Bigg Boss: ಆಟದಲ್ಲಿ ಮಂಜು ಯಡವಟ್ಟು: ತ್ರಿವಿಕ್ರಮ್, ಚೈತ್ರಾ ಗರಂ!
ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯುವ ಹಂತ ತಲುಪಿದೆ. ಹೀಗಾಗಿ ಮನೆಯ ಸದಸ್ಯರಿಗೆ ಪ್ರತಿ ದಿನವೂ ಕಠಿಣವಾಗುತ್ತಿದೆ. ಹೊಸ ಹೊಸ ಸವಾಲುಗಳು ಎದುರಾಗುತ್ತಿದ್ದು ಇದನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎನ್ನುವುದರ ಮೇಲೆ ಬಿಗ್‌ಬಾಸ್ ಸ್ಪರ್ಧಿಗಳ ಭವಿಷ್ಯ ನಿರ್ಧಾರವಾಗಲಿದೆ. ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿ ಗೆಲ್ಲುವ ರೇಸ್‌ನಲ್ಲಿ ಮಂಜು, ತ್ರಿವಿಕ್ರಮ್, ಹನುಮಂತ, ರಜತ್, ಧನ್‌ರಾಜ್ ಇದ್ದಾರೆ. ಆದರೆ ಕೆಲ ಸ್ಪರ್ಧಿಗಳು ತುಂಬಾ ಆತ್ಮವಿಶ್ವಾಸದಿಂದ ಎಡವಟ್ಟು ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಹೌದು... ಉಗ್ರಂ ಮಂಜು ಮನೆಗೆ ದಿನಸಿ ತಂದು ಕೊಡುವ ಟಾಸ್ಕ್‌ನಲ್ಲಿ ಆಡಿ ಗೆಲ್ಲುವ ಭರವಸೆ ನೀಡಿ ಸೋತಿದ್ದಾರೆ. ಇದು ಮನೆಯ ಎಲ್ಲಾ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಇಂದು ಕಲರ್ಸ್ ಕನ್ನಡ ವಾಹಿನಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಉಗ್ರಂ ಮಂಜು ಅವರಿಗೆ ಇದ್ದ ತೀವ್ರ ಆತ್ಮವಿಶ್ವಾಸ ಕಂಡು ವೀಕ್ಷಕರು ನಗಾಡಿದ್ದಾರೆ. ಹಾಗಾದರೆ ವೈರಲ್ ವೀಡಿಯೋದಲ್ಲಿ ಏನಿದೆ?

ಮನೆಯ ಸದಸ್ಯರಿಗೆ ದಿನಸಿ ಸಾಮಾನುಗಳನ್ನು ಗಳಸಿಕೊಡಲು ಸಾಮಾರ್ಥ್ಯವಿರುವ ಆರು ಜನ ಸದಸ್ಯರನ್ನು ಘೋಷಿಸಲು ಬಿಗ್‌ಬಾಸ್ ತಿಳಿಸುತ್ತಾರೆ. ಈ ಟಾಸ್ಕ್ ಆಡಲು ಉಗ್ರಂ ಮಂಜು ಮುಂದಾಗುತ್ತಾರೆ. ಅಲ್ಲದೆ ಮನೆಯ ಇತರ ಕೆಲ ಸದಸ್ಯರಿಗೆ ಆಟ ಆಡಿ ದಿನಸಿ ತರುವ ಸಾಮಾರ್ಥ್ಯ ಇಲ್ಲ ಎಂದು ಮಂಜು ವಾದಿಸುತ್ತಾರೆ.
ಚೈತ್ರಾ, ಧನುಗೆ ಸಾಮಾರ್ಥ್ಯ ಇಲ್ಲವೆಂದ ಮಂಜು
ಬಿಗ್‌ಬಾಸ್ ನೀಡುವ ಟಾಸ್ಕ್‌ನಲ್ಲಿ ಸೋತರೆ ಮನೆಗೆ ದಿನಸಿ ಸಿಗುವುದಿಲ್ಲ. ಹೀಗಾಗಿ ಸಾಮಾರ್ಥ್ಯವಿರುವ ಆರು ಜನರನ್ನು ಮನೆಯ ಎಲ್ಲಾ ಸದಸ್ಯರು ಸೇರಿ ಆಯ್ಕೆ ಮಾಡಬೇಕು. ಇದೊಂದು ಬಿಗ್ ಟಾಸ್ಕ್ ಅಂತಲೇ ಹೇಳಬಹುದು. ಆರು ಜನರಲ್ಲಿ ನಾನೂ ಕೂಡ ಆಡುತ್ತೇನೆ ಎಂದು ಉಗ್ರಂ ಮಂಜು ಹೇಳುತ್ತಾರೆ.
ಅಲ್ಲದೆ ದಿನಸಿ ತರುವ ಆಟದಲ್ಲಿ ಚೈತ್ರಾ ತಾವೂ ಕೂಡ ಆಡಬೇಕು ಎಂದು ಹೇಳುತ್ತಾರೆ. ಆದರೆ ಮಂಜು ಚೈತ್ರಾ ಅವರಿಗೆ ಈ ಟಾಸ್ಕ್ ಆಡಲು ಆಗಲ್ಲ ಎಂದು ವಾದಿಸುತ್ತಾರೆ. ಜೊತೆಗೆ ಧನ್‌ರಾಜ್ ಕೂಡ ಈ ಟಾಸ್ಕ್ ಆಡುತ್ತೇನೆ ಎಂದು ಹೇಳುತ್ತಾರೆ. ಆಗ ಮಂಜು ಧನುಗೂ ಈ ಟಾಸ್ಕ್ ಆಡೋಕೆ ಆಗಲ್ಲ ಅವರು ಸ್ಟೆಪ್ ಬ್ಯಾಕ್ ಆಗಬೇಕು ಎನ್ನುತ್ತಾರೆ. ಅಂದರೆ ಇಲ್ಲಿ ಮಂಜು ಅವರಿಗೇ ಈ ಟಾಸ್ಕ್ ಆಡಲು ಸಾಮಾರ್ಥ್ಯ ಹೆಚ್ಚಿದೆ ಎನ್ನುವಂತೆ ಮಂಜು ನಡೆದುಕೊಳ್ಳುತ್ತಾರೆ. ಆಗ ತ್ರಿವಿಕ್ರಮ್ ಅವರು ದಿನಸಿಗಳು ನಿಮ್ಮ ಕಡೆಯಿಂದ ತಪ್ಪಿದರೆ ಏನ್ ಮಾಡೋದು ಎಂದು ಮಂಜು ಅವರಿಗೆ ಕೇಳುತ್ತಾರೆ? ಇದಕ್ಕೆ ಮಂಜು ಅವರು ಕೊಟ್ಟ ಉತ್ತರ ಏನು ಎನ್ನುವುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಮನೆಗೆ ದಿನಸಿ ಬರುವುದನ್ನು ತಪ್ಪಿಸಿದ ಮಂಜು
ಅಲ್ಲದೆ ಮಂಜು ಆಟವನ್ನು ನೋಡಿ 'ಇಷ್ಟೇನಾ ಎರೆಡು ನಿಮಿಷಕ್ಕೆ ಆಡಿ ಬರುತ್ತೇನೆ' ಎಂದು ಓವರ್ ಕಾನ್ಫಿಡೆನ್ಸ್ ಅಲ್ಲಿ ಆಡಲು ಮುಂದಾಗುತ್ತಾರೆ. ಆದರೆ ಮಂಜು ಈ ಆಟವನ್ನು ಆಡಲು ಯಶಸ್ವಿಯಾಗುವುದೇ ಇಲ್ಲ. ಇದರಿಂದಾಗಿ ಮನೆಯ ಎಲ್ಲಾ ಸದಸ್ಯರು ದಿನಸಿ ಕಳೆದುಕೊಂಡು ಮಂಜು ಮೇಲೆ ಕಿಡಿ ಕಾರಿದ್ದಾರೆ.
ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಮಂಜು ಅವರು ಆಟದಲ್ಲಿ ಸೋತು ಮನೆಯ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಈ ಬಾರಿ ಮನೆಯ ಎಲ್ಲಾ ಸದಸ್ಯರು ಮಂಜು ಅವರಿಗೆ ಕಳಪೆ ನೀಡಿ, ಎಲಿಮಿನೇಟ್ ಮಾಡುವುದು ಅನುಮಾನವೇ ಇಲ್ಲ ಎಂಬಂತೆ ಕಾಣಿಸುತ್ತಿದೆ. ಈ ವಾರ ಮಂಜು ಅವರು ಜೈಲಿಗೆ ಹೋಗುವುದು ಫಿಕ್ಸ್ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಯಾವುದೇ ಕೆಲಸದಲ್ಲಿ ಆತ್ಮವಿಶ್ವಾಸ ಇರಬೇಕು. ಅತಿಯಾದ ಆತ್ಮವಿಶ್ವಾಸ ಇದ್ದರೆ ಎಡವಟ್ಟು ಆಗುತ್ತೇ ಅನ್ನೋದಕ್ಕೆ ಮಂಜು ಅವರು ಸಾಕ್ಷಿ ಆಗಿದ್ದಾರೆ. ಇದರಿಂದಾಗಿ ಮನೆಯ ಮಂದಿ ಈ ವಾರದ ದಿನಸಿ ಕಳೆದುಕೊಂಡಿದ್ದಾರೆ. ಇದರಿಂದ ಮಂಜು ಅವರಿಗೆ ಆಗುವ ಶಿಕ್ಷೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications