Get Updates
Get notified of breaking news, exclusive insights, and must-see stories!

ಸುಮ್ಮನೆ ಊಟಕ್ಕೆ ಬಂದಿದ್ದೆ ಎಂದ ಸಿಎಂ ಸಿದ್ದರಾಮಯ್ಯ, ‘ಹೌದಾ ಓಕೆ’ ಎಂದ ಬಿಗ್‌ಬಾಸ್ ಸಂಗೀತ ಶೃಂಗೇರಿ!

ಸಂಗೀತ ಶೃಂಗೇರಿ ಇತ್ತೀಚೆಗೆ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಅವರು ಬಿಗ್‌ಬಾಸ್ ಮನೆಯಲ್ಲಿ ಹೊಡೆದಿದ್ದ ಒಂದೇ ಒಂದು ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ, ಸಂಗೀತ ಡೈಲಾಗ್ ಮ್ಯಾಚ್ ಮಾಡಿದ್ದಾರೆ ಟ್ರೋಲಿಗರು. ಹಾಗಾದರೆ ಎಡಿಟ್ ಮಾಡಿರೋ ವಿಡಿಯೋದಲ್ಲಿ ಏನಿದೆ? ಬನ್ನಿ ನೋಡೋಣ.

ಇದು ಸೋಷಿಯಲ್ ಮೀಡಿಯಾ ಜಮಾನ, ಇಲ್ಲಿ ಏನೇ ಮಾಡಿದ್ರೂ ಅದು ಟ್ರೋಲ್ ಆಗುತ್ತದೆ. ಆ ಮೂಲಕ ವೈರಲ್ ಕೂಡ ಆಗಿಬಿಡುತ್ತೆ. ಅದೇ ರೀತಿ ಈಗ ಸಿಎಂ ಸಿದ್ದರಾಮಯ್ಯ ಅವರ ವಿಚಾರಕ್ಕೂ ಸಿಕ್ಕಾಪಟ್ಟೆ ಎಡಿಟೆಡ್ ವಿಡಿಯೋಗಳು ವೈರಲ್ ಆಗುತ್ತಿವೆ.

 Bigg Boss Sangeetha Sringeri Dialogue Video Is On Trend On The Social Media

ಅದೇ ರೀತಿ ಇದೀಗ ಸಂಗೀತ ಶೃಂಗೇರಿ ಅವರ ಬಿಗ್‌ಬಾಸ್ ಮನೆಯ ಡೈಲಾಗ್ & ಸಿಎಂ ಸಿದ್ದರಾಮಯ್ಯ ಅವರ ಮಾತು ಸಿಂಕ್ ಮಾಡಿ ವಿಡಿಯೋ ಎಡಿಟ್ ಮಾಡಿದ್ದಾರೆ ಟ್ರೋಲಿಗರು. ಹಾಗಾದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ ಗೊತ್ತೆ? ಆ ವಿಡಿಯೋ ಇಲ್ಲಿದ್ದು, ಅದಕ್ಕಾಗಿ ಮುಂದೆ ಓದಿ.

ಸಿದ್ದರಾಮಯ್ಯ VS ಸಂಗೀತಾ ಡೈಲಾಗ್!

ಟ್ರೋಲಿಗರ ಕೈಗೆ ಏನಾದರೂ ಸಿಕ್ಕರೆ ಅದನ್ನ ವರ್ಷಗಟ್ಟಲೇ ವೈರಲ್ ಆಗುವಂತೆ ಮಾಡಿ, ಎಲ್ಲೆಲ್ಲೂ ಹರಿದಾಡುವಂತೆ ಮಾಡುತ್ತಾರೆ. ಅದೇ ರೀತಿ ಇದೀಗ ಸಿಎಂ ವಿಚಾರವಾಗಿ ಕೂಡ, ವಿಡಿಯೋ ವೈರಲ್ ಮಾಡಿದ್ದಾರೆ. ಹಾಗೇ ಬಿಗ್‌ಬಾಸ್ ಸಂಗೀತರ ಡೈಲಾಗ್ ಬಳಸಿದ್ದಾರೆ. ಹೌದು, ಈಗ ವೈರಲ್ ಆದ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು ಮೊದಲಿಗೆ 'ಏನಿಲ್ಲ ಸುಮ್ನೆ ಬಂದಿದ್ದೆ, ಊಟಕ್ಕೆ ಕರೆದಿದ್ರು, ಅದಕ್ಕೆ ಬಂದಿದ್ದೆ ಅಷ್ಟೇ..' ಅಂತಾ ಹೇಳಿದ್ದಾರೆ.

ಆದರೆ ವಿಡಿಯೋನ ಎಡಿಟ್ ಮಾಡಿರುವ ಟ್ರೋಲಿಗರು, ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರು 'ಏನಿಲ್ಲ ಸುಮ್ನೆ ಬಂದಿದ್ದೆ' ಎಂದಾಗ ಸಂಗೀತ ಅವರ ಬಿಗ್‌ಬಾಸ್ ಡೈಲಾಗ್ ಅನ್ನ ಕಾಪಿ ಮಾಡಿರುವ ಟ್ರೋಲಿಗರು 'ಹೌದಾ..' ಎಂಬ ಸೀನ್ ಹಾಕಿದ್ದಾರೆ.

ಹಾಗೇ ಮುಂದೆ, ಸಿಎಂ ಸಿದ್ದರಾಮಯ್ಯ ಅವರು, 'ಊಟಕ್ಕೆ ಕರೆದಿದ್ರು' ಎಂದಾಗ ಮತ್ತೊಮ್ಮೆ ಸಂಗೀತ ಅವರ ಬಿಗ್‌ಬಾಸ್ ಡೈಲಾಗ್ ಕಾಪಿ ಮಾಡಿ ಟ್ರೋಲಿಗರು 'ಓಕೆ..' ಎಂದು ಮ್ಯಾಚ್ ಮಾಡಿದ್ದಾರೆ. ಕೊನೆಗೆ ಸಿಎಂ ಸಿದ್ದರಾಮಯ್ಯ ಅವರು 'ಅದಕ್ಕೆ ಬಂದಿದ್ದೆ ಅಷ್ಟೇ..' ಅಂದಾಗ 'ಹೋ.. ಹೋ..' ಎಂದು ಡೈಲಾಗ್ ಹಾಕಿ ವಿಡಿಯೋ ಎಂಡ್ ಮಾಡಿದ್ದಾರೆ. ವಿಡಿಯೋಗೆ ಮುಂದೆ ನೋಡಿ.

 Bigg Boss Sangeetha Sringeri Dialogue Video Is On Trend On The Social Media

ಒಟ್ನಲ್ಲಿ ಹೀಗೆ ಎಡಿಟ್ ಮಾಡಿರುವ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. ಹಾಗೇ ಈ ಬಗ್ಗೆ ವೆರೈಟಿ ವೆರೈಟಿ ಚರ್ಚೆ ಕೂಡ ಶುರುವಾಗಿದೆ. ಇದೆಲ್ಲಾ ಏನೇ ಇದ್ದರೂ ಟ್ರೋಲಿಗರು ಮಾತ್ರ ತಮ್ಮ ಹಾವಳಿ ಮುಂದುವರಿಸಿದ್ದಾರೆ. ಇನ್ನು ಬಿಗ್‌ಬಾಸ್ ಸ್ಪರ್ಧೆಯಲ್ಲಿ ಸೋಲನ್ನು ಕಂಡಿದ್ದ ಸಂಗೀತಾ ಶೃಂಗೇರಿ ಅವರ ಡೈಲಾಗ್ಸ್ ಈಗಲೂ ಫುಲ್ ವೈರಲ್ ಆಗುತ್ತಿವೆ. ಹಾಗೇ ಸಂಗೀತಾ ಅವರು ಬಿಗ್‌ಬಾಸ್ ಮನೆಯಲ್ಲಿ ಹೊಡೆದ ಡೈಲಾಗ್ಸ್ ಬಳಸಿ ವಿಡಿಯೋ ಎಡಿಟ್ ಮಾಡುತ್ತಿದ್ದಾರೆ.

ಚುನಾವಣೆ ಸಮಯಕ್ಕೆ ಟ್ರೋಲ್ ಸೌಂಡ್!

ಅಷ್ಟಕ್ಕೂ ಇನ್ನೇನು ಲೋಕಸಭೆ ಚುನಾವಣೆಯು ಹತ್ತಿರ ಬಂದೆ ಬಿಟ್ಟಿದೆ ಇದೇ ವೇಳೆ ರಾಜಕೀಯ ವ್ಯಕ್ತಿಗಳ ವಿರುದ್ಧ ಟ್ರೋಲ್ ಹಾವಳಿ ಕೂಡ ಜೋರಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯರ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಹುಟ್ಟಿಕೊಳ್ಳುತ್ತಿವೆ.

ಅದೇ ರೀತಿ ಈಗ ಸಿಎಂ ಸಿದ್ದರಾಮಯ್ಯ ಮತ್ತು ಸಂಗೀತಾ ಶೃಂಗೇರಿ ಡೈಲಾಗ್ ಬಳಸಿ ವಿಡಿಯೋ ಎಡಿಟ್ ಮಾಡಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಹೀಗೆ ಟ್ರೋಲರ್ಸ್ ವಿಡಿಯೋ ಎಡಿಟ್ ಮಾಡಿರುವ ಬಗ್ಗೆ ಸಿಕ್ಕಾಪಟ್ಟೆ ಬೇಸರ ಕೂಡ ಹೊರಹಾಕುತ್ತಿದ್ದಾರೆ ಕೆಲವರು. ಹಾಗೇ ಇನ್ನೂ ಕೆಲವರು, ಈ ರೀತಿ ವಿಡಿಯೋ ಎಡಿಟ್ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಈ ಕುರಿತು ಪರ & ವಿರೋಧದ ಚರ್ಚೆ ಜೋರಾಗಿದೆ.

ಒಟ್ನಲ್ಲಿ ಈ ರೀತಿಯ ಟ್ರೋಲ್ ವಿಡಿಯೋಗಳ ಹವಾಳಿ ಹೆಚ್ಚಾಗುತ್ತಿದೆ. ಇನ್ನು ಇದೇ ವಿಚಾರವಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೂಡ ಚರ್ಚೆ ಜೋರಾಗಿದೆ. ಒಂದು ಕಡೆ ಇಂತಹ ವಿಡಿಯೋಗಳನ್ನ ಸಪೋರ್ಟ್ ಮಾಡುವವರು ಇದ್ದರೆ, ಮತ್ತೊಂದು ಕಡೆ ಇಂತಹ ವಿಡಿಯೋಗಳ ವಿರುದ್ಧ ಆಕ್ರೋಶವನ್ನೂ ಹೊರಹಾಕುವವರ ಸಂಖ್ಯೆ ಕೂಡ ದೊಡ್ಡದಾಗಿದೆ. ಅದರಲ್ಲೂ ಲೋಕಸಭೆ ಚುನಾವಣೆಗೆ ಮೊದಲು ಈ ರೀತಿಯ ಟ್ರೋಲ್ ವಿಡಿಯೋಗಳ ಹಾವಳಿ ಬಲು ಜೋರಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+