Bigg Boss: ತ್ರಿವಿಕ್ರಮ್ ರನ್ನರ್ ಅಪ್ - 15 ಲಕ್ಷ ಬಹುಮಾನ

ತ್ರಿವಿಕ್ರಮ್ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ರನ್ನರ್ ಅಪ್ ಆಗಿದ್ದಾರೆ. ಈ ವೇಳೆ ತ್ರಿವಿಕ್ರಮ್ ಅವರು 15 ಲಕ್ಷ ಬಹುಮಾನ ಪಡೆದು ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿ ವಿಜಯವನ್ನು ಸಂಭ್ರಮಿಸಿದರು. ಈ ಬಾರಿ ನಿರೀಕ್ಷೆಯಂತೆ ಫಲಿತಾಂಶ ಬಂದಿದ್ದು ಬಿಗ್‌ಬಾಸ್‌ ವೀಕ್ಷಕರು ಸಖತ್ ಖುಷಿಯಾಗಿದ್ದಾರೆ. ಇನ್ನೂ ಗಾಯಕ ಹನುಮಂತ ಲಮಾಣಿ ವಿನ್ ಆಗಿದ್ದು ಟ್ರೋಫಿ ಪಡೆದು ಸಂತೋಷ ವ್ಯಕ್ತಪಡಿಸಿದ್ದಾರೆ.

Bigg boss kannada season 11 trivikram runner-up - 15 lakh prize

ತ್ರಿವಿಕ್ರಮ್ ಮೊದಲ ಪ್ರತಿಕ್ರಿಯೆ

ಹನುಮಂತನಿಗೆ 5,23,89,318 ಮತಗಳು ಬಿದ್ದರೆ ರನ್ನರ್ ಅಪ್ ಆದ ತ್ರಿವಿಕ್ರಮ್ ಅವರಿಗೆ 2,53,12,518 ಮತಗಳು ಬಂದಿವೆ. ಬಳಿಕ ಮಾತನಾಡಿದ ತ್ರಿವಿಕ್ರಮ್ ಹನುಮಂತ ಟ್ರೋಫಿ ಗೆದ್ದಿರುವುದಕ್ಕೆ ನನಗೆ ಖುಷಿ ಇದೆ. ನೀವು ತೋರಿಸಿರುವ ಪ್ರೀತಿಗೆ ನಾನು ಚಿರಋಣಿ. ಯುದ್ಧದಲ್ಲಿ ನೂರು ದಿನ ನಿಲ್ಲೋದು ತುಂಬಾ ಮುಖ್ಯ ಹಾಗೂ ತುಂಬಾನೇ ಕಷ್ಟ ಕೂಡ ಹೌದು ಎಂದು ಬಿಗ್‌ಬಾಸ್‌ ರನ್ನರ್ ಅಪ್ ತ್ರಿವಿಕ್ರಮ್ ಹೇಳಿದ್ದಾರೆ. ತ್ರಿವಿಕ್ರಮ್ ಗೆದ್ದೇ ಗೆಲ್ತಾರೆ ಅನ್ನೋ ನಂಬಿಕೆ ಅವರ ಅಭಿಮಾನಿಗಳಲ್ಲಿ ಇತ್ತು. ಆದರೆ ತ್ರಿವಿಕ್ರಮ್ ರನ್ನರ್ ಅಪ್ ಆಗಿರುವುದು ಕೆಲ ಅಭಿಮಾನಿಗಳಿಗೆ ಬೇಸರ ತಂದಿದೆ.

ಬಿಗ್‌ಬಾಸ್‌ ವಿನ್ನರ್ ಹನುಮಂತು

ಟ್ರೋಫಿ ಗೆದ್ದ ಖುಷಿಯಲ್ಲಿ ಹನುಮಂತ ಕಿಚ್ಚ ಸುದೀಪ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಹನುಮಂತ ವಿನ್ನರ್ ಎನ್ನುತ್ತಿದ್ದಂತೆ ಹನುಮಂತನ ಫ್ಯಾನ್ಸ್ ಸಂಭ್ರಮಾಚರಣೆ ಮಾಡಿದ್ದಾರೆ. ಬಿಗ್‌ಬಾಸ್‌ ಸೀಸನ್ ಹನ್ನೊಂದರ ಟ್ರೋಫಿ ಎತ್ತಿದ ಹನುಮಂತನಿಗೆ ಐದೂವರೆ ಕೋಟಿ ಕನ್ನಡಿಗರ ಆಶೀರ್ವಾದ ಸಿಕ್ಕಿದೆ. ಬಿಗ್‌ಬಾಸ್‌ ಮನೆಯಲ್ಲಿ ಒಬ್ಬ ವೈಲ್ಡ್‌ ಕಾರ್ಡ್‌ ಸ್ಪರ್ಧಿ ವಿಜೇತರಾಗಿದ್ದು ಇದೇ ಮೊದಲು. ಹನುಮಂತ ಈಗ 50 ಲಕ್ಷದ ಗೆದ್ದು ಬೀಗಿದ್ದಾರೆ. ಗಾಯಕ ಹನುಮಂತ ಗೆಲುವಿಗೆ ಅವರು ಪಡೆದ ಮತಗಳೇ ಕಾರಣ.

ಬಳಿಕ ಮಾತನಾಡಿದ ಹನುಮಂತ, 'ನಾನು ಗೆಲ್ತೀನಿ ಅಂತ ಬಂದಿರಲಿಲ್ಲ. ಮಜಾ ಮಾಡಿ ಹೋಗೋಣ ಅಂತ ಬಂದಿದ್ದೆ. ನಾನು ಗೆಲ್ತೀನಿ ಅಂತ ಗೊತ್ತಿದ್ದರೆ ಏನು ಹೇಳಬೇಕು ಅಂತ ಬಾಯಿ ಪಾಠ ಮಾಡಿಕೊಂಡು ಬರುತ್ತಿದೆ. ಕನ್ನಡಿಗರು, ಸುದೀಪ್ ಸರ್, ದೇವರ ಆಶೀರ್ವಾದದಿಂದ ನಾನು ಗೆದ್ದಿದ್ದೀನಿ. ನನಗೆ ಖುಷಿ ಆಗಿದೆ' ಎಂದು ಹನುಮಂತ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+