"ಗಿಲ್ಲಿ ಕಚಡಾ, ಮೆಂಟಲ್, ಅವನಷ್ಟು ಕೊಳಕ ನಾನು ನೋಡೇ ಇಲ್ಲ"
ಬಿಗ್‌ಬಾಸ್ ಕನ್ನಡ ಸೀಸನ್-12ರ ಹೈಲೈಟ್‌ಗಳಲ್ಲಿ ಗಿಲ್ಲಿ ಕೂಡ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಕ್ರೇಜ್ ಕೂಡ ಜಾಸ್ತಿ ಇದೆ. ಗಿಲ್ಲಿಯೇ ಈ ಬಿಗ್‌ಬಾಸ್ ವಿನ್ನರ್ ಎಂದು ಈಗಾಗಲೇ ಹಲವರು ಭವಿಷ್ಯವೂ ನುಡಿದಿದ್ದಾರೆ. ಇಂತಹ ಗಿಲ್ಲಿ ಮೇಲೆ ತಮ್ಮ ಸಹಸ್ಪರ್ಧಿಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. 'ಗಿಲ್ಲಿ ಗಲೀಜು, ಕೊಳಕ, ಕಳ್ಳ, ಕೆಟ್ಟ ಪದಗಳನ್ನು ಬಳಸಿ ಸ್ಪರ್ಧಿಗಳನ್ನು ಅವಮಾನಿಸುತ್ತಾನೆ. ಇದೆಲ್ಲ ಹೊರಗೆ ಇರುವವರಿಗೆ ಕಾಣಿಸುತ್ತಿಲ್ಲ, ಗಿಲ್ಲಿ ಮಾಡುವ ಕಾಮಿಡಿ ಮಾತ್ರವೇ ಹೈಲೈಟ್ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
'ಗಿಲ್ಲಿ ಜೊತೆಗೆ ಬಿಗ್‌ಬಾಸ್ ಮನೆಯಲ್ಲಿ ಕೆಲ ವಾರಗಳ ಕಾಲ ಇದ್ದು ಎಲಿಮಿನೇಟ್ ಆದ ಸ್ಪರ್ಧಿಯೇ ಈ ರೀತಿ ಶಾಕಿಂಗ್ ಆರೋಪ ಮಾಡಿದ್ದಾರೆ. ಬಿಗ್‌ಬಾಸ್‌ನಿಂದ ಹೊರಗೆ ಬಂದ ಮೇಲೆ ಗಿಲ್ಲಿ ವಿಡಿಯೋ ನೋಡಿದೆ. ಆ ವಿಡಿಯೋದಲ್ಲಿರುವುದಕ್ಕಿಂತಲೂ ಹೆಚ್ಚು ಕೆಟ್ಟ ಮಾತುಗಳು ಗಿಲ್ಲಿ ಆಡಿರುವುದನ್ನು ನಾನು ಕೇಳಿದ್ದೀನಿ. ಅವನು ಎಲ್ಲರಿಗೂ ಇರಿಟೇಷನ್ ಮಾಡಿದ್ದಾನೆ, ಎಲ್ಲರೊಂದಿಗೂ ಅಸಭ್ಯವಾಗಿ ಮಾತನಾಡಿದ್ದಾನೆ, ಕಳ್ಳತನ ಮಾಡಿದ್ದಾನೆ. ಗಿಲ್ಲಿ ಎಷ್ಟು ಕೆಟ್ಟವನು ಅಂದ್ರೆ ಲೈಫಲ್ಲಿ ನಾನು ಅವನಷ್ಟು ಕೆಟ್ಟವನನ್ನ, ಕೊಳಕನನ್ನ, ಕಳ್ಳನನ್ನ ನೋಡೇ ಇಲ್ಲ' ಎಂದಿದ್ದಾರೆ ಡಾಗ್ ಸತೀಶ್.

'ಹೊರಗಡೆ ಗಿಲ್ಲಿ ಬಗ್ಗೆ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಇದ್ದಾರೆ. ಗಿಲ್ಲಿ ಬಗ್ಗೆ ಕಾಮಿಡಿ ಮಾತ್ರ ತೋರಿಸುತ್ತಿರುವುದರಿಂದ ಅವನನ್ನು ತುಂಬಾ ಒಳ್ಳೆಯವನು ಅಂದುಕೊಂಡಿದ್ದಾರೆ. ಆದರೆ ಗಿಲ್ಲಿ ಕೆಟ್ಟ ಮಾತುಗಳನ್ನ, ಬೇರೆಯವರಿಗೆ ಅವಮಾನ ಮಾಡುವ ಮಾತುಗಳನ್ನ ಆಡಿದ್ದಾನೆ. ಗಿಲ್ಲಿ ತನಗಿಂತ ಹಿರಿಯರಿಗೂ ಇದನ್ನೇ ಮಾಡಿದ್ದಾನೆ. ಒಬ್ಬರಿಗೂ ಬಿಡದಂತೆ ಏಕವಚನದಲ್ಲಿ ಮಾತನಾಡಿದ್ದಾನೆ. ಉಳಿದವರ ಬಗ್ಗೆ ಚೀಪ್ ಆಗಿ ಮಾತಾಡೋದು, ನನ್ನ ಬಗ್ಗೆ ಹೇಳಿಕೊಳ್ಳುವಾಗಲೂ ಥೂ.. ಅಂತಿದ್ದ' ಎಂದು ಆರೋಪ ಮಾಡಿದ್ದಾರೆ.
'ಅವಮಾನಿಸಿ ಮೂಡ್ ಆಫ್ ಮಾಡ್ತಾನೆ'
'ನಾವು ಯಾರೂ ಮಾತನಾಡುವಂತಿಲ್ಲ, ಅವನೇ ಮಾತನಾಡಬೇಕು ಅನ್ನೋದು ಗಿಲ್ಲಿ ಉದ್ದೇಶ. ನನ್ನ ಬಿಟ್ಟು ಬೇರೆ ಯಾರೂ ಮಾತನಾಡಬಾರದು ಅಂತಾನೆ. ಬಿಗ್‌ಬಾಸ್ ಮನೆಯಲ್ಲಿ ಹೆಚ್ಚಾಗಿ ಮಾತನಾಡಿದ್ರೆ ನಾನು ಹೈಲೈಟ್ ಆಗ್ತೀನಿ ಅನ್ನೋದು ಗೊತ್ತಿದೆ. ಹೀಗಾಗಿ ನಮಗೆ ಅವಮಾನ ಮಾಡಿದ್ರೆ ನಾವು ಆ ದಿನವೆಲ್ಲ ಮೂಡ್ ಆಫ್ ಆಗ್ತೀವಿ ಅಂತ ಹಾಗೆ ಮಾಡ್ತಾನೆ. ಎಲ್ಲ ಕಂಟೆಂಟ್ ಇವನೇ ತಿಂದುಕೊಳ್ತಾನೆ. ಆ ತರ ಸ್ಟ್ರಾಟಜಿ ಗಿಲ್ಲಿ ಹತ್ರ ಇದೆ. ಅವನು ಅಷ್ಟು ಕೆಟ್ಟವನಾಗಿದ್ರೂ ಜನ ಅವನನ್ನೇ ತುಂಬಾ ಹೊಗಳುತ್ತಿದ್ದಾರೆ. ನಿಜ ಹೇಳಬೇಕು ಅಂದ್ರೆ ಗಿಲ್ಲಿ ಒಬ್ಬನೇ ಕಚಡಾ, ಉಳಿದವರೆಲ್ಲರೂ ಒಳ್ಳೆಯವರೇ' ಎಂದಿದ್ದಾರೆ.
'ಗಿಲ್ಲಿ ಅಂತಹ ಕೆಟ್ಟ ಪದ ಬಳಸಿದರೂ ಹೈಲೈಟ್ ಆಗಲಿಲ್ಲ. ಅವನು ಕೊಳಕ, ಕೆಲಸ ಮಾಡಲ್ಲ. ಬಿಗ್‌ಬಾಸ್ ಮನೆಯಲ್ಲಿ ಏನೇ ಹೇಳಿದ್ರೂ ತಪ್ಪಿಸಿಕೊಂಡು ಓಡಾಡುವ ಮೈಗಳ್ಳ. ಮಾಡಿದರೂ ಕಾಟಾಚಾರಕ್ಕೆ, ಗಲೀಜಾಗಿ ಮಾತನಾಡ್ತಾನೆ. ಯಾಕಂದ್ರೆ ಮುಂದೆ ಅವನಿಗೆ ಬೇರೆ ಯಾರೂ ಕೆಲಸ ಹೇಳಬಾರದು ಅಂತ ಹೀಗೆಲ್ಲ ಮಾಡ್ತಾನೆ. ಗಿಲ್ಲಿ ಅವರ ಅಪ್ಪ-ಅಮ್ಮ ಒಳ್ಳೆಯವರು. ಆದ್ರೆ ಇವನೊಬ್ಬ ಕಲ್ಚರ್‌ಲೆಸ್, ಮೆಂಟಲ್ ತರ ಹುಟ್ಟಿದ್ದಾನೆ' ಎಂದಿದ್ದಾರೆ.
'ಟಾಯ್ಲೆಟ್ ತೊಳೆದಿದ್ದಕ್ಕೆ ಪೇಮೆಂಟ್ ಡಬಲ್ ಆಯ್ತು'
ಇತ್ತೀಚೆಗೆ ಡಾಗ್ ಸತೀಶ್ ಬರಿಗೈನಲ್ಲೇ ಟಾಯ್ಲೆಟ್ ತೊಳೆದಿದ್ದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸತೀಶ್, 'ಬರಿಗೈನಲ್ಲಿ ಟಾಯ್ಲೆಟ್ ತೊಳೆದರೆ ಅವಮಾನನಾ? ಎಂದು ಕೇಳಿದ್ದಾರೆ. ಬಡವರು, ಬಿಬಿಎಂಪಿಯವರನ್ನು ಕರೆಸಿ, ಹಣ ಕೊಟ್ಟು ಟಾಯ್ಲೆಟ್ ತೊಳೆಸುತ್ತೀವಿ. ಅವರೂ ಮನುಷ್ಯರೇ, ನಾನೂ ಮನುಷ್ಯನೇ.. ಇದನ್ನ ಎಲ್ಲರೂ ಡೌನ್ ಟು ಅರ್ಥ್ ಅನ್ಕೋಬೇಕೇ ಹೊರತು ಗಲೀಜು ಅನ್ಕೋಬೇಡಿ ಎಂದಿದ್ದಾರೆ. ಇದನ್ನು ಗಲೀಜು ಅಂತಾರೋ? ಆಡ್ಕೋತಾರೋ? ಅವರ ಅಪ್ಪ ಅಮ್ಮ ಸಂಸ್ಕಾರ ಕಲಿಸಿಲ್ಲ ಎಂದರ್ಥ. ಟಾಯ್ಲೆಟ್ ತೊಳೆದಿದ್ದರಿಂದ ನನ್ನ ಘನತೆ ಏನು ಕಡಿಮೆ ಆಗಿಲ್ಲ. ನನ್ನ ಪೇಮೆಂಟ್ ಡಬಲ್ ಆಗಿದೆ' ಎಂದಿದ್ದಾರೆ ಡಾಗ್ ಸತೀಶ್.












Click it and Unblock the Notifications