Bigg Boss: ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಕೊನೆಯ ಕಿಚ್ಚನ ಚಪ್ಪಾಳೆ ಪಡೆಯಲಿರುವ ಸ್ಪರ್ಧಿ ಇವರೇ..

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಯಾರು ಪಡೆಯಲಿದ್ದಾರೆ ಎನ್ನುವ ಕೂತೂಹಲ ಹೆಚ್ಚಾಗಿದೆ. ಈ ವಾರ ಕಿಚ್ಚನ ಚಪ್ಪಾಳೆಯನ್ನು ಈ ವಾರವನ್ನು ಮಾತ್ರ ಪರಿಗಣಿಸಿ ಕೊಡುತ್ತಿಲ್ಲ. ಬದಲಾಗಿ ಇಡೀ ಸೀಸನ್ ಪರಿಗಣಿಸಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಸಿಗಲಿದೆ. ಹೀಗಾಗಿ ವೀಕ್ಷಕರಲ್ಲಿ ಈ ಚಪ್ಪಾಳೆ ಯಾರಿಗೆ ಸಿಗಲಿದೆ ಎನ್ನುವ ಕೌತುಕ ಹೆಚ್ಚಾಗಿದೆ. ಹಾಗಾದರೆ ಈ ಚಪ್ಪಾಳೆಯನ್ನು ಪಡೆದುಕೊಳ್ಳುವ ಸ್ಪರ್ಧಿ ಯಾರು?

ಬಿಗ್‌ಬಾಸ್‌ ಕನ್ನಡ ಸೀಸನ್ 11 ಪೂರ್ಣಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇಂದು ಅಂದರೆ ಭಾನುವಾರ (ಡಿಸೆಂಬರ್ 19) ಕಿಚ್ಚ ಸುದೀಪ್ ಅವರ ಕೊನೆಯ ಪಂಚಾಯಿತಿ ನಡೆಯಲಿದೆ. ಈ ವೇಳೆ ಸುದೀಪ್ ಅವರು ಈ ಸೀಸನ್‌ ಅನ್ನು ಪರಿಗಣಿಸಿ ಯಾವ ಸ್ಪರ್ಧಿ ಉತ್ತಮವಾಗಿ ಆಡಿಕೊಂಡು ಬಂದಿದ್ದಾರೆಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಲಿದ್ದಾರೆ.

Bigg boss kannada season 11 these contestants will receive the final applause by kichcha sudeep

ಸೀಸನ್ 11ರ ಕೊನೆಯ ಕಿಚ್ಚನ ಚಪ್ಪಾಳೆ ತ್ರಿವಿಕ್ರಮ್‌ಗೆ

ಕಿಚ್ಚನ ಚಪ್ಪಾಳೆ ಪಡೆದುಕೊಳ್ಳಲು ಕೆಲ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯಲ್ಲಿ ಹೈಲೆಟ್ ಆಗಿ ಕಾಣಿಸುತ್ತಿದ್ದಾರೆ. ಇವರಲ್ಲಿ ತ್ರಿವಿಕ್ರಮ್ ಮೊದಲನೆಯದವರು. ತ್ರಿವಿಕ್ರಮ್ ಅವರು ಬಿಗ್‌ಬಾಸ್‌ ಮನೆಯಲ್ಲಿ ಆರಂಭದಿಂದಲೂ ಕೆಲವೊಂದಿಷ್ಟು ವಿಷಯದಲ್ಲಿ ಸಾಕಷ್ಟು ತಾಳ್ಮೆ ತೆಗೆದುಕೊಂಡು ಆಡುತ್ತಿದ್ದಾರೆ. ಜೊತೆಗೆ ಬಿಗ್‌ಬಾಸ್‌ ಮನೆಯಲ್ಲಿ ಕೆಲವೊಂದಿಷ್ಟು ವಿಷಯದಲ್ಲಿ ಇವರು ತಪ್ಪಾಗಿ ಮಾತನಾಡಿರುವುದು ಕೂಡ ಇದೆ. ಆದರೆ ಆ ವಿಷಯವನ್ನು ಬೇಗ ಬಗೆಹರಿಸಿಕೊಳ್ಳುವಂತಹ ಕೆಲಸವನ್ನು ಮಾಡಿದ್ದಾರೆ. ಹಾಗೆನೇ ಎಲ್ಲರೊಂದಿಗೂ ತ್ರಿವಿಕ್ರಮ್ ಚೆನ್ನಾಗಿ ಇರಲು ಪ್ರಯತ್ನಪಟ್ಟಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಟ್ರೋಫಿ ಗೆಲ್ಲಲು ಏನ್ ಬೇಕೋ ಅದನ್ನು ತ್ರಿವಿಕ್ರಮ್ ಮಾಡಿಕೊಂಡು ಬಂದಿದ್ದಾರೆ.

ಅಲ್ಲದೆ ತ್ರಿವಿಕ್ರಮ್ ಅವರು ವಾರಾಂತ್ಯದಲ್ಲಿ ಸುದೀಪ್ ಅವರು ಕೊಡುವ ಪ್ರತಿಯೊಂದು ಇನ್‌ಪುಟ್‌ಗಳನ್ನು ಸರಿಯಾಗಿ ಗಮನಿಸಿ ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದಾರೆ. ಹೀಗಾಗಿ ತ್ರಿವಿಕ್ರಮ್ ಅವರಿಗೆ ತಾವು ಬಿಗ್‌ಬಾಸ್‌ ಟ್ರೋಫಿ ವಿನ್ ಆಗಬೇಕು ಅಂತ ಬಂದಿರುವುದು ಗೊತ್ತು. ವಿನ್ ಆಗಲು ಏನ್ ಬೇಕು ಅದನ್ನು ಅವರು ಈವರೆಗೂ ಮಾಡಿಕೊಂಡು ಬಂದಿದ್ದಾರೆ. ಟ್ರೋಫಿ ಪಡೆಯಲು ಬೇಕಾದ ಪ್ರಯತ್ನಗಳೆಲ್ಲವನ್ನೂ ಅವರು ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ತ್ರಿವಿಕ್ರಮ್ ಈ ವಾರ ಕಿಚ್ಚನ ಮೆಚ್ಚುಗೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

Bigg boss kannada season 11 these contestants will receive the final applause by kichcha sudeep

ಹನುಮಂತನಿಗೆ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ

ಬಿಗ್‌ಬಾಸ್‌ ಮನೆಯಲ್ಲಿ ಕೇವಲ ಮೂರೇ ವಾರಕ್ಕೆ ವೈಲ್ಡ್ ಕಾರ್ಡ್‌ ಎಂಟ್ರಿ ಆಗಿದ್ದು ಹನುಮಂತ. ಇವರು ಬಿಗ್‌ಬಾಸ್‌ ಮನೆಗೆ ಬಂದಾಗಿನಿಂದಲೂ ಜಗಳದಲ್ಲಿ ಕಾಣಿಸಿಕೊಂಡಿಲ್ಲ, ವಾದ ವಿವಾದದಲ್ಲಿ ಇಲ್ಲ. ಆದರೆ ಆಟದಲ್ಲಿ ಮಾತ್ರ ಆಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಆಟ, ಜನರೊಂದಿಗೆ ಬೆರೆಯುವ ಗುಣ ಎಲ್ಲವೂ ಟಾಪ್ ಆಗಿದೆ. ಇನ್ನೂ ಟಾಸ್ಕ್‌ ವಿಷಯದಲ್ಲಿ ಹನುಮಂತ ತ್ರಿವಿಕ್ರಮ್ ಹಾಗೂ ರಜತ್ ನಂತಹ ಘಟಾನುಘಟಿಗಳಿಗೆ ಠಕ್ಕರ್ ಕೊಡುವಂತೆ ಆಡಿದ್ದಾರೆ. ಪ್ರತಿ ಬಾರಿ ಟಾಸ್ಕ್‌ನಲ್ಲಿ ಹೇಗಾದರೂ ಮಾಡಿ ವಿನ್ ಆಗುವ ಪ್ರಯತ್ನದಲ್ಲಿ ಹನುಮಂತ ಇರುವುದು ಕಂಡು ಬಂದಿದೆ. ಕೇವಲ ಟಾಸ್ಕ್‌ ಅಲ್ಲಿ ಮಾತ್ರ ಅಲ್ಲ. ಹನುಮಂತ ಹಾಡು ಹಾಡುವುದರಲ್ಲಿ ಹಾಗೂ ಕಾಮಿಡಿ ಮಾಡುವುದರಲ್ಲೂ ಪ್ರತಿಭಾವಂತರು. ಪಂಚಿಂಗ್ ಡೈಲಾಗ್‌ ಗಳಿಗೂ ಹನುಮಂತ ಹೈಲೆಟ್ ಆಗಿದ್ದಾರೆ.

ಯಾರ ತಂಟೆಗೂ ಹೋಗುವುದಿಲ್ಲ, ಯಾರ ಬಗ್ಗೆ ಕೂಡ ಹಿಂದೆ ಮಾತನಾಡುವುದಿಲ್ಲ, ಯಾರನ್ನೂ ನೋಯಿಸಲು ಇಷ್ಟ ಪಡುವುದಿಲ್ಲ ಹನುಮಂತ. ಒಂದು ರೀತಿ ಅಪ್ಪಟ ಚಿನ್ನ ಅಂದರೆ ತಪ್ಪಾಗುವುದಿಲ್ಲ. ಹೀಗಾಗಿ ಈ ವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಹನುಮಂತ ಪಡೆಯಬಹುದು.

ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ ಕಿಚ್ಚನ ಚಪ್ಪಾಳೆ ಪಡೆಯುವ ರೇಸ್‌ನಲ್ಲಿ ಇಲ್ಲ. ಒಂದು ವೇಳೆ ಇಡೀ ಸೀಸನ್ ಪರಿಗಣಿಸಿದ್ದೇ ಆದರೆ ಇವರಿಬ್ಬರು ಮಾತ್ರ ಕಿಚ್ಚನ ಚಪ್ಪಳೆ ಪಡೆಯಲು ಯೋಗ್ಯರಾಗಿದ್ದಾರೆ. ಉಳಿದ ಸ್ಪರ್ಧಿಗಳು ತಿದ್ದುಕೊಳ್ಳುತ್ತಾರೆ, ಮತ್ತದೇ ಕುತಂತ್ರ ಬುದ್ಧಿಯಿಂದ ಆಟ ಆಡುವುದು ಇದೆ. ಫಿನಾಲೆ ತಲುಪಿದರೂ ಕೂಡ ಸ್ಪರ್ಧಿಗಳಲ್ಲಿ ಗಂಭೀರತೆ ಕಂಡು ಬಂದಿಲ್ಲ.

ಹೀಗಾಗಿ ಈ ವಾರ ಕಿಚ್ಚನ ಚಪ್ಪಾಳೆ ತ್ರಿವಿಕ್ರಮ್ ಇಲ್ಲವೇ ಹನುಮಂತ ಪಡೆಯುವುದು ಗ್ಯಾರಂಟಿ. ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಯಾರು ಮೆಚ್ಚುಗೆ ಚಪ್ಪಾಳೆ ಪಡೆಯುತ್ತಾರೆಂದು ಎಲ್ಲವೂ ಕೂಡ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+