ಬಿಗ್‌ಬಾಸ್‌ಗೆ ಇನ್‌ಫ್ಲುಯೆನ್ಸ್‌ ಇದ್ರೆ ಹೋಗಬಹುದಾ? ಸ್ಪರ್ಧಿಗಳ ಫೈನಲ್‌ ಹೇಗೆ? ಸತ್ಯ ಬಾಯ್ಬಿಟ್ಟ ವಿನ್ನರ್‌

Bigg Boss Kannada 12: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌-12 ಇನ್ನೇನು ಕೆಲವೇ ತಿಂಗಳಲ್ಲಿ ಶುರುವಾಗಲಿದೆ. ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಕಲರ್ಸ್‌ ವಾಹಿನಿ ಹಾಗೂ ಬಿಗ್‌ಬಾಸ್‌ ಆಯೋಜಕರು ಸುದ್ದಿಗೋಷ್ಠಿಯಲ್ಲಿ ಮಹತ್ವದ ವಿಚಾರಗಳನ್ನ ಹಂಚಿಕೊಂಡಿದ್ದರು. ಹಾಗಾಗಿ ಈ ಬಾರಿ ಯಾರೆಲ್ಲ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ? ಎಂಬ ಕುತೂಹಲ ಮನೆಮಾಡಿದೆ. ಕೆಲವರು ಬಿಗ್‌ಬಾಸ್‌ಗೆ ನಮ್ಮನ್ನೂ ಕರೆಸಿಕೊಳ್ಳುತ್ತಾರೆ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ನಾನಾ ಕಸರತ್ತು, ಹುಚ್ಚಾಟ ಹೈಡ್ರಾಮಗಳನ್ನ ಮಾಡುತ್ತಿದ್ದಾರೆ. ಇನ್ನು ಇನ್‌ಫ್ಲುಯೆನ್ಸ್‌ ಇದ್ದವರು ಬಿಗ್‌ಬಾಸ್‌ಗೆ ಸುಲಭವಾಗಿ ಹೋಗ್ತಾರೆ ಎಂದೂ ಮಾತನಾಡಿಕೊಳ್ಳುತ್ತಾರೆ. ಇದು ನಿಜಕ್ಕೂ ಸತ್ಯನಾ? ಅಸಲಿಗೆ ಸ್ಪರ್ಧಿಗಳನ್ನ ಫೈನಲ್‌ ಮಾಡೋದು ಯಾರು? ಎಂದು ಬಿಗ್‌ಬಾಸ್‌ ವಿನ್ನರ್‌ ಬಾಯ್ಬಿಟ್ಟಿದ್ದಾರೆ.

ಬಿಗ್‌ಬಾಸ್‌ ನೋಡಬೇಕು ಅಂತ ಎಷ್ಟು ಮಂದಿ ಪ್ರೇಕ್ಷಕರು ಕಾತರದಿಂದ ಕಾಯುತ್ತಾರೋ? ಅದಕ್ಕಿಂತಲೂ ಹೆಚ್ಚಿನ ಮಂದಿ ನಾವು ಬಿಗ್‌ಬಾಸ್‌ ಮನೆಗೆ ಸ್ಪರ್ಧಿಯಾಗಿ ಹೋಗಬೇಕು ಅಂತ ಕನಸು ಕೂಡ ಕಾಣ್ತಾರೆ. ಮೊದಲಿಗೆ ಸೆಲೆಬ್ರಿಟಿಗಳು ಮಾತ್ರವೇ ಇರುತ್ತಿದ್ದ ಬಿಗ್‌ಬಾಸ್‌ ಮನೆಗೆ ಕಾಮನ್‌ ಮ್ಯಾನ್‌ ಕೂಡ ಈ ಹಿಂದೆಯೇ ಎಂಟ್ರಿ ಕೊಟ್ಟಿದ್ದರು. ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆದವರಿಗೂ ಬಿಗ್‌ಬಾಸ್‌ ಮನೆಗೆ ಎಂಟ್ರಿಗೆ ಅವಕಾಶ ನೀಡಿರುವುದರಿಂದ ಇತ್ತೀಚೆಗೆ ನಾವು ಬಿಗ್‌ಬಾಸ್‌ಗೆ ಹೋಗಲೇಬೇಕು ಅಂತ ಕೆಲವೊಂದಷ್ಟು ಮಂದಿ ಸೋಷಿಯಲ್‌ ಮೀಡಿಯಾಗಳಲ್ಲಿ ಏನೇನೋ ಹುಚ್ಚಾಟ ಮಾಡ್ತಿದ್ದಾರೆ.

Bigg Boss Kannada 12 Is Influenced Winner Pratham Reveals How Contestants Are Finalized

ಸೆಲೆಬ್ರಿಟಿಗಳು ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ, ವಿವಾದಗಳಿಂದ ಸುದ್ದಿಯಾದವರು, ಸಮಾಜಪರ ಕೆಲಸಗಳಲ್ಲಿ ತೊಡಗಿರುವವರ ಜೊತೆಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಸಖತ್‌ ಟ್ರೋಲ್‌ ಆದವರಿಗೂ ಸಹ ಬಿಗ್‌ಬಾಸ್‌ ಗಾಳ ಹಾಕಿತ್ತು. ಈ ಕಾರಣದಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ನಾವೂ ಸ್ಟಾರ್‌ ಆದರೆ ಬಿಗ್‌ಬಾಸ್‌ ನಮ್ಮನ್ನೂ ಕರೆಸಿಕೊಳ್ಳುತ್ತೆ ಎಂದು ಹಲವರು ಭಾವಿಸಿದ್ದಾರೆ. ಎಂದಿನಂತೆ ತಮ್ಮ ಹುಚ್ಚಾಟ ಮುಂದುವರಿಸುತ್ತೆ. ಇನ್ನು ಕೆಲವರು ಇನ್‌ಫ್ಲುಯೆನ್ಸ್‌ ಮಾಡಿದ್ರೂ ಬಿಗ್‌ಬಾಸ್‌ಗೆ ನೇರವಾಗಿ ಎಂಟ್ರಿ ಕೊಡಬಹುದು ಎಂಬ ಗುಸುಗುಸು ಕೂಡ ಇದೆ.

ವಿನ್ನರ್‌ ಬಾಯಿಂದಲೇ ಹೊರಬಂತು ಸತ್ಯ!

ಆದರೆ ನಿಜವಾಗಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ? ಅನ್ನೋದು ಹೊರಗೆ ಬರುವುದಿಲ್ಲ. ನಿಜವಾಗಿ ಇನ್‌ಫ್ಲುಯೆನ್ಸ್‌ ಮಾಡಿಕೊಂಡು ಬಿಗ್‌ಬಾಸ್‌ ಮನೆಗೆ ಸ್ಪರ್ಧಿಗಳಾಗಿ ಹೋಗಬಹುದಾ? ಅಲ್ಲಿ ಸ್ಪರ್ಧಿಗಳನ್ನು ಫೈನಲ್‌ ಮಾಡುವವರು ಯಾರು? ಎಂಬ ಬಗ್ಗೆ ಬಿಗ್‌ಬಾಸ್‌ ವಿನ್ನರ್‌ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದ ಮಾಜಿ ಸ್ಪರ್ಧಿಯೇ ಕೊನೆಗೂ ಬಾಯ್ಬಿಟ್ಟಿದ್ದಾರೆ. ಅದು ಬೇರೆ ಯಾರೂ ಅಲ್ಲ, ಬಿಗ್‌ಬಾಸ್‌ ಸೀಸನ್‌-4ರ ವಿನ್ನರ್‌ ಒಳ್ಳೆ ಹುಡುಗ ಪ್ರಥಮ್‌.

Bigg Boss Kannada 12 Is Influenced Winner Pratham Reveals How Contestants Are Finalized

ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರಥಮ್‌ ಈ ವಿಚಾರ ರಿವೀಲ್‌ ಮಾಡಿದ್ದಾರೆ. "ಸೀರಿಯಸ್‌ ಹಾಗೂ ಸ್ಟ್ರಾಂಗ್‌ ಮೆಸೇಜ್‌ ಎಂದು ಬರೆದುಕೊಂಡಿರುವ ಪ್ರಥಮ್‌, ಕಲರ್ಸ್‌ ಕನ್ನಡ ಬಿಗ್‌ಬಾಸ್‌ ಪ್ರೆಸ್‌ಮೀಟ್‌ ಆದ ಮೇಲೆ ನೂರಾರು ಜನ ನಮ್ಮ ಆಫೀಸ್‌ಗೆ ಹಾಗೂ ನನ್ನ ಆಪ್ತರ ಮೂಲಕ ಕರೆ ಮಾಡುತ್ತಲೇ ಇದ್ದಾರೆ. ಎಲ್ಲರಿಗೂ ಒಂದೇ ಮಾತು, ಅಲ್ಲಿ ಯಾರ ಇನ್‌ಫ್ಲುಯೆನ್ಸ್‌ ಕೂಡ ನಡೆಯಲ್ಲ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಕಲರ್ಸ್‌ ಕನ್ನಡದ ಹೆಡ್‌ ಪ್ರಶಾಂತ್‌ ನಾಯಕ್‌ ಸರ್‌ ಹಾಗೂ ಪ್ರಕಾಶ್‌ ಸರ್‌ ಮಾತ್ರವೇ ಸ್ಪರ್ಧಿಗಳನ್ನ ಆಯ್ಕೆ ಮಾಡುತ್ತಾರೆ. ಬೇರೆ ಯಾರೇ ಹೇಳಿದ್ರೂ ಅದು ಫೇಕ್‌, ಯಾಮಾರಬೇಡಿ, ಆನ್‌ಲೈನ್‌ ಹುಚ್ಚಾಟ ನಿಲ್ಲಿಸಿ" ಎಂದು ಪ್ರಥಮ್‌ ಬರೆದುಕೊಂಡಿದ್ದಾರೆ. ಈ ಮೂಲಕ ಎಲ್ಲ ಗೊಂದಲಗಳಿಗೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ ಪ್ರಥಮ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+