Bigg Boss 11: ವೈರಲ್ ಆಗ್ತಿದೆ ತುಕಾಲಿ ಸಂತು ಪತ್ನಿ ಮಾನಸಾ "ಪ್ರಶ್ನೆ ಮಾತು"
ಬಿಗ್‌ಬಾಸ್ ಸೀಸನ್ 11 ಶುರುವಾಗಿದ್ದು, ಈ ಬಾರಿ ಪ್ರಾರಂಭದಿಂದಲೇ ಬಿಗ್‌ಬಾಸ್ ಕಾವು ಹೆಚ್ಚಾಗಿದೆ. ಘಟಾನುಘಟಿ ಸ್ಪರ್ಧಿಗಳೇ ಈ ಬಾರಿ ಬಿಗ್‌ಬಾಸ್‌ನಲ್ಲಿದ್ದು, ಈ ಬಾರಿಯ ಸೀಸನ್ ಕುತೂಹಲ ಮೂಡಿಸಿದೆ. ಸೀಸನ್ ಪ್ರಾರಂಭವಾಗಿ ಮೊದಲ ವಾರವೇ ಬಿಗ್‌ಬಾಸ್ ಸ್ಪರ್ಧಿಗಳ ನಡುವೆ ಟಾಕ್‌ಫೈಟ್ ಜೋರಾಗಿದೆ. ನಾಮಿನೇಷನ್ ವಿಚಾರ ಜೋರಾಗಿದೆ.
ಮೊದಲವಾರ ನಾಮಿನೇಷನ್ ನಡೆಯುತ್ತಿದ್ದು, ಬಹುತೇಕ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ನಡುವೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಗೂ ಬಿಗ್‌ಬಾಸ್ ಸೀಸನ್ 10 ಸ್ಪರ್ಧಿ ತುಕಾಲಿ ಸಂತು ಅವರ ಪತ್ನಿ ಮಾನಸಾ ಅವರ ಮಾತು ವೈರಲ್ ಆಗಿದೆ.

ಮಾನಸಾ ಅವರು ಬಿಗ್‌ಬಾಸ್ 10ನೇ ಸೀಸನ್‌ನಿಂದಲೇ ಕನ್ನಡಿಗರ ಮನೆಮಾತಾಗಿದ್ದರು. ಬಿಗ್‌ಬಾಸ್ 10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತು ಅವರನ್ನು ಕುಟುಂಬದವರು ಭೇಟಿ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು. ಆಗ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಮಾನಸಾ ಅವರು ಅವರ ಸೆನ್ಸ್ ಆಫ್ ಹ್ಯೂಮರ್‌ನಿಂದಲೇ ಹೆಚ್ಚು ಫೇಮಸ್ ಆಗಿದ್ದರು.
ಕಳೆದ ಬಾರಿಯೇ ಜನ ಬಿಗ್‌ಬಾಸ್ ಸೀಸನ್ 11ರಲ್ಲಿ ಮನಸಾ ಅವರು ಇರಬೇಕು ಎಂದು ಒತ್ತಾಯ ಮಾಡಿದ್ದರು. ಅದರಂತೆ ಈ ಬಾರಿ ದೊಡ್ಮನೆಗೆ ಮನಸಾ ಅವರ ಎಂಟ್ರಿಯಾಗಿದೆ. ಎಲ್ಲ ಸ್ಪರ್ಧಿಗಳಂತೆ ಅವರು ಸಹ ಈಗ ಉತ್ಸಾಹದಿಂದ ಬಿಗ್‌ಬಾಸ್‌ನಲ್ಲಿ ಇದ್ದಾರೆ. ಈ ನಡುವೆ ಅವರ ಕನ್ನಡಾಭಿಮಾನದ ಮಾತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಮನಸಾ ಹೇಳಿದ್ದೇನು: ಬಿಗ್‌ಬಾಸ್ ಸ್ಪರ್ಧಿಯಾಗಿರುವ ಮಾನಸಾ ಅವರು, ಒಂದು ಪದ ಇಂಗ್ಲಿಷ್‌ನಲ್ಲಿ ಅರ್ಥವಾಗಲಿಲ್ಲ ಎಂದರೂ, 30 ಸಲ ಕೇಳು ಅಂತ ನನಗೆ ಹೇಳಿ ಕಳಿಸಿದ್ದಾರೆ. ನಾನು ಕೇಳ್ತೀನಿ ನಂಗೆ ಅರ್ಥ ಆಗಲ್ಲ. ಇಂಗ್ಲಿಷ್ ಅಷ್ಟೇ ಅಲ್ಲ ನನಗೆ ಕನ್ನಡದಲ್ಲಿ ಅರ್ಥವಾಗಲಿಲ್ಲ ಎಂದರೂ ನಾನು ಕೇಳುತ್ತೇನೆ ಎಂದು ಹೇಳಿದ್ದಾರೆ ಇದೀಗ ಮಾನಸ ಅವರ ಮಾತು ಸಾಕಷ್ಟು ವೈರಲ್ ಆಗಿದೆ.
ಕಿರುತೆರೆಯಲ್ಲಿ ಮಿಂಚಿದ್ದ ಮಾನಸಾ: ಈ ಬಾರಿಯ ಬಿಗ್‌ಬಾಸ್ 11ನೇ ಸೀಸನ್‌ನಲ್ಲಿ ಅವಕಾಶ ಪಡೆದಿರುವ ಮಾನಸಾ ಅವರು, ಕಳೆದ ಬಾರಿಯೂ ಪ್ರೇಕ್ಷಕರನ್ನು ರಂಜಿಸಿದ್ದರು. ಕಳೆದ ವರ್ಷ ಅವರ ಪತಿ ತುಕಾಲಿ ಸಂತು ಅವರು ಬಿಗ್‌ಬಾಸ್ ಮನೆಯಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರೆ, ಈ ಬಾರಿ ಅವರ ಪತ್ನಿ ಮಾನಸಾ ಅವರ ಸರದಿ ಎನ್ನುವಂತಾಗಿದೆ.
ಈ ನಡುವೆ ಮಾನಸಾ ಅವರು ಪ್ರಮುಖ ಕಿರುತೆರೆ ಶೋಗಳಲ್ಲಿ ಭಾಗವಹಿಸಿದ್ದರು. ಇಲ್ಲೂ ಸಹ ಅವರಿಗೆ ಒಳ್ಳೆಯ ಪ್ರೋತ್ಸಾಹ ಹಾಗೂ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕಳೆದ ಬಾರಿ ನೀವು ಬಿಗ್‌ಬಾಸ್‌ನಲ್ಲಿ ಸ್ಪರ್ಧೆ ಮಾಡಿದ್ದಿರಿ ಹೀಗಾಗಿ, ಈ ಬಾರಿ ಮಾನಸಾ ಅವರು ಬಿಗ್‌ಬಾಸ್‌ಗೆ ಹೋದರೆ ಏನಾದರೂ ಹೇಳಿತ್ತೀರಾ ಎನ್ನುವ ಪ್ರಶ್ನೆಗೆ ಬಿಗ್‌ಬಾಸ್ ಟಿಪ್ಸ್ ಕೊಟ್ಟು ಆಡುವ ಆಟವಲ್ಲ. ನನಗಿಂತ ನನ್ನ ಹೆಂಡ್ತಿಗೆ ಚೆನ್ನಾಗಿ ಆಟ ಗೊತ್ತು ಅಂತ ಹೇಳಿದ್ದರು ಸಂತು.












Click it and Unblock the Notifications