Bigg Boss: ರಜತ್ ಮೋಸದ ಆಟಕ್ಕೆ ಚಾಲೆಂಜ್ ಮಾಡಿ ಫಿನಾಲೆ ಟಿಕೆಟ್ ಪಡೆದ ಹನುಮಂತ
ಹನುಮಂತ ಅವರಿಗೆ ಟಿಕೆಟ್ ಟು ಫಿನಾಲೆಗೆ ಟಿಕೆಟ್ ಸಿಕ್ಕಿದೆ. ಬುಧವಾರ ಬಿಗ್‌ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಇನ್ನೇನು ಹನುಮಂತ ಗೆದ್ದುಬಿಡ್ತಾರೆ ಅಂದುಕೊಳ್ಳುವ ಹೊತ್ತಿನಲ್ಲಿ ರಜತ್ ಮಾಡಿದ ಕುತಂತ್ರದಿಂದ ಹನುಮಂತ ಸೋಲನ್ನು ಅನುಭವಿಸಬೇಕಾಯಿತು. ರಜತ್ ಅವರು ಹನುಮಂತ ಅವರ ಕೈಗೆ ಹೆಚ್ಚು ಮರಳಿನ ಮೂಟೆ ಹಾಕಿದ್ದರಿಂದ ಹನುಮಂತ ಸೋಲನ್ನು ಅನುಭವಿಸಬೇಕಾಯಿತು. ಇದರಿಂದ ತ್ರಿವಿಕ್ರಮ್ ಅವರು ಜಯ ಗಳಿಸಿದರು. ಈ ವೇಳೆ ರಜತ್ ಹಾಗೂ ತ್ರಿವಿಕ್ರಮ್ ಮಾತ್ರ ಫಿನಾಲೆಗೆ ಆಯ್ಕೆ ಆಗಿದ್ದರು. ಬಳಿಕ ಗುರುವಾರ ನೀಡಿದ ಟಾಸ್ಕ್‌ನಲ್ಲಿ ಹನುಮಂತ ಆಡಿ ಗೆದ್ದು ಫಿನಾಲೆ ಟಿಕೆಟ್ ಪಡೆದಿದ್ದಾರೆ.
ಹೌದು... ಬಿಗ್‌ಬಾಸ್ ಮನೆಯಲ್ಲಿ ಫಿನಾಲೆ ತಲುಪಲು ತ್ರಿವಿಕ್ರಮ್, ರಜತ್ ಹಾಗೂ ಹನುಮಂತ ಬ್ಲೂ ಬೆಲ್ಟ್ ಪಡೆದುಕೊಂಡಿದ್ದಾರೆ. ಇನ್ನೂ ಉಳಿದಂತೆ ಚೈತ್ರಾ, ಧನ್‌ರಾಜ್ ಇಬ್ಬರೂ ಕೂಡ ಫಿನಾಲೆ ಟಿಕೆಟ್ ಪಡೆಯುವ ಟಾಸ್ಕ್‌ನಿಂದ ಹಿಂದೆ ಉಳಿದಿದ್ದಾರೆ. ಇನ್ನೂ ಉಳಿದಿರುವ ಮೋಕ್ಷಿತಾ, ಭವ್ಯಾ ಗೌಡ, ಮಂಜು, ಗೌತಮಿ ಇವರಲ್ಲಿ ಫಿನಾಲೆ ಟಿಕೆಟ್ ಟಾಸ್ಕ್ ಆಡಿ ಮಂಜು ಹಾಗೂ ಗೌತಮಿ ಸೋಲುತ್ತಾರೆ. ಈ ನಾಲ್ವರಲ್ಲಿ ಗೆದ್ದ ಮೋಕ್ಷಿತಾ ಹಾಗೂ ಭವ್ಯಾ ಇಬ್ಬರ ನಡುವೆ ಭವ್ಯಾ ಬ್ಲ್ಯೂ ಬೆಲ್ಟ್ ಧರಿಸುತ್ತಾರೆ.

ಆದರೆ ಫಿನಾಲೆಗೆ ಯಾರೇ ಬಂದರೂ ಕೂಡ ಇಲ್ಲಿ ಹನುಮಂತ ಅವರನ್ನು ಟಾರ್ಗೇಟ್ ಮಾಡುತ್ತಾರೆ ಅನ್ನೋದು ಮಾತ್ರ ಪಕ್ಕಾ. ಯಾಕೆಂದರೆ ರಜತ್ ಮತ್ತು ತ್ರಿವಿಕ್ರಮ್ ಒಳ್ಳೆಯ ಸ್ನೇಹಿತರ ರೀತಿ ಆಡ್ತಾಯಿದ್ದಾರೆ. ಒಬ್ಬರನ್ನೊಬ್ಬರು ಬಿಟ್ಟು ಕೊಡದ ರೀತಿ ಆಡ್ತಾಯಿದ್ದಾರೆ. ವಿಶೇಷವಾಗಿ ರಜತ್ ಕುತಂತ್ರದ ಆಟಗಳನ್ನು ಆಡ್ತಾಯಿರೋದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಹೀಗಾಗಿ ಮುಂದಿನ ದಿನ ಫಿನಾಲೆ ಟಿಕೆಟ್ ಯಾರೇ ಪಡೆದರೂ ಕೂಡ ಹನುಮಂತ ಟಾರ್ಗೇಟ್ ಆಗೋದು ಗ್ಯಾರಂಟಿ. ಕಪ್ ಮಾತ್ರ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಹೀಗಾಗಿ ಮುಂದಿನ ಆಟ ಮಾತ್ರ ಹನುಮಂತುಗೆ ತುಂಬಾ ಕಷ್ಟಕರವಾಗಿರುವುದು ಮಾತ್ರ ಸುಳ್ಳಲ್ಲ. ಈ ಎಲ್ಲಾ ಸಂದರ್ಭಗಳನ್ನು ಹನುಮಂತ ಹೇಗೆ ನಿಭಾಯಿಸುತ್ತಾರೆ ಅನ್ನೋದು ಕೂತೂಹಲ ಮೂಡಿಸಿದೆ.
ಬಿಗ್‌ಬಾಸ್ ಮನೆಯಲ್ಲಿ ನೇರವಾಗಿ ಫಿನಾಲೆ ತಲುಪಲು ಟಿಕೆಟ್ ಟು ಫಿನಾಲೆ ತುಂಬಾ ಮುಖ್ಯವಾಗಿದೆ. ಸದ್ಯ ಈ ಟಿಕೆಟ್ ಟು ಫಿನಾಲೆ ಟಾಸ್ಕ್‌ನ ಸರಣಿ ಆಟಗಳು ಮುಕ್ತಾಯವಾಗಿದ್ದು ಕೊನೆಯ ಟಾಸ್ಕ್‌ನಲ್ಲಿ ಮನೆಯ ಕೆಲ ಸ್ಪರ್ಧಿಗಳು ಜಯ ಗಳಿಸಿದ್ದಾರೆ. ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಎಲ್ಲರೂ ತುಂಬಾ ಚೆನ್ನಾಗಿ ಆಡಿದರು. ನಾಲ್ಕು ಜನ ಟಿಕೆಟ್ ಟು ಫಿನಾಲೆಗೆ ಸೆಲೆಕ್ಟ್ ಕೂಡ ಆಗಿದ್ದಾರೆ.
ಟಿಕೆಟ್ ಟು ಫಿನಾಲೆಗೆ ರಜತ್, ತ್ರಿವಿಕ್ರಮ್, ಹನುಮಂತ, ಭವ್ಯಾ ಗೌಡ ಸೆಲೆಕ್ಟ್ ಆಗಿದ್ದಾರೆ. ಇಲ್ಲಿ ಹನುಮಂತು ತಂಡದಿಂದ ಮೂರು ಜನ ಸದಸ್ಯರು ಆಯ್ಕೆ ಆಗಿದ್ದಾರೆ. ಧನ್‌ರಾಜ್ ಅವರ ತಂಡದಿಂದ ಯಾರೂ ಕೂಡ ಆಯ್ಕೆ ಆಗಿಲ್ಲ. ಇನ್ನೂ ಆಯ್ಕೆ ಆಗಿರುವ ಈ ನಾಲ್ಕು ಜನರಿಗೆ ಒಂದು ಟಾಸ್ಕ್ ಅನ್ನು ನೀಡಲಾಗುತ್ತದೆ. ಈ ಟಾಸ್ಕ್‌ನಲ್ಲಿ ಎಲ್ಲರೂ ಕೂಡ ತುಂಬಾ ಚೆನ್ನಾಗಿ ಆಟ ಆಡಿದ್ದಾರೆ ಎನ್ನುವ ಮಾಹಿತಿ ಇದೆ.
ಈಗಿರುವ ಮಾಹಿತಿ ಪ್ರಕಾರ ರಜತ್ ಹಾಗೂ ತ್ರಿವಿಕ್ರಮ್ ಅವರು ಈ ಟಾಸ್ಕ ಆಡಿ ಗೆದ್ದಿದ್ದಾರೆ ಎನ್ನುವ ಮಾಹಿತಿ ಇದೆ. ಇವರಿಬ್ಬರಲ್ಲಿ ರಜತ್ ಜಯ ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇದರ ಬಗ್ಗೆ ಇನ್ನೂ ಕೂಡ ನಿಖರತೆ ಇಲ್ಲ. ಒಟ್ಟಿನಲ್ಲಿ ಈ ಬಾರಿ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಯಾರೆಲ್ಲಾ ವೇದಿಕೆ ಮೇಲೆ ಇರಲಿದ್ದಾರೆ ಅನ್ನೋ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.












Click it and Unblock the Notifications