Rajath: ಪ್ರಥಮ್‌ಗೆ ಈಗ ಮೀಟ್ರು ಬಂತಾ? ಅವನು ಕಿಲಾಡಿ ಆಗಿದ್ರೆ: ರಜತ್ ಸವಾಲ್!
ಬಿಗ್‌ಬಾಸ್ ವಿನ್ನರ್ ಪ್ರಥಮ್ ಅವರು ನಟ ದರ್ಶನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿ, ಫಿಲ್ಮ್ ಚೇಂಬರ್ ಮುಂದೆ ಧರಣಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಪ್ರಥಮ್ ಅವರಿಗೆ ರೌಡಿ ಗ್ಯಾಂಗ್‌ನಿಂದ ಜೀವವಬೆದರಿಕೆ ಹಾಕಲಾಗಿದ್ದು, ಅದರ ಹಿಂದೆ ದರ್ಶನ್ ಹಾಗೂ ಅವರ ಫ್ಯಾನ್ಸ್ ಕೈವಾಡ ಇದೆ ಎಂದು ಪ್ರಥಮ್ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಪ್ರಥಮ್ ವಿರುದ್ಧ ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ದರ್ಶನ್ ಅವರ ಅಭಿಮಾನಿ ರಜತ್ ಕಿಶನ್ ಗರಂ ಆಗಿ ಮಾತನಾಡಿದ್ದಾರೆ. ಪ್ರಥಮ್ ವಿರುದ್ಧ ಏಕವಚದಲ್ಲೇ ವಾಗ್ದಾಳಿ ನಡೆಸಿದ್ದಾರೆ.
'ನಾವು ಪ್ರಥಮ್‌ನ ನೋಡಿಕೊಂಡೇ ಬಂದಿದ್ದೀವಿ. ಇದೆಲ್ಲ ನಮಗೆ ಹೊಸದೇನಲ್ಲ. ಈಗ ಧರಣಿಗೆ ಕೂತಿರುವುದು ಒಳ್ಳೆಯದು, ಅದನ್ನ ಮುಂದುವರಿಸಲಿ. ಇನ್ನೂ ಏನೇನೋ ಡ್ರಾಮಾ ಇರುತ್ತೆ ನೋಡ್ತಾ ಇರಿ ಎಂದಿದ್ದಾರೆ. ಈಗ ಈ ವಿಷಯಕ್ಕೆ ಧರಣಿ ಮಾಡುತ್ತಿರುವ ಪ್ರಥಮ್, ಹೋಗಿ ಧರ್ಮಸ್ಥಳದ ವಿಚಾರಕ್ಕೆ ಧರಣಿ ಕೂರಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ. ಆ ಹೆಣ್ಣುಮಗು ಬಗ್ಗೆ ಯಾಕೆ ಒಂದು ದಿನವೂ ಪ್ರಥಮ್ ಮಾತನಾಡಲಿಲ್ಲ' ಎಂದು ರಜತ್ ಕೇಳಿದ್ದಾರೆ.

'ರಮ್ಯಾ ಮೇಡಂ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ವೈಯಕ್ತಿಕವಾಗಿ ಅವರು ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಈ ಕೇಸ್ ಕೋರ್ಟ್‌ನಲ್ಲಿದ್ದಾಗ ಅದರ ಬಗ್ಗೆ ಮಾತನಾಡುವುದು ತಪ್ಪಾಗುತ್ತೆ, ಅದು ಕಾನೂನಿಗೆ ವಿರುದ್ಧ, ಅವರು ಯಾಕೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಪ್ರಥಮ್ ಮಾಡುತ್ತಿರುವುದು ಪಬ್ಲಿಸಿಟಿಗೋಸ್ಕರ ಅಷ್ಟೇ' ಎಂದಿದ್ದಾರೆ ರಜತ್.
'ಪ್ರಥಮ್‌ಗೆ ಸಡನ್ ಮೀಟರ್ ಬಂತಾ?'
'ಪ್ರಥಮ್‌ಗೆ ಏನೋ ಟೂಲ್ಸ್ ತೆಗೆದ್ರು ಅಂದ್ರಲ್ಲ? ಅವನು ಕಿಲಾಡಿ ಆಗಿದ್ರೆ ಅಲ್ಲೇ ಮಾತನಾಡಬೇಕಿತ್ತು. ಅಲ್ಲೂ ಭಯ ಆಗಿದ್ರೆ ಸೀದಾ ಪೊಲೀಸ್ ಸ್ಟೇಷನ್‌ಗೆ ಹೋಗಬೇಕಿತ್ತು. ಪೊಲೀಸರನ್ನ ಕರ್ಕೊಂಡು ಹೋಗಿ, ಅವರ ಮೇಲೆ ಕೇಸ್ ಹಾಕಿಸಿ ಒಳಗೆ ಹಾಕಬೇಕಿತ್ತು. ಆದರೆ ನಾಲ್ಕು ದಿನ ಸುಮ್ಮನಿದ್ದು, ನಂತರ ಇದ್ದಕ್ಕಿದ್ದಂತೆ ಇವನಿಗೆ ಮೀಟರ್ ಬಂದುಬಿಡ್ತಾ?' ಎಂದಿದ್ದಾರೆ.
'ಪ್ರಥಮ್ ಏನೋ ಅವರೇ ನಿಂತು ಮಾಡಿಸುತ್ತಾರಂತೆ, ಎರಡು ಸಾವಿರ ಪೇಜ್‌ಗಳಂತೆ ಅಂತೆಲ್ಲ ಹೇಳ್ತಾನೆ. ಪ್ರಥಮ್ ಈ ರೀತಿ ಮಾಡಿದ್ರೆ ಜನ ಬೈದೇ ಬೈತಾರೆ. ಇದನ್ನ ಕೇಳಿದ್ರೆ ನನಗೇ ಕೋಪ ಬರ್ತಿದೆ. ಪ್ರಥಮ್ ಈ ರೀತಿ ಎಲ್ಲ ಮಾತನಾಡಬಾರದು, ತಪ್ಪು ಇದೆಲ್ಲ ಪಬ್ಲಿಸಿಟಿ ಸ್ಟಂಟ್, ಅವನ ಬಗ್ಗೆ ಮಾತನಾಡುವುದೇ ವೇಸ್ಟ್ ಬಿಡಿ' ಎಂದು ಹೇಳಿದ್ದಾರೆ.
'ರಮ್ಯಾ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ'
'ರಮ್ಯಾ ಮೇಡಂ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ. ಕೆಲವೊಂದು ಸೈಕೋಗಳು, ಹಲ್ಕಾ ನನ್ ಮಕ್ಳು ಈ ರೀತಿ ಕೆಟ್ಟ ಕೆಟ್ಟ ಕಾಮೆಂಟ್ ಹಾಕಿದಾಗ ಬೇರೆ ನಟರಿಗೆ ತೊಂದರೆ ಮಾಡುತ್ತಿದೆ ಅನಿಸುತ್ತೆ. ಈಗ ಅಭಿಮಾನಿಗಳು ಯಾರೂ ಈ ರೀತಿ ಕೆಟ್ಟದಾಗಿ ಕಾಮೆಂಟ್ ಹಾಕಿ ಅಭಿಮಾನ ತೋರಿಸಿಕೊಳ್ಳಲ್ಲ. ನಾನು ಸುದೀಪ್ ಸರ್, ದರ್ಶನ್ ಸರ್ ಇಬ್ಬರಿಗೂ ಅಭಿಮಾನಿ. ಹಾಗಿದ್ದಾಗ ನಾವು ಬೇರೆ ನಟರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ತಪ್ಪಾಗುತ್ತೆ' ಎಂದಿದ್ದಾರೆ.
'ರಮ್ಯಾ ಮೇಡಂ ಹೇಳಿದಂತೆ ರೇಣುಕಾಸ್ವಾಮಿ ಮಾಡಿದ್ದು ತಪ್ಪಾದ್ರೆ, ಇವರು ಮಾಡಿರೋದು ತಪ್ಪೇ ಅಲ್ವಾ? ಒಬ್ಬ ಹಿರಿಯ ನಟಿ ಬಗ್ಗೆ ಅಸಹ್ಯವಾಗಿ ಮಾತನಾಡಿದಾಗ ಅದನ್ನ ಅಭಿಮಾನ ಎಂದು ಕರೆಯಲು ಹೇಗೆ ಸಾಧ್ಯ? ಇದರಿಂದ ದರ್ಶನ್ ಸರ್‌ಗೆ ಎಫೆಕ್ಟ್ ಆಗ್ತಿದೆ. ನಾನು ಬಿಗ್‌ಬಾಸ್‌ನಲ್ಲಿದ್ದಾಗ ನನ್ನ ಎಕ್ಸ್ ಹುಡುಗಿ ಫೋಟೋಗಳು ಆಚೆ ಬಂದಿದ್ದವು. ಅದು ಯಾವ ಪುಣ್ಯಾತ್ಮ ಇದನ್ನೆಲ್ಲ ಮಾಡ್ತಾನೋ ಗೊತ್ತಿಲ್ಲ. ಅವರಿಗೆಲ್ಲ ಮಾಡೋಕೆ ಕೆಲಸ ಇಲ್ಲ. ಐವತ್ತು, ನೂರು ರೂಪಾಯಿಗೆ ಇಂಟರ್ನೆಟ್ ಸಿಗುತ್ತೆ, ಅದಕ್ಕೆ ಏನೇನೋ ಬಾಯಿಗೆ ಬಂದಂಗೆ ಮಾತನಾಡ್ತಾರೆ' ಎಂದಿದ್ದಾರೆ ರಜತ್.












Click it and Unblock the Notifications