BBK 12: ಪಿತೂರಿ ಮಾಡುವ ದುಶ್ಮನ್‌ ಬೆನ್ನ ಹಿಂದೆ ಇರ್ತಾರೆ: ಜಾನ್ವಿ-ಅಶ್ವಿನಿ ಗೌಡ ನಡುವೆ ದಿಢೀರ್‌ ಏನಾಯ್ತು?

ಬಿಗ್‌ಬಾಸ್‌ ಮನೆ ಅಂದ್ರೆ ಏನೂ ನಿರೀಕ್ಷೆ ಮಾಡೋ ಹಾಗೇ ಇಲ್ಲ. ಇಂದು ಮನೆಯಲ್ಲಿದ್ದವರು, ನಾಳೆಹೊರಬರಹುದು. ಇಂದು ಜೋಡಿಯಾಗಿದ್ದವರು ದಿಢೀರ್‌ ದೂರವಾಗಬಹುದು. ವೈರಿಗಳಂತಿದ್ದವರು ದೋಸ್ತಿಗಳೂ ಆಗಬಹುದು. ಇಂತಹ ಘಟನೆಗಳಿಗೆ ಬಿಗ್‌ಬಾಸ್‌ ಮನೆ ಸಾಕ್ಷಿಯಾಗುತ್ತಲೇ ಇದೆ. ಈ ಸೀಸನ್‌ನಲ್ಲೂ ಅಂತಹ ಸನ್ನಿವೇಷ ಎದುರಾಗಿದೆ. ಬಿಗ್‌ಬಾಸ್‌ ಸೀಸನ್‌-12ರಲ್ಲಿ ದೋಸ್ತಿಗಳು ಎಂದೇ ಕರೆಸಿಕೊಂಡಿದ್ದ ಆಂಕರ್‌ ಜಾನ್ವಿ ಹಾಗೂ ಅಶ್ವಿನಿ ಗೌಡ ವೈರಿಗಳಂತೆ ಕಿತ್ತಾಡಿಕೊಂಡಿದ್ದಾರೆ. ಇದನ್ನು ನೋಡಿ ಉಳಿದ ಸ್ಪರ್ಧಿಗಳು ಶಾಕ್‌ ಆಗಿದ್ದಾರೆ. ಇವರಿಬ್ಬರ ನಡುವೆ ಬೆನ್ನಿಗೆ ಚೂರಿ ಹಾಕಿದ ವಿಚಾರವಂತೂ ಸದ್ದು ಮಾಡುತ್ತಿದೆ.

ಬಿಗ್‌ಬಾಸ್‌ ಕಾರ್ಯಕ್ರಮ ಆರಂಭವಾದಾಗಿನಿಂದಲೂ ಜಾನ್ವಿ ಹಾಗೂ ಅಶ್ವಿನಿ ಗೌಡ ದೋಸ್ತಿಗಳಾಗಿಯೇ ಇದ್ದರು. ಒಟ್ಟಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ರಕ್ಷಿತಾ ಶೆಟ್ಟಿ ಮೇಲೆ ಕಿರಿಕ್‌ ಆದಾಗಲೂ ಜೋಡಿಯಾಗಿಯೇ ಇದ್ದರು. ಒಬ್ಬರಿಗೆ ಒಬ್ಬರು ಸಪೋರ್ಟ್‌ ಮಾಡುತ್ತಾ ಜೋಡಿ ಎಂದೇ ಕರೆಸಿಕೊಂಡಿದ್ದರು. ನೋವಾದಾಗ ಒಬ್ಬರಿಗೊಬ್ಬರು ಧೈರ್ಯ ತುಂಬುತ್ತಿದ್ದರು. ಆದರೆ ಬಿಗ್‌ಬಾಸ್‌ ಮನೆಯಲ್ಲಿ ವಾತಾವರಣವೇ ಬದಲಾಗಿದೆ. ನಾನು ನೀನು ಜೋಡಿ ಎನ್ನುತ್ತಿದ್ದವರು, ಈಗ ನೀನಾ ನಾನಾ? ಎಂದು ಕಚ್ಚಾಡಿಕೊಂಡಿದ್ದಾರೆ.

Bigg Boss Kannada 12 Jhanvi Ashwini Gowda Fight Shocks Housemates

ಪ್ರೀತಿ ಉಳಿಸಿಕೊಳ್ಳೋದು ಕಷ್ಟ

ಟಾಸ್ಕ್‌ ವೇಳೆ ಜಾನ್ವಿ ಹಾಗೂ ಅಶ್ವಿನಿ ಗೌಡ ಯುದ್ಧವೇ ಮಾಡಿದ್ದಾರೆ. ನಿಸ್ವಾರ್ಥದಿಂದ ನಾವು ಕೊಡುವುದೇ ನಿಜವಾದ ಪ್ರೀತಿ ಎಂದು ಅಶ್ವಿನಿ ಹೇಳಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ನಮಗೇ ಗೊತ್ತಿಲ್ಲದಂತೆ ನಮ್ಮ ಬೆನ್ನ ಹಿಂದೆ ಪಿತೂರಿ ಮಾಡುವ ದುಶ್ಮನ್‌ಗಳು ಇರ್ತಾರೆ ಎನ್ನುವ ಮೂಲಕ ಅಶ್ವಿನಿ ಗೌಡ ಪರೋಕ್ಷವಾಗಿ ಜಾನ್ವಿಗೆ ಟಾಂಗ್‌ ನೀಡಿರುವುದು ಕಲರ್ಸ್‌ ಪ್ರೋಮೋದಲ್ಲಿದೆ. ಅಂತಹವರ ಮೇಲೂ ಕೆಲವೊಮ್ಮೆ ಪ್ರೀತಿ ಆಗಬಹುದು ಎಂದಿದ್ದಾರೆ ಅಶ್ವಿನಿ ಗೌಡ. ಪ್ರೀತಿಯನ್ನ ಸುಲಭವಾಗಿ ಗಳಿಸಿಬಿಡಬಹುದು. ಆದರೆ ಅದನ್ನು ಉಳಿಸಿಕೊಳ್ಳೋದು ಬಹಳ ಕಷ್ಟ ಎಂದು ಜಾನ್ವಿ ಕೂಡ ಹೇಳಿದ್ದಾರೆ.

ರಕ್ಷಿತಾ ಶೆಟ್ಟಿ ಮೇಲೆ ಈ ಇಬ್ಬರೂ ದೋಸ್ತಿಗಳು ಕಿರಿಕ್‌ ಮಾಡಿಕೊಂಡಿದ್ದರು. ಈ ವೇಳೆ ಬಳಸಿದ ಪದಗಳಿಗೆ ಕಿಚ್ಚ ಸುದೀಪ್‌ ಅವರಿಂದ ಕ್ಲಾಸ್‌ ಕೂಡ ಆಗಿತ್ತು. ಜೋಡೆತ್ತಿನಂತೆ ಒಟ್ಟಾಗಿ ಇದ್ದ ಅಶ್ವಿನಿ ಹಾಗೂ ಜಾನ್ವಿ ನಡುವೆ ಇದೀಗ ವೈರತ್ವ ಮೂಡಿರುವುದು ಪ್ರೇಕ್ಷಕರಲ್ಲಿಯೂ ಅಚ್ಚರಿ ಮೂಡಿಸಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಇವರಿಬ್ಬರನ್ನು ಟ್ರೋಲ್‌, ಮೀಮ್‌ ಮಾಡಲಾಗುತ್ತಿತ್ತು. ಆದರೆ ದಿಢೀರ್‌ ಇಬ್ಬರ ನಡುವೆ ಅಂತರ ಏರ್ಪಟ್ಟಿದೆ. ಮುಂದೆ ಏನೆಲ್ಲ ಆಗಲಿದೆ ಅನ್ನುವುದೇ ಈಗಿನ ಕುತೂಹಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+