BBK 12 Gilli Nata: ಬಿಗ್ ಬಾಸ್ ಸೀಸನ್ 12 ಗಿಲ್ಲಿ ನಟನ ಬಗ್ಗೆ ಯೋಧ ಮಹತ್ವದ ಹೇಳಿಕೆ: ಭಾರೀ ವೈರಲ್
BBK 12 Gilli Nata: ಬಿಗ್ ಬಾಸ್ ಕನ್ನಡ 12 ಫಿನಾಲೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿಯಿದೆ. ಇದಕ್ಕೂ ಮುನ್ನವೇ ಗಿಲ್ಲಿ ನಟನ ಹೆಸರು ಬರೀ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ, ದಿಲ್ಲಿ, ವಿದೇಶದಲ್ಲೂ ರಾರಾಜಿಸುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಮ್ಮ ದೇಶದ ಗಡಿ ಕಾಯುವ ಚಿಕ್ಕೋಡಿ ಮೂಲದ ಯೋಧರೊಬ್ಬರು ಗಿಲ್ಲಿ ಪರ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಬಿಗ್ ಬಾಸ್ ಕನ್ನಡ 12 ಕೊನೇ ಘಟ್ಟಕ್ಕೆ ಬಂದು ತಲುಪಿದೆ. ಇನ್ನೂ ಈ ಸೀಸನ್ ಪ್ರಸಿದ್ಧಿಯಾಗಲೂ ಪ್ರಮುಖ ಕಾರಣನೇ ಗಿಲ್ಲಿ. ಆದ್ದರಿಂದ ಅವರೇ ವಿನ್ನರ್ ಆಗಬೇಕು ಎಂದು ಅಭಿಮಾನಿಗಳು ಹೇಳುವ ಮಾತಾಗಿದೆ. ಈ ಮಾತು ಬರೀ ಕರ್ನಾಟಕ, ಭಾರತ ಮಾತ್ರವಲ್ಲದೆ, ವಿದೇಶಗಳಲ್ಲೂ ಸಹ ಕೇಳಿಬರುತ್ತಿದ್ದು, ಅವರು ಗಿಲ್ಲಿ ಪರ ನಿಂತು ವೋಟ್ ಮಾಡುವಂತೆ ಕೇಳಿಕೊಳ್ಳುತ್ತಲೇ ಬಂದಿದ್ದಾರೆ.

ಯೋಧ ಹೇಳಿದ್ದೇನು?: ಇದೀಗ ಗಡಿ ಕಾಯುವ ಯೋಧರೊಬ್ಬರು ಗಿಲ್ಲಿ ಪರ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. "ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್‌ನಲ್ಲಿರುವ ಗಿಲ್ಲಿಗೆ ಎಲ್ಲಾರೂ ಸಪೋರ್ಟ್ ಮಾಡಿ. ಯೋಧರ ಮತ್ತೊಂದು ಹೆಸರೇ ಕಷ್ಟ. ಭೀಕರ ಚಳಿ ನಡುವೆ ನಾವು ನಡಗುತ್ತಾ ದೇಶ ಕಾಯುತ್ತಿದ್ದೇವೆ. ಇಂತಹ ಕಷ್ಟದಲ್ಲೂ ನಾವು ನಗುತ್ತಿದ್ದೇವೆ ಅಂದ್ರೆ ಅದಕ್ಕೆ ಪ್ರಮುಖ ಕಾರಣ ಗಿಲ್ಲಿ ನಟನ ಕಾಮಿಡಿ," ಎಂದು ಹೇಳಿದ್ದಾರೆ.
"ನನ್ನ ಜೀವನದಲ್ಲಿ ಬಿಗ್ ಬಾಸ್ ನೋಡಿದ್ದೇನೆ ಅಂದ್ರೆ ಅಂದರೆ ಸೀಸನ್ 12 ಮಾತ್ರ. ಅದು ಗಿಲ್ಲಿಗೋಸ್ಕರ. ಅವರು ಒಂದು ಮಾತು ಹೇಳುತ್ತಾರೆ. ಟಿವಿ ಆನ್ ಮಾಡಿದ್ರೆ ಸಾಕು ಜನರ ಕಷ್ಟ ದೂರ ಆಗಬೇಕು. ಜಗಳ, ಇಎಂಐ, ಲೋನ್, ಮನಸ್ತಾಪಗಳು ದೂರ ಆಗಬೇಕು. ಟಿವಿ ನೋಡಿದ್ರೆ ಜನ ನಗಬೇಕು ಅಂತಾ ಹೇಳುತ್ತಾರೆ. ಅವರು ಅದೇ ರೀತಿ ನಡೆದುಕೊಳ್ಳುತ್ತಾ ಎಲ್ಲರನ್ನು ಮನರಂಜಿಸುತ್ತಿದ್ದಾರೆ. ಅವರು ಉತ್ತಮ ಕಲಾವಿದರಿದ್ದಾರೆ" ಎಂದು ಹಾಡಿಹೊಗಳಿದ್ದಾರೆ. ಈ ಮೂಲಕ ಗಿಲ್ಲಿನೇ ಟ್ರೋಫಿ ಗೆಲ್ಲಬೇಕು ಎಂದು ಹೇಳಿದ್ದಾರೆ.
ವಿನ್ನರ್ ವೋಟ್‌ಗಳ ರಿವೀಲ್: ಈಗಾಗಲೇ ಪುಟ್ಟ ಮಕ್ಕಳಿಂದ ಹಿಡಿದು, ಪೊಲೀಸರು ಅಧಿಕಾರಿಗಳು, ಇತರೆ ಇಲಾಖೆ ಅಧಿಕಾರಿಗಳು, ಯೋಧರು, ಅಜ್ಜಿ, ಅಜ್ಜಂದಿರು ಸೇರಿದಂತೆ ತುಂಬಾ ಜನ ಗಿಲ್ಲಿಗೆ ಸಪೋರ್ಟ್ ಮಾಡಿ ಎಂದು ಕೇಳಿಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿವೆ. ಅಷ್ಟರ ಮಟ್ಟಿಗೆ ಗಿಲ್ಲಿ ನಟ ತಮ್ಮ ಕಾಮಿಡಿ ಮೂಲಕ ಜನರ ಮನಸಿಗೆ ಇಳಿದುಬಿಟ್ಟಿದ್ದಾರೆ. ಮತ್ತೊಂದೆಡೆ, ನಿನ್ನೆ ಕಿಚ್ಚ ಸುದೀಪ್ ಅವರು ವಿನ್ನರ್ ವೋಟ್‌ಗಳನ್ನು ಸಹ ರಿವೀಲ್ ಮಾಡಿ ಕುತೂಹಲ ಹುಟ್ಟುಹಾಕಿದ್ದಾರೆ. ಇದೀಗ ಎಲ್ಲರ ಚಿತ್ತ ಫಿನಾಲೆಯತ್ತ ನೆಟ್ಟಿದೆ.
ಟಾಪ್ 6 ಫಿನಾಲಿಸ್ಟ್‌ಗಳ ಪಟ್ಟಿ: ಬಿಗ್ ಬಾಸ್ ಕನ್ನಡ 12 ವಿನ್ನರ್ ಹೆಸರು ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಫೈನಲ್ ಎಪಿಸೋಡ್ ಇಂದು (ಜನವರಿ 18, 2026) ಇನ್ನೂ ಕೆಲವೇ ಕ್ಷಣಗಳಲ್ಲಿ ಅಂದರೆ ಸಂಜೆ 6 ಗಂಟೆಗೆ ಪ್ರಸಾರ ಆಗಲಿದೆ. ಟಾಪ್ 6 ಫಿನಾಲಿಸ್ಟ್‌ಗಳ ಸಾಲಿನಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧನುಷ್ ಗೌಡ, ಮ್ಯೂಟೆಂಟ್ ರಘು ಕಾವ್ಯಾ ಶೈವ ಇದ್ದಾರೆ.
ವಿನ್ನರ್‌ಗೆ ₹50 ಲಕ್ಷ ನಗದು ನಹುಮಾನದ ಜೊತೆ ಟ್ರೋಫಿ ನೀಡಲಾಗುತ್ತದೆ. ಇದೀಗ ಅನೇಕ ವರದಿಗಳು ಗಿಲ್ಲಿ ನಟ ಅವೃ ಈ ಸೀಸನ್ ಟ್ರೋಫಿ ಗೆಲ್ಲಲಿದ್ದಾರೆ ಎಂದು ಹೇಳಿವೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈಗಾಗಲೇ ವಿನ್ನರ್‌ಗೆ ಬಂದಿರುವ ವೋಟ್‌ಗಳನ್ನು ಕಿಚ್ಚ ಸುದೀಪ್ ಅವರು ರಿವೀಲ್ ಮಾಡಿದ್ದು, 37 ಕೋಟಿಗೂ ಅಧಿಕ ವೋಟ್ ಬಿದ್ದಿವೆ ಎಂದು ಹೇಳಿದ್ದಾರೆ. ಆದರೆ, ಯಾರು ಅಂತಾ ಇನ್ನೂ ಇಂದು ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ತಿಳಿದುಬರಲಿದೆ.
-
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ -
Dr Rajkumar: ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಬಗ್ಗೆ ಯಾರು ಏನಂದ್ರು, ಇಲ್ಲಿದೆ ವಿವರ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ












Click it and Unblock the Notifications