Bigg Boss: ಗೋಲ್ಡ್ ಸುರೇಶ್ ಹಾಕುವ ಚಿನ್ನ ನಕಲಿ? ಸ್ಫೋಟಕ ಚರ್ಚೆ....

ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಯಲ್ಲಿ ಭರ್ಜರಿ ಹವಾ ಎಬ್ಬಿಸಿದ್ದ ಸ್ಪರ್ಧಿ. ಮೈಮೇಲೆ ರಾಶಿ, ರಾಶಿ ಚಿನ್ನ ಹಾಕುವ ಗೋಲ್ಡ್ ಸುರೇಶ್ ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 11 ಟ್ರೋಫಿ ಗೆಲ್ಲುತ್ತಾರೆ ಅನ್ನೋ ಭರವಸೆ ಕೂಡ ಮೂಡಿತ್ತು. ಇದೇ ಕಾರಣಕ್ಕೆ ಕನ್ನಡಿಗರು ಕೂಡ ಗೋಲ್ಡ್ ಸುರೇಶ್ ಬೆನ್ನಿಗೆ ನಿಂತಿದ್ದರು. ಆದರೆ ಇದ್ದಕ್ಕಿದ್ದಂತೆ ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಯನ್ನ ಬಿಟ್ಟು ಹೊರಗೆ ಬಂದರು. ಹೀಗಿದ್ದಾಗಲೇ, ಗೋಲ್ಡ್ ಸುರೇಶ್ ಹಾಕುವ ಚಿನ್ನ ನಕಲಿ? ಸ್ಫೋಟಕ ಚರ್ಚೆ....

ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಪದೇ, ಪದೇ ಇಡೀ ಕರ್ನಾಟಕ ಮಾತ್ರವಲ್ಲ ಭಾರತದ ಗಮನ ಸೆಳೆಯುತ್ತಿದೆ. ಯಾಕಂದ್ರೆ ಬಿಗ್‌ಬಾಸ್ ಕನ್ನಡಕ್ಕೆ ಕರ್ನಾಟಕ ಮಾತ್ರವಲ್ಲ ಇಡೀ ಇಂಡಿಯಾದಲ್ಲಿ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಇಂತಹ ಹೆಮ್ಮೆಯ ಮಾತುಗಳನ್ನ ಕಿಚ್ಚ ಸುದೀಪ್‌ರ ಅಭಿಮಾನಿಗಳು ಹೇಳುತ್ತಾರೆ.

Bigg Boss Kannada Contestant Gold Suresh Is On Trend For This Reason

ಹೀಗೆ, ಬಿಗ್‌ಬಾಸ್ ಕನ್ನಡ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಗೋಲ್ಡ್ ಸುರೇಶ್ ಸಂಚಲನವನ್ನೇ ಸೃಷ್ಟಿ ಮಾಡಿದ್ದರು. ಇಂತಿಪ್ಪ ಗೋಲ್ಡ್ ಸುರೇಶ್, ಬಿಗ್‌ಬಾಸ್ ಮನೆ ಬಿಟ್ಟು ದಿಢೀರ್ ಹೊರಗೆ ಬಂದರು. ಮತ್ತೊಂದು ಕಡೆ ಗೋಲ್ಡ್ ಸುರೇಶ್ ಹಾಕುವ ಚಿನ್ನ ನಕಲಿ?

ಗೋಲ್ಡ್ ಸುರೇಶ್ ಹಾಕುವ ಚಿನ್ನ ನಕಲಿ?

ಹೌದು, ಗೋಲ್ಡ್ ಸುರೇಶ್ ಅವರು ಮೈತುಂಬಾ ಚಿನ್ನ ಹಾಕುತ್ತಾರೆ. ಇದೀಗ ವೈರಲ್ ಆಗ್ತಿರುವ ಮಾಹಿತಿ ಪ್ರಕಾರ, ಕೆಜಿ ಕೆಜಿ ಚಿನ್ನ ಮೈಮೇಲೆ ಹಾಕುವ ಗೋಲ್ಡ್ ಸುರೇಶ್ ಅವರು ಬರೋಬ್ಬರಿ 2 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನ ಧರಿಸುತ್ತಾರಂತೆ. ಹಾಗೇ ಇದರ ಜೊತೆಯಲ್ಲೇ ಕೋಟ್ಯಂತರ ರೂಪಾಯಿ ಆಸ್ತಿ ಒಡೆಯ ಕೂಡ ಹೌದು ಬಿಗ್‌ಬಾಸ್ ಗೋಲ್ಡ್ ಸುರೇಶ್. ಹೀಗೆ ಎಲ್ಲಾ ಇದ್ದರೂ, ಗೋಲ್ಡ್ ಸುರೇಶ್ ಹಾಕುವ ಚಿನ್ನ ನಕಲಿ? ಎಂಬ ಸುದ್ದಿ ಹಬ್ಬಿದೆ!

ಹೌದು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯಾಗಿ ಗೋಲ್ಡ್ ಸುರೇಶ್ ಹಾಕುವ ಚಿನ್ನ ನಕಲಿ ಅದು ಅಸಲಿ ಅಲ್ಲ ಎಂದು ಕೆಲವರು ಪೋಸ್ಟ್ & ಕಮೆಂಟ್ ಮೂಲಕ ಸುಳ್ಳು ಸುದ್ದಿಯನ್ನ ಹಬ್ಬಿಸುತ್ತಿದ್ದಾರೆ. ಆದರೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಜೊತೆಗೆ ಬಿಲ್ಡರ್ ಕೂಡ ಆಗಿರುವ, ಬಿಗ್‌ಬಾಸ್ ಗೋಲ್ಡ್ ಸುರೇಶ್ ಅವರು ಸಾಕಷ್ಟು ಆಸ್ತಿ ಹೊಂದಿದ್ದಾರೆ. ಹೀಗಿದ್ದಾಗ ಅವರೇಕೆ ನಕಲಿ ಚಿನ್ನ ಹಾಕುತ್ತಾರೆ? ಅಂತಾ ಗೋಲ್ಡ್ ಸುರೇಶ್ ಬೆಂಬಲಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಚಿನ್ನದ ಸರ & ಉಂಗುರಗಳ ರಾಶಿ!

ಅಷ್ಟಕ್ಕೂ ಬಿಗ್‌ಬಾಸ್ ಮನೆಯಲ್ಲಿ ಹವಾ ಎಬ್ಬಿಸಿದ್ದ ಗೋಲ್ಡ್ ಸುರೇಶ್, ಕುತ್ತಿಗೆಯಲ್ಲಿ 2 ದೊಡ್ಡ ಚಿನ್ನದ ಸರ ಹಾಕಿದ್ದಾರೆ. ಇದನ್ನ ನೋಡಲು ಜನರು ಮುಗಿಬಿದ್ದಿದ್ದೂ ಉಂಟು. ಹಾಗೇ ಈ ಚಿನ್ನದ ಸರದ ಜೊತೆಗೆ ಕೈಯಲ್ಲಿ ಬ್ರೇಸ್ ಲೈಟ್ & ಉಂಗುರಗಳನ್ನು ಕೂಡ ಹಾಕುವ ಗೋಲ್ಡ್ ಸುರೇಶ್ ಅವರ ಚಿನ್ನ ಧರಿಸುವ ಅಭ್ಯಾಸದಿಂದಲೇ, ಗೋಲ್ಡ್ ಪದವನ್ನು ಜನರು ಇದೀಗ ಅವರ ಹೆಸರಿನ ಜೊತೆಗೆ ಸೇರಿಸಿ ಕರೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+