ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ: ಹುಡುಗಿ ಯಾರು ಗೊತ್ತಾ.?
Manju Pavagada: ಬಿಗ್ ಬಾಸ್ ಕನ್ನಡ 8ನೇ ಸೀಸನ್ ವಿನ್ನರ್ ಮಂಜು ಪಾವಡಗ ಅವರು ತಮ್ಮ ಹುಟ್ಟೂರಾದ ಪಾವಗಡದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಮಂಜು ಪಾವಗಡ ಅವರಿಗೆ ಜೋಡಿಯಾದ ಹುಡುಗಿಯ ಹೆಸರು ಹಾಗೂ ಹಿನ್ನೆಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮಂಜು ಪಾವಗಡ ಅವರು ಕೈ ಹಿಡಿದ ಹುಡುಗಿ ಚಿತ್ರರಂಗದ ಜೊತೆ ಯಾವುದೇ ನಂಟು ಹೊಂದಿಲ್ಲ ಎನ್ನುವುದೇ ವಿಶೇಷವಾಗಿದೆ. ಇನ್ನು ಮಂಜು ಅವರು ಬಿಗ್ ಬಾಸ್ ಬಳಿಕ ಕಾಮಿಡಿ ರಿಯಾಲಿಟಿ ಶೋ ಮಜಾಭಾರತ ಹಾಗೂ ಧಾರವಾಹಿ ಅಂತರಪಟ ಹಾಗೂ ಭ್ಯಾಗ್ಯಲಕ್ಷ್ಮಿ ಧಾರವಾಹಿಗಳ ಮೂಲಕ ಕನ್ನಡಿಗರ ಮನೆ ಮಾತಾದ ಹಾಸ್ಯ ಕಲಾವಿದರಾಗುದ್ದಾರೆ.

ಮಂಜು ಪಾವಗಡ ಅವರು ನಂದಿನಿ ಎಂಬ ಹುಡುಗಿ ಜೊತೆ ವಿವಾಹ ಆಗಿದ್ದು, ಈ ಮುದ್ದಾದ ಜೋಡಿಗೆ ಸೆಲೆಬ್ರೆಟಿಗಳು ಶುಭ ಹಾರೈಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಆಪ್ತರು ಹಾಗೂ ಹಿರಿಯರ ಸಮ್ಮುಖದಲ್ಲಿ ಮಂಜು ಅವರು ವಿವಾಹ ಆಗಿದ್ದಾರೆ.
ಇನ್ನು ಮಂಜು ಪಾವಗಡ ವಿನ್ ಆದ ಬಿಗ್ ಬಾಸ್ ಕನ್ನಡ 8ನೇ ಸೀಸನ್ನಲ್ಲಿ ಅವರಿಗೆ ಉತ್ತಮವಾಗಿ ಜೊತೆಯಾಗಿದ್ದು ಶುಭಾ ಪೂಂಜಾ ಹಾಗೂ ದಿವ್ಯಾ ಸುರೇಶ್ ಅವರು. ಆದ್ದರಿಂದಲೇ, ಮಂಜು ಅವರ ವಿವಾಹಕ್ಕೆ ಶುಭ ಪೂಂಜಾ ಆಗಮಿಸಿ ವಿಶೇಷವಾಗಿ ಹಾರೈಸಿದ್ದಾರೆ.
ಮಂಜು ಪಾವಗಡ ಅವರು ಬಿಗ್ ಬಾಸ್‌ನಲ್ಲಿದ್ದಾಗ ದಿವ್ಯಾ ಸುರೇಶ್ ಅವರ ಜೊತೆ ಆಪ್ತತೆಯಿಂದ ಇದ್ದರು. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿತ್ತು. ಇವರು ಮದುವೆ ಆಗಬೇಕೆಂತಲೂ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಗರು ಆಗ್ರಹಿಸುತ್ತಿದ್ದರು. ಆದರೆ, ಮಂಜು ಮಾತ್ರ ಯಾವುದಕ್ಕೂ ಕ್ಯಾರೆ ಅನ್ನದೇ, ಗೆಳೆತನಕ್ಕೆ ಮಾತ್ರ ಸೀಮಿತ ಮಾಡಿಕೊಂಡಿದ್ದರು. ಇನ್ನು ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಅವರು ಒಟ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.












Click it and Unblock the Notifications