Gold Suresh: ಐಶ್ವರ್ಯಾ ಸಿಂಧೋಗಿಗೆ ಬಿಗ್‌ ಸಪ್ರೈಸ್‌ ಕೊಟ್ಟ ಗೋಲ್ಡ್‌ ಸುರೇಶ್‌

ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ ಕಾರ್ಯಕ್ರಮದಿಂದ ಹೊರಬಂದು ಒಂದು ವಾರ ಕಳೆಯುತ್ತಿದೆ. ಬಿಗ್‌ ಬಾಸ್‌ ಮನೆಯಿಂದ ಬಂದ ಐಶ್ವರ್ಯಾಗೆ ಅವರ ಸ್ನೇಹಿತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ಸದ್ಯ ಸಂದರ್ಶನಗಳಲ್ಲಿ ಬ್ಯೂಸಿಯಾಗಿರುವ ಐಶ್ವರ್ಯಾ ತಮ್ಮ ಎಲ್ಲಾ ಕೆಲಸಗಳ ನಡುವೆ ಅನಾಥಾಶ್ರಮಗಳಿಗೆ ಹಾಗೂ ವೃದ್ಧಾಶ್ರಮಗಳಿಗೆ ಭೇಟಿ ನೀಡುತ್ತಿದ್ದಾರೆ.

ಬಿಗ್‌ ಬಾಸ್‌ ಪಯಣವನ್ನು ಜನರ ಮನಸ್ಸು ಗೆಲ್ಲುವ ಮೂಲಕ ಯಶಸ್ವಿಯಾಗಿ ಮುಗಿಸಿರುವ ಐಶ್ವರ್ಯಾ ಸಿಂಧೋಗಿ, ಹೊಸ ವರ್ಷದ ಸಂಭ್ರಮದಲ್ಲಿ ಆಸರೆ ವೃದ್ಧಾಶ್ರಮ ಭೇಟಿ ಕೊಟ್ಟು ಅನ್ನದಾನ ಮಾಡಿದ್ದಾರೆ. ಐಶ್ವರ್ಯಾ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಸರೆ ಆಶ್ರಮದಲ್ಲಿ ಹತ್ತಾರು ದೇವರ ಮಕ್ಕಳಿದ್ದು, ಐಶ್ವರ್ಯಾ ಸಿಂಧೋಗಿ ಅವರೊಂದಿಗೆ ಸಮಯ ಕಳೆದು ಖುಷಿ ಹಂಚಿದ್ದಾರೆ.

Bigg Boss Kannada Season 11 Gold Suresh Give A Big Surprise To Aishwarya Shindogi

ಆಸರೆ ವೃದ್ಧಾಶ್ರಮ ಅಧ್ಯಕ್ಷ ಜಯರಾಜ್ ನಾಯ್ಡು ಹಾಗೂ ಅವರ ಪತ್ನಿ ಐಶ್ವರ್ಯಾ ಸಿಂಧೋಗಿಗೆ ಬಾಗಿನ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಈ ಖುಷಿಯ ವಿಡಿಯೋವನ್ನು ಐಶ್ವರ್ಯಾ ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇದೇ ವೇಳೆ ಐಶ್ವರ್ಯಾ ಆಪ್ತರೊಬ್ಬರು ಆಸರೆ ಆಶ್ರಮಕ್ಕೆ ಭೇಟಿ ನೀಡಿ ಸಪ್ರೈಸ್‌ ಕೊಟ್ಟಿದ್ದಾರೆ.

ಮೊದಲು ಐಶ್ವರ್ಯಾ ಕಣ್ಣಿಗೆ ಬಟ್ಟೆ ಕಟ್ಟಿ ಈ ವ್ಯಕ್ತಿಯನ್ನು ಕರೆಯಲಾಗಿತ್ತು. ಕೇವಲ ಕೈ ಮುಟ್ಟಿ ಇದು ಯಾರು ಹೇಳಿ ಎನ್ನುವ ಟಾಸ್ಕ್‌ ಅನ್ನು ಐಶ್ವರ್ಯಾ ಸಿಂಧೋಗಿಗೆ ನೀಡಲಾಗಿತ್ತು. ಆದರೆ ಐಶ್ವರ್ಯಾಗೆ ಅದು ಯಾರು ಎಂದು ಗುರುತಿಸಲಾಗಲಿಲ್ಲ. ಹೀಗಾಗಿ ಕೆಲವು ಸುಳಿವುಗಳನ್ನು ಕೊಡಲಾಗಿದ್ದು, ನಿಮ್ಮ ಜೊತೆ ಬಿಗ್‌ ಬಾಸ್‌ ಮನೆಯಲ್ಲಿ ಇದ್ದರು ಎಂದು ಆಸರೆ ಆಶ್ರಮದ ಸಿಬ್ಬಂದಿ ಸುಳಿವು ಕೊಟ್ಟಿದ್ದಾರೆ. ಇದನ್ನು ಕೇಳುತ್ತಿದ್ದಂತೆ ಐಶ್ವರ್ಯಾ ಮೊದಲು ಶಿಶಿರ್‌ ಎಂದು ಹೇಳಿದ್ದಾರೆ. ಈ ವೇಳೆ ಎಲ್ಲರೂ ಜೋರಾಗಿ ಕೂಗಿದ್ದು, ಈ ವಿಡಿಯೋ ಶಿಶಿರ್‌ ಅವರನ್ನು ತಲುಪಲಿ ಎಂದಿದ್ದಾರೆ.

Bigg Boss Kannada Season 11 Gold Suresh Give A Big Surprise To Aishwarya Shindogi

ಕೊನೆಗೆ ಐಶ್ವರ್ಯಾ ಆ ವ್ಯಕ್ತಿಯನ್ನು ಗುರುತಿಸಿದ್ದಾರೆ. ಆಸರೆ ಆಶ್ರಮದಲ್ಲಿ ಐಶ್ವರ್ಯಾ ಸಿಂಧೋಗಿಗೆ ಸಪ್ರೈಸ್‌ ಕೊಟ್ಟಿದ್ದು ಮತ್ಯಾರು ಅಲ್ಲ ಅವರೇ ಗೋಲ್ಡ್​ ಸುರೇಶ್. ಹೌದು ಬಿಗ್‌ ಬಾಸ್‌ ಮನೆಯಿಂದ ವೈಯಕ್ತಿಕ ಕಾರಣಕ್ಕೆ ಹೊರಬಂದ ಗೋಲ್ಡ್​ ಸುರೇಶ್ ಕೂಡ ಆಸರೆ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಗೋಲ್ಡ್​ ಸುರೇಶ್ ಅವರನ್ನು ನೋಡುತ್ತಿದ್ದಂತೆ ಐಶ್ವರ್ಯಾ ಫುಲ್‌ ಖುಷಿಯಾಗಿದ್ದು, 'ಹೇಗಿದ್ದೀರಿ? ನಾವೆಲ್ಲಾ ನಿಮ್ಮನ್ನು ಮಿಸ್‌ ಮಾಡಿಕೊಂಡೆವು' ಎಂದು ಹೇಳಿದ್ದಾರೆ.

ಬಳಿಕ ಐಶ್ವರ್ಯಾ ಹಾಗೂ ಗೋಲ್ಡ್​ ಸುರೇಶ್ ಆಶ್ರಮದಲ್ಲಿ ಕೇಕ್‌ ಕಟ್‌ ಮಾಡಿದ್ದು, ಆಸರೆ ವೃದ್ಧಾಶ್ರಮ ಅಧ್ಯಕ್ಷರು ಜಯರಾಜ್ ನಾಯ್ಡು ಹಾಗೂ ಅವರ ಪತ್ನಿ ಐಶ್ವರ್ಯಾ ಹಾಗೂ ಗೋಲ್ಡ್​ ಸುರೇಶ್‌ಗೆ ಸನ್ಮಾನ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+