Bigg Boss Finale Ticket: ಒಬ್ಬರಿಗೆ ಡೈರೆಕ್ಟ್‌ ಫಿನಾಲೆ ಟಿಕೆಟ್‌; ಕಿಚ್ಚ ಸುದೀಪ್ ಬಿಗ್‌ ಸರ್ಪೈಸ್‌ ಕೊಟ್ಟಿದ್ಯಾರಿಗೆ?

Bigg Boss Finale Ticket: ಬಿಗ್ ಬಾಸ್ ಕನ್ನಡ 11 ಸೀಸನ್‌ನಲ್ಲಿ ಭಾನುವಾರವೂ ಕೂಡ ಯಾವುದೇ ಎಲಿಮಿನೇಷನ್‌‌ ಇರಲಿಲ್ಲ. ಆದರೆ, ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಸುದೀಪ್‌ ಅವರು ದೊಡ್ಡ ಅನೌನ್ಸ್‌ಮೆಂಟ್ ಮಾಡಿದ್ದಾರೆ. ಒಬ್ಬ ಸ್ಪರ್ಧಿ ಮಾತ್ರ ಫಿನಾಲೆವರೆಗೂ ಯಾವುದೇ ಟೆಂಕ್ಷನ್‌ ಇಲ್ಲದೆ ಆಟ ಆಡಬಹುದು. ಹಾಗಾದರೆ ಯಾರು ಆ ಸ್ಪರ್ಧಿ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ

ಭಾನುವಾರದ ವೀಕೆಂಟ್‌ ಎಪಿಸೋಡ್‌ನಲ್ಲಿ ಜೋಕರ್‌ ಯಾರು? ಕಾಂಪಿಟೇಟರ್‌ ಯಾರು? ಹಾಗೂ ಡೇಂಜರ್ ಯಾರು ಎನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಮನೆಯ ಬಹುತೇಕ ಮಂದಿ ಚೈತ್ರಾ ಕುಂದಾಪುರ್‌ ಅವರಿಗೆ ಜೋಕರ್‌ ಪಟ್ಟ ಕೊಟ್ಟರೆ, ಇನ್ನು ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಸಖತ್‌ ಸೌಂಡ್‌ ಮಾಡುತ್ತಿರುವ ರಜತ್‌ ಅವರಿಗೆ ಡೇಂಜರ್, ಕಾಂಪಿಟೇಟರ್‌ ಎನ್ನುವ ಪಟ್ಟವನ್ನು ಕೊಟ್ಟಿದ್ದಾರೆ.

Bigg Boss Kannada 11 Season Direct Ticket to Finale for One Contestant Kiccha Sudeep Big Surprise

ಈ ಸ್ಪರ್ಧೆ ವೇಳೆ ರಜತ್‌ ಚೈತ್ರಾಗೆ ಜೋಕರ್ ಎನ್ನುವ ಪಟ್ಟವನ್ನು ಕೊಟ್ಟಿದ್ದಲ್ಲದೆ, ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಜೋಕರ್ ಚೈತ್ರಾ ಎಂದು ಹೇಳುವ ಮೂಲಕ ಅವರು ಬಿಗ್‌ ಬಾಸ್‌ ಮನೆಗೆ ಬಂದು ವಾರ ವಾರಗಳನ್ನು ಕಳೆದಿದ್ದಾರೆ. ಇಷ್ಟು ದಿನ ಅವರು ಸಂಪಾದನೆ ಮಾಡಿರೋದು ಇಷ್ಟು. ಅದಕ್ಕೆ ಅವರನ್ನು ಜೋಕರ್ ಥರಾ ನೋಡುತ್ತಿದ್ದೇನೆ ಎಂದು ಹೇಳುತ್ತಾರೆ.

ಬಳಿಕ ಪ್ರತಿಕ್ರಿಯಿಸಿದ ಚೈತ್ರಾ ಕುಂದಾಪುರ ಅವರು, ಜೋಕರ್ ಆಸ್ಕರ್ ಗೆದ್ದಿರುವ ಕಥೆ ನಾನು ಕೇಳಿದ್ದೇನೆ. ಆದ್ದರಿಂದ ಇವರುಗಳ ಅಭಿಪ್ರಾಯವೇನು ನನಗೆ ದೊಡ್ಡದು ಅನ್ನಿಸುವುದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಜತ್,‌ ಆಸ್ಕರ್ ಪ್ರಶಸ್ತಿಯನ್ನು ಚೈತ್ರಾ ಅವರೇ ಗೆದ್ದುಕೊಳ್ಳಲಿ. ನಾನು ಬಿಗ್ ಬಾಸ್‌ ಕಪ್‌ ತೆಗೆದುಕೊಂಡು ಮನೆಗೆ ಹೋಗುತ್ತೇನೆ ಸರ್‌ ಎಂದು ಹೇಳುತ್ತಾರೆ. ಆಗ ಕಿಚ್ ಸುದೀಪ್‌ ಫಿದಾ ಆಗಿ ನುಸು ನಗುತ್ತಾರೆ.

ಬಿಗ್‌ ಬಾಸ್‌ ಕನ್ನಡ 11ನೇ ಸೀಸನ್‌ ಮುಗಿಯಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಇನ್ನು ನಿನ್ನೆಯ ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು, ಮುಂದಿನ ವಾರ ಫಿನಾಲೆಗೆ ಬರಲಿರುವ ಸ್ಪರ್ಧಿ ಬಗ್ಗೆ ಹೇಳುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದ್ದಾರೆ. ಇದೇ ವೇಳೆ ಎಲ್ಲಾರೂ ಉತ್ತಮವಾಗಿ ಬಿಗ್ ಬಾಸ್‌ ಮನೆಯನ್ನು ಬಳಸಿಕೊಳ್ಳಿ ಎಂದು ಸ್ಪರ್ಧಿಗಳಿಗೆ ಕಿವಿಮಾತು ಹೇಳುವ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ. ಹಾಗಾದರೆ, ಮುಂದಿನ ವಾರ ಯಾರು ನೇರವಾಗಿ ಫಿನಾಲೆಗೆ ಹೋಗುತ್ತಾರೆ ಎಂಬುದೇ ಇದೀಗ ವೀಕ್ಷಕರಲ್ಲಿ ಮೂಡಿರುವ ಪ್ರಶ್ನೆಯಾಗಿದೆ.

ಮುಂದಿನ ವಾರದಿಂದ ಬಿಗ್‌ ಬಾಸ್‌ ಮನೆಯಲ್ಲಿ ಆಟ ಇನ್ನೂ ಟಫ್‌ ಆಗಿರಲಿದೆ. ಅಲ್ಲದೆ, ಒಬ್ಬರಿಗೆ ಟಿಕೆಟ್‌ ಟು ಫಿನಾಲೆ ಸಿಗಲಿದೆ. ಅಂದರೆ, ಒಬ್ಬರಿಗೆ ಮಾತ್ರ ಫಿನಾಲೆಗೆ ನೇರವಾಗಿ ಹೋಗಬಹುದುದಾಗಿದೆ ಎಂದು ದೊಡ್ಡ ಅನೌನ್ಸ್‌ಮೆಂಟ್‌ ಮಾಡುವ ಮೂಲಕ ಕಿಚ್ಚ ಸುದೀಪ್‌ ಅವರು ಇದೀಗ ಕುತೂಹಲ ಸೃಷ್ಟಿಸಿದ್ದಾರೆ.

ಇದೀಗ ರಜತ್‌, ತ್ರಿವಿಕ್ರಂ, ಉಗ್ರಂ ಮಂಜು ಹಾಗೂ ರಜತ್‌ ಟ್ರೋಪಿ ಗೆಲ್ಲಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಹನುಮಂತು ಕೂಡ ಉತ್ತಮ ಆಟ ಆಡುವ ಮೂಲಕ ಪ್ರೇಕ್ಷಕೆ ಮನಸ್ಸನ್ನ ಗೆದ್ದಿದ್ದಾರೆ. ಈ ನಡುವೆಯೇ ಹನುಮಂತು ಮನೆಯಿಂದ ಆಚೆ ಬರುತ್ತೇನೆ ಎಂದು ಧನರಾಜ್‌ ಜೊತೆ ಹೇಳಿಕೊಂಡಿರುವ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ. ಬಿಗ್‌ ಬಾಸ್‌​ ಸೀಸನ್ 11ನೇ ಸೀಸನ್‌ 2024 ಸೆಪ್ಟೆಂಬರ್ 11ರಂದು ಆರಭವಾಗಿತ್ತು. ಇನ್ನು ಫಿನಾಲೆಗೆ ಇನ್ನೂ 3 ವಾರಗಳಷ್ಟೇ ಬಾಕಿಯಿವೆ. ಹಾಗಾದರೆ ಫಿನಾಲೆಗೆ ಯಾರು ಎಂಟ್ರಿ ಕೊಡಲಿದ್ದಾರೆ ಎಂದು ಮುಂದಿನ ವಾರದ ಎಫಿಸೋಡ್‌ವರೆಗೂ ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+