Bigg Boss Kannada: 'ಬಿಗ್ ಬಾಸ್ ಮನೆಯ ಕುತಂತ್ರಿಗಳು ಇವರೇ'
ಈ ಬಾರಿಯ ಕನ್ನಡ ಬಿಗ್ ಬಾಸ್ ಮನೆಯಲ್ಲಿ ನಾಲ್ಕನೇ ಸ್ಪರ್ಧಿಯಾಗಿ ನಟಿ ಹಂಸ ಪ್ರತಾಪ್ ಎಲಿಮಿನೇಟ್ ಆಗಿದ್ದಾರೆ. ಮೊದಲ ವಾರ ನಟಿ ಯಮುನಾ ಶ್ರೀನಿಧಿ ಬಳಿಕ ವೀಕ್ಷಕರಿಂದ ವೋಟ್ ಪಡೆಯುವಲ್ಲಿ ವಿಫಲರಾಗಿ ಕಡಿಮೆ ವೋಟ್ ಪಡೆದು ಹಂಸ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಬಂದ ಬಳಿಕ ನಟಿ ಹಂಸ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ.
ನ್ಯೂಸ್ ಫಸ್ಟ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾರ್ಯಾರ ಗುಣ ಹೇಗೆ ಎನ್ನುವುದನ್ನು ವಿವರಿಸಿದ್ದಾರೆ.

ಯಮುನಾ- ತುಂಬಾ ಸ್ಟ್ರಾಂಗ್ ಲೇಡಿ. ಬಹುಮುಖ ಪ್ರತಿಭೆ ಇರುವವರು. ಮಾತಿಗೂ ಸೈ, ಡಾನ್ಸ್‌ಗೂ ಸೈ, ಜಗಳಕ್ಕೂ ಸೈ.
ರಂಜಿತ್- ತುಂಬಾ ಕಷ್ಟ ಸುಖಗಳನ್ನು ನೋಡಿರುವ ವ್ಯಕ್ತಿ. ವೈಯಕ್ತಿಕ ಜೀವನದಲ್ಲಿ ತುಂಬಾ ಕಷ್ಟಪಟ್ಟಿದ್ದಾರೆ. ತುಂಬಾ ಒಳ್ಳೆ ವ್ಯಕ್ತಿ.
ಹನುಮಂತ- ನಾವು ಅಂದು ಕೊಂಡಷ್ಟು ಮುಗ್ಧ ಅಲ್ಲ. ಯಾಕೆಂದರೆ ಅವರು ನನ್ನ ನಾಮಿನೆಟ್ ಮಾಡಿದ್ದಾರೆ. ನಾನು ಹೇಳಿದ ಒಂದು ಹೇಳಿಕೆ ತೆಗೆದುಕೊಂಡು ನನ್ನನ್ನು ನಾಮಿನೆಟ್ ಮಾಡಿದ್ದಾರೆ.
ಧನರಾಜ್- ಅವರು ತುಂಬಾ ಸೂಕ್ಷ್ಮ ಸ್ವಭಾವದ ವ್ಯಕ್ತಿ. ತುಂಬಾ ಸ್ವಾಫ್ಟ್ ಹೃದಯದ ವ್ಯಕ್ತಿ. ಯಾರಿಗೂ ನೋವು ಮಾಡಬೇಕು ಎನ್ನುವ ಉದ್ದೇಶ ಅವರಿಗೆ ಇಲ್ಲ. ಆಪ್ಷನ್ ಇದ್ದಿದ್ದರೆ ಅವರು ಯಾರನ್ನೂ ನಾಮಿನೇಟ್ ಮಾಡುತ್ತಲೇ ಇರಲಿಲ್ಲ. ಎಲ್ಲರ ಜೊತೆ ಖುಷಿ ಖುಷಿಯಾಗಿರುತ್ತಾರೆ.

ಜಗದೀಶ್- ಕಂಟೆಂಟ್ ಕಿಂಗ್
ತ್ರಿವಿಕ್ರಮ್- ತುಂಬಾ ಪ್ರಭುದ್ಧವಾದ ವ್ಯಕ್ತಿ
ಮಂಜು- ತುಂಬಾ ಕುತಂತ್ರಿ
ಮೋಕ್ಷಿತಾ ಪೈ- ಆ ಕಡೆನೂ ಇಲ್ಲ, ಈ ಕಡೆನೂ ಇಲ್ಲ ಗಾಳಿ ಬಂದ ಕಡೆ ತೂರಿಕೊಳ್ಳುವವರು
ಗೌತಮಿ- ಪಾಸಿಟಿವಿಟಿ ಅಂತಾ ಎಲ್ಲರಲ್ಲೂ ನೆಗೆಟಿವಿಟಿಯನ್ನೇ ಹುಡುಕುತ್ತಿದ್ದಾರೆ.
ಚೈತ್ರಾ ಕುಂದಾಪುರ- ಫೈಯರ್ ಬ್ರಾಂಡ್ ಅಂತಾ ಹೇಳಿ ತಮ್ಮ ಬಾಯಿಗೆ ಬೆಂಕಿ ಹಚ್ಚಿಕೊಳ್ಳುತ್ತಾರೆ.
ಮಾನಸ- ಫಿಲ್ಟರ್ ಇಲ್ಲದೇ ಮಾತನಾಡುತ್ತೇನೆ ಅಂತಾ ಹೇಳಿ ಫಿಲ್ಟರ್ ಆಗುತ್ತಿದ್ದಾರೆ.
ಗೋಲ್ಡ್ ಸುರೇಶ್- ತುಂಬಾ ಕುತಂತ್ರಗಳನ್ನು ಮಾಡುವ ವ್ಯಕ್ತಿ, ತುಂಬಾ ಸಣ್ಣ ಬುದ್ದಿ ಇರುವ ಮನುಷ್ಯ
ಶಿಶಿರ್- ಸೇಫ್ ಗೇಮ್ ಆಡಲು ಪ್ರಯತ್ನ ಪಡುತ್ತಿದ್ದಾರೆ. ಎಲ್ಲಾ ಕಡೆ ಎಲ್ಲರ ಜೊತೆಯಲ್ಲೂ ಇರಬೇಕು ಎಂದುಕೊಳ್ಳುತ್ತಿದ್ದಾರೆ.
ಐಶ್ವರ್ಯ ಸಿಂಧೋಗಿ- ಅವರು ಸೂಪರ್ ಆ್ಯಕ್ವಿವ್ ಆಗಿರಬೇಕು ಅಂತಾ ಬಿಗ್ ಬಾಸ್ ಮನೆಗೆ ಬರುವಾಗಲೇ ನಿರ್ಧಾರ ಮಾಡಿಕೊಂಡಿದ್ದಾರೆ ಅನಿಸುತ್ತದೆ. ತುಂಬಾ ಟ್ರೈ ಮಾಡುತ್ತಿದ್ದಾರೆ. ಎಲ್ಲಾ ಕಡೆ ನಾನಿರಬೇಕು ಎನ್ನುವ ಮೈಂಡ್‌ಸೆಟ್‌ನಲ್ಲಿ ಇದ್ದಾರೆ. ಎಲ್ಲಾ ಕಡೆ ಇರುವ ಪ್ರಯತ್ನ ಪಡುತ್ತಿದ್ದಾರೆ.
ಭವ್ಯ ಗೌಡ- ಅಲ್ಲಿರುವವರು ಅವರನ್ನು ರೌಡಿ ಬೇಬಿ ಎನ್ನುತ್ತಾರೆ. ಆದರೆ ಆ ರೌಡಿಸಂ ಇನ್ನೂ ಹೊರಗಡೆ ಬಂದಿಲ್ಲ. ಅವರು ಇನ್ನೂ ಚೆನ್ನಾಗಿ ಆಡಬೇಕು.
ಧರ್ಮ ಕೀರ್ತಿರಾಜ್- ಅವರನ್ನು ಎಲ್ಲಾ ಕಡೆ ಹುಡುಕಬೇಕು. ತುಂಬಾ ಒಳ್ಳೆ ವ್ಯಕ್ತಿ. ಅಮ್ಮನ ಮಗ ಅಂತಾರಲ್ಲ ಅಂತಹ ಹುಡುಗ ಅವರು. ಅವರು ಬಿಗ್ ಬಾಸ್ ಮನೆಗೆ ಫಿಟ್ ಆಗಲ್ಲ ಎಂದುಕೊಳ್ಳುತ್ತೇನೆ.
ಅನುಷಾ- ಸೇಫ್ ಗೇಮ್ ಆಡಲು ಪ್ರಯತ್ನ ಪಡುತ್ತಿದ್ದಾರೆ. ಯಾರ ಜೊತೆನೂ ನಿಷ್ಠೂರ ಆಗಬಾರದು ಎಲ್ಲರ ಜೊತೆ ಚೆನ್ನಾಗಿರಬೇಕು ಅಂತಾ ಎಚ್ಚರಿಕೆಯಿಂದ ಆಡುತ್ತಿದ್ದಾರೆ ಎಂದು ಹಂಸ ಬಿಗ್ ಬಾಸ್‌ನ ಇತರ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.












Click it and Unblock the Notifications