ಬಿಗ್ ಬಾಸ್‌ಗೆ ಹೋಗಲು ದರ್ಶನ್ ಫ್ಯಾನ್ಸ್‌ನ ಕೆಣಕುತ್ತಿದ್ದಾರಾ ಸೋನು ಶೆಟ್ಟಿ ? ದೊಡ್ಮನೆ ಎಂಟ್ರಿಗೆ ಸಿಗುತ್ತಾ ಚಾನ್ಸ್?
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ನಟಿ ರಮ್ಯಾ ಅವರು ಒಂದು ಫೋಸ್ಟ್ ಮಾಡಿದ್ದರು. ರಮ್ಯಾ ಅವರ ಆ ಪೋಸ್ಟ್ ನಿಂದಾಗಿ ನಟ ದರ್ಶನ್ ಅಭಿಮಾನಿಗಳು ರಮ್ಯಾ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಹಾಗೂ ಪರ್ಸ್‌ನಲ್ ಆಗಿ ಅಶ್ಲೀಲವಾಗಿ ಮೆಸೇಜ್‌ಗಳನ್ನು ಮಾಡಿದ್ದರು, ಈ ಕುರಿತು ನಟಿ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ಪೊಲೀಸರಿಗೆ ದೂರು ನೀಡಿದ್ದು, ಅಶ್ಲೀಲವಾಗಿ ಮೆಸೇಜ್ ಹಾಕಿದವರನ್ನ ಪೋಲಿಸರು ಅರೆಸ್ಟ್ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇದೀಗ ನಟಿ ರಮ್ಯಾ ಬೆನ್ನಲ್ಲೇ ಸೋನು ಶೆಟ್ಟಿಗೂ ದರ್ಶನ್ ಫ್ಯಾನ್ಸ್ ಅಶ್ಲೀಲವಾಗಿ ಮೆಸೇಜ್ ಹಾಕಿದ್ದು, ಸದ್ಯ ಚರ್ಚೆಯಲ್ಲಿದೆ.
ಸದ್ಯ ಸೋನು ಶೆಟ್ಟಿ ಯಾರು ಎಂಬ ಬಗ್ಗೆ ಜನ ಸಾಮಾನ್ಯರಿಗೆ ಇಷ್ಟು ದಿನ ಗೊತ್ತೇ ಇರ್ಲಿಲ್ಲ. ಇದೀಗ ದರ್ಶನ್ ಫ್ಯಾನ್ಸ್ ಕೆಣಕಿದ ಬಳಿಕ ಸೋನು ಶೆಟ್ಟಿ ಯಾರು? ಅವರ ಹಿನ್ನೆಲೆ ಏನು ಎಂಬ ಬಗ್ಗೆ ಚರ್ಚೆಯಾಗುತ್ತಿದೆ ಸಹಜವಾಗಿಯೇ ಬಿಗ್ ಬಾಸ್ ಸೀಸನ್ 12 ಇನ್ನೇನು ಶುರುವಾಗಲಿದೆ. ಸಹಜವಾಗಿ ಬಿಗ್ ಬಾಸ್ ಮನೆಗೆ ಹೋಗುವವರು ಕಾಂಟ್ರವರ್ಸಿಯಲ್ ವ್ಯಕ್ತಿತ್ವಗಳೇ ಹೆಚ್ಚು. ಇನ್ನು ಬಿಗ್ ಬಾಸ್ ಮನೆಗೆ ಹೋಗಲೇಂದೇ.. ಬಿಗ್ ಬಾಸ್‌ನ ಗಮನ ಸೆಳೆಯಲೆಂದೇ.. ನಾನಾ ಸರ್ಕಸ್‌ಗಳನ್ನು ಮಾಡುವವರು ಕೂಡ ಇದ್ದಾರೆ. ಇದೀಗ ನಟ ದರ್ಶನ್ ಫ್ಯಾನ್ಸ್ ಕೆಣಕುವ ಮೂಲಕ ಸೋನು ಶೆಟ್ಟಿ ಕೂಡ ಇದೇ ತರಹದ ಕಸರತ್ತು ಮಾಡ್ತಿದ್ದಾರಾ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ.

ಸೋನು ಮೊನ್ನೆಯವರೆಗೆ ಹಲವರಿಗೆ ಅಪರಿಚಿತರಾಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ 69,914 ಜನ ಇವರನ್ನು ಫಾಲೋ ಮಾಡ್ತಿದ್ದರು ಕೂಡ ಸೋನು ಗೌಡ ಅವರ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ ಇದೀಗ ನಟ ದರ್ಶನ್ ಮತ್ತು ದರ್ಶನ್ ಅಭಿಮಾನಿಗಳನ್ನು ಕೆಣಕುವ ಮೂಲಕ, ದಿನಕ್ಕೊಂದು ಐದು ವಿಡಿಯೋ ಮಾಡಿ ಆ ವಿಡಿಯೋದಲ್ಲಿ ದರ್ಶನ್ ಮತ್ತು ದರ್ಶನ್ ಅವರ ಅಭಿಮಾನಿಗಳ ಬಗ್ಗೆ ಮಾತನಾಡುವ ಮೂಲಕ.. ಸೋನು ಶೆಟ್ಟಿ ಕರುನಾಡಿನೆಲ್ಲೆಡೆ ಜನಜನಿತರಾಗಿದ್ದಾರೆ.
ಜನ ಬಿಗ್ ಬಾಸ್‌ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಬಿಗ್ ಬಾಸ್ ಮನೆಗೆ ಹೋಗಿ ಬಂದರೆ ತಮ್ಮ ಜನ್ಮ ಸಾರ್ಥಕವೆಂದುಕೊಂಡವರು ಕೂಡ ಇದ್ದಾರೆ. ಸೋನು ಶೆಟ್ಟಿ ಕೂಡ ಇದೇ ತರಹದ ಕಸರತ್ತು ಮಾಡ್ತಿದ್ದಾರಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಬಿಗ್ ಬಾಸ್ ಶುರುವಾಗುವ ಹೊತ್ತನಲ್ಲಿ ಪ್ರಚಾರದ ಹುಚ್ಚಿಂದ ಸೋನು ಶೆಟ್ಟಿ ಇದೆಲ್ಲ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಿಗ್ ಬಾಸ್ ಮನೆಗೆ ತೆರಳಲು ದರ್ಶನ್ ಹೆಸರನ್ನು ಸೋನು ಶೆಟ್ಟಿ ಉಪಯೋಗಿಸುತ್ತಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಈ ಕುರಿತು ಟಿವಿ 9 ಕನ್ನಡಗೆ ನೀಡಿದ ಸಂದರ್ಶನದಲ್ಲಿ ಸೋನು ಶೆಟ್ಟಿ ಮಾತನಾಡಿ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನನಗೆ ಅಶ್ಲೀಲವಾದ ಮೆಸೇಜ್ ಕಳುಹಿಸದಾಗಲೇ ನಾನು ಏನಾದರು ಮಾಡಬಹುದಿತ್ತು. ಹಾಗೇನಾದರು ಇದ್ದರೆ ನಾನು ದರ್ಶನ್ ಪರ ಮಾತನಾಡುತ್ತಿರಲಿಲ್ಲ. ಅವತ್ತು ನಾನು ದರ್ಶನ್ ಪರ ಮಾತನಾಡಿರುವ ವಿಡಿಯೋ ನನ್ನ ಹತ್ರ ಇದೆ. ಬಿಗ್ ಬಾಸ್ ಮನೆಗೆ ಹೋಗುವ ಉದ್ದೇಶ ನನ್ನದಲ್ಲ. ಹಾಗೊಂದು ವೇಳೆ ಹೋಗಬೇಕು ಅಂದರೆ ನನ್ನಲ್ಲಿ ಪ್ರತಿಭೆ ಇದೆ, ಸ್ಕಿಲ್ ಇದೆ ಎಂದು ಸೋನು ಶೆಟ್ಟಿ ಹೇಳಿದ್ದಾರೆ.
ಬಿಗ್ ಬಾಸ್‌ಗೆ ಹೋಗಲು ಈ ತರ ಬೇರೆಯವರ ಹೆಸರು ತೆಗೆದುಕೊಂಡು ಮುಂದೆ ಹೋಗುವ ಅವಶ್ಯಕತೆ ನನಗೆ ಇಲ್ಲ. ನಾನು ಅದೆಲ್ಲದರ ಬಗ್ಗೆ ತಲೆ ಕೂಡ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ನನ್ನ ಬಗ್ಗೆ ತೀರಾ ಕೀಳಾಗಿ ಮಾತನಾಡ್ತಿದ್ದಾರೆ, ನನ್ನ ಬಟ್ಟೆಯ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ, ಇದರಿಂದ ಅವರ ಮನಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಗುತ್ತೆ. ನಾನು ಏನಂತ ನನಗೆ ಗೊತ್ತು, ಜೀವನದಲ್ಲಿ ನಾನು ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದೀನಿ, ಬೆಳಿತಿದಾರೆ ಅಂದ ಮೇಲೆ ನಾರ್ಮಲ್ ಇದ್ದೇ ಇರುತ್ತೆ. ನೋ ಪ್ರಾಬ್ಲಂ ಎಂದು ಸೋನು ಶೆಟ್ಟಿ ತಿಳಿಸಿದ್ದಾರೆ.












Click it and Unblock the Notifications