ದಿಶಾ ಪಟಾನಿ ಜೊತೆಗಿನ ಒಡನಾಟವೇ ಡಿವೋರ್ಸ್‌ಗೆ ಕಾರಣವಾಯ್ತಾ? ‘ಸಲಿಂಗಿ’ ವದಂತಿ ಬಗ್ಗೆ ನಟಿ ಮೌನಿ ರಾಯ್ ಹೇಳಿದ್ದಿಷ್ಟು

ಕೆಜಿಎಫ್‌ ಸಿನಿಮಾದಲ್ಲಿ ಯಶ್‌ ಜೊತೆ ಕುಣಿದಿದ್ದ ಬಾಲಿವುಡ್‌ ನಟಿ ಮೌನಿ ರಾಯ್ ಹಾಗೂ ಉದ್ಯಮಿ ಸೂರಜ್ ನಂಬಿಯಾರ್ ಅವರ ಡಿವೋರ್ಸ್‌ ಸುದ್ದಿ ಇತ್ತೀಚೆಗಷ್ಟೇ ಭಾರೀ ಸದ್ದು ಮಾಡಿತ್ತು. ಆದರೆ, ಈ ಬೇರ್ಪಡಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಒಂದು ಗಾಸಿಪ್ ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಅದೇನಪ್ಪಾ ಅಂದರೆ, ನಟಿ ಮೌನಿ ರಾಯ್ ಸಲಿಂಗಿ ಎಂಬ ವದಂತಿ. ಇದೀಗ ಈ ಎಲ್ಲ ಗಾಸಿಪ್‌ಗಳ ಬಗ್ಗೆ ಮೌನಿ ರಾಯ್ ಮೊದಲ ಬಾರಿಗೆ ಮೌನ ಮುರಿದಿದ್ದು, ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ.

ದಿಶಾ ಪಟಾನಿ ಜೊತೆ ಲಿಂಕ್

ಮೇ ತಿಂಗಳಲ್ಲಿ ಮೌನಿ ರಾಯ್ ಮತ್ತು ಸೂರಜ್ ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸುತ್ತಿದ್ದಂತೆ, ಇಂಟರ್‌ನೆಟ್‌ನಲ್ಲಿ ವದಂತಿಗಳ ಮಹಾಪೂರವೇ ಹರಿದಿತ್ತು. ಅದರಲ್ಲೂ ಮೌನಿ ರಾಯ್ ಅವರ ಆಪ್ತ ಗೆಳತಿ, ಬಾಲಿವುಡ್ ನಟಿ ದಿಶಾ ಪಟಾನಿ ಜೊತೆಗಿನ ಅತಿಯಾದ ಸ್ನೇಹವೇ ಈ ಸಂಸಾರ ಮುರಿಯಲು ಕಾರಣ ಎಂದು ಹಲವರು ಲಿಂಕ್ ಮಾಡಿದ್ದರು. ಮತ್ತೊಂದೆಡೆ ಮೌನಿ 'ಸಲಿಂಗಿ' ಇರಬಹುದು ಎಂಬ ಚರ್ಚೆಗಳೂ ಸೋಶಿಯಲ್ ಮೀಡಿಯಾದಲ್ಲಿ ನಡೆದಿದ್ದವು. ಇತ್ತೀಚಿನ ಪಾಡ್‌ಕಾಸ್ಟ್‌ವೊಂದರಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೌನಿ, "ಬಾಲಿವುಡ್‌ನಲ್ಲಿ ನನ್ನ ಬಗ್ಗೆ ಕೇಳಿಬಂದ ಅತಿ ದೊಡ್ಡ ಮತ್ತು ವಿಚಿತ್ರವಾದ ಗಾಸಿಪ್ ಎಂದರೆ ನಾನು 'ಗೇ' ಎನ್ನುವುದು" ಎಂದು ನೇರವಾಗಿ ಹೇಳುವ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

Mouni Roy

ಕಷ್ಟದ ದಿನಗಳಲ್ಲಿ ಕಲ್ಲಿನಂತೆ ನಿಂತ ಗೆಳತಿಯರು

ವಿಚ್ಛೇದನದ ನಂತರ ತಾನು ಎದುರಿಸಿದ ಮಾನಸಿಕ ಸವಾಲುಗಳ ಬಗ್ಗೆ ಮಾತನಾಡಿದ ನಟಿ, "ನನ್ನ ಬದುಕಿನ ಅತ್ಯಂತ ಕಷ್ಟದ, ಕರಾಳ ದಿನಗಳಲ್ಲಿ ನನ್ನ ಕುಟುಂಬ ಮತ್ತು ನನ್ನ ಗೆಳತಿಯರು ಕಲ್ಲಿನಂತೆ ನನ್ನ ಬೆನ್ನಿಗೆ ನಿಂತಿದ್ದಾರೆ. ನನ್ನ ಜೀವನದಲ್ಲಿ ಬೆಸ್ಟ್ ಗರ್ಲ್‌ಫ್ರೆಂಡ್ಸ್ ಇದ್ದಾರೆ. ಹೆಣ್ಣುಮಕ್ಕಳನ್ನು ಸದಾ ಮೇಲಕ್ಕೆತ್ತುವ, ಪ್ರೋತ್ಸಾಹಿಸುವ ಇಂತಹ ಗೆಳತಿಯರು ಪ್ರತಿಯೊಬ್ಬರ ಜೀವನದಲ್ಲೂ ಇರಬೇಕು" ಎಂದು ಹೇಳಿದ್ದಾರೆ.

ಆತ್ಮಹತ್ಯೆಗೂ ಒಂದು ಗಂಟೆ ಮೊದಲು ನಗುತ್ತಾ ರೀಲ್ಸ್‌ ಮಾಡಿದ್ದ ನಟಿ; ಅನುಮಾನ ಹುಟ್ಟಿಸಿದ ಸಂಚಿತಾ ಉಗಾಲೆ ಸಾವು
ಆತ್ಮಹತ್ಯೆಗೂ ಒಂದು ಗಂಟೆ ಮೊದಲು ನಗುತ್ತಾ ರೀಲ್ಸ್‌ ಮಾಡಿದ್ದ ನಟಿ; ಅನುಮಾನ ಹುಟ್ಟಿಸಿದ ಸಂಚಿತಾ ಉಗಾಲೆ ಸಾವು

ಹುಡುಗಿಯರಿಗೆ ಆರ್ಥಿಕ ಸ್ವಾತಂತ್ರ್ಯದ ಪಾಠ

ಇದೇ ವೇಳೆ ಯುವತಿಯರಿಗೆ ಮಹತ್ವದ ಸಂದೇಶ ನೀಡಿರುವ ಮೌನಿ, "ಇಂದಿನ ಕಾಲದಲ್ಲಿ ಪ್ರತಿಯೊಬ್ಬ ಹುಡುಗಿಯೂ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸ್ವಾವಲಂಬಿಯಾಗಬೇಕು. ಜೀವನದಲ್ಲಿ ಏರಿಳಿತಗಳು ಸಹಜ, ಆದರೆ ನಮ್ಮ ಕಾಲಿನ ಮೇಲೆ ನಾವು ನಿಂತಾಗ ಎಂತಹ ಸವಾಲನ್ನೂ ಎದುರಿಸಬಹುದು" ಎಂದಿದ್ದಾರೆ. ಮೌನಿ ಮತ್ತು ಸೂರಜ್ ಸೌಹಾರ್ದಯುತವಾಗಿಯೇ ಬೇರ್ಪಟ್ಟಿದ್ದು, ಯಾವುದೇ ಜೀವನಾಂಶ ವಿವಾದ ಅಥವಾ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರಲಿಲ್ಲ ಎಂದು ಸೂರಜ್ ಕೂಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮೌನಿ ರಾಯ್ ಸದ್ಯ ಡೇವಿಡ್ ಧವನ್ ಅವರ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರ ಹಾಗೂ ಒಟಿಟಿ ಸರಣಿ 'ಸಲಾಕಾರ್' ನಲ್ಲಿ ಪ್ರಮುಖ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Mouni Roy

ಮೇ ತಿಂಗಳಲ್ಲಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಿ ವಿಚ್ಛೇದನ ಘೋಷಿಸಿದ ತಕ್ಷಣವೇ ಇಂಟರ್‌ನೆಟ್‌ನಲ್ಲಿ ವದಂತಿಗಳು ಶುರುವಾಗಿದ್ದವು. "ನಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಧ್ಯಮಗಳು ಅನಗತ್ಯವಾಗಿ ಮತ್ತು ಅತಿಯಾಗಿ ಮೂಗು ತೂರಿಸುತ್ತಿರುವುದು ನಮಗೆ ತೀವ್ರ ಬೇಸರ ತಂದಿದೆ. ನಮ್ಮ ವೈಯಕ್ತಿಕ ಆದ್ಯತೆಗಳ ಬದಲಾವಣೆಯಿಂದಾಗಿ ನಾವು ಪರಸ್ಪರ ಗೌರವದಿಂದಲೇ ಬೇರ್ಪಡುವ ಜಂಟಿ ನಿರ್ಧಾರ ಮಾಡಿದ್ದೇವೆ. ಆದರೆ ನಮ್ಮ ಸಂಬಂಧದ ಬಗ್ಗೆ ಸುಳ್ಳು ಕಥೆಗಳನ್ನು ಸೃಷ್ಟಿಸಿ ಸೆನ್ಸೇಷನಲ್ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದು ನಮ್ಮ ಸಂಬಂಧದ ಅಸಲಿ ನಿಜಾಂಶವಲ್ಲ. ಮುಂದಿನ ದಿನಗಳಲ್ಲೂ ನಾವು ನಮ್ಮ ಸ್ನೇಹವನ್ನು ಗೌರವಿಸುತ್ತೇವೆ" ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದರು.

ಯಾರೂ ಮೂರನೇ ವ್ಯಕ್ತಿ ಇಲ್ಲ: ಸೂರಜ್ ಖಡಕ್ ಸ್ಪಷ್ಟನೆ

ಜಂಟಿ ಹೇಳಿಕೆಯ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಮೌನಿ ರಾಯ್ ಅವರ ಗೆಳತಿಯರ ಹೆಸರನ್ನು ಅನಗತ್ಯವಾಗಿ ಲಿಂಕ್ ಮಾಡಲು ಯತ್ನಿಸಿದಾಗ, ಮಾಜಿ ಪತಿ ಸೂರಜ್ ನಂಬಿಯಾರ್ ಮತ್ತೊಂದು ಪ್ರತ್ಯೇಕ ಹೇಳಿಕೆ ನೀಡಿ ಗಾಸಿಪ್‌ ಮಾಡಿದವರಿಗೆ ತಿರುಗೇಟು ನೀಡಿದ್ರು. ಸೂರಜ್ ತಮ್ಮ ಪೋಸ್ಟ್‌ನಲ್ಲಿ, "ನಮ್ಮ ಬೇರ್ಪಡಿಕೆಯ ಬಗ್ಗೆ ಹರಡುತ್ತಿರುವುದೆಲ್ಲಾ ಸುಳ್ಳು ಮತ್ತು ದುರುದ್ದೇಶಪೂರಿತ ಸುದ್ದಿಗಳು. ನಾನು ಎಲ್ಲವನ್ನೂ ಸ್ಪಷ್ಟಪಡಿಸಲು ಬಯಸುತ್ತೇನೆ. ಇಲ್ಲಿ ಯಾವುದೇ ಜೀವನಾಂಶದ ವಿವಾದವಿಲ್ಲ, ಯಾವುದೇ ಜಗಳಗಳಿಲ್ಲ ಮತ್ತು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ. ನಾವಿಬ್ಬರೂ ಪರಸ್ಪರರ ಒಳಿತನ್ನು ಬಯಸಿ, ಗೌರವಯುತವಾಗಿಯೇ ದೂರಾಗಿದ್ದೇವೆ. ನಮ್ಮ ಅಮಾಯಕ ಸ್ನೇಹಿತರನ್ನು ಈ ವಿಷಯಕ್ಕೆ ಎಳೆದು ತರುವುದು ಸರಿಯಲ್ಲ" ಎಂದು ಕಿಡಿಕಾರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+