ಬಿಗ್‌ಬಾಸ್ ಫಿನಾಲೆ ಹೊತ್ತಲ್ಲೇ ಸುದೀಪ್ ಭೇಟಿಯಾದ ಕರವೇ ನಾರಾಯಣಗೌಡ, ಇತ್ತ ಬಗೆ ಬಗೆಯ ಚರ್ಚೆ
ಬೆಂಗಳೂರು: ಕನ್ನಡಪರ ಹೋರಾಟಗಾರ್ತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಅವರು ಕನ್ನಡ ಬಿಗ್‌ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವುದು ಈಗಾಗಲೇ ಭಾರೀ ಗಮನ ಸೆಳೆದಿದೆ. ಬಿಗ್‌ಬಾಸ್ ಸೀಸನ್-12 ಫಿನಾಲೆ ಹಂತಕ್ಕೆ ಬಂದಿರುವ ಸಮಯದಲ್ಲೇ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ನಟ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿರುವುದು ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.
ಈ ಭೇಟಿಯ ಫೋಟೋಗಳು ಮತ್ತು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, "ಅಶ್ವಿನಿ ಗೌಡ ಪರವಾಗಿ ನಾರಾಯಣಗೌಡರು ಸುದೀಪ್ ಅವರನ್ನು ಭೇಟಿಯಾಗಿದ್ದಾರೆ", "ಬಿಗ್‌ಬಾಸ್ ಫಿನಾಲೆ ಹಿನ್ನೆಲೆಯಲ್ಲಿ ಅಶ್ವಿನಿ ಗೌಡ ಪರ ಚರ್ಚೆ" ಎಂಬಂತೆ ವಿವಿಧ ಊಹಾಪೋಹಗಳು ಹರಡಿವೆ. ಕೆಲವರು ಇದನ್ನು ಅಶ್ವಿನಿ ಗೌಡ ಅವರಿಗೆ ಬೆಂಬಲ ಪಡೆಯುವ ಪ್ರಯತ್ನವೆಂದು ಸುದ್ದಿ ಹಬ್ಬಿಸಿದ್ದರೆ, ಇನ್ನೂ ಕೆಲವರು ಇದನ್ನು ಬಿಗ್‌ಬಾಸ್ ಫಲಿತಾಂಶದ ಮೇಲೆ ಪ್ರಭಾವ ಬೀರುವ ನಡೆಯೇ? ಎಂದೆಲ್ಲ ತಪ್ಪಾಗಿ ಅರ್ಥೈಸಿದ್ದಾರೆ.

ಭೇಟಿ ಹಿಂದಿನ ಅಸಲಿ ಸತ್ಯವೇನು?
ನಾರಾಯಣಗೌಡ ಅವರ ಭೇಟಿಯು ಬಿಗ್‌ಬಾಸ್ ಕುರಿತು ಅಲ್ಲವೇ ಅಲ್ಲ, ಈ ಎಲ್ಲ ಚರ್ಚೆಗಳಿಗೆ ಅವರ ಫೋಟೋಗಳೇ ಸ್ಪಷ್ಟನೆ ನೀಡುತ್ತಿವೆ. ನಾರಾಯಣಗೌಡ-ಸುದೀಪ್ ಭೇಟಿಗೆ ಬಿಗ್‌ಬಾಸ್ ಅಥವಾ ಅಶ್ವಿನಿ ಗೌಡ ಅವರ ಸ್ಪರ್ಧೆಗೆ ಯಾವುದೇ ಸಂಬಂಧವೇ ಇಲ್ಲ ಎಂದು ಹೇಳಿವೆ. ಅಸಲಿಗೆ, ನಾರಾಯಣಗೌಡರು ತಮ್ಮ ಕುಟುಂಬದಲ್ಲಿನ ವಿವಾಹ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರಿಗೆ ಆಮಂತ್ರಣ ನೀಡಲು ತೆರಳಿದ್ದರು ಎಂಬುದು ಸ್ಪಷ್ಟವಾಗಿದೆ. ಇದು ಸಂಪೂರ್ಣವಾಗಿ ವೈಯಕ್ತಿಕ ಮತ್ತು ಸಾಮಾಜಿಕ ಭೇಟಿಯಾಗಿದ್ದು, ಅದಕ್ಕೆ ಬೇರೆ ಯಾವುದೇ ರಾಜಕೀಯ ಅಥವಾ ಬಿಗ್‌ಬಾಸ್ ಹಿನ್ನೆಲೆ ಇಲ್ಲ ಎನ್ನುವುದು ಖಚಿತವಾಗಿದೆ.
ಕಿಚ್ಚನ ಚಪ್ಪಾಳೆ ಬಂದಿರುವ ಹಿಂದಿನ ರಹಸ್ಯ 😌 pic.twitter.com/3QFJMot4zl
— lawrance bishnoi (@lawranceb__) January 13, 2026
ನಾರಾಯಣಗೌಡ ಅವರು ಸುದೀಪ್ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಅವರ ನಿವಾಸಕ್ಕೆ ಭೇಟಿ ನೀಡಿ ಕನ್ನಡಪರ ಹೋರಾಟ, ಸಾಂಸ್ಕೃತಿಕ ಹೊಣೆಗಾರಿಕೆ ಹಾಗೂ ಚಿತ್ರರಂಗದ ಪಾತ್ರ ಕುರಿತು ಅರ್ಥಪೂರ್ಣ ಚರ್ಚೆ ನಡೆಸಿದೆ. ಈ ಸಂದರ್ಭದಲ್ಲಿ ತಮ್ಮ ಪುತ್ರನ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ನೀಡಿ ಆತ್ಮೀಯ ಆಹ್ವಾನ ನೀಡಿದೆ ಎಂದು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಈ ಭೇಟಿಯನ್ನು ಬೇರೆ ದಿಕ್ಕಿನಲ್ಲಿ ತಿರುಗಿಸಿ, "ಅಶ್ವಿನಿ ಗೌಡ ಪರ ಚರ್ಚೆ" ಎಂಬ ರೀತಿಯಲ್ಲಿ ತಪ್ಪು ಸುದ್ದಿ ಹರಡಲಾಗಿದೆ. ಇದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿದ್ದು, ವಾಸ್ತವಕ್ಕೆ ದೂರವಾದ ಊಹಾಪೋಹಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿವೆ. ಇನ್ನೊಂದೆಡೆ, ಅಶ್ವಿನಿ ಗೌಡ ಅವರು ತಮ್ಮ ಸ್ಪರ್ಧಾತ್ಮಕ ಪ್ರಯಾಣದ ಮೂಲಕವೇ ಜನರ ಮೆಚ್ಚುಗೆ ಗಳಿಸುತ್ತಿದ್ದು, ಅವರ ಆಟ, ನಿಲುವು ಮತ್ತು ವ್ಯಕ್ತಿತ್ವವೇ ಮತದಾನ ಹಾಗೂ ಜನಾಭಿಪ್ರಾಯಕ್ಕೆ ಆಧಾರವಾಗಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ನಾರಾಯಣಗೌಡ-ಸುದೀಪ್ ಭೇಟಿಯನ್ನು ಬಿಗ್‌ಬಾಸ್ ರಾಜಕೀಯದೊಂದಿಗೆ ಜೋಡಿಸಿ, ಅಶ್ವಿನಿ ಗೌಡ ಅವರಿಗೆ ಲಾಭವಾಗುವಂತೆ ಚರ್ಚೆ ನಡೆಯುತ್ತಿದೆ ಎಂಬ ರೀತಿಯಲ್ಲಿ ಕೆಲವರು ತಪ್ಪಾಗಿ ಸುದ್ದಿ ಹರಡಿದ್ದಾರೆ. ಇದರಿಂದಾಗಿ ಅಭಿಮಾನಿಗಳ ನಡುವೆ ವಾಗ್ವಾದವೂ ಉಂಟಾಗಿದ್ದು, ಬಿಗ್‌ಬಾಸ್ ಫಲಿತಾಂಶದ ಮೇಲೆ ಪ್ರಭಾವ ಬೀರುವ ಪ್ರಯತ್ನ ಎಂದು ತಪ್ಪಾಗಿ ಅರ್ಥ ಕಲ್ಪಿಸಲಾಗುತ್ತಿದೆ.
ಬಿಗ್‌ಬಾಸ್ ಫಿನಾಲೆ ಹಂತದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳ ನಡುವೆ, ನಾರಾಯಣಗೌಡ-ಸುದೀಪ್ ಭೇಟಿಯನ್ನು ಅಶ್ವಿನಿ ಗೌಡ ಅವರ ಪರ ಹಸ್ತಕ್ಷೇಪವೆಂದು ಬಿಂಬಿಸಿರುವುದು ತಪ್ಪು ಮತ್ತು ಆಧಾರರಹಿತ ಎಂಬುದು ಈಗ ಸ್ಪಷ್ಟವಾಗಿದೆ. ಇನ್ನು ಈ ಬಾರಿಯ ಬಿಗ್‌ಬಾಸ್‌ನ ಪ್ರಬಲ ಸ್ಪರ್ಧಿಗಳ ಸಾಲಿನಲ್ಲಿ ಅಶ್ವಿನಿ ಗೌಡ ಕೂಡ ಇದ್ದಾರೆ. ಗಿಲ್ಲಿ ನಂತರ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಇತ್ತೀಚೆಗೆ ಅನೇಕರು ಬಿಗ್‌ಬಾಸ್ ಗೆಲ್ಲೋದು ಅಶ್ವಿನಿ ಅವರೇ ಎಂದು ಭವಿಷ್ಯವೂ ನುಡಿದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಕುತೂಹಲಕ್ಕೆ ತೆರೆ ಬೀಳಲಿದೆ.












Click it and Unblock the Notifications