Hanumantha: ಗುಟ್ಟಾಗಿ ಮದುವೆಯಾಗಿದ್ದ ಹನುಮಂತ? ತಂದೆ ಶಾಕಿಂಗ್ ಹೇಳಿಕೆ
'ತಂದೆ-ತಾಯಿ, ಅಣ್ಣ, ತಮ್ಮ, ಬಂಧು ಬಳಗ ಎಲ್ಲರೂ ಇದ್ದರೂ ಕೂಡ ನಮಗೆ ಗೊತ್ತಿಲ್ಲದಂತೆ ಹನುಮಂತ ಮದುವೆ ಆಗಿದ್ದ. ಇದನ್ನು ಕೇಳಿ ನಮಗೆಲ್ಲಾ ಸಿಡಿಲು ಬಡಿದಂತಾಗಿತ್ತು. ಏನು ಮಾಡೋದು ಅಂತ ದಿಕ್ಕು ತೋಚದಂತಾಗಿತ್ತು. ಹನುಮಂತನ ಗೆಳೆಯರ ಮಾತು ಕೇಳಿ ನನಗೆ ನನ್ನ ಹೆಂಡತಿಗೆ ಶಾಕ್ ಆಗಿತ್ತು' ಎಂದು ಬಿಗ್‌ಬಾಸ್ ವಿನ್ನರ್ ಹನುಮಂತ ಅವರ ತಂದೆ ಹೇಳಿದ್ದಾರೆ. ಹಾಗಾದರೆ ಬಿಗ್‌ಬಾಸ್ ವಿನ್ನರ್ ಹನುಮಂತನಿಗೆ ಈ ಮೊದಲೇ ಮದುವೆ ಆಗಿತ್ತಾ?
ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತನ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಷಯವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಸಂದರ್ಶನವೊಂದರಲ್ಲಿ ಹನುಮಂತನ ತಂದೆ ಹೇಳಿದ ಮಾತು ಕೇಳಿ ಜನ ಶಾಕ್ ಆಗಿದ್ದಾರೆ. ಹಾಗಾದರೆ ಗುಟ್ಟಾಗಿ ಮದುವೆ ಆಗಿದ್ದರಾ ಹನುಮಂತ? ಏನಿದು ಕತೆ?

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ವೈರಲ್
ಹನುಮಂತ ಗುಟ್ಟಾಗಿ ಮದುವೆ ಆಗಿದ್ದಾನೆ ಎನ್ನುವ ಸುದ್ದಿಗಳು ಅಲ್ಲಲ್ಲಿ ಹರಿದಾಡುತ್ತಿವೆ. ಇದೇ ಸುದ್ದಿಯನ್ನ ಕೆಲ ಜನ ಹನುಮಂತನ ಪೋಷಕರಿಗೂ ಮುಟ್ಟಿಸಿದ್ದಾರೆ. ಇದನ್ನ ಕೇಳಿ ಹನುಮಂತನ ಪೋಷಕರು ಬೆಚ್ಚಿ ಬಿದ್ದಿದ್ದಾರೆ. ಬಂಧು ಬಳಗ, ಎಲ್ಲರನ್ನು ಬಿಟ್ಟು ಹನುಮಂತ ಹೇಗೆ ಮದುವೆ ಆದ? ಸಂಬಂಧಿಕರಿಗೆ ಏನಂತ ಹೇಳೋದು ಅನ್ನೋ ಚಿಂತೆ ಪೋಷಕರಿಗೆ ಶುರುವಾಗಿತ್ತು. ಆದರೆ ಹನುಮಂತನ ಗೆಳೆಯರು ಮನೆ ಬಾಗಿಲಿಗೆ ಬಂದು ಪೋಷಕರಿಗೆ ತಿಳಿ ಹೇಳಿದಾಗ ಹನುಮಂತ ತಪ್ಪು ಮಾಡಿಲ್ಲ ಎನ್ನುವುದು ಗೊತ್ತಾಗಿದೆ. ಈ ಮಾತನ್ನು ಕೇಳಿ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹೌದು... ಬಿಗ್‌ಬಾಸ್ ವಿನ್ನರ್ ಹನುಮಂತನಿಗೆ ಇನ್ನೂ ಕೂಡ ಮದುವೆ ಆಗಿಲ್ಲ. ಆದರೆ ಅವರಿಗೆ ಅತ್ತೆ ಮಗಳು ಇದ್ದಾಳೆ, ಅವರಿಗೆ ಪ್ರೇಯಸಿ ಇದ್ದಾಳೆ, ಅವರಿಗೆ ಮದುವೆ ಆಗಿದೆ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಈ ಬಗ್ಗೆ ಹನುಮಂತ, ಪೋಷಕರಿಗೆ ಈ ಎಲ್ಲಾ ಸುದ್ದಿಗಳು ಸುಳ್ಳು ಸುದ್ದಿ. ಈ ರೀತಿ ಯಾವುದೂ ಕೂಡ ನಡೆದಿಲ್ಲ. ನಾನು ಯಾರನ್ನೂ ಮದುವೆ ಆಗಿಲ್ಲ, ಯಾರನ್ನೂ ಪ್ರೀತಿಸುತ್ತಿಲ್ಲ, ನನಗೆ ಯಾರೂ ಪ್ರೇಯಸಿ ಕೂಡ ಇಲ್ಲ. ನೀವು ಭಯ ಪಡಬೇಡಿ' ಎಂದು ಹೇಳಿದ್ದಾರೆ. ಹನುಮಂತನ ಮಾತು ಕೇಳಿ ಪೋಷಕರಿಗೆ ಜೀವ ಬಂದಂತಾಗಿದೆ.
ಹಳ್ಳಿ ಹುಡುಗನ ಮೇಲೆ ಹೆಚ್ಚಾದ ಪ್ರೀತಿ
ಹನುಮಂತ ಹಾವೇರಿಯ ಪುಟ್ಟ ಹಳ್ಳಿಯಲ್ಲಿ ಕುರಿಗಾಯಿ. ಹಾಡು ಹೇಳುತ್ತಾ ಹನುಮಂತನ ದೇವಸ್ಥಾನದಲ್ಲಿ ಶನಿವಾರದ ದಿನ ಭಜನೆ ಮಾಡಿಕೊಂಡು, ಕುರಿ ಕಾಯುತ್ತ ಇದ್ದ ಹುಡುಗ. ಆದರೀಗ ಈ ಹುಡುಗನ ಸರಳತೆ ಹಾಗೂ ಮುಗ್ಧತೆಗೆ ತಲೆ ಬಾಗದವರೇ ಇಲ್ಲ. ಹನುಮಂತ ಪುಟ್ಟ ಮಕ್ಕಳು ಶಾಲೆಯಲ್ಲಿ ಕೈ ಕಟ್ಟಿ ನಿಲ್ಲೋ ರೀತಿ ನಿಲ್ಲೋದನ್ನು ನೋಡಿದರೆ ಯಾರಿಗೆ ತಾನೆ ಇವರ ಮೇಲೆ ಪ್ರೀತಿ ಹುಟ್ಟುವುದಿಲ್ಲ ಹೇಳಿ?
ಬಿಗ್‌ಬಾಸ್ ಮನೆಯಲ್ಲಿ ಐದು ಕೋಟಿಗೂ ಹೆಚ್ಚು ಜನರ ಮನ ಗೆದ್ದ ಹನುಮಂತನದ್ದು ಮುಗ್ಧ ಮನಸ್ಸು. ಅಹಂಕಾರ ಇಲ್ಲ, ದ್ವೇಷ ಇಲ್ಲ, ಜಗಳ ಇಲ್ಲ, ತಳುಕು ಬಳಕು ಬಣ್ಣದ ಜಗತ್ತಿನತ್ತ ಹೋದವನೇ ಅಲ್ಲ. ಇದ್ಯಾವುದೂ ಕೂಡ ಇಲ್ಲದೆ ಹನುಮಂತ ಬಿಗ್‌ಬಾಸ್ ಮನೆಯಲ್ಲಿ ಗೆದ್ದು ಕಪ್ ತನ್ನದಾಗಿಸಿಕೊಂಡಿದ್ದಾರೆ.
ಜನ ಮೆಚ್ಚಿದ ಈ ಹುಡುಗನಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಹನುಮಂತನನ್ನು ಜನ ಕೊಂಡಾಡುತ್ತಿದ್ದಾರೆ. ಹನುಮಂತನ ಮೇಲೆ ಸಿಕ್ಕಾಪಟ್ಟೆ ಪ್ರೀತಿ ತೋರಿಸುತ್ತಿದ್ದಾರೆ. ಬಿಗ್‌ಬಾಸ್ ಬಳಿಕ ಪ್ರಸ್ತುತ ಹನುಮಂತ ಗರ್ಲ್ಸ್ vs ಬಾಯ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಅಲ್ಲೂ ಕೂಡ ಅವರು ಹೊಡೆಯುವ ಡೈಲಾಗ್‌ಗಳು ಜನರಿಗೆ ಇಷ್ಟವಾಗುತ್ತಿವೆ.












Click it and Unblock the Notifications