Bigg Boss: ಬಿಗ್‌ಬಾಸ್ ಮನೆಯಲ್ಲಿ ಮುತ್ತಿನ ಆಟ: ಕಿಸ್ ಕೊಟ್ಟು ಸುಸ್ತಾದ ಹನು-ಧನು
ಬಿಗ್‌ಬಾಸ್ ಮನೆಯಲ್ಲಿ ಮುತ್ತಿನ ಆಟ ಶುರುವಾಗಿದೆ. ಮುತ್ತಿನ ಆಟವನ್ನು ಮನೆ ಮಂದಿಯೆಲ್ಲಾ ಎಂಜಾಯ್ ಮಾಡಿದ್ದಾರೆ. ಈ ಆಟದಲ್ಲಿ ಹನುಮಂತ, ಚೈತ್ರಾ ಹಾಗೂ ಧನ್‌ರಾಜ್ ಸಿಕ್ಕಾಪಟ್ಟೆ ಮುತ್ತು ಕೊಟ್ಟಿದ್ದಾರೆ. ಹೇಗಿತ್ತು ಈ ಮುತ್ತಿನ ಆಟ? ಇದನ್ನು ನೋಡಿ ಆನಂದಿಸಿದವರು ಯಾರು? ಯಾರೆಲ್ಲಾ ಏನಂದ್ರು?
ಕಲರ್ಸ್ ಕನ್ನಡ ವಾಹಿನಿ ಇಂದು ಬಿಗ್‌ಬಾಸ್ ಮನೆಯ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದೆ. ಈ ವೀಡಿಯೋ ಭಾರೀ ಕುತೂಹಲವನ್ನು ಮೂಡಿಸುವುದು ಮಾತ್ರವಲ್ಲದೆ ಸಖತ್ ಕಾಮಿಡಿಯಾಗಿದೆ. ವಿಶೇಷವಾಗಿ ಈ ಟಾಸ್ಕ್ ಅನ್ನು ಸ್ಪರ್ಧಿಗಳು ತಮ್ಮ ಪೋಷಕರ ಮುಂದೆ ಆಡಿದ್ದಾರೆ. ಆಟದಲ್ಲಿ ಮುತ್ತು ಕೊಟ್ಟು ಕೊಟ್ಟು ಹನುಮಂತ ಹಾಗೂ ಧನ್‌ರಾಜ್ ಸುಸ್ತಾಗಿದ್ದಾರೆ. ಹಾಗಾದರೆ ವೈರಲ್ ಆದ ವೀಡಿಯೋದಲ್ಲಿ ಏನಿದೆ?

ಕಳೆದ ದಿನ ಗಾಯಕ ಹನುಮಂತ ಲಂಬಾಣಿ, ಧನ್‌ರಾಜ್ ಅಚಾರ್ ಹಾಗೂ ಚೈತ್ರಾ ಕುಂದಾಪುರ ಅವರ ಪೋಷಕರು ಬಿಗ್‌ಬಾಸ್ ಮನೆಗೆ ಆಗಮಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಮನೆಯ ಎಲ್ಲಾ ಸ್ಪರ್ಧಿಗಳ ಪೋಷಕರು ದೊಡ್ಮನೆಗೆ ಬಂದು ತಮ್ಮ ಮಕ್ಕಳಿಗೆ ಹೊಸ ಸ್ಪೂರ್ತಿ ತುಂಬಿದ್ದಾರೆ. ಪೋಷಕರೊಂದಿಗೆ ಮಾತನಾಡಿ ಸಂತೋಷದೊಂದಿಗೆ ಗೆಲ್ಲುವಿನ ವಿಶ್ವಾಸದಲ್ಲಿರುವ ಮನೆಯ ಸ್ಪರ್ಧಿಗಳು ಹೈ ಅಲರ್ಟ್ ಆಗಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಮುತ್ತಿನ ಆಟ
ಈ ನಡುವೆ ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಅವರ ಪೋಷಕರ ಮುಂದೆ ಕಾಮಿಡಿಯಾಗಿರುವ ಆಟವನ್ನು ಆಡಿಸಿದ್ದಾರೆ. ಆ ಆಟ ಏನು ಅಂದರೆ ಮೂರು ಸ್ಪರ್ಧಿಗಳು ಕೈಯಲ್ಲಿ ಕೋಲು ಹಿಡಿದುಕೊಂಡು ಆ ಕೋಲಿನ ತುತ್ತ ತುದಿಗೆ ಇರುವ ಲಿಪ್‌ಸ್ಟಿಕ್‌ನಿಂದ ಎದುರಿರುವ ಮೂರು ಸ್ಪರ್ಧಿಗಳ ತುಟಿಗೆ ಲಿಪ್‌ಸ್ಟಿಕ್ ಹಚ್ಚಬೇಕು. ಹೀಗೆ ಲಿಪ್‌ಸ್ಟಿಕ್ ಹಚ್ಚಿಕೊಂಡ ಸ್ಪರ್ಧಿಗಳು ತಮಗೆ ನಿಗಧಿಪಡಿಸಿದ ಬೋರ್ಡ್‌ಗಳಿಗೆ ತಮ್ಮ ತುಟಿಯ ಮಾರ್ಕ್ ಸರಿಯಾಗಿ ಕಾಣಿಸುವಂತೆ ಮುತ್ತು ಕೊಡಬೇಕು.
ಹೀಗೆ ಯಾವ ಸ್ಪರ್ಧಿ ಬೋರ್ಡಿನ ಮೇಲೆ ಹೆಚ್ಚು ಮುತ್ತು ಕೊಡುತ್ತಾರೆ, ಯಾರ ಮುತ್ತು ಸ್ಪಷ್ಟವಾಗಿರುತ್ತದೆ ಅವರು ಗೆಲುವು ಸಾಧಿಸುತ್ತಾರೆ. ಈ ಆಟದಲ್ಲಿ ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಬೋರ್ಟ್‌ಗೆ ಮುತ್ತುಕೊಟ್ಟವರು ಹನುಮಂತ, ಧನ್‌ರಾಜ್ ಹಾಗೂ ಚೈತ್ರಾ ಅವರು. ಹನುಮಂತ ಹಾಗೂ ಧನ್‌ರಾಜ್ ಇಬ್ಬರೂ ಕೂಡ ಮುತ್ತು ಕೊಟ್ಟು ಕೊಟ್ಟು ಸುಸ್ತಾಗಿ ಕಾಮಿಡಿ ಕೂಡ ಮಾಡಿದ್ದಾರೆ.
ವಿಶೇಷ ಅಂದರೆ ಚೈತ್ರಾ ಹಾಗೂ ಹನುಮಂತ ಇಬ್ಬರೂ ಸ್ಪರ್ಧಿಗಳು ತಮ್ಮ ಪೋಷಕರ ಎದುರು ಈ ಆಟವನ್ನು ಆಡಿದ್ದಾರೆ. ಹನುಮಂತ ಅವರ ತಂದೆ ತಾಯಿ ಹಾಗೂ ಚೈತ್ರಾ ಅವರ ಸಹೋದರಿ ಈ ಆಟವನ್ನು ವೀಕ್ಷಿಸಿದ್ದಾರೆ. ಇದೇ ವೇಳೆ ಹನುಮಂತ ಅವರ ಪೋಷಕರೊಂದಿಗೆ ರಜತ್ ಕಾಮಿಡಿ ಮಾಡಿದ್ದಾರೆ.
ಹನುಮಂತ ಕೊಟ್ಟ ಮುತ್ತಿಗೆ ರಜತ್ ಕಾಮಿಡಿ
ಹನುಮಂತ ಕೊಟ್ಟ ಮುತ್ತಿಗೆ ರಜತ್ ಸಿಕ್ಕಾಪಟ್ಟೆ ಕಾಮಿಡಿ ಮಾಡಿದ್ದಾರೆ. ಹನುಮಂತ ಮುತ್ತು ಕೊಡುವಾಗ ಅಲ್ಲಿ ಯಾವುದಾದರೂ ಹುಡುಗಿ ನಿಂತಿದ್ದರೆ ನೀವು ಬೈತಿದ್ರಾ ಎಂದು ರಜತ್ ಅವರು ಹನುಮಂತ ಅವರ ತಾಯಿಗೆ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಹನುಮಂತ ಅವರ ತಾಯಿ ನಾನು ಅವನನ್ನು ಬೈಯೋದಿಲ್ಲ ಎಂದು ಹೇಳುತ್ತಾರೆ. ಆಗ ರಜತ್, ಮಗ ಅರಾಮಾಗಿ ಮುತ್ತು ಕೊಡ್ಲಿ ಅಂತ ಬಿಟ್ಟುಬಿಡ್ತಿದ್ರಾ? ಎಂದು ಕಾಮಿಡಿ ಮಾಡಿದ್ದಾರೆ. ಇದೇ ವೇಳೆ ರಜತ್ ಧನ್‌ರಾಜ್ ಅವರ ಕಾಲೆಳೆದಿದ್ದಾರೆ.
ರಜತ್ ಮುತ್ತಿನ ಮಾರ್ಕ್ ಸರಿಯಾಗಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಕ್ಕೆ ಧನ್‌ರಾಜ್ ಕಾಮಿಡಿಯಾಗಿ ಉತ್ತರ ಕೊಟ್ಟಿದ್ದಾರೆ. 'ಮೂರು ತಿಂಗಳು ಆಯ್ತು ಹೀಗಾಗಿ ಪ್ರಾಕ್ಟಿಸ್ ತಪ್ಪಿ ಹೋಗಿದೆ' ಎಂದು ಕಾಮಿಡಿ ಮಾಡಿದ್ದಾರೆ. ಇದಕ್ಕೆ ಮನೆ ಮಂದಿಯೆಲ್ಲಾ ಬಿದ್ದು ಬಿದ್ದು ನಗಾಡಿದ್ದಾರೆ. ಈ ಆಟದಲ್ಲಿ ತುಂಬಾ ಜನರಿಗೆ ಮುತ್ತು ಕೊಡಲು ಬರೋದಿಲ್ಲ ಅಂತ ಸ್ಪರ್ಧಿಗಳು ಕಾಮಿಡಿ ಮಾಡುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.
ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ನಡೆದ ಈ ಮುತ್ತಿನ ಆಟ ಮಾತ್ರ ಸಖತ್ ಕಾಮಿಡಿಯಾಗಿದೆ. ಇಂದು ಈ ಆಟದ ಸಂಚಿಕೆ ಪ್ರಸಾರವಾಗಲಿದ್ದು ಯಾರು ಎಷ್ಟು ಮುತ್ತು ಕೊಟ್ಟು ಏನಂದ್ರು ಅನ್ನೋದನ್ನು ನೋಡಿ ನೀವು ಕೂಡ ಎಂಜಾಯ್ ಮಾಡಿ.












Click it and Unblock the Notifications