Bigg Boss 12 Contestants: ಬಿಗ್ ಬಾಸ್ ಮನೆಗೆ ಹೋಗುವ ಮೊದಲ 3 ಸ್ವರ್ಧಿಗಳು ಇವರೇ
ಕನ್ನಡ ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್-12 ಇಂದಿನಿಂದ ಶುರುವಾಗಲಿದೆ. ಸಾಮಾನ್ಯವಾಗಿ ಅದ್ಧೂರಿ ವೇದಿಕೆಯಲ್ಲಿ ಸ್ಪರ್ಧಿಗಳ ಹೆಸರು ರಿವೀಲ್ ಮಾಡಿ ಮನೆಗೆ ಕಳುಹಿಸಲಾಗುತ್ತಿತ್ತು. ಆದರೆ ಈ ಬಾರಿ ಕಾರ್ಯಕ್ರಮ ಶುರುವಾಗುವ ಮುನ್ನವೇ ಮೊದಲ ಮೂವರು ಸ್ಪರ್ಧಿಗಳ ಹೆಸರು ಘೋಷಿಸಲಾಗಿದೆ. ಈ ಮೂಲಕ ಪ್ರೇಕ್ಷಕರಿಗೆ ಬಿಗ್‌ಬಾಸ್ ಸರ್‌ಪ್ರೈಸ್ ನೀಡಿದೆ. ಆ ಮೂವರು ಸ್ಪರ್ಧಿಗಳು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಬಿಗ್‌ಬಾಸ್‌ಗೆ ಹೋಗಲಿದ್ದಾರೆ ಎನ್ನುವ ಹಲವರ ಹೆಸರು ಹರಿದಾಡಿತ್ತು. ಆದರೆ ಬಿಗ್‌ಬಾಸ್ ಹೊಸ ಸ್ಪರ್ಧಿಗಳ ಹೆಸರು ಅನೌನ್ಸ್ ಮಾಡಿ ಶಾಕ್ ನೀಡಿದೆ. ಬಿಗ್‌ಬಾಸ್ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೂ ಮುನ್ನವೇ ಈ ಮೂವರ ಹೆಸರು ರಿವೀಲ್ ಮಾಡಿದೆ. ಆ ಮೂವರು ಸ್ಪರ್ಧಿಗಳ ವಿವರ ಇಲ್ಲಿದೆ.

ಕಾಕ್ರೋಚ್ ಸುಧಿ
ಕನ್ನಡ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುಧಿ ಅಲಿಯಾಸ್ ಕಾಕ್ರೋಚ್ ಈ ಬಾರಿಯ ಬಿಗ್‌ಬಾಸ್ ಮನೆಗೆ ಹೋಗುವ ಮೊದಲ ಸ್ಪರ್ಧಿಯಾಗಿದ್ದಾರೆ. ಟಗರು, ಭೀಮ, ಸಲಗ ಸಿನಿಮಾಗಳಲ್ಲಿ ಸುಧಿ ವಿಲನ್ ಆಗಿ ನಟಿಸಿದ್ದರು. ಟಗರು ಸಿನಿಮಾದಲ್ಲಿ ಕಾಕ್ರೋಚ್ ಪಾತ್ರದಿಂದ ಅವರು ಕಾಕ್ರೋಚ್ ಸುಧಿ ಎಂದೇ ಮನೆಮಾತಾಗಿದ್ದಾರೆ. ಈಗಾಗಲೇ ಒಂದೆರಡು ಬಾರಿ ಸುಧಿಗೆ ಬಿಗ್‌ಬಾಸ್ ಆಫರ್ ಬಂದಿದ್ದರೂ, ಶೂಟಿಂಗ್ ಇದ್ದಿದ್ದರಿಂದ ಹೋಗಿರಲಿಲ್ಲ. ಮತ್ತೆ ಕರೆದರೆ ಹೋಗ್ತೀನಿ ಎಂದಿದ್ದರು. ಅದರಂತೆ ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ ಆಯ್ಕೆಯಾಗಿದ್ದಾರೆ.
ನಟಿ ಮಂಜು ಭಾಷಿಣಿ
ಸಿಲ್ಲಿ ಲಲ್ಲಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚಿದ್ದ ನಟಿ ಮಂಜು ಭಾಷಿಣಿ ಬಿಗ್ ಬಾಸ್ ಮನೆಯ ಎರಡನೇ ಕಂಟೆಸ್ಟೆಂಟ್ ಆಗಿದ್ದಾರೆ. ಮಂಜು ಭಾಷಿಣಿ ಕನ್ನಡ ಚಿತ್ರರಂಗದ ಮತ್ತು ಕಿರುತೆರೆ ನಟಿ. 1997ರಲ್ಲಿ ತೆರೆಕಂಡ ಭೂಮಿ ತಾಯಿ ಸಿನಿಮಾ ಮೂಲಕ ಜನಪ್ರಿಯರಾದರು. ಈಟಿವಿ ಕನ್ನಡದಲ್ಲಿ ಪ್ರಸಾರವಾದ ಸಿಲ್ಲಿ ಲಲ್ಲಿ ಧಾರಾವಾಹಿಯ ಸಮಾಜಸೇವಕಿ ಲಲಿತಾಂಬ ಪಾತ್ರದ ಮೂಲಕ ಪ್ರಸಿದ್ಧಿ ಪಡೆದರು. ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿಯೂ ಮಂಜು ಭಾಷಿಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಬಿಗ್‌ಬಾಸ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ನಟಿ ಮುಂದಾಗಿದ್ದಾರೆ.
ಮಲ್ಲಮ್ಮ
ಬಿಗ್‌ಬಾಸ್ ಸೀಸನ್ 12ರ ಮೂರನೇ ಕಂಟೆಸ್ಟೆಂಟ್ ಆಗಿ ಮಲ್ಲಮ್ಮ ಆಯ್ಕೆಯಾಗಿದ್ದಾರೆ. ಕಲರ್ಸ್ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಹಿರಿ ವಯಸ್ಸಿನ ಮಲ್ಲಮ್ಮ ಅವರನ್ನು ಪರಿಚಯಿಸಲಾಗಿದೆ. ಮಲ್ಲಮ್ಮ ಅವರ ಬಗ್ಗೆ ಹೆಚ್ಚಿನ ವಿವರ ಹಂಚಿಕೊಂಡಿಲ್ಲ. ನೋಡಿದರೆ ಉತ್ತರ ಕರ್ನಾಟಕ ಮೂಲದ ವೃದ್ಧೆ ಎಂಬಂತೆ ಕಾಣುತ್ತಿದೆ. ಈ ಬಾರಿ ಕಾಮನ್ ಮ್ಯಾನ್‌ಗೂ ಬಿಗ್‌ಬಾಸ್‌ನಲ್ಲಿ ಅವಕಾಶ ಕೊಟ್ಟಂತೆ ಕಾಣುತ್ತಿದೆ. ಆದರೆ ಮಲ್ಲಮ್ಮ ಅವರ ಬಗ್ಗೆ ಹೆಚ್ಚಿನ ಮಾಹಿತಿ ಗುಟ್ಟಾಗಿ ಇಟ್ಟಿದೆ. ಭಾನುವಾರ ಸಂಜೆ ಆರು ಗಂಟೆಗೆ ಬಿಗ್‌ಬಾಸ್ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ನಡೆಯಲಿದ್ದು, ಉಳಿದ ಸ್ಪರ್ಧಿಗಳ ಹೆಸರು ರಿವೀಲ್ ಆಗಲಿದೆ.












Click it and Unblock the Notifications