ಬಿಗ್‌ಬಾಸ್ ಕನ್ನಡ ಗೆದ್ದು ಬಂದ ಹಣದಲ್ಲಿ ಗಿಲ್ಲಿ ನಟ ಮಾಡುವ ಕೆಲಸ? ಸೋಷಿಯಲ್ ಮೀಡಿಯಾ ಚರ್ಚೆ... Bigg Boss
ಗಿಲ್ಲಿ ನಟ ಬಿಗ್‌ಬಾಸ್ ಸೀಸನ್ 12 ಗೆದ್ದು ಬೀಗಿದ್ದು, ಕೋಟಿ ಕೋಟಿ ಅಭಿಮಾನಿಗಳ ಆಸೆ & ಕನಸು ಭರ್ಜರಿಯಾಗಿ ಈಡೇರಿದೆ. ಬಿಗ್‌ಬಾಸ್ ಸೀಸನ್ 12 ಕನ್ನಡ ಗೆಲ್ಲೋದು ಗಿಲ್ಲಿನೇ ಅಂತಾ ಚಾಲೆಂಜ್ ಹಾಕಿ ಭರ್ಜರಿ ವೋಟಿಂಗ್ ಮಾಡಿದ್ದ ಕೋಟ್ಯಂತರ ಅಭಿಮಾನಿಗಳು ಇದೀಗ ತಮ್ಮ ಗುರಿ ಮುಟ್ಟಿದ್ದಾರೆ. ಈ ಸಮಯದಲ್ಲೇ ಬಿಗ್‌ಬಾಸ್ ಕನ್ನಡ ಗೆದ್ದು ಬಂದ ಹಣದಲ್ಲಿ ಏನು ಮಾಡುತ್ತಾರೆ? ಗಿಲ್ಲಿ ನಟ ಅಷ್ಟೊಂದು ಹಣದಲ್ಲಿ ಯಾವೆಲ್ಲಾ ಕೆಲಸ ಮಾಡಬಹುದು? ಅನ್ನೋ ಚರ್ಚೆ ಜೋರಾಗಿದೆ.
ಗಿಲ್ಲಿ ನಟ ಬಡವರ ಮನೆ ಹುಡುಗ, ಅದೆಲ್ಲವನ್ನೂ ಮೀರಿ ಗಿಲ್ಲಿ ನಟ ಟ್ಯಾಲೆಂಟ್ ಮುಂದೆ ಯಾವುದೇ ಬಿಗ್‌ಬಾಸ್ ಸ್ಪರ್ಧಿ ಕೂಡ ನಿಲ್ಲೋದಿಲ್ಲ ಅಂತಾ ಗಿಲ್ಲಿ ಅಭಿಮಾನಿಗಳು ಘೋಷಿಸಿದ್ದರು. ಅದರಲ್ಲೂ, ಗಿಲ್ಲಿ ಪರವಾಗಿ ಬ್ಯಾನರ್ ಹಾಕಿ & ಆ ಮೂಲಕ ಬೆಂಬಲ ವ್ಯಕ್ತಪಡಿಸುವ ಜೊತೆಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರು ಗಿಲ್ಲಿ ಅವರ ಫ್ಯಾನ್ಸ್. ಈಗ ಅವರೆಲ್ಲರ ಆಸೆ ಕೂಡ ಈಡೇರಿದೆ, ಹೀಗಿದ್ದಾಗಲೇ ಗಿಲ್ಲಿ ಅವರು ತಮ್ಮ ಕೈಗೆ ಬರುವ ಲಕ್ಷ ಲಕ್ಷ ಹಣವನ್ನು ಏನು ಮಾಡಬಹುದು? ಎಂಬ ಚರ್ಚೆಯು ಕೂಡ ಜೋರಾಗಿದೆ.

ಬಡವ ಗಿಲ್ಲಿಗೆ ಇದು ದೊಡ್ಡ ಹಣ!
ಕನ್ನಡ ಸಿನಿಮಾ ರಂಗಕ್ಕೆ ಬರುವ ಮೊದಲೇ, ಸೋಷಿಯಲ್ ಮೀಡಿಯಾ ಮೂಲಕವೇ ತನ್ನ ಹವಾ ಏನು ಅನ್ನೋದನ್ನ ಇಡೀ ಕರ್ನಾಟಕದ ಮೂಲೆ ಮೂಲೆಗೂ ತಿಳಿಸಿದ್ದರು ಗಿಲ್ಲಿ ನಟ. ಸೋಷಿಯಲ್ ಮೀಡಿಯಾ ಮೂಲಕ ಗಿಲ್ಲಿ ಶಾರ್ಟ್ ಮೂವಿ ಮಾಡಿ ಹೆಸರು ಮಾಡಿದ್ದರು. ಆ ನಂತರ ಒಂದೊಂದಾಗಿ ರಿಯಾಲಿಟಿ ಶೋಗಳಲ್ಲಿ ಗಿಲ್ಲಿ ಅವರಿಗೆ ಅವಕಾಶ ಸಿಗುತ್ತಾ ಬಂದಿದ್ದವು. ಹೀಗಿದ್ದಾಗ ಬಿಗ್‌ಬಾಸ್ ಸೀಸನ್ 12 ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದ ಗಿಲ್ಲಿ ಮೊದಲ ದಿನದಿಂದಲೇ ತಾನೇ ವಿನ್ನರ್ ಅನ್ನೋದನ್ನ ಇಡೀ ಜಗತ್ತಿಗೆ ತೋರಿಸುತ್ತಾ ಬಂದಿದ್ದರು. ಇದೀಗ ಗಿಲ್ಲಿ ಗೆದ್ದು ಬೀಗಿದ್ದು, ಆ ಹಣದಲ್ಲಿ ಏನು ಮಾಡ್ತಾರೆ? ಎಂಬ ಪ್ರಶ್ನೆ ಉದ್ಭವಿಸಿದೆ.
ಆದರೆ ಬಡವರ ಮನೆಯ ಹುಡುಗ ಗಿಲ್ಲಿಗೆ ಸಾಕಷ್ಟು ಸಮಸ್ಯೆಗಳು ಕೂಡ ಇದ್ದು, ಆರ್ಥಿಕವಾಗಿ ಈ ಹಣವನ್ನು ಬಳಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ. ಇದರ ಜೊತೆಗೆ ಗಿಲ್ಲಿ ಸಮಾಜ ಸೇವೆಗೆ ಅಂತಲೂ ಒಂದು ಭಾಗ ಕೊಡಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಹೀಗಿದ್ದಾಗ ಗಿಲ್ಲಿ ಪರವಾಗಿ ಭಾರಿ ದೊಡ್ಡ ಮಟ್ಟದಲ್ಲಿ ಜಯಘೋಷ ಮೊಳಗಿದ್ದು, ಬಿಗ್‌ಬಾಸ್ ಕಾರ್ಯಕ್ರಮ ನಡೆಯುವ ಸ್ಟುಡಿಯೋ ಎದುರು ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿ ಭರ್ಜರಿ ಸಂಭ್ರಮಾಚರಣೆಯನ್ನ ನಡೆಸಿದರು.












Click it and Unblock the Notifications