Get Updates
Get notified of breaking news, exclusive insights, and must-see stories!

Bigg Boss: ಮೋಕ್ಷಿತಾ ಪೈ ನಿರಪರಾಧಿ: 2018ರಲ್ಲಿ ಹೈಕೋರ್ಟ್ ತೀರ್ಪು

ಮೋಕ್ಷಿತಾ ಪೈ ಒಬ್ಬ ಮಕ್ಕಳ ಕಳ್ಳಿ. ಆಕೆ ಮಗುವೊಂದನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋಗಿ ಬಂದಿದ್ದಳು ಎನ್ನುವ ಸುದ್ದಿಗಳು ಹರಿದಾಡುತ್ತಲೇ ಇವೆ. ಹೌದು.. ಮೋಕ್ಷಿತಾ ಪೈ 20 ವರ್ಷ ವಯಸ್ಸು ಇರುವಾಗಲೇ ಜೈಲಿಗೆ ಹೋಗಿ ಬಂದಿದ್ದಾಳೆ. ಅವರದ್ದು ನಿಜವಾದ ಹೆಸರು ಮೋಕ್ಷಿತಾ ಪೈ ಅಲ್ಲ. ಆಕೆಯ ನಿಜವಾದ ಹೆಸರು ಐಶ್ವರ್ಯ ಪೈ. ಹೀಗೆ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇವೆ. ಹಾಗಾದರೆ 2014ರಲ್ಲಿ ಮೋಕ್ಷಿತಾ ಪೈ ಕೇಸ್ ಏನಾಯ್ತು? ಅವರು ಜೈಲಿನಿಂದ ಹೊರಬಂದಿದ್ದು ಹೇಗೆ? ಇದೆಲ್ಲದರ ಬಗ್ಗೆ ಈಗ ತಿಳಿಯೋಣ.

ಮೋಕ್ಷಿತಾ ಪೈ ತನ್ನ ಟ್ಯೂಷನ್‌ಗೆ ಬರುತ್ತಿದ್ದ 14 ವರ್ಷದ ಮಗೊವೊಂದನ್ನು ಕಿಡ್ನ್ಯಾಪ್ ಮಾಡಿಸಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವ ಅನೇಕ ಸುದ್ದಿಗಳನ್ನು ನೀವೆಲ್ಲಾ ನೋಡಿದ್ದೀರಾ. ಸಾಕಷ್ಟು ಜನ ಮೋಕ್ಷಿತಾ ಅಭಿಮಾನಿಗಳು ಈ ಬಗ್ಗೆ ಕಾಮೆಂಟ್ ಕೂಡ ಮಾಡಿದ್ದಾರೆ. ಮೋಕ್ಷಿತಾ ಬೆಳೆಯುವ ಹುಡುಗಿ. ಆಕೆಯ ಬಗ್ಗೆ ಸುಳ್ಳು ಸುದ್ದಿ ಹರಡುವುದು ಬೇಡ ಎನ್ನುವ ಸಲಹೆಯನ್ನು ನೀಡಿದ್ದಾರೆ. ಈ ಸಲಹೆಯನ್ನು ನಾವು ಕೂಡ ಸ್ವೀಕಾರ ಮಾಡುತ್ತೇವೆ. ಯಾಕೆಂದರೆ-

bigg boss mokshitha pai case high court verdict that mokshitha pai innocent in 2018

2018ರಲ್ಲಿ ಕೇಸ್ ಅಕ್ವಿಟ್

2018ರಲ್ಲಿ ಈ ಕೇಸ್ ಅಕ್ವಿಟ್ ಆಗಿದೆ. ಹಾಗಾದರೆ ಅಕ್ವಿಟ್ ಅಂದರೇನು? ಮೋಕ್ಷಿತಾ ಅವರು ಈ ಕೇಸ್‌ನಲ್ಲಿ ನಿಜವಾಗಲೂ ಇದ್ರಾ? ಎಫ್‌ಐಆರ್‌ನಿಂದ ಹಿಡಿದು ನಂತರ ಬಿಡುಗಡೆಯಾಗುವವರೆಗೂ ಈ ಕೇಸ್ ಏನಾಗಿದೆ? ಎಲ್ಲವನ್ನೂ ಈಗ ತಿಳಿಯೋಣ.

ಆರಂಭದಲ್ಲಿ ಕಿಡ್ನ್ಯಾಪ್ ಆಗಿದ್ದ ಬಾಲಕಿ ಪವಿತ್ರಾ ಪೋಷಕರು ಐಶ್ವರ್ಯ ಪೈ (ಮೋಕ್ಷಿತಾ ಪೈ) ಆರೋಪಿ ಎಂದು ಹೇಳಿದ್ದರು. ನಂತರ ಆಕೆಯೊಂದಿಗೆ ರಾಜಿ ಆದ್ರೋ ಅಥವಾ ಈ ಕೇಸ್ ಉಲ್ಟಾ ಆಯ್ತೋ ಏನೋ ಗೊತ್ತಿಲ್ಲ, ಮೋಕ್ಷಿತಾ ಅವರು ಇನೋಸೆಂಟ್ ಅನ್ನೋ ಜಡ್ಜ್‌ಮೆಂಟ್‌ ಬಂದಿದೆ. ಮೂರು ವರ್ಷದ ಸತತ ವಿಚಾರಣೆ ಬಳಿಕ 2018ರಲ್ಲಿ ಹೈಕೋರ್ಟ್ ಐಶ್ವರ್ಯ ಇನೋಸೆಂಟ್ ಅನ್ನೋ ತೀರ್ಪು ನೀಡಿದೆ.

bigg boss mokshitha pai case high court verdict that mokshitha pai innocent in 2018

ಅಕ್ವಿಟ್ ಅಂದರೇನು?

ಆರಂಭದಲ್ಲಿ ಕಿಡ್ನ್ಯಾಪ್ ಕೇಸ್‌ನಲ್ಲಿ ಮೋಕ್ಷಿತಾ ಅವರು ಆರೋಪಿ ಸ್ಥಾನದಲ್ಲಿ ಇದ್ದರು. ಆದರೆ ನಂತರ ಅವರನ್ನು ನಿರಪರಾಧಿ ಎಂದು ಹೇಳಿ ಕೇಸ್‌ನ್ನು ಖುಲಾಸೆಗೊಳಿಸಲಾಗಿದೆ. ಇದನ್ನು ಅಕ್ವಿಟ್ ಎನ್ನಲಾಗುತ್ತದೆ. ಇದು ಮೋಕ್ಷಿತಾ ಜೀವನದಲ್ಲಿ ಆದ ದೊಡ್ಡ ಎಡವಟ್ಟು ಅನ್ನೋದು ಮಾತ್ರ ನೂರಕ್ಕೆ ನೂರು ಸತ್ಯ. 2014ರಲ್ಲಿ ಮೋಕ್ಷಿತಾ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದರು ಅನ್ನೋದು ಕೂಡ ನೂರಕ್ಕೆ ನೂರು ಸತ್ಯ. ಹಾಗಾದರೆ ಆರಂಭದಲ್ಲಿ ಐಶ್ವರ್ಯ ಪೈ ಅವರನ್ನು ಆರೋಪಿ ಎಂದು ಹೇಳಿದ್ದ ಬಾಲಕಿ ಪೋಷಕರು ನಂತರ ಹೇಳಿದ್ದೇನು?

2014ರ ವೀಡಿಯೋದಲ್ಲಿ ಏನಿದೆ?

2014ರ ವೀಡಿಯೋಗಳಲ್ಲಿ ಕಿಡ್ನ್ಯಾಪ್ ಆದ ಬಾಲಕಿಯ ಪೋಷಕರು ಐಶ್ವರ್ಯ ಪೈ ಹಾಗೂ ನಾಗಭೂಷಣ್ ಅವರೇ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಪರಿಶೀಲನೆ ನಡೆಸಿದ ಪೊಲೀಸರು ಕೂಡ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆರಂಭದಲ್ಲಿ ಮೋಕ್ಷಿತಾ ಪೈ ಹಾಗೂ ನಾಗಭೂಷಣ್ ಅವರು ಸೆಷನ್‌ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತಾರೆ. ಆದರೆ ಕೋರ್ಟ್ ಇದನ್ನು ತಿರಸ್ಕರಿಸುತ್ತದೆ. ಮೂರು ವರ್ಷ ನಿರಂತರ ವಿಚಾರಣೆ ಬಳಿಕ ಇವರಿಬ್ಬರು ನಿರಪರಾಧಿಗಳು ಎನ್ನುವ ತೀರ್ಪನ್ನು ಕೋರ್ಟ್ ನೀಡುತ್ತದೆ.

ಬಾಲಕಿ ಪೋಷಕರು ನೀಡಿದ ದೂರಿನಲ್ಲಿ ಏನಿದೆ?

12-3-2014ರಂದು ಬಾಲಕಿ ತಾಯಿ ದೂರನ್ನು ನೀಡುತ್ತಾರೆ. ಬೆಳಗ್ಗೆ ಆರು ಗಂಟೆ ಸುಮಾರಿಗೆ ಟ್ಯೂಷನ್‌ಗೆ ಹೋದ ಬಾಲಕಿ ಮನೆಗೆ ವಾಪಾಸ್ ಬಂದಿಲ್ಲ ಎನ್ನುವ ದೂರು ನೀಡುತ್ತಾರೆ. ಇದಾದ ಬಳಿಕ ಬೆಳಗ್ಗೆ 9 ಗಂಟೆಗೆ ಹಾಗೂ ಮಧ್ಯಾಹ್ನ 1ಗಂಟೆಗೆ ಬೇರೆ ಬೇರೆ ನಂಬರ್‌ನಿಂದ ಪೋಷಕರಿಗೆ ಕರೆ ಬರುತ್ತವೆ. 25 ಲಕ್ಷಕ್ಕೆ ಡಿಮ್ಯಾಂಡ್ ಕೂಡ ಇಡಲಾಗುತ್ತದೆ. ಇದೆಲ್ಲವೂ ನಡೆದಿದ್ದು ನೂರಕ್ಕೆ ನೂರು ಸತ್ಯ. ಇದು ದೂರಿನ ಪ್ರತಿಯಲ್ಲಿ ಇರುವ ಮಾಹಿತಿ ಕೂಡ ಹೌದು.

ಆರೋಪಿ ನಂಬರ್ 2

ಈ ಕೇಸ್‌ನಲ್ಲಿ ಆರೋಪಿ ನಂಬರ್ 2 ಐಶ್ವರ್ಯ ಪೈ ಆಗಿದ್ದರು. ಆರೋಪಿ ನಂಬರ್ 1 ಆಗಿದ್ದ ನಾಗಭೂಷಣ್ ಹಾಗೂ ಐಶ್ವರ್ಯ ಫ್ರೆಂಡ್ಸ್ ಆಗಿದ್ದರು. ಇಬ್ಬರೂ ಸೇರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಾಲಕಿಯನ್ನು ಕಿಡ್ನ್ಯಾಪ್ ಸಹ ಮಾಡಿದ್ದು ಇವರೇ ಎಂದು ಬಾಲಕಿ ಪೋಷಕರು ಆರೋಪ ಮಾಡಿದ್ದರು. ಆದರೆ ಏನಾಯ್ತೋ ಏನೋ ಗೊತ್ತಿಲ್ಲ. ಮೋಕ್ಷಿತಾ ಹಾಗೂ ನಾಗಭೂಷಣ್ ಅವರು ಇನೋಸೆಂಟ್ ಅನ್ನೋ ತೀರ್ಪನ್ನು ಹೈಕೋರ್ಟ್ ಕೊಟ್ಟಿದೆ. ಹಾಗಾದರೆ ಕೋರ್ಟ್ ಹೀಗೆ ತೀರ್ಪು ಕೊಟ್ಟಿದ್ದು ಯಾಕೆ?

ಕೋರ್ಟ್‌ ವಿಚಾರಣೆಯಲ್ಲಿ ಬಾಲಕಿ-ಪೋಷಕರು ಹೇಳಿದ್ದೇನು?

ಕೋರ್ಟ್ ವಿಚಾರಣೆಯಲ್ಲಿ ಕಿಡ್ನ್ಯಾಪ್ ಆಗಿದ್ದಳು ಎನ್ನಲಾದ ಬಾಲಕಿ ಪವಿತ್ರಾ '12-3-2014ರಂದು ನಾನು ಟ್ಯೂಷನ್‌ನಲ್ಲಿ ಪರೀಕ್ಷೆ ಇರುವುದರಿಂದ ಹೆದರಿ ಪಾರ್ಕ್‌ಗೆ ಹೋಗಿದ್ದೆ. ಯಾಕೆಂದರೆ ನಾನು ಪರೀಕ್ಷೆಗೆ ತಯಾರಿ ಮಾಡಿಕೊಂಡಿರಲಿಲ್ಲ. ಶಿಕ್ಷಕಿ ಐಶ್ವರ್ಯ ಪೈ ನನ್ನ ಪೋಷಕರನ್ನು ಕರೆಸಬಹುದು ಎಂದು ನಾನು ಹೆದರಿದ್ದೆ. ಹೀಗಾಗಿ ನಾನು ಟ್ಯೂಷನ್‌ಗೆ ಹೋಗದೆ ಪಾರ್ಕ್‌ನಲ್ಲೇ ಕಾಲ ಕಳೆದಿದ್ದೆ. ಇದರಲ್ಲಿ ಶಿಕ್ಷಕಿ ಮೋಕ್ಷಿತಾ ಅವರದ್ದು ಯಾವುದೇ ತಪ್ಪಿಲ್ಲ. ಜೊತೆಗೆ ನಾಗಭೂಷಣ್ ಅವರದ್ದೂ ಯಾವುದೇ ತಪ್ಪಿಲ್ಲ' ಎಂದು ಬಾಲಕಿ ಹಾಗೂ ಪೋಷಕರು ಕೋರ್ಟ್ ಮುಂದೆ ಒಪ್ಪಿಕೊಳ್ಳುತ್ತಾರೆ.

ಯಾವಾಗ ಬಾಲಕಿ ಹೀಗೆ ಹೇಳುತ್ತಾಳೋ ಅಲ್ಲಿಗೆ ಈ ಕೇಸ್ ಖುಲಾಸೆ ಆಗುತ್ತದೆ. ಅದೇ ರೀತಿಯಾದ ಜಡ್ಜ್‌ಮೆಂಟ್ ಕೂಡ ಬರುತ್ತದೆ. ಆರಂಭದಲ್ಲಿ ಇದೇ ಬಾಲಕಿ ತಂದೆ ತಾಯಿ ಅವರೇ ಇದೇ ನಾಗಭೂಷನ್ ಹಾಗೂ ಐಶ್ವರ್ಯ ಅವರು ತಮ್ಮ ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಇವರಿಬ್ಬರೇ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಅನ್ನೋ ಮಾತನ್ನು ಹೇಳಿದ್ದರು. ಜೊತೆಗೆ ಹಣ ತೆಗೆದುಕೊಂಡು ಇಂಥಹ ಸ್ಥಳಕ್ಕೆ ಬನ್ನಿ ಎಂದು ಹೇಳಿದ್ದರು ಎನ್ನುವ ಆರೋಪ ಕೂಡ ಮಾಡಿದ್ದರು. ಹಾಗಾದರೆ ಪೋಷಕರು ಉಲ್ಟಾ ಹೊಡೆದರಾ? ಆರಂಭದಲ್ಲಿ ಹೇಳಿದ ಮಾತು ಕೊನೆಯಲ್ಲಿ ಬದಲಾಗಿದ್ದು ಯಾಕೆ?

ಕೋರ್ಟ್‌ಗೆ ಅಲಿದಾಡಿ ಸುಸ್ತಾದ ಬಾಲಕಿ ಪೋಷಕರು...

ಪ್ರಕರಣದ ಬಳಿಕ ಬಾಲಕಿ ಪೋಷಕರು ನಿರಂತವಾಗಿ ಕೋರ್ಟ್‌ಗೆ ಅಲೆದಾಡಿದ್ದಾರೆ. ವಕೀಲಗಿರಿ, ಹಣ ಖರ್ಚು, ಕೋರ್ಟ್ ಬಳಿ ಹೋದಾಗ ವಿಚಾರಣೆ ಮುಂದೂಡುವುದು, ಹಿಂಸೆ ನಿರಂತರವಾಗಿ ನಡೆಯುತ್ತಿರುವುದರಿಂದ ಬೇಸತ್ತು ಹೋಗಿದ್ದರು. 'ಕೋರ್ಟ್‌ಗೆ ಹೋದರೆ ಕಳ್ಳತನವಾದ ಮೇಕೆ ಕೂಡ ಸಿಗಬಹುದು, ಆದರೆ ಅದಕ್ಕಾಗಿ ಆನೆಯನ್ನು ಮಾರಬೇಕಾಗುತ್ತದೆ' ಅನ್ನೋ ಗಾದೆಯಂತೆ ಬಾಲಕಿ ಪವಿತ್ರಾ ಪೋಷಕರು ಹೈರಾಣಾಗಿ ಹೋಗಿದ್ದರು. ಸಾಕಪ್ಪಾ ಈ ಅಲೆದಾಟ ನಮ್ಮ ಕೈ ಬಿಟ್ಟರೆ ಸಾಕು ಅನ್ನೋ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು ಎಂದು ಹೇಳಲಾಗುತ್ತದೆ.

ಈ ಕಾರಣಕ್ಕೆ ರಾಜಿ ಮಾಡಿಕೊಂಡರಾ ಕಿಡ್ನ್ಯಾಪ್ ಆದ ಬಾಲಕಿ ಪೋಷಕರು ಎನ್ನುವ ಅನುಮಾನವೂ ಇದೆ. ಆದರೂ ಕೂಡ ಇಲ್ಲಿ ನಾವು ನ್ಯಾಯಲಯದ ತೀರ್ಪನ್ನು ಮಾತ್ರ ಅಲ್ಲಗಳಿಯುವಂತಿಲ್ಲ. ಇದನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಇಲ್ಲಿ ಮೋಕ್ಷಿತಾ ನಿರಪರಾಧಿ ಎಂದು ಈ ಕೇಸ್ ಅಕ್ವಿಟ್ ಆಗಿದೆ. ಇದಾದ ನಂತರ ಮೋಕ್ಷಿತಾ ಅವರು ತಮ್ಮ ಹೆಸರನ್ನು ಚೇಂಜ್ ಮಾಡಿಕೊಂಡಿದ್ದಾರೆ. ಇಲ್ಲಿ ಏನೇ ಆಗಲಿ ನಾವು ಕೋರ್ಟ್ ತೀರ್ಪನ್ನು ಗೌರವಿಸಲೇಬೇಕು.

ಮೋಕ್ಷಿತಾ ಪೈ ಪರ ಸಂಗೀತಾ ಶೃಂಗೇರಿ ಕಾಮೆಂಟ್

ಹಳೆಯ ಬಿಗ್‌ಬಾಸ್‌ ಸ್ಪರ್ಧಿ ಸಂಗೀತಾ ಶೃಂಗೇರಿ ಮೋಕ್ಷಿತಾ ಪೈ ಪರ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಯಾವುದೇ ವಿಚಾರವನ್ನು ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು. ನಾವು ಕೇಳಿದ್ದು ನೋಡಿದ್ದು ಸುಳ್ಳಾಗಿರಬಹುದು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸಂಗೀತಾ ಮೋಕ್ಷಿತಾ ಪರ ಬ್ಯಾಟ್ ಬೀಸಿದ್ದಾರೆ.

ಸಂಗೀತಾ ಪೋಸ್ಟ್‌fನಲ್ಲಿ ಹೀಗಿದೆ- ಗುಂಪನ್ನು ಕುರುಡಾಗಿ ನಂಬಬೇಡಿ. ಯಾರ ಬಗ್ಗೆ ಆದರೂ ನಿರ್ಧಾರಕೈಗೊಳ್ಳುವ ಮುನ್ನ ಆಲೋಚಿಸಿ ಬೆಂಬಲಿಸಿರಿ. ಕಾಮೆಂಟ್ ಮಾಡುವ ಜನರಿಗೆ ನಿಜವಾದ ಮುಖಗಳಿವೆಯೋ? ಇಲ್ಲವೋ? ಎಂಬುದು ನಿಮಗೆ ಗೊತ್ತಿಲ್ಲ. ಅಪರಿಚಿತ ವ್ಯಕ್ತಿಯ ಹೇಳಿಕೆಯನ್ನು ನಂಬುತ್ತೀರಾ? ಅದು ಯಾವುದೇ ವ್ಯಕ್ತಿಯ ಗೌರವವನ್ನು ಹಾಳು ಮಾಡಲು, ಯಾರಾದರೂ ಹಣ ಕೊಟ್ಟು ಅಥವಾ ಏರ್ಪಡಿಸಿದ ಕೆಲಸ ಆಗಿರಬಹುದಲ್ಲವೇ? ಇದು ಯಾರನ್ನಾದರೂ ಬೆಂಬಲಿಸಬೇಕೆಂದು ಹೇಳಿದ ಮಾತಲ್ಲ. ಇದು ಕೇವಲ ಒಂದು ಚಿಂತನೆ ಅಷ್ಟೇ ಎಂದು ಸಂಗೀತಾ ಪೋಸ್ಟ್ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+