ಬಾಡೂಟ ಸವಿಯುತ್ತಾ 2025ರ ಭಯಾನಕ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ
ಬಿಗ್ ಬಾಸ್ ಸೀಜನ್ 9ರ ವಿನ್ನರ್ ನಟ ರೂಪೇಶ್ ಶೆಟ್ಟಿ ಆರ್ಯವರ್ಧನ್ ಗುರೂಜಿ ಮನೆಗೆ ಭೇಟಿ ನೀಡಿದ್ದಾರೆ. ಹೊಸ ವರ್ಷಕ್ಕೆ ಆರ್ಯವರ್ಧನ್ ಗುರೂಜಿ ಹಾಗೂ ಅವರ ಕುಟುಂಬಸ್ಥರ ಜೊತೆ ರೂಪೇಶ್ ಶೆಟ್ಟಿ ಸಮಯ ಕಳೆದಿದ್ದಾರೆ. ಹೊಸ ವರ್ಷಕ್ಕೆ ಮನೆಗೆ ಬಂದ ಅತಿಥಿಗೆ ಭರ್ಜರಿ ಬಾಡೂಟದ ವ್ಯವಸ್ಥೆಯನ್ನು ಆರ್ಯವರ್ಧನ್ ಗುರೂಜಿ ಮಾಡಿದ್ದು, ಇಬ್ಬರು ಜೊತೆಯಾಗಿ ಕುಳಿತು ಬಾಡೂಟ ಸವಿದಿದ್ದಾರೆ.
ಈ ವೇಳೆ 2025 ಯಾರಿಗೆಲ್ಲಾ ಒಳ್ಳೆದಾಗುತ್ತದೆ ಎಂದು ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ ಅವರನ್ನು ಕೇಳಿದ್ದು, ರುಚಿಯಾದ ಬಾಡೂಟ ಸವಿಯುತ್ತಲೇ ಗುರೂಜಿ 2025ರ ಭವಿಷ್ಯ ಹೇಳಿದ್ದಾರೆ.

'ಈ ವರ್ಷ ವಿಮಾನ ದುರಂತ ಆಗಿರಬಹುದು, ದೊಡ್ಡ ವ್ಯಕ್ತಿಗೆ ಸಂಬಂಧಿಸಿದ ಘಟನೆಗಳು ನಡೆಯುತ್ತದೆ. ತುಂಬಾ ದುಃಖಕರವಾದ ಘಟನೆಗಳು ಹೆಚ್ಚಾಗಿ ನಡೆಯುತ್ತದೆ. ಹೋದ ವರ್ಷ ನಾನು ಆರು ಸರಿ ಇಲ್ಲ ಅಂತಾ ಅಂದಾಜು ಮಾಡಿದ್ದೆ. ಹೀಗಾಗಿ ಹೋದ ವರ್ಷ ಆರು ನಂಬರ್ ಇರುವವರು ತುಂಬಾ ತೊಂದರೆ ಅನುಭವಿಸಿದರು. 2025ರಲ್ಲಿ ಬರೆದು ಇಟ್ಟುಕೊಳ್ಳಿ 2, 11, 20, 29 ದಿನಾಂಕಗಳಲ್ಲಿ ಒಂದು ದೊಡ್ಡ ದುರ್ಘಟನೆ ನಡೆಯುತ್ತದೆ' ಎಂದರು.
'ಈ ವರ್ಷ ಅತಿಹೆಚ್ಚು ಅಪಾಯಕಾರಿ ಬಣ್ಣ ಬಿಳಿ. ಈ ವರ್ಷ ಈಗಾಗಲೇ ಟೆಸ್ಟ್‌ನಲ್ಲಿ ಬೆಂಕಿ ಹತ್ತಿಕೊಂಡಿದೆ. ಬಿಳಿ ಬಣ್ಣ ಬಟ್ಟೆ ಹಾಕಿರುವವರು ಇರುವ ವಿಧಾನ ಸೌಧದಲ್ಲಿ ದೊಡ್ಡ ಗಲಾಟೆ ಆಗುತ್ತದೆ. ಬಿಳಿ ಬಟ್ಟೆಗೆ ಮೊನ್ನೆ ತಮಿಳುನಾಡಿನಲ್ಲೂ ಗಲಾಟೆ ಆಯ್ತು. ಕರ್ನಾಟಕದಲ್ಲಿಯೂ ಆಯ್ತು. ಹೀಗಾಗಿ ಈ ವರ್ಷಕ್ಕೆ ಬಿಳಿ ಬಣ್ಣದ ಬಟ್ಟೆ ಅಪಾಯಕಾರಿ' ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.

'5, 14, 23 ಸಂಖ್ಯೆಗೆ ರಾಜಯೋಗ. ವಿಪರೀತ ರಾಜಯೋಗವನ್ನು ಕೊಡುತ್ತದೆ. ಕೊನೆಯಲ್ಲಿ 9 ಸಂಖ್ಯೆ ಇರುವವರು ಮನೆ ನಂಬರ್, ಗಾಡಿ ನಂಬರ್ ಇರುವವರು ಹುಷಾರಾಗಿ ಇರಬೇಕು. ನನ್ನ ಮೂರು ಕಾರಿನ ನಂಬರ್ 6 ಬರುತ್ತದೆ ಹೋದ ವರ್ಷ ಮೂರಕ್ಕೂ ತೊಂದರೆ ಆಗಿತ್ತು. 9 ಸಂಖ್ಯೆ ಇರುವವರಿಗೆ ತುಂಬಾ ಅಪಾಯಕಾರಿ ಇದೆ ತುಂಬಾ ಹುಷಾರಾಗಿರಿ' ಎಂದರು.
'2025ರ ವರ್ಷ ಜಿಂಗಾಲಕ ಲಕಾ ಲಕಾ ಬರೆದಿಟ್ಟುಕೊಳ್ಳಿ. ಈ ವರ್ಷ ಯುದ್ಧ, ಭೂಕಂಪಗಳು ಆಗಬಹುದು. ಈ ವರ್ಷ ಬಸ್ ಅನಾಹುತ, ರೈಲು ಅನಾಹುತ, ವಿಮಾನ ಅನಾಹುತಗಳೆಲ್ಲಾ ಆಗುತ್ತದೆ. ಅದು ಕೂಡ ನಾನು ಹೇಳುವ ದಿನಾಂಕಗಳಲ್ಲೇ ಆಗುತ್ತದೆ. ಬೇರೆ ದಿನಾಂಕಗಳಲ್ಲಿ ಆಗಲು ಸಾಧ್ಯವೇ ಇಲ್ಲ. ಬೇಕಿದ್ದರೆ ಬರೆದುಕೊಡುತ್ತೇನೆ' ಎಂದು ಆರ್ಯವರ್ಧನ್ ಗುರೂಜಿ 2025ರ ಭವಿಷ್ಯ ಹೇಳಿದ್ದಾರೆ.












Click it and Unblock the Notifications