BBK-12 Finale: ಬಿಗ್‌ಬಾಸ್ ಫಿನಾಲೆ ಗೆದ್ದಿದ್ಯಾರು? ಮನೆಯಿಂದ ಹೊರಬಂದ ಇಬ್ಬರು ಯಾರು?
ಬಿಗ್ ಟ್ವಿಸ್ಟ್‌ಗಳಲ್ಲೇ ಸಾಗುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಅಚ್ಚರಿ ಎನ್ನುವಂತೆ ಮೊದಲ ಫಿನಾಲೆ ನಡೆದಿದೆ. ಸ್ಪರ್ಧಿಯೊಬ್ಬರು ಫಿನಾಲೆಯಲ್ಲಿ ಗೆದ್ದು ಬೀಗಿದ್ದಾರೆ. ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಫಿನಾಲೆ ವೇಳೆಯೇ ಇಬ್ಬರು ಎಲಿಮಿನೇಟ್ ಆಗಿದ್ದು, ಇದನ್ನು ಯಾರೂ ಊಹಿಸಿರಲಿಲ್ಲ ಎಂದು ಪ್ರೇಕ್ಷಕರು ಕೂಡ ಶಾಕ್ ಆಗಿದ್ದಾರೆ. ಫಿನಾಲೆಗೂ ಮುನ್ನವೇ ಡಾಗ್ ಸತೀಶ್ ಅವರನ್ನು ರಾತ್ರೋರಾತ್ರಿ ಎಲಿಮಿನೇಟ್ ಮಾಡಿ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಅದರೊಂದಿಗೆ ಈ ವಾರ ಮತ್ತಿಬ್ಬರು ಸ್ಪರ್ಧಿಗಳು ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ.
ಮಿನಿ ಫಿನಾಲೆಯಲ್ಲಿ ಕಾಕ್ರೋಚ್ ಸುಧಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಕಾಕ್ರೋಚ್‌ಗೆ ಸ್ಪೆಷಲ್ ಸೂಪರ್ ಪವರ್ ಕೂಡ ಕೊಡಲಾಗಿದೆ. ಸುಧಿ ಒಂದು ಬಾರಿ ನಾಮಿನೇಷನ್‌ನಿಂದ ಸ್ವತಃ ಇಮ್ಯೂನಿಟಿ ಪಡೆಯಬಹುದು, ಇಲ್ಲವೇ ಬೇರೊಬ್ಬ ಸ್ಪರ್ಧಿಯನ್ನು ಕೂಡ ಸೇವ್ ಮಾಡುವ ಅವಕಾಶ ನೀಡಲಾಗಿದೆ. ಇದರಿಂದ ಸುಧಿ ಸ್ಥಾನ ಮತ್ತಷ್ಟು ಭದ್ರವಾಗಿದೆ.

ಅಶ್ವಿನಿ & ಮಂಜು ಭಾಷಿಣಿ ಎಲಿಮಿನೇಟ್
ಈ ವಾರದ ಬಿಗ್‌ಬಾಸ್ ನಾಮಿನೇಷನ್ ಕೂಡ ನಡೆದಿದೆ. ಅಭಿಷೇಕ್, ಅಶ್ವಿನಿ ಎಸ್, ಸ್ಪಂದನಾ ಸೋಮಣ್ಣ ಮತ್ತು ಮಂಜು ಭಾಷಿಣಿ ಡೇಂಜರ್ ಜೋನ್‌ನಲ್ಲಿದ್ರು. ವೋಟಿಂಗ್ ಆಧಾರದ ಮೇರೆಗೆ ಅಶ್ವಿನಿ ಎಸ್.ಎನ್ ಮತ್ತು ಮಂಜು ಭಾಷಿಣಿ ಎಲಿಮಿನೇಟ್ ಆಗಿದ್ದಾರೆ. ಮೊದಲ ವಾರ ಅಮಿತ್ & ಕರಿಬಸಪ್ಪ ಜಂಟಿಯಾಗಿ ಎಲಿಮಿನೇಟ್ ಆಗಿದ್ರು. ಈ ಬಾರಿ ಅಶ್ವಿನಿ ಹಾಗೂ ಮಂಜು ಭಾಷಿಣಿ ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ. ಈ ಸೀಸನ್ ಬಿಗ್‌ಬಾಸ್ ಸ್ಪರ್ಧಿಗಳ ಪೈಕಿ ಐದು ಮಂದಿ ಹೊರಬಂದಿದ್ದಾರೆ.
ಗಿಲ್ಲಿಗೆ ಕಿಚ್ಚನ ಚಪ್ಪಾಳೆ
ಈ ವಾರದ ಗಿಲ್ಲಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿ ಗೌಡ, ಜಾಹ್ನವಿ ನಡುವಿನ ಗಲಾಟೆಯು ಈ ವಾರದ ಹಾಟ್ ಟಾಪಿಕ್ ಆಗಿತ್ತು. ರಕ್ಷಿತಾರನ್ನ ಅನಾವಶ್ಯಕವಾಗಿ ನಿಂದಿಸುವುದು, ಕೇವಲವಾಗಿ ಮಾತನಾಡುವ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಭಾರೀ ಚರ್ಚೆ ನಡೆದಿತ್ತು. ಆದರೆ ರಕ್ಷಿತಾ ಒಬ್ಬಂಟಿಯಾಗಿ ಟಕ್ಕರ್ ಕೊಡುತ್ತಾ ಬಂದಿದ್ದರು. ಈ ಸಮಯದಲ್ಲಿ ಉಳಿದ ಸ್ಪರ್ಧಿಗಳು ಗಪ್‌ಚುಪ್ ಆಗಿದ್ದರು. ಆಗ ಗಿಲ್ಲಿ ಮಾತ್ರವೇ ರಕ್ಷಿತಾ ಪರ ನಿಂತಿದ್ರು. ಈ ಕಾರಣಕ್ಕೆ ಗಿಲ್ಲಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.
ಅಲ್ಲದೆ ರಕ್ಷಿತಾ ವಿರುದ್ಧ ಸ್ಪರ್ಧಿಗಳ ವರ್ತನೆ ಬಗ್ಗೆಯೂ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಎಲ್ಲರೆದುರೇ ಬುದ್ಧಿ ಹೇಳಿ ತಿದ್ದುವ ಕೆಲಸ ಮಾಡಿದ್ದಾರೆ. "ಮುಚ್ಕೊಂಡು ಮಲ್ಕೋ, ಈಡಿಯಟ್, ನಿನ್ನ ಡ್ರಾಮಾ ಬಾತ್‌ರೂಂನಲ್ಲಿ ಇಟ್ಕೋ" ಅಂತೆಲ್ಲ ಅಶ್ವಿನಿ ಗೌಡ ರಕ್ಷಿತಾಗೆ ಜೋರು ಮಾಡಿದ್ದರು. ಈ ವಿಚಾರವಾಗಿ ಅಶ್ವಿನಿ ಹಾಗೂ ಜಾಹ್ನವಿ ಸೇರಿ ಗದರಿದ್ದರು. ಈ ಎಲ್ಲದಕ್ಕೂ ಕಿಚ್ಚ ತಮ್ಮದೇ ಸ್ಟೈಲಲ್ಲಿ ಚಳಿಬಿಡಿಸಿದ್ದಾರೆ.












Click it and Unblock the Notifications