Bigg Boss Rajath: ಮಾಜಿ ಗೆಳತಿ ಜೊತೆಗಿನ ರಜತ್ ಫೋಟೋ ವೈರಲ್ ಮಾಡಿದ ಆ ಹುಡುಗಿ ಯಾರು?
ಬಿಗ್ ಬಾಸ್ ಕನ್ನಡ ಸೀಜನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಶೋ ಅರ್ಧದಲ್ಲಿ ಬಂದಿದ್ದ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಸೆಕೆಂಡ್ ರನ್ನರ್ ಅಪ್ ಪಟ್ಟ ಪಡೆದು ಕರ್ನಾಕಟದ ಜನರ ಮನಸ್ಸು ಗೆದ್ದಿದ್ದಾರೆ. ನೇರ ಮಾತು, ಮನೋರಂಜನೆ, ಕಾಳಜಿ, ತಮಾಷೆಯೇ ರಜತ್ ಅಸ್ತ್ರವಾಗಿತ್ತು. ರಜತ್ ಒಂದು ಕಾರ್ಯಕ್ರಮಕ್ಕೆ ಅದರಲ್ಲೂ ಬಿಗ್ ಬಾಸ್‌ನಂತಹ ಕಾರ್ಯಕ್ರಮಕ್ಕೆ ಕಂಪ್ಲೀಟ್ ಪ್ಯಾಕೇಜ್ ರೀತಿ ಇದ್ದರು. ಅಸಲಿಗೆ ಬಿಗ್ ಬಾಸ್ ಕನ್ನಡ ಸೀಜನ್ 11ರ ಗೇಮ್ ಚೇಂಜರ್ ಖ್ಯಾತಿ ಕೂಡ ರಜತ್‌ಗೆ ಸಲ್ಲಬೇಕು.
ಬಿಗ್ ಬಾಸ್ ಮನೆಯೊಳಗೆ ಹೇಗಿದ್ದರೋ ರಜತ್ ಹೊರ ಬಂದ ಮೇಲೂ ಅದೇ ನೇರ ಮಾತು. ಇದೀಗ ರಜತ್ ಸಂದರ್ಶನಗಳಲ್ಲಿ ಬ್ಯೂಸಿಯಾಗಿದ್ದು, ಅವರು ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಹೊರಗಡೆ ಮಾಜಿ ಗೆಳತಿ ಜೊತೆಗಿನ ಫೋಟೋ ವೈರಲ್ ಆದ ಬಗ್ಗೆ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಬರುತ್ತಿದ್ದಂತೆ ಈ ಪ್ರಶ್ನೆಗೆ ಉತ್ತರಿಸಿದ್ದ ರಜತ್, 'ಫೋಟೋ ವೈರಲ್ ಮಾಡಿಕೊಳ್ಳಲಿ ಬಿಡಿ. ನಾನು ಬಂದಾಗಿದೆ. ಮುಂದೆ ಏನೆಂದು ನೋಡಿಕೊಳ್ಳುತ್ತೇನೆ' ಎಂದು ಹೇಳಿದ್ದರು .ಅಲ್ಲದೇ ಸುದ್ದಿಗೋಷ್ಠಿಯಲ್ಲೂ 'ನನ್ನ ಹೆಂಡತಿ, ನನ್ನ ಜೀವನ, ನನ್ನ ಮಾಜಿ ಗೆಳತಿ ನಾನು ನೋಡಿಕೊಳ್ಳುತ್ತೇನೆ' ಎಂದು ನೇರವಾಗಿ ಉತ್ತರಿಸಿದ್ದರು.
ಫೋಟೋ ವೈರಲ್ ಆದ ದಿನದಿಂದ ಕಾಡುತ್ತಿರುವ ಪ್ರಶ್ನೆಯೊಂದಕ್ಕೆ ಇದೀಗ ರಜತ್ ಉತ್ತರಿಸಿದ್ದಾರೆ. ರಜತ್ ಹಾಗೂ ಅವರ ಮಾಜಿ ಗೆಳತಿ ಫೋಟೋವನ್ನು ಟ್ರೋಲ್ ಪೇಜ್‌ನಲ್ಲಿ ಅಪ್ಲೋಡ್ ಮಾಡಿರುವುದು ನಿಜ. ಹಾಗಾದರೆ ಆ ಫೋಟೋವನ್ನು ಟ್ರೋಲಿಗರ ಕೈಗೆ ಕೊಟ್ಟಿದ್ಯಾರು? ಆ ಫೋಟೋಗಳು ಬಹಿರಂಗಗೊಂಡಿದ್ದೇಗೆ ಎನ್ನುವ ಪ್ರಶ್ನೆಗೆ ಹಾಗೂ ಒಂದು ಮಾಜಿ ಗೆಳತಿಯೇ ಫೋಟೋಗಳನ್ನು ವೈರಲ್ ಮಾಡಲು ಅನುಮತಿ ನೀಡಿದ್ರಾ ಎನ್ನುವ ಪ್ರಶ್ನೆಗೆ ರಜತ್ ಉತ್ತರಿಸಿದ್ದಾರೆ.

'ಪಾಪ ಆ ಹುಡುಗಿ ಈ ರೀತಿಯಲ್ಲ ಮಾಡುವ ಯೋಚನೆ ಇರುವ ಹುಡುಗಿ ಅಲ್ಲವೇ ಅಲ್ಲ. ಅವಳಿಗೆ ಅವಳದೇ ಆದ ಜವಾಬ್ದಾರಿಗಳಿವೆ. ಅವಳಿಗೂ ಒಂದು ಘನತೆ ಇದೆ. ಈ ರೀತಿ ಅವಳ ಫೋಟೋವನ್ನು ಅವಳೇ ವೈರಲ್ ಮಾಡಿಕೊಳ್ಳುವ ಚೀಪ್ ಮೆಂಟಾಲಿಟಿ ಅವಳಿಗಿಲ್ಲ. ಆದರೆ ಯಾರು ಮಾಡಿದ್ದಾರೆ ಎನ್ನುವುದು ನನಗೆ ಗೊತ್ತು. ಬೇಕಿದ್ದರೆ ಅವರೇ ನನಗೆ ಮೆಸೇಜ್ ಮಾಡಲಿ. ಇನ್ನೂ ಐದು ಫೋಟೋ ಕೊಡುತ್ತೇನೆ. ಅವರು ಪಾಡಿಗೆ ಅವರು ಮಾಡಲಿ, ನನ್ನ ಪಾಡಿಗೆ ಹೇಗೆ ಉತ್ತರ ಕೊಡಬೇಕೋ ಕೊಡುತ್ತೇನೆ' ಎನ್ನುವ ಮೂಲಕ ರಜತ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
'ಇನ್ನು ಈ ರೀತಿ ಮಾಡುವುದರಿಂದ ಆಗುವ ಪರಿಣಾಮದ ಬಗ್ಗೆ ಫೋಟೋ ಕೊಟ್ಟವರು ಹಾಗೂ ಹಾಕಿದವರು ಅರ್ಥ ಮಾಡಿಕೊಳ್ಳಬೇಕು. ಕೊಟ್ಟವಳು ಕೂಡ ಒಂದು ಹೆಣ್ಣು ಮಗಳಾಗಿರುತ್ತಾಳೆ. ಅವಳು ಅದನ್ನು ಯೋಚನೆ ಮಾಡಬೇಕಿತ್ತು. ಆ ರೀತಿಯ ಚೀಪ್ ಮೆಂಟಾಲಿಟಿ ಇರುವವರಿಗೆ ಏನೂ ಹೇಳಲು ಆಗುವುದಿಲ್ಲ' ಎಂದು ರಜತ್ ಟಿವಿ 9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications