Bengaluru Traffic Advisory: ಮುಂದಿನ 1 ತಿಂಗಳು ಈ ಭಾಗದಲ್ಲಿ ಸಂಚಾರ ನಿರ್ಬಂಧ ಪಯಾರ್ಯ ಮಾರ್ಗಗಳಿವು

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವತಿಯಿಂದ ಕಾಮಗಾರಿಯೊಂದು ಹಮ್ಮಿಕೊಳ್ಳಲಾಗಿದೆ. ಈ ಕಾರಣಕ್ಕೆ ಬೆಂಗಳೂರು ನಗರ ಸಂಚಾರ ಉತ್ತರ ವಿಭಾಗದ ವ್ಯಾಪ್ತಿಯ ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ವಿವಿಧ ರಸ್ತೆ ಮಾರ್ಗಗಳ ಸಂಚಾರದಲ್ಲಿ ಬದಲಾವಣೆ ಆಗಿದೆ. ಒಂದು ತಿಂಗಳ ಈ ಮಾರ್ಗದಲ್ಲಿ ಸಂಚಾರ ನಿಷೇಧವಾಗಲಿದ್ದು, ಹಾಗಾದರೆ ಪಯಾರ್ಯ ಮಾರ್ಗಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ಜಲಮಂಡಳಿಯಿಂದ ಜೂನ್ 15ರಿಂದ ಜುಲೈ 15ರವರೆಗೆ ನಂದಿ ದುರ್ಗ ರಸ್ತೆಯಲ್ಲಿ (ಜೆ.ಸಿ ನಗರ ಪಿ.ಎಸ್ ಜಂಕ್ಷನ್ - ಹಜ್ ಭವನದ ವರೆಗೆ) ಕಾಮಗಾರಿ ನಡೆಯಲಿದೆ. ಸುಗಮ ಸಂಚಾರ ಹಿತದೃಷ್ಟಿಯಿಂದ ಎಲ್ಲಾ ಮಾದರಿಯ ವಾಹನಗಳನ್ನು ಬದಲಿ‌ ಮಾರ್ಗದಲ್ಲಿ ಸಂಚರಿಸಲು ಕೋರಿದೆ. ಈ ಸಂಬಂಧ ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ.

Traffic Diversions

ಸಂಚಾರ ನಿರ್ಬಂಧದ ರಸ್ತೆಗಳು

* ಮಿಲ್ಲಸ್‌ರ್‌ ರಸ್ತೆಯ ಹಜ್ ಭವನ ಜಂಕ್ಷನ್ ನಿಂದ ಜೆ.ಸಿ. ನಗರ ಪೊಲೀಸ್‌ ಠಾಣೆಜಂಕ್ಷನ್ ವರಿಗಿನ ನಂದಿದುರ್ಗಾ ಮುಖ್ಯರಸ್ತೆ.

ಸಂಚರಿಸಬೇಕಾದ ಪರ್ಯಾಯ ಮಾರ್ಗಗಳು

ಹಜ್ ಭವನ ಜಂಕ್ಷನ್ ನಿಂದ ಜೆ.ಸಿ. ನಗರ ಕಡೆಗೆ ಸಂಚರಿಸಬೇಕಾದವರು, ಮಿಲ್ಲರ್‌ ರಸ್ತೆಯ ಹಜ್ ಭವನ ಕಂಟೋನ್‌ಮೆಂಟ್‌ ರೈಲ್ವೆ ಸ್ಟೇಷನ್ ಜಯಮಹಲ್ ಮುಖ್ಯರಸ್ತೆ, ಪ್ರಿಯದರ್ಶಿನಿ ಕಂಟೋನ್‌ಮೆಂಟ್ ಬ್ರಿಡ್ಜ್, ದರ್ಗಾ ಮೂಲಕ ಜೆ.ಸಿ. ನಗರ ಪೋಲೀಸ್‌ ಠಾಣೆಜಂಕ್ಷನ್ ಮಾರ್ಗವಾಗಿಸಿ.ಕ್ಯೂ.ಎ.ಎಲ್ ಕ್ರಾಸ್, ಮೇಕ್ರಿ ಸರ್ಕಲ್ ಮೂಲಕ ಸಂಚರಿಸಬಹುದು.

Bengaluru Weather: ಇಂದು ಬೆಂಗಳೂರಿನಾದ್ಯಂತ ಸುರಿದ ಮಳೆ, ವೀಕೆಂಡ್ ಮೋಜಿಗೆ ಬ್ರೇಕ್: ಮುನ್ಸೂಚನೆ ಹೀಗಿದೆ
Bengaluru Weather: ಇಂದು ಬೆಂಗಳೂರಿನಾದ್ಯಂತ ಸುರಿದ ಮಳೆ, ವೀಕೆಂಡ್ ಮೋಜಿಗೆ ಬ್ರೇಕ್: ಮುನ್ಸೂಚನೆ ಹೀಗಿದೆ

ಮಿಲ್ಲರ್‌ ರಸ್ತೆಯ ಹಜ್ ಭವನದಿಂದ ಬೆನ್ಸನ್‌ಟೌನ್ ಕಡೆಗೆ ತೆರಳುವವರು, ಮಿಲ್ಲರ್‌ರಸ್ತೆಯಿಂದ ನೇರವಾಗಿ ಬೆನ್ಸನ್‌ಟೌನ್ ‌ರಸ್ತೆಯ ಮೂಲಕ ಬೆನ್ಸನ್‌ಟೌನ್‌ಕಡೆಗೆ ಸಂಚರಿಸ ಬಹುದು. ಮಿಲ್ಲರ್‌ ರಸ್ತೆಯ ಹಜ್ ಭವನ, ಕಂಟೋನ್‌ಮೆಂಟ್‌ರೈಲ್ವೆ ಸ್ಟೇಷನ್ ಕಂಟೋನ್‌ಮೆಂಟ್ ಬ್ರಿಡ್ಜ್, ಜಯಮಹಲ್ ಮುಖ್ಯರಸ್ತೆ, ಜಯಮಹಲ್ 1ನೇಮೈನ್ (ಬಲತಿರುವು) ಮೂಲಕ ವಿಷ್ಣುವಿಹಾರ್ ಹೋಟೆಲ್ ನಂದಿದುರ್ಗಾರಸ್ತೆಯ ಮೂಲಕ ಬೆನ್ಸನ್‌ಟೌನ್‌ಕಡೆಗೆ ಸಂಚರಿಸುವುದು.

ಮಿಲ್ಲರ್‌ ರಸ್ತೆಯ ಹಜ್ ಭವನದಿಂದ ನಂದಿದುರ್ಗಾರಸ್ತೆ, ಪೆಮ್ಮೇಗೌಡರಸ್ತೆ, ಮುನಿಮಾರಪ್ಪರಸ್ತೆ, ಚಿನ್ನಪ್ಪಗಾರ್ಡನ್‌ಕಡೆಗೆ ಸಂಚರಿಸುವ ವಾಹನಗಳು, ಮಿಲ್ಲರ್‌ ರಸ್ತೆಯಿಂದ ನೇರವಾಗಿ ಬೆನ್ಸನ್‌ಟೌನ್‌ರಸ್ತೆಯ ಮೂಲಕ ಚಿನ್ನಪ್ಪಗಾರ್ಡನ್‌ಕಡೆಗೆ ಸಂಚರಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಮಿಲ್ಲರ್‌ ರಸ್ತೆಯ ಹಜ್ ಭವನ, ಕಂಟೋನ್‌ಮೆಂಟ್‌ರೈಲ್ವೆ ಸ್ಟೇಷನ್ ಕಂಟೋನ್‌ಮೆಂಟ್ ಬ್ರಿಡ್ಜ್, ಜಯಮಹಲ್‌ ಮುಖ್ಯರಸ್ತೆ ಅಲ್ಲಿಂದ ಪ್ರಿಯದರ್ಶಿನಿ ಜಂಕ್ಷನ್ (ಗಣೇಶ್ ಹೋಟಲ್) ಬಲತಿರುವು ಪಡೆದು ಆನೇಪಾರ್ಕ್, ಗುಲಾಬಿ ಜಂಕ್ಷನ್ ಮೂಲಕ ನಂದಿದುರ್ಗಾರಸ್ತೆ, ಗುಲಾಬಿ ಜಂಕ್ಷನ್, ಮುನಿಮಾರಪ್ಪರಸ್ತೆ, ಪೆಮ್ಮೇಗೌಡರಸ್ತೆ ಹಾಗೂ ಚಿನ್ನಪ್ಪಗಾರ್ಡನ್‌ಕಡೆಗೆ ಸಂಚರಿಸಬಹುದೆಂದು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+