Bigg Boss: ಸಿನಿಮಾ ಮಾಡಲಿದ್ದಾರೆ ಭವ್ಯಾ ತ್ರಿವಿಕ್ರಮ್
ಬಿಗ್‌ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಹಾಗೂ ಟಾಪ್ 6 ಸ್ಪರ್ಧಿ ಭವ್ಯಾ ಗೌಡ ಇವಬ್ಬರ ಪ್ರೀತಿ ವಿಚಾರ ಎಲ್ಲರಿಗೂ ತಿಳಿದೇ ಇದೆ. ತ್ರಿವಿಕ್ರಮ್ ಅವರು ಬಿಗ್‌ಬಾಸ್ ಮನೆಯಲ್ಲಿ ಭವ್ಯಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಭವ್ಯಾ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಆದರೆ ಇವರಿಬ್ಬರ ಪೋಷಕರು ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ನಡುವೆ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವ ವಿಚಾರ ಕೇಳಿ ಬಂದಿದೆ. ಹಾಗಾದರೆ ಏನಿದು ಸುದ್ದಿ? ತ್ರಿವಿಕ್ರಮ್ ಭವ್ಯಾ ನಿಜವಾಗಲೂ ಸಿನಿಮಾ ಮಾಡ್ತಾರಾ? ಕಂಪ್ಲೀಟಾಗಿ ತಿಳಿಯೋಣ.
ಬಿಗ್ ಬಾಸ್ ಮನೆಯಲ್ಲಿ ತುಂಬಾ ಜನ ಸ್ಪರ್ಧಿಗಳು ಸಿಂಗಲ್ ಆಗಿ ಹೋಗಿ ಮಿಂಗಲ್ ಆಗಿ ಬಂದಿದ್ದು ಇದೆ. ಕೆಲವರು ಮದುವೆ ಆಗಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರೆ ಇನ್ನೂ ಕೆಲವರು ವಿಚ್ಚೇದನ ಪಡೆದುಕೊಂಡಿದ್ದಾರೆ. ಈಗ ವಿಷಯ ಅದಲ್ಲ. ಬಿಗ್‌ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರೂ ಕೂಡ ಮದುವೆ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಈ ಜೋಡಿ ಸ್ಪಷ್ಟತೆ ನೀಡಿಲ್ಲ. ಆದರೀಗ ಇವರಿಬ್ಬರೂ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತದೆ.

ಸಿನಿಮಾ ಮಾಡಲಿದ್ದಾರೆ ಭವ್ಯಾ-ತ್ರಿವಿಕ್ರಮ್
ಹೌದು... ಸೋಶಿಯಲ್ ಮೀಡಿಯಾದಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಇಬ್ಬರು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಕೇಳಿದಾಗ ಆಫರ್ ಬಂದರೆ ಕಂಡಿತ ನೋ ಹೇಳಲ್ಲ ಎಂದು ಭವ್ಯಾ ಹಾಗೂ ತ್ರಿವಿಕ್ರಮ್ ಹೇಳಿದ್ದಾರೆ. ಅಲ್ಲಿಗೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡಲು ಇಷ್ಟಪಟ್ಟಿರುವುದು ನಿಜ.
ಇನ್ನೂ ವೀಕ್ಷಕರೂ ಕೂಡ ಧಾರವಾಹಿ ಸಾಕು ಒಟ್ಟಿಗೆ ಸಿನಿಮಾ ಮಾಡಿ ಎಂದು ಕಿವಿ ಮಾತು ಹೇಳಲು ಆರಂಭಿಸಿದ್ದಾರೆ. ಇದೇ ಸ್ಪೂರ್ತಿಯಿಂದ ಭವ್ಯಾ ಹಾಗೂ ತ್ರಿವಿಕ್ರಮ್ ಒಂದೊಳ್ಳೆ ಅವಕಾಶ ಸಿಕ್ಕರೆ ದೊಡ್ಡ ಪರದೇ ಮೇಲೆ ಕಾಣಿಸಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ. ಹಾಗಾದರೆ ಸಿನಿಮಾ ಮಾಡುವ ಬಗ್ಗೆ ಭವ್ಯಾ ಹೇಳಿದ್ದೇನು?
ಸಿನಿಮಾ ಬಗ್ಗೆ ಭವ್ಯಾ ಹೇಳಿದ್ದೇನು?
ಬಿಗ್‌ಬಾಸ್ ಮನೆಯಲ್ಲಿ ಜಿಲೇಬಿ ರಾಣಿ, ಬಿಗ್‌ಬಾಸ್ ಮನೆಯ ರೌಡಿ ಬೇಬಿ, ಫನ್ನಿ ಕುಟ್ಟಿ, ಬಿಗ್‌ಬಾಸ್ ಮನೆಯ ಲೇಡಿ ಟೈಗರ್, ಟಾಸ್ಕ್ ಕ್ವೀನ್, ಲವ್ ರಾಣಿ ಎಂದೆಲ್ಲಾ ಬಿರುದು ಪಡೆದಿರುವ ಭವ್ಯಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹಲವಾರು ಜನ ಹೇಳುತ್ತಿದ್ದಾರೆ. ಭವ್ಯಾ ಅವರಿಗೆ ತ್ರಿವಿಕ್ರಮ್ ಮೇಲೆ ಪ್ರೀತಿ ಇದೆ, ಆದರೆ ಅದನ್ನು ಅವರು ಬಾಯಿ ಬಿಟ್ಟು ಹೇಳಿಕೊಳ್ಳುತ್ತಿಲ್ಲ. ತ್ರಿವಿಕ್ರಮ್ ಅವರ ಮೇಲೆ ಭವ್ಯಾಗೆ ಪ್ರೀತಿ ಇರುವುದು ಅವರ ಮುಖ ಭಾವದಲ್ಲೇ ಗೊತ್ತಾಗುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೂ ಸಿನಿಮಾ ಮಾಡುವ ವಿಚಾರದಲ್ಲಿ ಭವ್ಯಾ ಗೌಡ ಕೂಡ ಅಂತಹ ಆಫರ್ ಬಂದರೆ ಖಂಡಿತಾ ನಾನು ನಿರಾಕರಿಸುವುದಿಲ್ಲ. ಧಾರವಾಹಿಯಿಂದ ಸಿನಿಮಾ ಮಾಡುವುದು ದೊಡ್ಡ ವಿಚಾರ. ಅಂಥಹ ಅವಕಾಶ ಬಂದರೆ ನಾನು ಸಿನಿಮಾ ಮಾಡೇ ಮಾಡ್ತೀನಿ. ಸಿನಿಮಾ ತ್ರಿವಿಕ್ರಮ್ ಜೊತೆಗೆ ಅಂತಲ್ಲಾ ಆಫರ್ ಬಂದರೆ ಖಂಡಿತಾ ಅಭಿನಯಿಸುತ್ತೇನೆ ಎಂದು ಭವ್ಯಾ ಹೇಳಿದ್ದಾರೆ.
ಭವ್ಯಾ ಹಾಗೂ ತ್ರಿವಿಕ್ರಮ್ ಮದುವೆ ಆಗ್ತಾರಾ?
ಇನ್ನೂ ಭವ್ಯಾ ಒಪ್ಪಿದರೂ ಸದ್ಯಕ್ಕೆ ಮದುವೆ ಮಾತುಕತೆ ನಡೆಯುವುದು ಕಷ್ಟ ಇದೆ. ಯಾಕೆಂದರೆ ಭವ್ಯಾ ಗೌಡ ಅವರಿಗೆ ಅಕ್ಕ ಇದ್ದಾರೆ. ಅವರಿಗೆ ಮದುವೆ ಆಗಬೇಕು. ಜೊತೆಗೆ ಭವ್ಯಾ ಗೌಡ ಅವರು ಅಕ್ಕನ ಮದುವೆಯಲ್ಲಿ ಓಡಾಡುವ ಕಸನು ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಇನ್ನೂ ಮೂರು ವರ್ಷ ಮದುವೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ಸ್ವಲ್ಪ ತಮ್ಮ ವೃತ್ತಿ ಜೀವನದಲ್ಲೂ ಬೆಳೆಯಬಹುದು ಎನ್ನುವುದು ಭವ್ಯಾ ಅವರ ಆಸೆ. ಇದಕ್ಕೆ ಪೋಷಕರು ಒಪ್ಪುತ್ತಾರಾ? ಅಥವಾ ಮದುವೆ ಮಾಡಿ ಬಿಡ್ತಾರಾ ಕಾದು ನೋಡಬೇಕಿದೆ.












Click it and Unblock the Notifications