ಮಾವನ ಮಾತಿಗೆ ಕಣ್ಣೀರಿಟ್ಟ ಪ್ರಿಯಾ ಸುದೀಪ್
ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ನಿಧನ ಹೊಂದಿ ಇಂದಿಗೆ ಒಂದು ವರ್ಷವಾಗಿದೆ. ಸುದೀಪ್ ಅವರ ತಾಯಿ ಸರೋಜಾ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇನ್ನೂ ನಟ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನ ನೆನದು ಹಲವು ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ತಾಯಿಯ ಪ್ರೀತಿಯನ್ನ ಹಲವು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದು, ಇದೀಗ ಸುದೀಪ್ ತಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸೊಸೆ ಪ್ರಿಯಾ ಸುದೀಪ್ ಬಗ್ಗೆ ಮಾತನಾಡಿದ್ದಾರೆ.
ಹೌದು, ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ 24ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಸುದೀಪ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ಪರದಾಡುತ್ತಿದ್ದ ಸಮಯದಲ್ಲೇ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಇದೀಗ 25 ವರ್ಷಕ್ಕೆ ಅವರ ದಾಂಪತ್ಯ ಜೀವನ ಕಾಲಿಟ್ಟಿದ್ದು, ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರಿಗೆ ಬಿಗ್ ಬಾಸ್ ಬಿಗ್‌ಸರ್‌ಪ್ರೈಸ್ ನೀಡಿದ್ದಾರೆ. ಬಿಗ್‌ಬಾಸ್ ವೇದಿಕೆಯಲ್ಲಿ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆ ನಡೆದಿದೆ.

ಬಿಗ್‌ಬಾಸ್ 12 ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರನ್ನು ಕೂರಲು ಹೇಳಿ ಪತ್ನಿ ಪ್ರಿಯಾ ಅವರನ್ನು ವೇದಿಕೆಗೆ ಕರೆದು ಬಿಗ್‌ಬಾಸ್ ಅಚ್ಚರಿ ಮೂಡಿಸಿದ್ದಾರೆ. ಬಳಿಕ ಇಬ್ಬರು ವಿವಾಹ ವಾರ್ಷಿಕೋತ್ಸವ ವಿಚಾರ ನೆನಪಿಸಿದ್ದಾರೆ. ಇನ್ನೂ ಈ ವೇಳೆ ನಟ ಕಿಚ್ಚ ಸುದೀಪ್ ತಂದೆ ಸಂಜೀವ್ ಸೊಸೆಯ ಬಗ್ಗೆ ಮಾತನಾಡಿರುವ ವೀಡಿಯೋ ಪ್ಲೇ ಆಗಿದೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಇದೀಗ ವೈರಲ್ ಆಗುತ್ತಿದೆ. ಮಾವ ಸಂಜೀವ ಅವರ ಮಾತು ಕೇಳಿ ಪ್ರಿಯಾ ಸುದೀಪ್ ಭಾವುಕರಾಗಿದ್ದಾರೆ. ಈ ದಿನದ ವಿಶೇಷ ಏನು ಅಂದ್ರೆ, ಕಳೆದ ವರ್ಷ ನನ್ನ ತಾಯಿ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಜೀವಂತವಾಗಿ ಮಾತನಾಡಿದ್ದು ಕೊನೆ ದಿನ ಎಂದು ಸುದೀಪ್ ತಮ್ಮ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದಾರೆ. 'ನಗೂ ಎಂದಿದೆ ಮಂಜಿನ ಬಿಂದು' ಹಾಡನ್ನು ಪ್ರಿಯಾ ವೇದಿಕೆ ಮೇಲೆ ಹಾಡಿದ್ದಾರೆ.
ಇದೇ ವೇಳೆ, ಸುದೀಪ್ ಅವರ ತಂದೆ ಸಂಜೀವ್ ಅವರು ತಮ್ಮ ಸೊಸೆ ಪ್ರಿಯಾ ಬಗ್ಗೆ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದು, ನನ್ನ ಪತ್ನಿ ಹಲವು ಧಾರ್ಮಿಕ ಕಾರ್ಯಗಳನ್ನ ಮಾಡುತ್ತಿದ್ದರು. ಈಗ ನನ್ನ ಸೊಸೆ ಅದನ್ನೆಲ್ಲಾ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ಸುದೀಪ್ ಮದುವೆ ಆಗಿ ಬಂದಾಗ ಹೇಗೇ? ಏನೋ? ಅಂದುಕೊಂಡಿದ್ದೆವು. ಆದರೆ, ನನಗೆ ಮೂರನೇ ಮಗಳಗಾಗಿ ನಮ್ಮ ಮನೆಗೆ ಪ್ರಿಯಾ ಬಂದರು. ಪ್ರಿಯಾ ನನ್ನನ್ನ ಅಪ್ಪ ಅಂತಲೇ ಕರೆಯುತ್ತಾಳೆ. ಸುದೀಪ್ ಸಣ್ಣ ಪುಟ್ಟ ತಪ್ಪನ್ನ ಮಾಡಿದಾಗಲೂ ಪ್ರಿಯಾ ತಿದ್ದಿ, ಸರಿಯಾದ ದಾರಿಗೆ ಕರೆತಂದವಳು ಪ್ರಿಯಾ. ನಮ್ಮ ಮನೆ ಸೊಸೆ ಅಂತ ಹೇಳಲೋ, ಮಗಳು ಅಂತ ಹೇಳಲೋ? ನಮ್ಮ ಮನೆಯ ಭಾಗ್ಯ ದೇವತೆ ಅಂತ ಹೇಳಲೋ? ಈ ಬಾರಿ ಬಿಗ್ ಬಾಸ್‌ನಲ್ಲಿ ಸುದೀಪ್ ಭಾಗಿ ಆಗಲು ಪ್ರಿಯಾ ಮುಖ್ಯ ಕಾರಣ. ನೂರು ಕಾಲ ಹೀಗೆ ಇರಿ ಎಂದು ಸಂಜೀವ್ ಅವರು ಹೇಳಿದ್ದಾರೆ.
ಇನ್ನೂ ಮಾವ ಸಂಜೀವ್ ಅವರ ಮಾತುಗಳಿಂದ ಭಾವುಕರಾದ ನಟ ಸುದೀಪ್ ಅವರ ಪತ್ನಿ ಪ್ರಿಯಾ, ವೇದಿಕೆಯ ಮೇಲೆ ಕಣ್ಣೀರಿಟ್ಟರು. ಥ್ಯಾಂಕ್ಸ್ ಅಪ್ಪ.. ನನಗೆ ಗೊತ್ತಿದ್ದಂಗೆ ಅವರು ಯಾರನ್ನೂ ಕೂಡ ಹೆಚ್ಚು ಹೊಗಳುವುದಿಲ್ಲ. ನನ್ನ ಮದುವೆಗೆ ಮುಂಚೆಯೇ ನನ್ನ ತಂದೆ ತೀರಿಕೊಂಡಿದ್ದರು. ಅವರನ್ನೇ ಅಪ್ಪ ಅಂದುಕೊಂಡಿದ್ದೇನೆ. ಈ ಕ್ಷಣ ನನಗೆ ಮರೆಯಲಾಗದ ಉಡುಗೊರೆ ಎಂದು ಪ್ರಿಯಾ ತಮ್ಮ ಭಾವನೆಗಳನ್ನ ಹಂಚಿಕೊಂಡರು.











Click it and Unblock the Notifications