'ಈ ಜನ್ಮಕ್ಕೆ ನೀನೇ ನನ್ನ ಹೆಂಡತಿ' ಎಂದ ಬಿಗ್ ಬಾಸ್ ತ್ರಿವಿಕ್ರಮ್
ಬಿಗ್ ಬಾಸ್ ಕನ್ನಡ ಸೀಜನ್ 11ರ ಬಳಿಕ ನಟ ತ್ರಿವಿಕ್ರಮ್ ಅದೃಷ್ಟ ಬದಲಾಗಿದೆ. ಪದ್ಮಾವತಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದ ತ್ರಿವಿಕ್ರಮ್ ಇದೀಗ ಮತ್ತೊಂದು ಧಾರಾವಾಹಿಯೊಂದಕ್ಕೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಸೀಜನ್ 11ರ ರನ್ನರ್ ಅಪ್ ತ್ರಿವಿಕ್ರಮ್ ನಟನೆಯ ಹೊಸ ಧಾರಾವಾಹಿ ಶೀಘ್ರದಲ್ಲೇ ಆರಂಭವಾಗಲಿದೆ.
ತ್ರಿವಿಕ್ರಮ್ ಹಾಗೂ ಪ್ರತಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮುದ್ದು ಸೊಸೆ ಧಾರಾವಾಹಿ ಸದ್ಯದಲ್ಲೇ ಆರಂಭವಾಗಲಿದ್ದು, ಈಗಾಗಲೇ ಈ ಧಾರಾವಾಹಿಯ ಪ್ರೋಮೋ ಕೂಡ ರಿಲೀಸ್ ಆಗಿದೆ. ಡಾಕ್ಟರ್ ಆಗಬೇಕು ಎಂದುಕೊಂಡಿರುವ ಪುಟ್ಟ ಹುಡುಗಿಯ ಮದುವೆಯ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೋಮೋ ಮೂಲಕವೇ ಪ್ರೇಕ್ಷಕರ ಮನಸ್ಸು ಗೆದ್ದಿದ್ದು, ಮುದ್ದು ಸೊಸೆಯ ಕಥೆಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ.

ಇದೀಗ ಮುದ್ದು ಸೊಸೆ ಧಾರಾವಾಹಿ ಮತ್ತೊಂದು ಪ್ರೋಮೋ ಬಿಡುಗಡೆಯಾಗಿದ್ದು, ಈ ವಿಡಿಯೋದಲ್ಲಿನ ತ್ರಿವಿಕ್ರಮ್ ಆ ಒಂದು ಡೈಲಾಗ್‌ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ತ್ರಿವಿಕ್ರಮ್ ಮದುಮಗನಾಗಿ ಹಸೆಮಣೆ ಮೇಲೆ ಕುಳಿತಿದ್ದು, ನಾಯಕಿ ಕೂಡ ಮದುವೆಗೆ ಸಿದ್ಧಳಾಗಿದ್ದಾಳೆ. ಡಾಕ್ಟರ್ ಆಗಬೇಕು ಎನ್ನುವ ಕನಸು ಹೊತ್ತಿರುವ ಕಥಾ ನಾಯಕಿ ಅಪ್ಪನ ಒತ್ತಾಯಕ್ಕೆ ಮಣಿದು ಮದುವೆಗೆ ಒಪ್ಪಿದ್ದು, ಕೊನೆಗೆ ತನ್ನ ಮದುವೆ ನಿಲ್ಲಿಸಿಲು ತಾನೇ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ.
ಪೊಲೀಸರಿಗೆ ಕರೆ ಮಾಡಿಯೇ ಹಸೆಮಣೆಗೆ ಬಂದಿರುವ ಮುದ್ದು ಸೊಸೆ ಕೊನೆಗೂ ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾಳೆ. ಆದರೆ ಕಥಾ ನಾಯಕನ ತಂದೆಯನ್ನು ಪೊಲೀಸರು ಮದುವೆ ಮನೆಯಲ್ಲೇ ಬಂಧಿಸುತ್ತಾರೆ. ಇದರಿಂದ ಸಿಟ್ಟಿಗೆದ್ದು ಹಸೆಮಣೆಯಿಂದ ಇಳಿದು ಬಂದ ಹೀರೋ ಈ ಮದುವೆಯನ್ನು ನಿಲ್ಲಿಸಲು ಪೊಲೀಸರನ್ನು ಕರೆಸಿ ನಮ್ಮಪ್ಪನಿಗೆ ಅವಮಾನ ಮಾಡಿದರವನ್ನು ಸುಮ್ಮನೆ ಬಿಡಲ್ಲ. ಏನಮ್ಮಿ ಈ ಜನ್ಮದಲ್ಲಿ ನೀನೇ ನನ್ನ ಹೆಂಡತಿ ಎಂದು ಎಲ್ಲರ ಮಂದೆ ಹೇಳುತ್ತಾನೆ.

ಸದ್ಯ ಮುದ್ದು ಸೊಸೆ ಪ್ರೋಮೋ ವೈರಲ್ ಆಗುತ್ತಿದ್ದು, ಕಥಾ ನಾಯಕನ ಪಾತ್ರ ಮಾಡುತ್ತಿರುವ ತ್ರಿವಿಕ್ರಮ್ ಅವರ 'ಈ ಜನ್ಮದಲ್ಲಿ ನೀನೇ ನನ್ನ ಹೆಂಡತಿ' ಎನ್ನುವ ಡೈಲಾಗ್ ಸಖತ್ ವೈರಲ್ ಆಗುತ್ತಿದೆ. ಈವರೆಗೆ ಮುದ್ದು ಸೊಸೆ ಧಾರಾವಾಹಿಯ ಪ್ರೋಮೋ ಅಷ್ಟೇ ರಿಲೀಸ್ ಆಗಿದ್ದು, ಎಂದಿನಿಂದ ಪ್ರಸಾರವಾಗುತ್ತದೆ ಎನ್ನುವುದನ್ನು ಧಾರಾವಾಹಿ ತಂಡ ಇನ್ನೂ ತಿಳಿಸಿಲ್ಲ. ಪ್ರೋಮೋ ಮೂಲಕವೇ ಜನಪ್ರಿಯತೆ ಪಡೆದಿರುವ ಮುದ್ದು ಸೊಸೆಯ ಕಥೆಗಾಗಿ ಪ್ರೇಕ್ಷಕರು ಕೂಡ ಕಾತುರರಾಗಿದ್ದಾರೆ.












Click it and Unblock the Notifications