯದಲ್ಲೇ ಮದುವೆ ಆಗ್ತಾರೆ ಎಂಬ ಗುಸುಗುಸು ಶುರುವಾಗಿತ್ತು. ಈಗಾಗಲೇ ಮದುವೆ ಮಾತುಕತೆಯಾಗಿದ್ದು, ಸದ್ಯದಲ್ಲೇ ಸಿಹಿಸುದ್ದಿ ಕೊಡ್ತಾರೆ ಎಂದು ಹೇಳಲಾಗಿತ್ತು. ಈಗ ಕಾರ್ತಿಕ್‌ ಸ್ಪಷ್ಟನೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+