Bigg Boss: ಬಿಗ್‌ಬಾಸ್‌ ಫೈನಲಿಸ್ಟ್‌ಗಳ ಹೆಸರು ಲೀಕ್- ಇಲ್ಲಿದೆ ವಿಜೇತರ ಪಟ್ಟಿ

ಬಿಗ್‌ಬಾಸ್‌ ಕನ್ನಡ ಸೀಸನ್ 11 ತುಂಬಾ ಅದ್ಬುತವಾಗಿ ಮೂಡಿ ಬರುತ್ತಿದೆ. ಈ ಬಾರಿಯ ಟಿಆರ್‌ಪಿ ಕೂಡ ಸಿಕ್ಕಾಪಟ್ಟೆ ಚೆನ್ನಾಗಿದೆ. ದಿನ ಕಳೆದಂತೆ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಕೂಡ ಹೆಚ್ಚಾಗಿದೆ. ಗ್ರ್ಯಾಂಡ್ ಫಿನಾಲೆಗೆ ದಿನ ಶುರುವಾಗುತ್ತಿದ್ದು ಯಾರು ಫೈನಲ್ ತಲುಪುತ್ತಾರೆನ್ನುವ ಕುತೂಹಲ ಬಿಗ್ ಬಾಸ್ ವೀಕ್ಷಕರಲ್ಲಿ ಹೆಚ್ಚಾಗಿದೆ. ಈ ನಡುವೆ ಫೈನಲ್‌ಗೆ ಯಾರು ಹೋಗ್ತಾರೆ ಅನ್ನೋ ವಿಚಾರ ಲೀಕ್ ಆಗಿದೆ. ಹಾಗಾದರೆ ಫೈನಲ್ ಹೋಗೋದು ಯಾರು? ಕಪ್ ಹಿಡಿಯೋದು ಯಾರ ಕೈ? ಫೈನಲಿಸ್ಟ್‌ಗಳ ಹೆಸರು ಹಂಚಿಕೊಂಡಿದ್ದು ಯಾರು? ಇದೆಲ್ಲದರ ಬಗ್ಗೆ ಈಗ ತಿಳಿಯೋಣ.

ಬಿಗ್‌ಬಾಸ್‌ನಿಂದ ಕಳೆದ ವಾರ ಆಚೆ ಬಂದ ಶಿಶಿರ್ ಶಾಸ್ತ್ರಿ ಅವರು ಈ ಬಾರಿ ಬಿಗ್‌ಬಾಸ್‌ ಫೈನಲಿಸ್ಟ್ ಯಾರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ಯಾರು ಕಪ್ ಗೆಲ್ತಾರೆ ಅನ್ನೋದನ್ನೂ ಶಿಶಿರ್ ಹೇಳಿಕೊಂಡಿದ್ದಾರೆ. ಹಾಗಾದರೆ ಶಿಶಿರ್ ಹೇಳಿರುವ ಪ್ರಕಾರ ಆ ನಾಲ್ಕು ಜನ ಸ್ಪರ್ಧಿಗಳು ಯಾರು? ಅವರಿಗೆ ಫೈನಲ್‌ಗೆ ಹೋಗಲು ಇರುವ ಕ್ವಾಲಿಟಿ ಏನು? ಎಲ್ಲದರ ಬಗ್ಗೆ ಶಿಶಿರ್ ಏನ್ ಹೇಳಿದ್ದಾರೆ ಎನ್ನುವುದನ್ನು ಈಗ ಗಮನಿಸೋಣ.

bigg boss finalist name leaked - here are the names of the finalists

ಬಿಗ್‌ಬಾಸ್‌ ಕನ್ನಡ ಸೀಸನ್ 11 ಪ್ರಸ್ತುತ 12ನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿಯ ಬಿಗ್‌ಬಾಸ್ ಹಲವಾರು ವಿಷಯಗಳಿಗೆ ಸುದ್ದಿ ಆಗುತ್ತಿದೆ. ಸುದೀಪ್ ಅವರು ಇದೇ ನನ್ನ ಕಡೆಯ ಬಿಗ್‌ಬಾಸ್ ನಿರೂಪಣೆ ಎಂದಿರುವುದು ಅಚ್ಚರಿಯ ವಿಷಯ.

ಇನ್ನೂ ವೈಲ್ಡ್‌ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಅವರು ಅನಾರೋಗ್ಯ ಕಾರಣ ಕೊಟ್ಟು ಮನೆಯಿಂದ ಹೊರಬಂದಿದ್ದಾರೆ. ಇನ್ನೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಸಿಕ್ಕಾಪಟ್ಟೆ ಆಕ್ಟಿವ್ ಮಾಡಿದ್ದಾರೆ. ಇದರ ನಡುವೆ ಕಳೆದ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದ ಶಿಶಿರ್ ಬಿಗ್‌ಬಾಸ್‌ ಫೈನಲಿಸ್ಟ್ ಯಾರು ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ.

ಬಿಗ್‌ಬಾಸ್‌ ಫೈನಲಿಸ್ಟ್‌ಗಳ ಹೆಸರು

ಮೊದಲಿಗೆ ಶಿಶಿರ್ ನಾಲ್ಕು ಜನರ ಹೆಸರು ತೆಗೆದುಕೊಂಡಿದ್ದಾರೆ. ಅವರಲ್ಲಿ ಮೊದಲ ಹೆಸರು ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ ಹಾಗೂ ನಾಲ್ಕನೇ ಫೈನಲಿಸ್ಟ್ ಧನ್‌ರಾಜ್ ಆಗಿರುತ್ತಾರೆ. ಇನ್ನೂ ಸುದೀಪ್ ಅವರ ಕೈಯಲ್ಲಿ ಇಬ್ಬರು ಕೈ ಇರಲು ಮಾತ್ರ ಸಾಧ್ಯ. ಆ ಕೈಗಳೆಂದರೆ ಹನುಮಂತ ಹಾಗೂ ಧನ್‌ರಾಜ್ ಅವರದ್ದು ಎಂದಿದ್ದಾರೆ ಶಿಶಿರ್.

bigg boss finalist name leaked - here are the names of the finalists

ತುಂಬಾ ಜನರ ಪ್ರಕಾರ ತ್ರಿವಿಕ್ರಮ್ ಹಾಗೂ ಉಗ್ರಂ ಮಂಜು ಅವರ ಕೈಗಳನ್ನು ಸುದೀಪ್‌ ಸರ್ ಹಿಡಿದು ಇವರಲ್ಲಿ ಒಬ್ಬರನ್ನು ವಿನ್ನರ್ ಆಗಿ ಘೋಷಣೆ ಮಾಡುತ್ತಾರೆ ಎಂದಿತ್ತು. ಆದರೆ ಶಿಶಿರ್ ಇದಕ್ಕೆ ಠಕ್ಕರ್ ಕೊಡುವಂತೆ ಹನುಮಂತ ಹಾಗೂ ಧನ್‌ರಾಜ್ ಅವರ ಹೆಸರನ್ನು ಹೇಳಿದ್ದಾರೆ. ಶಿಶಿರ್ ಒಳಗಡೆ ಸ್ಪರ್ಧಿಗಳನ್ನು ಹತ್ತಿರದಿಂದ ನೋಡಿ ಹೊರಗಡೆ ಬಂದ ಮೇಲೂ ಜನರ ಒಲವು ಯಾ ಕಡೆಗೆ ಇದೆ ಎನ್ನುವುದರ ಆಧಾರದ ಮೇಲೆ ಫೈನಲಿಸ್ಟ್ ಹೆಸರನ್ನು ಹೇಳಿದ್ದಾರೆ.

ಇನ್ನೂ ಬಿಗ್‌ಬಾಸ್‌ ಮನೆಯಲ್ಲಿ ರಜತ್ ಕೂಡ ಇದ್ದಾರೆ. ಇಡೀ ಬಿಗ್‌ಬಾಸ್‌ ಮನೆಯನ್ನು ಅಲರ್ಟ್ ಮಾಡಿರುವ ರಜತ್ ಅವರು ಕೂಡ ಫೈನಲಿಸ್ಟ್ ಎನ್ನಲಾಗುತ್ತಿದೆ. ಇತ್ತ ತ್ರಿವಿಕ್ರಮ ಹಾಗೂ ಮಂಜು ನಡುವೆ ಭಾರೀ ಪೈಪೋಟಿ ಇದೆ. ಅದೇ ರೀತಿ ಹನುಮಂತ ಹಾಗೂ ಧನ್‌ರಾಜ್‌ ಕೂಡ ಫೈನಲಿಸ್ಟ್ ಆಗುವ ಅರ್ಹತೆ ಹೊಂದಿದ್ದಾರೆ. ಹೀಗಾಗಿ ಇವರುಗಳು ಫೈನಲಿಸ್ಟ್ ಆಗಿರುತ್ತಾರೆ ಎಂದು ಶಿಶಿರ್ ಹೇಳಿದ್ದಾರೆ. ಹಾಗಾದರೆ ಶಿಶಿರ್ ಅವರು ನುಡಿದ ಭವಿಷ್ಯ ನಿಜವಾಗುತ್ತಾ? ಯಾರು ಫಿನಾಲೆಗೆ ಹೋಗಲಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಗೋಲ್ಡ್‌ ಸುರೇಶ್ ಪ್ರಕಾರ ಇವರೇ ಬಿಗ್‌ಬಾಸ್‌ ವಿನ್ನರ್

ಕಳೆದ ವಾರ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಗೋಲ್ಡ್‌ ಸುರೇಶ್ ಈ ಬಾರಿಯ ವಿನ್ನರ್ ಯಾರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಅವರ ಪ್ರಕಾರ ಬಿಗ್‌ಬಾಸ್‌ ಮನೆಯಲ್ಲಿ ಚೆನ್ನಾಗಿ ಆಟ ಆಡುತ್ತಿರುವುದು ಹಾಗೂ ಎಲ್ಲರ ಮೆಚ್ಚುಗೆಯನ್ನು ಪಡೆದಿರುವುದು ಗಾಯಕ ಹನುಮಂತ ಲಮಾಣಿ. ಹನುಮಂತನ ಸರಳತೆ, ಮುಗ್ಧತೆ, ಬುದ್ಧವಂತಿಕೆ ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳಿಗೆ ಮಾತ್ರವಲ್ಲ ವೀಕ್ಷಕರಿಗೂ ಇಷ್ಟವಾಗಿದೆ. ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡರೆ ಮುಂದಿನ ಬಿಗ್‌ಬಾಸ್‌ ವಿನ್ನರ್ ನನ್‌ ಅಳಿಯ ಹನುಮಂತ ಎಂದು ಸುರೇಶ್ ಖುಷಿಯಿಂದ ಹೇಳಿಕೊಂಡಿದ್ದಾರೆ.

ಹನುಮಂತ ಬಿಗ್‌ಬಾಸ್ ವಿನ್ನರ್?

ಹನುಮಂತ ಅವರ ಸರಳತೆಯನ್ನು ಮೆಚ್ಚಿದ ಸಾಮಾನ್ಯ ಜನ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಓಟ್ ಮಾಡುತ್ತಿದ್ದಾರೆ. ಗಾಯಕ ಹನುಮಂತ ಲಮಾಣಿ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ವಿನ್ನರ್ ಎಂದು ಹಲವಾರು ಬಿಗ್‌ಬಾಸ್‌ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಆಟೋ ಚಾಲಕರು, ಹಿರಿಯರು, ರೈತರು, ಗ್ರಾಮೀಣ ಪ್ರದೇಶದಲ್ಲಿ ಬಿಗ್‌ಬಾಸ್‌ ನೋಡುವ ಉತ್ತರ ಕರ್ನಾಟಕದ ಬಹುತೇಕರ ಆಯ್ಕೆ ಹನುಮಂತ ಅವರೇ ಆಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಕೇವಲ ಜಗಳ, ವಾದ, ಹೊಡೆದಾಟ, ದ್ವೇಷ, ಅಂದ ಚಂದ, ಶ್ರೀಮಂತಿಕೆಯಿಂದ ಮಾತ್ರ ಜಯಗಳಿಸಲು ಸಾಧ್ಯವಿಲ್ಲ. ಸರಳತೆ, ಶಾಂತತೆ, ತಾಳ್ಮೆಯಿಂದಲೂ ಆಟ ಆಡಿ ಗೆಲ್ಲಬಹುದು ಅನ್ನೋದಕ್ಕೆ ಹನುಮಂತ ಉದಾಹರಣೆ ಆಗಬೇಕು ಎಂದು ಜನ ಅಭಿಪ್ರಾಯ ಪಟ್ಟಿದ್ದಾರೆ.

ಹನು ಕ್ಯಾಮಾರದಲ್ಲಿ ಕಾಣಿಸೋಕೆ ಮೇಕಪ್, ಜಗಳ ಮಾಡಲ್ಲ

ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ನಗರದಲ್ಲೂ ಬಿಗ್‌ಬಾಸ್‌ ಸ್ಪರ್ಧಿ ಹನುಮಂತನಿಗೆ ಓಟ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಯಾರನ್ನೇ ಕೇಳಿದರೂ ಬಿಗ್‌ಬಾಸ್‌ ಮನೆಯಲ್ಲಿ ಹನುಮಂತ ಬಿಟ್ಟರೆ ಯಾರೂ ಸರಿಯಾಗಿಲ್ಲ ಎನ್ನುತ್ತಿದ್ದಾರೆ. ಹನುಮಂತ ಮಾತ್ರ ಚೆನ್ನಾಗಿ ಆಡ್ತಾಯಿರೋದು. ಉಳಿದವರು ಮೇಕಪ್ ಮಾಡಿಕೊಂಡು ದೊಡ್ಡಸ್ತಿಕೆ ತೋರಿಸಿಕೊಂಡು ಕ್ಯಾಮರಾ ಮುಂದೆ ಪೋಸ್‌ ಕೊಡುತ್ತಿದ್ದಾರೆ. ಇವರು ಕ್ಯಾಮರಾದಲ್ಲಿ ಕಾಣಿಸಬೇಕು ಅಂದರೆ ಮೇಕಪ್‌ ಮಾಡಿಕೊಳ್ಳಬೇಕು, ಇಲ್ಲ ಜಗಳ ಆಡಬೇಕು. ಇವೆರಡನ್ನೂ ಹನುಮಂತ ಮಾಡಲ್ಲ. ಹೀಗಾಗಿ ಗಾಯಕ ಹನುಮಂತ ಲಮಾಣಿ ಈ ಬಾರಿ ವಿನ್ನರ್ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಮೋಕ್ಷಿತಾ ಬಗ್ಗೆ ವೀಕ್ಷಕರ ಮೆಚ್ಚುಗೆ

ಬಿಗ್‌ಬಾಸ್‌ ಮನೆಯಲ್ಲಿ ಮೋಕ್ಷಿತಾ ಚೆನ್ನಾಗಿ ಆಟ ಆಡಲು ಶುರು ಮಾಡಿದಾಗ ಅವರ ಬಗ್ಗೆ ಸಾಕಷ್ಟು ನೆಗಿಟಿವ್ ಸ್ಟೋರಿಗಳು ಹರಿದಾಡಿದವು. ಅವರು ಮಕ್ಕಳ ಕಳ್ಳಿ ಎನ್ನುವ ಆರೋಪಗಳು ಕೇಳಿ ಬಂದವು. ಆದರೆ ಈ ಬಗ್ಗೆ ಮೋಕ್ಷಿತಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿಲ್ಲ. ಅವರು ಬಿಗ್‌ಬಾಸ್‌ ಮನೆಯಲ್ಲಿ ಹೇಗೆ ಆಡುತ್ತಿದ್ದಾರೆ ಅನ್ನೋದನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಈ ಬಾರಿ ಬಿಗ್‌ಬಾಸ್‌ ವಿನ್ನರ್‌ ರೇಸ್‌ನಲ್ಲಿ ಮೋಕ್ಷಿತಾ ಪೈ ಪಕ್ಕಾ ಇರಲಿದ್ದಾರೆ ಎಂದು ಹೇಳುತ್ತಿದ್ದಾರೆ.

ಮೋಕ್ಷಿತಾ ಹಿಂದೆ ಹೇಗಿದ್ದರು ಎನ್ನುವುದನ್ನು ಪರಿಗಣಿಸಿ ಈಗ ಹೇಗೆ ಎಂದು ಅವರನ್ನು ಅಳಿಯಲು ಆಗಲ್ಲ. ಕೆಲವೊಂದು ಘಟನೆಗಳ ಬಗ್ಗೆ ಮೋಕ್ಷಿತಾ ಅವರೇ ಉತ್ತರ ಕೊಡಬೇಕು. ಯಾವುದಕ್ಕೂ ಸ್ಪಷ್ಟನೆ ಇಲ್ಲದೆ ನಾವು ಯಾವುದರ ಬಗ್ಗೆ ಮಾತನಾಡಲು ಆಗುವುದಿಲ್ಲ ಎಂದು ಮೋಕ್ಷಿತಾ ಅವರ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಈವರೆಗೂ ಇಲ್ಲದ ಅವರ ಮೇಲಿನ ಆರೋಪಗಳು ಈಗ ಇವೆ ಅಂದರೆ ಅದರ ಅರ್ಥ ಅವರನ್ನು ತಪ್ಪುಗಾರರನ್ನು ಮಾಡಿ ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+