Bigg Boss: ಸ್ಪರ್ಧಿಗಳಿಗೆ ಶಾಕ್ ಕೊಟ್ಟ ಬಿಗ್‌ಬಾಸ್‌: ಮನೆ ಖಾಲಿ ಖಾಲಿ..

ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಗಿಯೋದಕ್ಕೆ ಇನ್ನೇನು ಒಂದು ವಾರ ಮಾತ್ರ ಬಾಕಿ ಇದೆ. ಈ ವಾರ ಕಳೆದರೆ ಮುಂದಿನ ವಾರ ಗ್ರ್ಯಾಂಡ್ ಫಿನಾಲೆ ಅಬ್ಬರ ಶುರುವಾಗುತ್ತೆ. ಮುಂದಿನ ವಾರ ಗೆಲ್ಲುವ ಸ್ಪರ್ಧಿ ಯಾರು? ಸೀಸನ್ 11ರ ಪಟ್ಟ ಯಾರ ಪಾಲಾಗಲಿದೆ ಎನ್ನುವುದು ಗೊತ್ತಾಗಲಿದೆ. ಸುಮಾರು 120 ದಿನಗಳ ಕಾಲ ನಡೆದ ಬಿಗ್‌ಬಾಸ್‌ಗೆ ಕೆಲವೇ ದಿನಗಳಲ್ಲಿ ಅಧಿಕೃತ ತೆರೆ ಬೀಳಲಿದೆ. ಈ ಬಾರಿ ಬಿಗ್‌ಬಾಸ್‌ ಮುಗಿದ ಬಳಿಕ ಮತ್ತೆ ಬಿಗ್‌ಬಾಸ್‌ ನೋಡಬೇಕು ಅಂದರೆ ಮತ್ತೆ ಸೆಪ್ಟೆಂಬರ್ ತಿಂಗಳವರೆಗೆ ಕಾಯಬೇಕು.

ಆದರೆ ಬಿಗ್‌ಬಾಸ್‌ ಸೀಸನ್ 12 ತುಂಬಾನೇ ಸ್ಪೆಷಲ್ ಆಗಿರುತ್ತದೆ. ಹೋಸ್ಟ್ ಕಿಚ್ಚ ಸುದೀಪ್ ಇಲ್ಲದೆ ಬಿಗ್‌ಬಾಸ್‌ ಹೇಗೆ ನಡೆಯುತ್ತದೆ ಅನ್ನೋದು ಕೂಡ ಗೊತ್ತಿಲ್ಲ. ಹೊಸದಾಗಿ ಏನಾದರೂ ಮಾಡ್ತಾರಾ? ಇದು ಕೂಡ ತಿಳಿದಿಲ್ಲ. ಹೀಗಾಗಿ ಮುಂದಿನ ಬಿಗ್‌ಬಾಸ್‌ ಭಾರೀ ಕುತೂಹಲ ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಇದೆಲ್ಲಾ ಒಂದು ಕಡೆ ಇರಲಿ. ಈಗ ಕೊನೆಯ ಹಂತದಲ್ಲಿ ಇರುವ ಬಿಗ್‌ಬಾಸ್‌ 11ರ ಬಗ್ಗೆ ಮಾತನಾಡೋಣ.

bigg boss shocked the contestants house is empty

ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಗಿಯಲು ಇವತ್ತಿಗೆ ಹತ್ತು ದಿನ ಮಾತ್ರ ಬಾಕಿ ಇದೆ. ಜನವರಿ 26ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಗ್ರ್ಯಾಂಡ್ ಫಿನಾಲೆಗೆ ಹೋಗೋದು ಯಾರು ಅನ್ನೋದೇ ಸಿಕ್ಕಾಪಟ್ಟೆ ಇಂಟ್ರಸ್ಟಿಂಗ್ ಆಗಿದೆ. ಬಿಗ್‌ಬಾಸ್‌ ಮನೆಯಲ್ಲಿ ದಿನಕ್ಕೊಂದು ಇಟ್ರಸ್ಟಿಂಗ್ ಸಂಗತಿ ನಡೆಯುತ್ತಲೇ ಇವೆ. ಇದಕ್ಕಾಗಿ ವಿಡ್‌ ವೀಕ್ ಎಲಿಮಿನೇಷನ್‌ಗೆ ಬ್ರೇಕ್ ಹಾಕಿ ಮಿಡ್‌ ನೈಟ್ ಎಲಿಮಿನೇಷನ್ ಮಾಡಿದ್ದಾರೆ ಬಿಗ್‌ಬಾಸ್. ಇಂದಿಗೆ ಸರಿಯಾಗಿ ಮೂರು ದಿನಕ್ಕೆ ಅಂದರೆ ಭಾನುವಾರ ಬಿಗ್‌ಬಾಸ್‌ ಖಾಲಿ ಖಾಲಿಯಾಗಲಿದೆ. ಈಗಾಗಲೇ ಮಿಡ್‌ ನೈಟ್ ಎಲಿಮಿನೇಷನ್ ಪೂರ್ಣಗೊಂಡಿದ್ದು, ಯಾರು ಹೊರಬಂದರು ಅನ್ನೋದು ಕೂಡ ಗೊತ್ತಾಗಿದೆ. ಆದರೆ ಆ ಎಪಿಸೋಡನ್ನು ಟೆಲಿಕಾಸ್ಟ್ ಮಾಡಬೇಕು ಅಷ್ಟೆ.

ಧನ್‌ರಾಜ್ ಗ್ರೇಟ್ ಬಚಾವ್

ಧನ್‌ರಾಜ್ ಮೋಸದ ಆಟ ಆಡಿದರೂ ಕೂಡ ಗ್ರೇಟ್ ಬಚಾವ್ ಆಗಿದ್ದಾರೆ. ಧನ್‌ರಾಜ್ ಮೋಸದ ಆಟ ಆಡಿದ್ದಕ್ಕೆ ಅವರೇ ಮನೆಯಿಂದ ಹೊರಗೆ ಬರುತ್ತಾರೆ ಎಂದು ಅಂದುಕೊಳ್ಳಲಾಗಿತ್ತು. ಆದರೆ ಅದಾಗಲೇ ಇಲ್ಲ. ಧನ್‌ರಾಜ್‌ ಬದಲಿಗೆ ಗೌತಮಿ ಹೊರ ಬಂದಿದ್ದಾರೆ. ಹೀಗಾಗಿ ಬಿಗ್‌ಬಾಸ್‌ ಮನೆಯಲ್ಲಿ ಈಗ ಏಳು ಜನ ಮಾತ್ರ ಉಳಿದುಕೊಂಡಿದ್ದಾರೆ. ಹೀಗಾಗಿ ಈ ವಾರಾಂತ್ಯಕ್ಕೆ ಧನ್‌ರಾಜ್‌ ಮನೆಗೆ ಹೋಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಇನ್ನೂ ಸೋಮವಾರದಿಂದ ಬಿಗ್‌ಬಾಸ್‌ ಮನೆಯಲ್ಲಿ ಹೊಸ ಆಟ ಶುರುವಾಗಲಿದೆ. ಇಷ್ಟು ದಿನ ಗ್ಯಾಂಡ್ ಫಿನಾಲೆಗೆ ತಲುಪಲು ಟಾಸ್ಕ್ ನೀಡಲಾಗುತ್ತಿತ್ತು. ಸೋಮವಾರದಿಂದ ಗ್ರ್ಯಾಂಡ್‌ ಫಿನಾಲೆಯಲ್ಲಿ ಗೆಲ್ಲಲು ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಹೀಗಾಗಿ ಆಟ ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ.

3 ಜನ ಸ್ಪರ್ಧಿಗಳು ಡೇಂಜರ್ ಝೋನ್

ಇನ್ನೂ ಕೇವಲ ಎರಡು ದಿನದ ಅಂತರದಲ್ಲಿ ಮೂವರು ಸ್ಪರ್ಧಿಗಳು ಮನೆಯಿಂದ ಹೊರಹೋಗುವುದರಿಂದ ಬಿಗ್‌ಬಾಸ್‌ ಮನೆ ಖಾಲಿ ಖಾಲಿಯಾಗಲಿದೆ. ನಮಗೆ ತಿಳಿದ ಮಾಹಿತಿ ಪ್ರಕಾರ 3 ಜನ ಸ್ಪರ್ಧಿಗಳು ಡೇಂಜರ್ ಝೂನ್‌ನಲ್ಲಿ ಇದ್ದಾರೆ. ಮಂಜು, ಮೋಕ್ಷಿತಾ ಹಾಗೂ ಧನ್‌ರಾಜ್ ಈ ಮೂವರಲ್ಲಿ ಇಬ್ಬರು ವಾರಾಂತ್ಯದಲ್ಲಿ ಮನೆಗೆ ಹೋಗಲಿದ್ದಾರೆ. ಇನ್ನು ಉಳಿದ ನಾಲ್ಕು ಜನ ಸ್ಪರ್ಧಿಗಳಾದ ಹನುಮಂತ, ತ್ರಿವಿಕ್ರಮ್, ಭವ್ಯಾ ಹಾಗೂ ರಜತ್ ಇವರು ಗ್ರ್ಯಾಂಡ್ ಫಿನಾಲೆ ತಲುಪಲಿದ್ದಾರೆ. ಈ ಐದು ಜನರ ನಡುವೆ ಆಟ ಕಠಿಣವಾಗಲಿದೆ.

ಧನ್‌ರಾಜ್ ಅವರು ಆಟದಲ್ಲಿ ದೊಡ್ಡ ಮೋಸ ಮಾಡಿದ್ದಾರೆ ಅನ್ನೋ ಅಭಿಪ್ರಾಯದಲ್ಲಿ ಮನೆಯ ಎಲ್ಲಾ ಸದಸ್ಯರು ಇದ್ದರು. ಹೀಗಾಗಿ ಇವರೇ ಮನೆಯಿಂದ ಹೊರ ಹೋಗುತ್ತಾರೆ ಅಂತಲೂ ಎಲ್ಲರು ಅಂದುಕೊಂಡಿದ್ದರು. ಆದರೆ ಮನೆಯ ಸ್ಪರ್ಧಿಗಳಿಗೆ ಬಿಗ್‌ಬಾಸ್ ಬಿಗ್ ಶಾಕ್ ಕೊಟ್ಟಿದ್ದಾರೆ.

ಮಿಡ್‌ ವೀಕ್ ಎಲಿಮಿನೇಷನ್ ಇಲ್ಲ...

ಬಿಗ್‌ಬಾಸ್‌ ಪ್ರೋಮೋ ಬಿಡುಗಡೆ ಮಾಡುವ ಮೂಲಕ ವೀಕ್ಷಕರನ್ನು ಫೂಲ್ ಮಾಡಿದ್ದಾರೆ. ಗೌತಮಿ ಅಥವಾ ಭವ್ಯಾ ಇವರಿಬ್ಬರಲ್ಲಿ ಬಿಗ್‌ಬಾಸ್‌ ಮನೆಯಿಂದ ಒಬ್ಬರು ಹೊರ ಬರುತ್ತಾರೆ ಎನ್ನುವಂತೆ ಪ್ರೋಮೋ ಬಿಡುಗಡೆ ಮಾಡಿ ಬಿಗ್‌ಬಾಸ್‌ ವೀಕ್ಷಕರನ್ನು ಫೂಲ್ ಮಾಡಿದ್ದಾರೆ. ಅಲ್ಲದೆ ಮಿಡ್‌ ವೀಕ್ ಎಲಿಮಿನೇಷನ್ ಮಾಡುವುದಾಗಿ ಹೇಳಿ ಈ ವಾರದಲ್ಲಿ ಒಬ್ಬ ಸ್ಪರ್ಧಿಯನ್ನೂ ಕೂಡ ಬಿಗ್‌ಬಾಸ್‌ ಮನೆಯಿಂದ ಹೊರಗಡೆ ಕಳುಹಿಸಿಲ್ಲ. ಹೀಗಾಗಿ ಬಿಗ್‌ಬಾಸ್‌ ಸುಳ್ಳು ಹೋಳುವಂತಾದರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಬಿಗ್‌ಬಾಸ್‌ ಮಿಡ್ ವೀಕ್ ಎಲಿಮಿನೇಷನ್ ಮಾಡುವುದಾಗಿ ಹೇಳಿ ಪ್ರೋಮೋವನ್ನು ಬಿಡುಗಡೆ ಮಾಡಿದ್ದರು. ಅಲ್ಲದೆ ಮನೆಯ ಎಲ್ಲಾ ಸ್ಪರ್ಧಿಗಳಿಗೂ ಮಿಡ್ ವೀಕ್ ಎಲಿಮಿನೇಷನ್‌ ಟಾಸ್ಕ್‌ಗಳನ್ನೂ ಕೊಟ್ಟಿದ್ದರು. ಆದರೆ ಬಿಗ್‌ಬಾಸ್‌ ಯಾರನ್ನೂ ಕೂಡ ಎಲಿಮಿನೇಷನ್ ಮಾಡಿಲ್ಲ. ಹಾಗಾದರೆ ಬಿಗ್‌ಬಾಸ್‌ ಸುಳ್ಳು ಹೇಳಿದ್ರಾ ಅನ್ನೋ ಪ್ರಶ್ನೆ ಈಗ ವೀಕ್ಷಕರಲ್ಲಿ ಹುಟ್ಟುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+