BBK 12 Finale: ತಲೆಕೆಳಗಾಯ್ತು ಫಿನಾಲೆ ಲೆಕ್ಕಾಚಾರ: ಇಬ್ಬರಿಗೆ ಅತಿ ಹೆಚ್ಚು ವೋಟ್, ಟಾಪ್ ಸ್ಪರ್ಧಿಯ ವೋಟಿಂಗ್ ಸಂಖ್ಯೆ ರಿವೀಲ್
ಫಿನಾಲೆ ಹಂತದಲ್ಲಿರುವ ಕನ್ನಡ ಬಿಗ್‌ಬಾಸ್ ದಿನದಿಂದ ದಿನಕ್ಕೆ ರೋಚಕವಾಗುತ್ತಲೇ ಹೋಗುತ್ತಿದ್ದು, ಇದೀಗ ಸೀಸನ್-12 ವೋಟಿಂಗ್ ವಿಚಾರದಲ್ಲಿ ಇತಿಹಾಸವನ್ನೇ ಬರೆಯುವ ಹಂತಕ್ಕೆ ತಲುಪಿದೆ. ಇದುವರೆಗೆ ಯಾವುದೇ ಸೀಸನ್‌ನಲ್ಲಿ ಕಾಣದ ಮಟ್ಟಿಗೆ ಈ ಬಾರಿ ವೋಟಿಂಗ್ ನಡೆದಿದೆ ಎಂಬ ಸ್ಫೋಟಕ ಮಾಹಿತಿಯನ್ನು ಸ್ವತಃ ಕಿಚ್ಚ ಸುದೀಪ್ ಬಹಿರಂಗಪಡಿಸಿದ್ದಾರೆ.
ಕಳೆದ ಸೀಸನ್‌ನಲ್ಲಿ ಬಿಗ್‌ಬಾಸ್ ವಿನ್ನರ್‌ಗೆ ಸುಮಾರು ಐದು ಕೋಟಿ ವೋಟ್‌ಗಳು ಲಭಿಸಿದ್ದವು. ಆದರೆ ಈ ಬಾರಿ ಅದನ್ನೆಲ್ಲ ಮೀರಿಸುವ ರೀತಿಯಲ್ಲಿ, ಒಬ್ಬ ಸ್ಪರ್ಧಿಗೆ ಬರೋಬ್ಬರಿ 37 ಕೋಟಿ ವೋಟ್‌ಗಳು ಈವರೆಗೆ ದಾಖಲಾಗಿವೆ ಎಂದು ಸುದೀಪ್ ಅಂಕಿಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಈ ಮಾತು ಕೇಳುತ್ತಿದ್ದಂತೆಯೇ ಮನೆ ಒಳಗಿರುವವರಿಗೂ, ಹೊರಗಿರುವ ಅಭಿಮಾನಿಗಳಿಗೂ ಶಾಕ್ ಆಗಿದೆ.

ಇಬ್ಬರ ನಡುವೆ ಫೈಟ್ ಪಕ್ಕಾ
ಇಲ್ಲಿಗೇ ಟ್ವಿಸ್ಟ್ ಮುಗಿಯಲ್ಲ! ಈ ಬಾರಿ ಇಬ್ಬರು ಸ್ಪರ್ಧಿಗಳಿಗೆ ಅತಿ ಹೆಚ್ಚು ವೋಟ್‌ಗಳು ಬಂದಿದ್ದು, ಅವರಿಬ್ಬರ ನಡುವಿನ ಮತಗಳ ಅಂತರವೂ ಅತೀ ಕಡಿಮೆ ಎಂದು ಹೇಳುವ ಮೂಲಕ ಸುದೀಪ್ ಫಿನಾಲೆಗೆ ಭಾರೀ ತಿರುವು ನೀಡಿದ್ದಾರೆ. ಅಂದರೆ, ಕೊನೆಯ ಕ್ಷಣದವರೆಗೆ ಯಾರು ಟ್ರೋಫಿ ಹಿಡಿಯುತ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಈ ಅಂಕಿಅಂಶಗಳನ್ನು ಕೇಳಿ ಫಿನಾಲೆಗೆ ಪ್ರವೇಶಿಸಿರುವ ಗಿಲ್ಲಿ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ರಘು ಮತ್ತು ಧನುಷ್ ಗೌಡ ಎಲ್ಲರೂ ಅಚ್ಚರಿಗೊಂಡರು. ಕೆಲವರ ಮುಖದಲ್ಲಿ ಆತ್ಮವಿಶ್ವಾಸ, ಕೆಲವರಲ್ಲಿ ಕುತೂಹಲ, ಇನ್ನೂ ಕೆಲವರಲ್ಲಿ ನರ್ವಸ್, ನಗು ಎಲ್ಲವೂ ಕಾಣಿಸಿಕೊಂಡಿತು. ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯೊಳಗೆ ಫಿನಾಲೆಯ ಉತ್ಸಾಹವಂತೂ ಹೆಚ್ಚಾಗಿದೆ.
37+ ಕೋಟಿ ವೋಟುಗಳು!!!
— Colors Kannada (@ColorsKannada) January 17, 2026
ಬಿಗ್ ಬಾಸ್ | ಪ್ರೀ ಗ್ರಾಂಡ್ ಫಿನಾಲೆ, ಇಂದು ರಾತ್ರಿ 9#BiggBossKannada12 #BBK12 #ಪ್ರೀಗ್ರಾಂಡ್ಫಿನಾಲೆ #PreGrandFinale #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKPromo pic.twitter.com/IEBFPS5yun
ಈ ಅಂಕಿಅಂಶಗಳು ನಿನ್ನೆವರೆಗಿನ ವೋಟಿಂಗ್ ಮಾಹಿತಿ ಮಾತ್ರವಾಗಿದ್ದು, ಭಾನುವಾರ ನಡೆಯಲಿರುವ ಫಿನಾಲೆ ವೇಳೆಗೆ ವೋಟ್ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಭಿಮಾನಿಗಳ ಬೆಂಬಲ, ಸೋಷಿಯಲ್ ಮೀಡಿಯಾ ಹವಾ, ಕೊನೆಯ ಕ್ಷಣದ ವೋಟಿಂಗ್ ಎಲ್ಲವೂ ಸೇರಿ ಬಿಗ್‌ಬಾಸ್ ಸೀಸನ್-12 ಫಿನಾಲೆಯನ್ನು ಅತೀ ರೋಚಕವನ್ನಾಗಿಸಿದೆ.
ಬಿಗ್‌ಬಾಸ್ ಕನ್ನಡ ಸೀಸನ್-12 ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದು, ಇದೀಗ ವೋಟಿಂಗ್ ವಿಚಾರದಲ್ಲಿ ಇಡೀ ಟೆಲಿವಿಷನ್ ಲೋಕವೇ ಬೆರಗಾಗುವ ಹಂತಕ್ಕೆ ತಲುಪಿದೆ. ಕಳೆದ ಎಲ್ಲ ಸೀಸನ್‌ಗಳ ದಾಖಲೆಗಳನ್ನು ಮುರಿದಿರುವ ಈ ಬಾರಿ ವೋಟಿಂಗ್ ಪ್ರಮಾಣ, ಫಿನಾಲೆಗೂ ಮುನ್ನವೇ ಅಭಿಮಾನಿಗಳ ಕುತೂಹಲವನ್ನು ಗಗನಕ್ಕೇರಿಸಿದೆ.
ಸುದೀಪ್ ಅವರು ಇನ್ನೊಂದು ಮಹತ್ವದ ಟ್ವಿಸ್ಟ್ ಕೂಡ ನೀಡಿದ್ದು, ಈ ಬಾರಿ ಇಬ್ಬರು ಸ್ಪರ್ಧಿಗಳಿಗೆ ಅತಿ ಹೆಚ್ಚು ವೋಟ್‌ಗಳು ಬಂದಿವೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ಇಬ್ಬರ ನಡುವಿನ ಮತಗಳ ಅಂತರವೂ ಅತ್ಯಂತ ಕಡಿಮೆ ಎಂದು ಹೇಳುವ ಮೂಲಕ ಫಿನಾಲೆಯನ್ನು ಸಂಪೂರ್ಣವಾಗಿ ಓಪನ್ ಮಾಡಿದ್ದಾರೆ. ಅಂದರೆ, ಕೊನೆಯ ಕ್ಷಣದಲ್ಲಿ ಒಂದು ವೋಟ್ ಕೂಡ ಫಲಿತಾಂಶವನ್ನು ತಿರುವುಮಾಡುವಷ್ಟು ಪೈಪೋಟಿ ನಡೆಯುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆ.
ಈಗ ಎಲ್ಲರನ್ನೂ ಕಾಡುತ್ತಿರುವ ಒಂದೇ ಪ್ರಶ್ನೆ ಎಂದರೆ, 37 ಕೋಟಿ ವೋಟ್ ಪಡೆದ ಆ ಸ್ಪರ್ಧಿ ಯಾರು? ಅತಿ ಕಡಿಮೆ ಅಂತರದಲ್ಲಿ ಪೈಪೋಟಿ ನೀಡುತ್ತಿರುವ ಇನ್ನೊಬ್ಬರು ಯಾರು? ಎಂಬುದಾಗಿದೆ. ಉತ್ತರಕ್ಕೆ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗಾಗಿ ಇನ್ನೇನು ಕಣ್ಣು ಹಾಯಿಸಿ ಕಾಯಬೇಕಷ್ಟೇ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications