Gauthami Jadav: ಚಿಂತೆಯಲ್ಲೇ ಮುಳುಗಿದ ಗೌತಮಿ ಜಾದವ್: ಅಲೆಯೊಂದು ಬದಲಿಸಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದು ಹೋಗಿ ಸಂಪೂರ್ಣ ಎರಡು ವಾರವೇ ಕಳೆದು ಹೋಗಿದೆ. ಆದರೆ ಬಿಗ್ ಬಾಸ್ ಸ್ಪರ್ಧಿಗಳ ಹವಾ ಮಾತ್ರ ಕಮ್ಮಿಯಾಗಿಲ್ಲ. ಬಿಗ್ ಬಾಸ್ ಮುಗಿದ ಮೇಲೆ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿರುವ ಸ್ಪರ್ಧಿಗಳು ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬಿಗ್ ಬಾಸ್ ಕನ್ನಡದ ಸ್ಪರ್ಧಿ ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾದವ್ ವಿಡಿಯೋವೊಂದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಗೌತಮಿ ಜಾದವ್ ಸಾಲು ಸಾಲು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ದೇವಾಲಯವೊಂದರ ಕಲ್ಯಾಣಿ ಬಳಿ ಕುಳಿತ ಗೌತಮಿ ಜಾದವ್ ವಿಡಿಯೋ ವೈರಲ್ ಆಗುತ್ತಿದೆ. ಗೌತಮಿ ಜಾಧವ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋದ ದೃಶ್ಯದಲ್ಲಿ ಮೊದಲು ದೇವಾಲಯದ ಕಲ್ಯಾಣಿಯ ಬಳಿ ನಟಿ ಗೌತಮಿ ಜಾದವ್ ಚಿಂತಾಕ್ರಾಂತರಾಗಿ, ಬೇಸರದಲ್ಲಿ, ಏನೋ ಯೋಚನೆ ಮಾಡುತ್ತಾ ಕುಳಿತುಕೊಂಡ ಹಾಗಿದೆ. ಬಳಿಕ ಅಲೆಯೊಂದು ಬಂದು ಹೋದ ಬಳಿಕ ಗೌತಮಿ ಜಾದವ್ ಅವರ ಜೊತೆಗೆ ಪತಿ ಅಭಿಷೇಕ್ ಅವರನ್ನು ಕೂಡ ನೋಡಬಹುದು. ಕೊನೆಯಲ್ಲಿ ಇಬ್ಬರೂ ಜೊತೆಯಾಗಿ ಮೇಲೆ ಏನನ್ನೋ ನೋಡುತ್ತಾ ನಗುತ್ತಾರೆ.
ಈ ವಿಡಿಯೋವನ್ನು ಮೊದಲು ನೋಡಿದವರು ಗೌತಮಿ ಜಾದವ್ ಅವರಿಗೆ ಏನಾಗಿದೆ..? ಏನೋ ಚಿಂತೆಯಲ್ಲಿ ಮುಳುಗಿದ್ದಾರೆ ಎಂದುಕೊಳ್ಳುತ್ತಾರೆ. ಆದರೆ ಕ್ಷಣಾರ್ಧದಲ್ಲಿ ಬರುವ ಅಲೆಯೊಂದು ಈ ಆಲೋಚನೆಯನ್ನು ಬದಲಾಯಿಸಿ ಅಭಿಷೇಕ್ ಅವರನ್ನು ನೋಡುತ್ತಿದ್ದಂತೆ ನೋಡುಗರ ಮುಖದಲ್ಲೂ ಒಂದು ನಗು ಮೂಡುತ್ತದೆ. ಈ ವಿಡಿಯೋ ನೋಡಿದ ಗೌತಮಿ ಜಾದವ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ನಿಮ್ಮಿಬ್ಬರ ಈ ಪ್ರೀತಿಗೆ ಯಾವ ಅಲೆಯೂ ಏನೂ ಮಾಡಲ್ಲ ಬಿಡಿ. ಅದಕ್ಕೆ ಆ ಅಲೆಗಳು ಕೂಡಾ ಎಷ್ಟು ಶಾಂತವಾಗಿ ಇದೆ ನೋಡಿದ್ರಾ ಎಂದು ಗೌತಮಿ ಜಾದವ್ ಹಾಗೂ ಅಭಿಷೇಕ್ ಅವರ ಜೋಡಿಯನ್ನು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ.

ಇನ್ನು ಇತ್ತೀಚಿಗೆ ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿ ಗೌತಮಿ ಜಾದವ್ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ವಾ? ಎನ್ನುವ ಪ್ರಶ್ನೆಯೊಂದು ಮೂಡಿತ್ತು. ಅದಕ್ಕೆ ಕಾರಣವಾಗಿದ್ದು, ಅವರ ಮಾವ ಅಂದರೆ ಗೌತಮಿ ಪತಿ ಅಭಿಷೇಕ್ ಅವರ ತಂದೆ, ಕನ್ನಡ ಚಿತ್ರರಂಗ ನಿರ್ದೇಶಕ ಗಣೇಶ್ ಕಾಸರಗೋಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್. ಈ ಪೋಸ್ಟ್ ವೈರಲ್ ಬಳಿಕ ಗೌತಮಿ ಜಾದವ್ ಸ್ಟಷ್ಟನೆ ನೀಡಿದ್ದು ನನಗೂ ಇದು ಆಶ್ಚರ್ಯ ಎಂದಿದ್ದರು.












Click it and Unblock the Notifications