Bigg Boss: ಪಾತ್ರೆ ತೊಳೆಯಲ್ಲ ಅಂತಾ ತನ್ನ ಗಂಡಸ್ತನಕ್ಕೆ ತಾನೇ ಸವಾಲ್​ ಹಾಕಿಕೊಂಡ ರಜತ್

ಬಿಗ್‌ ಬಾಸ್‌ ಮನೆಯಲ್ಲಿ ವಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿರುವ ರಜತ್‌ ಸಖತ್‌ ಸದ್ದು ಮಾಡುತ್ತಿದ್ದಾರೆ. ಆಟಗಳು, ವಾದ, ತಮಾಷೆ, ಮನೋರಂಜನೆ ಹೀಗೆ ಬಿಗ್‌ ಬಾಸ್‌ ಮನೆಯ ಎಲ್ಲಾ ವಿಚಾರದಲ್ಲೂ ಕಾಣಿಸಿಕೊಳ್ಳುತ್ತಿರುವ ರಜತ್‌ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಮೊದಮೊದಲು ನೋಡುಗರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದ ರಜತ್‌ ವರ್ತನೆ ಈಗೀಗ ಇಷ್ಟವಾಗುತ್ತಿದ್ದು, ಕೆಲವರಂತೂ ಈತ ಟಾಪ್‌ ಐದು ಸ್ಪರ್ಧಿಗಳಲ್ಲಿ ಒಬ್ಬರಾಗುವುದು ಪಕ್ಕಾ ಎನ್ನುತ್ತಿದ್ದಾರೆ.

ಇಷ್ಟೆಲ್ಲಾ ಸದ್ದು ಮಾಡುತ್ತಿರುವ ರಜತ್‌ಗೆ ಬಿಗ್‌ ಬಾಸ್‌ ಮನೆಯೊಳಗಡೆ ಒಬ್ಬರು ಬಾಸ್‌ ಇದ್ದಾರೆ. ಅವರೇ ಚೈತ್ರಾ ಕುಂದಾಪುರ. ಕಳಪೆಯಿಂದ ಜೈಲಿಗೆ ಹೋಗುವ ವಿಚಾರಕ್ಕೆ ಶುರುವಾದ ಈ ಬಾಸ್‌ ಎನ್ನುವ ಪದ ಬಳಕೆ ಕೊನೆಗೆ ಜಗಳಕ್ಕೂ ಕೂಡ ತಂದು ನಿಲ್ಲಿಸಿದೆ. ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ ಹಾಗೂ ರಜತ್‌ ವಾದ-ಪ್ರತಿವಾದ ಸಾಮಾನ್ಯವಾಗಿ ಬಿಟ್ಟಿದೆ. ಯಾವುದೇ ವಿಚಾರ ಬಂದರೂ ಇವರಿಬ್ಬರೂ ಒಬ್ಬರಿಗೊಬ್ಬರು ಸೋಲದಂತೆ ವಾದಕ್ಕಿಳಿಯುತ್ತಾರೆ. ಇದೀಗ ಇದೇ ವಾದ ಜಗಳ ಅತಿಯಾಗಿ ರಜತ್‌ ಚೈತ್ರಾ ಕುಂದಾಪುರ ಮುಂದೆ ತಮ್ಮ ಗಂಡಸ್ತನಕ್ಕೆ ಸವಾಲು ಹಾಕಿಕೊಂಡಿದ್ದಾರೆ.

Bigg Boss Kannada Season 11 Rajat Challenged In Front Of Chaitra Kundapura

ರಜತ್‌ಗೆ ಬಿಗ್‌ ಬಾಸ್‌ ಮನೆಯಲ್ಲಿ ಕೆಲಸ ಮಾಡುವುದಿಲ್ಲ, ಪಾತ್ರೆ ತೊಳೆಯುವುದಿಲ್ಲ ಎನ್ನುವುದು ಎಲ್ಲರ ಕಂಪ್ಲೇಂಟ್‌. ಈಗ ಅದೇ ವಿಚಾರಕ್ಕೆ ಚೈತ್ರಾ ಮತ್ತು ರಜತ್ ನಡುವೆ ವಾದ ನಡೆದಿದೆ. ಮಾಡಿರುವ ಒಂದೇ ಪಲ್ಯಕ್ಕೆ ಚೈತ್ರಾ ಪಾತ್ರೆ ತೊಳೆಯಲ್ಲ ಎಂದು ರಜತ್‌ ಕ್ಯಾಪ್ಟನ್‌ ಗೌತಮಿ ಬಳಿ ದೂರು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಚೈತ್ರಾ ನಾನು ಬೆಳಗ್ಗೆ ಟೀ ಮಾಡಿದ್ದೇನೆ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ರಜತ್‌ ದೊಡ್ಡ ವಿಷಯ ನಾನು ಪಾತ್ರೆ ತೊಳೆದಿದ್ದೇನೆ.

ಬೆಳಗ್ಗೆ ಇರುವ ಪಾತ್ರೆಯನ್ನು ನಾನೇ ತೊಳೆದಿದ್ದು ಎಂದು ವಾದಕ್ಕಿಳಿದಿದ್ದಾರೆ. ಒಟ್ಟಾರೆ ನಾನು ಪಾತ್ರೆ ತೊಳೆಯಲ್ಲ ನಾನು ತೊಳೆಯಲ್ಲ ಅಂತಾ ಇಬ್ಬರೂ ವಾದ ಮಾಡಿದ್ದಾರೆ. ಈ ವೇಳೆ ಐಶ್ವರ್ಯ ಮಧ್ಯ ಬಂದಿದ್ದು, ಈ ವೇಳೆ ಚೈತ್ರಾ ಅವರ ಹತ್ತಿರ ಪಾತ್ರೆ ತೊಳೆಸು ಎಂದು ಹೇಳಿದ್ದಾರೆ. ಈ ವೇಳೆ ರಜತ್‌ ಇದು ಸ್ಲೀಪಿಂಗ್‌ ಟೈಂ ಎಂದು ಎದ್ದು ಹೊರಟಿದ್ದಾರೆ. ಕೊನೆಯಲ್ಲಿ ಐಶ್ವರ್ಯ ರಜತ್‌ ಬಳಿ ಹೋಗಿ ಪಾತ್ರೆ ತೊಳೆಯಲು ಹೇಳಿದ್ದಾರೆ.

ಇದರಿಂದ ಮತ್ತೆ ಸಿಟ್ಟಿಗೆದ್ದ ರಜತ್‌, ಚೈತ್ರಾ ಬಳಿ ಬಂದು ಸವಾಲು ಹಾಕಿದ್ದಾರೆ. ನಿನ್ನೆ ಮೇಲೆ ಇರುವ ಜಿದ್ದಿಗಾದರೂ ನಾನು ಪಾತ್ರೆ ತೊಳೆಯುವುದಿಲ್ಲ. ಅದು ಹೇಗೆ ನನ್ನ ಕೈಯಲ್ಲಿ ಪಾತ್ರೆ ತೊಳೆಸುತ್ತೀಯಾ ನೋಡುತ್ತೇನೆ. ನಾನು ಪಾತ್ರೆ ತೊಳೆದರೆ ನಾನು ಗಂಡಸೇ ಅಲ್ಲಾ ಅಂದುಕೊ ಎಂದು ರಜತ್‌ ತಮ್ಮ ಗಂಡಸ್ತನಕ್ಕೆ ತಾವೇ ಸವಾಲು ಹಾಕಿಕೊಂಡಿದ್ದಾರೆ. ಈ ಸವಾಲಿನಲ್ಲಿ ರಜತ್‌ ಗೆಲ್ಲುತ್ತಾರಾ ಸೋಲುತ್ತಾರಾ ಇಂದಿನ ಸಂಚಿಕೆಯಲ್ಲಿ ವೀಕ್ಷಿಸಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+