Rajath Arrest: ಬಿಗ್‌ಬಾಸ್‌ ಖ್ಯಾತಿಯ ರಜತ್‌ ಕಿಶನ್‌ ಮತ್ತೆ ಅರೆಸ್ಟ್‌!

ಮಚ್ಚು ಹಿಡಿದು ರೀಲ್ಸ್‌ ಮಾಡಿದ ಕೇಸ್‌ನಲ್ಲಿ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ಕಿಶನ್‌ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಾರಕಾಸ್ತ್ರ ಹಿಡಿದು ರೀಲ್ಸ್‌ ಮಾಡಿದ ಕೇಸ್‌ನಲ್ಲಿ ಇತ್ತೀಚೆಗಷ್ಟೇ ರಜತ್‌ ಕಿಶನ್‌ ಹಾಗೂ ವಿನಯ್‌ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಪರಪ್ಪನ ಅಗ್ರಹಾರ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದರು. ಇದೀಗ ಬಸವೇಶ್ವರ ನಗರ ಪೊಲೀಸರು ಮತ್ತೆ ರಜತ್‌ ಅವರನ್ನು ಬಂಧಿಸಿದ್ದಾರೆ. ಜಾಮೀನು ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ರಜತ್‌ ಅವರನ್ನು ಅರೆಸ್ಟ್‌ ಮಾಡಲಾಗಿದೆ.

ಜಾಮೀನು ನಿಯಮ ಉಲ್ಲಂಘನೆ ಆರೋಪದಲ್ಲಿ ರಜತ್‌ ಕಿಶನ್‌ ಅವರನ್ನು ಬಂಧಿಸಿರುವ ಪೊಲೀಸರು ಇಂದು ಕೋರ್ಟ್‌ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಜೊತೆಗೆ ಇದೇ ಕೇಸ್‌ನಲ್ಲಿ ಅಂದರ್‌ ಆಗಿದ್ದ ವಿನಯ್‌ ಗೌಡ ಅವರನ್ನು ಕೂಡ ಬಂಧಿಸುವ ಸಾಧ್ಯತೆ ಇದೆ. ಇನ್ನು ರಜತ್‌ ಕಿಶನ್‌ ಅವರು ಎರಡು ಬಾರಿ ವಿಚಾರಣೆಗೆ ಗೈರಾಗಿರುವ ಆರೋಪದ ಮೇರೆಗೆ ಪೊಲೀಸರು ಮತ್ತೆ ಅರೆಸ್ಟ್‌ ಮಾಡಿರುವುದಾಗಿ ಹೇಳಲಾಗುತ್ತಿದೆ. ಕೋರ್ಟ್‌ ಸೂಚನೆ ಮೇರೆಗೆ ರಜತ್‌ ಕಿಶನ್‌ ಅವರನ್ನು ಬಂಧಿಸಲಾಗಿದೆ.

Bigg Boss Fame Rajat Kishan Arrested Again Over Weapon Reel Case

ಇಂದು ಕೂಡ ರಜತ್‌ ಅವರನ್ನು ಪೊಲೀಸರು ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿದ್ದರು. ಅದರಂತೆ ಬಸವೇಶ್ವರ ನಗರ ಪೊಲೀಸ್‌ ಠಾಣೆಗೆ ಹಾಜರಾದ ವೇಳೆಯೇ ರಜತ್‌ ಅವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಸದ್ಯ ರಜತ್‌ ಅವರು ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲೇ ಇದ್ದು, ಇಂದು ಮಧ್ಯಾಹ್ನದ ವೇಳೆಗೆ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಲು ತಯಾರಿ ನಡೆಸಿದ್ದಾರೆ. ಮತ್ತೊಂದೆಡೆ ವಿನಯ್‌ ಗೌಡ ಅವರ ಬಂಧನಕ್ಕೂ ಪೊಲೀಸರು ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಆರೋಪದ ಮೇರೆಗೆ ಬಿಗ್‌ಬಾಸ್‌ ಸ್ಪರ್ಧಿ ರಜತ್‌ ಕಿಶನ್‌ ಹಾಗೂ ವಿನಯ್‌ ಗೌಡ ಅವರನ್ನು ಇತ್ತೀಚೆಗಷ್ಟೇ ಪೊಲೀಸರು ಬಂಧಿಸಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರ ಮೇಲೆ ಕೇಸ್‌ ದಾಖಲಾಗಿ, ಬಳಿಕ ಪರಪ್ಪನ ಅಗ್ರಹಾರ ಜೈಲು ಸೇರಿ ಜಾಮೀನಿನ ಮೇಲೆ ರಿಲೀಸ್‌ ಆಗಿದ್ದರು. ಆದರೆ ಈ ಕೇಸ್‌ ವಿಚಾರಣೆ ಚುರುಕುಗೊಳಿಸಿರುವ ಪೊಲೀಸರು ಮತ್ತೆ ರಜತ್‌ ಹಾಗೂ ವಿನಯ್‌ಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಜಾಮೀನು ಪಡೆದು ರಿಲೀಫ್‌ ಆಗಿದ್ದ ರಜತ್‌ಗೆ ಪೊಲೀಸರು ಮತ್ತೊಂದು ದೊಡ್ಡ ಶಾಕ್‌ ನೀಡಿದ್ದು, ರೀಲ್ಸ್‌ ಮಾಡಿದ ಎಡವಟ್ಟಿನಿಂದ ಜೈಲು ಸೇರಿದ್ದ ರಜತ್‌ ಮತ್ತೆ ಅರೆಸ್ಟ್‌ ಆಗಿದ್ದಾರೆ. ರೀಲ್ಸ್‌ಗೆ ಸಾಥ್‌ ಕೊಟ್ಟ ವಿನಯ್‌ ಗೌಡ ಅವರಿಗೂ ಸಂಕಷ್ಟ ಎದುರಾಗಿದೆ.

Bigg Boss Fame Rajat Kishan Arrested Again Over Weapon Reel Case

ರೀಲ್ಸ್‌ ನೋಡಿದ ಬಳಿಕ ಪೊಲೀಸರು ರಜತ್‌ ಹಾಗೂ ವಿನಯ್‌ ಗೌಡರನ್ನು ಕರೆಸಿ ಮೊದಲಿಗೆ ವಿಚಾರಣೆ ನಡೆಸಲಾಗಿತ್ತು. ಈ ಸ್ಪಷ್ಟನೆ ನೀಡಿದ್ದ ರಜತ್ ನಾವು ರೀಲ್ಸ್‌ಗೆ ಬಳಸಿದ ಮಚ್ಚು ನಿಜವಾದ್ದಲ್ಲ, ಅದು ಫೈಬರ್‌ದು. ನಾವು ಪೊಲೀಸರ ದಾರಿ ತಪ್ಪಿಸುವ, ಸುಳ್ಳು ಹೇಳುವ ಕೆಲಸ ಮಾಡಿಲ್ಲ ಎಂದು ಹೇಳಿದ್ದರು. ಆದರೆ, ಪೊಲೀಸರು ಮಚ್ಚಿನ ಹಿಂದೆ ಬಿದ್ದಿದ್ದರು. ಈವರೆಗೂ ಆ ಮಚ್ಚಿನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗದ ಕಾರಣ ತನಿಖೆ ಚುರುಕುಗೊಳಿಸಿದ್ದಾರೆ. ಈ ಹಿನ್ನೆಲೆ ಕೂಡಲೇ ಈ ಮಚ್ಚಿನ ಮಾಹಿತಿ ನೀಡಲು ಪೊಲೀಸ್‌ ಸ್ಟೇಷನ್‌ಗೆ ಬರುವಂತೆ ರಜತ್‌ಗೆ ನೋಟಿಸ್‌ ಕೊಟ್ಟಿದ್ದರು. ಆದರೆ ಜಾಮೀನು ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ರಜತ್‌ ಅವರನ್ನು ಪೊಲೀಸ್‌ ಠಾಣೆಯಲ್ಲೇ ಮತ್ತೆ ಅರೆಸ್ಟ್‌ ಮಾಡಿದ್ದಾರೆ.

Bigg Boss Fame Rajat Kishan Arrested Again Over Weapon Reel Case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+