Bigg Boss Kannada: ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸೇಫ್: ಕಾರಣವೇನು?
ಬಿಗ್ ಬಾಸ್ ಕನ್ನಡ ಸೀಸನ್ 11ರ ಹನ್ನೊಂದನೆಯ ವಾರದ ಮನೆಯ ಕ್ಯಾಪ್ಟನ್ ಆಗಿ ನಟಿ ಗೌತಮಿ ಜಾಧವ್ ಆಯ್ಕೆಯಾಗಿದ್ದಾರೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಬರೀ ಟ್ವಿಸ್ಟ್‌ಗಳೇ ಆಗಿದ್ದು, ವಾರದ ಟಾಸ್ಕ್ ಗೆಲ್ಲದಿದ್ದರೂ ಸಹ ಮನೆಯ ಕ್ಯಾಪ್ಟನ್ ಆಗುವ ಅವಕಾಶ ಗೌತಮಿಗೆ ಒಲಿದು ಬಂದಿದೆ. ವಾರದ ಆಟ ಇಂಟ್ರಸ್ಟಿಂಗ್ ಆಗಿದ್ದು, ವಾರಾಂತ್ಯ ಬರುತ್ತಿದ್ದಂತೆ ಎಲಿಮಿನೇಷನ್ ಲೆಕ್ಕಾಚಾರ ಆರಂಭವಾಗಿದೆ.
ಕಳೆದ ವಾರ ಮನೆಯಿಂದ ಹೊರಹೋಗಲು ಆಯ್ಕೆಯಾದವರ ಪೈಕಿ ಕೊನೆಯದಾಗಿ ಐಶ್ವರ್ಯಾ ಹಾಗೂ ಶಿಶಿರ್ ಇದ್ದರು. ಆದರೆ ಕಹಾನಿ ಮೇ ಟ್ವಿಸ್ಟ್ ಎನ್ನುವಂತೆ ಶೋಭಾ ಶೆಟ್ಟಿ ತಾವೇ ಸ್ವತಃ ಅನಾರೋಗ್ಯ ಕಾರಣ ನೀಡಿ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದರು. ಇದರಿಂದ ಶಿಶಿರ್ ಹಾಗೂ ಐಶ್ವರ್ಯ ಕೊನೆ ಕ್ಷಣದಲ್ಲಿ ಸೇವ್ ಆದರು. ಹೀಗಾಗಿ ಈ ವಾರದ ಎಲಿಮಿನೇಷನ್ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಈ ವಾರ ವಿಭಿನ್ನ ರೀತಿಯಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಗೋಲ್ಡ್ ಸುರೇಶ್, ಉಗ್ರಂ ಮಂಜು, ಗೌತಮಿ ಜಾಧವ್, ರಜತ್ , ಐಶ್ವರ್ಯಾ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಅಥವಾ ಐಶ್ವರ್ಯಾ ಮನೆಯಿಂದ ಹೊರಬರಬಹುದು ಎನ್ನುವ ಲೆಕ್ಕಾಚಾರ ಪ್ರೇಕ್ಷಕರದ್ದಾಗಿದೆ. ಆದರೆ ಬಿಗ್ ಬಾಸ್ ದೊಡ್ಡ ಟ್ವಿಸ್ಟ್ ಕೊಟ್ಟಿದ್ದಾರೆ.

ಹೌದು ನಾಮಿನೇಟ್ ಆಗಿದವರನ್ನು ಉಳಿಸಲು ಈ ವಾರ ಬಿಗ್ ಬಾಸ್ ಪ್ರೇಕ್ಷಕರಿಗೆ ಅವಕಾಶ ನೀಡಿಲ್ಲ. ಈ ವಾರ ಯಾವುದೇ ವೋಟಿಂಗ್ ಲೈನ್ ತೆಗೆದಿಲ್ಲ. ಹೀಗಾಗಿ ಈ ವಾರ ಎಲಿಮಿನೇಷನ್ ನಡೆಯೋದು ಅನುಮಾನ ಎನ್ನಲಾಗುತ್ತಿದೆ. ವೋಟಿಂಗ್ ಲೈನ್ ತೆಗೆಯದೇ ಇರುವ ಕಾರಣ ಈ ವಾರ ಎಲ್ಲಾ ಸ್ಪರ್ಧಿಗಳು ಮನೆಯಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇದೆ. ಇಲ್ಲದೇ ಹೋದರೆ ಕಳೆದ ವಾರ ಕೊನೆಯಲ್ಲಿ ಉಳಿದ ಐಶ್ವರ್ಯಾ ಈ ವಾರವೂ ನಾಮಿನೇಟ್ ಆಗಿದ್ದು, ಅವರೇ ಮನೆಯಿಂದ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.












Click it and Unblock the Notifications