Bigg Boss: ಬಿಗ್‌ಬಾಸ್ ಮನೆಯಿಂದ ಭವ್ಯಾ ಗೌಡ ಔಟ್- ಗಳಿಸಿದ ಮತಗಳೆಷ್ಟು ಗೊತ್ತಾ?
ಬಿಗ್‌ಬಾಸ್ ಕನ್ನಡ ಸೀಸನ್ 11ರ ಓಟಿಂಗ್ ಲಿಸ್ಟ್ ಅನ್ನ ಇಂದು ಬಿಡುಗಡೆ ಮಾಡಲಾಯಿತು. ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಮನೆಯಲ್ಲಿ ಉಳಿದಿರುವ ಆರು ಸ್ಪರ್ಧಿಗಳು ಎಷ್ಟು ಮತ ಪಡೆದಿದ್ದಾರೆ ಎಂದು ಬಹಿರಂಗಪಡಿಸಿದರು. ಹಾಗಾದರೆ ಬಿಗ್‌ಬಾಸ್ ಮನೆಯಲ್ಲಿ ಆರು ಸ್ಪರ್ಧಿಗಳ ಪೈಕಿ ಯಾರು ಅತ್ಯಂತ ಕಡಿಮೆ ಮತಗಳನ್ನು ಪಡೆದಿದ್ದಾರೆ ಹಾಗೂ ಯಾರು ಮನೆಯಿಂದ ಹೊರಬಂದರು?
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಆರು ಸ್ಪರ್ಧಿಗಳ ಪೈಕಿ ಆರನೇ ಸ್ಪರ್ಧಿ ಹಾಗೂ ವಿಜೇತ ಸ್ಪರ್ಧಿ ಎಷ್ಟು ಮತ ಗಳಿಸಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದರು. ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿಜೇತ ಸ್ಪರ್ಧಿಗೆ ಒಟ್ಟು 5 ಕೋಟಿ 23 ಲಕ್ಷ 89 ಸಾವಿರದ 318 ಮತಗಳು ಬಂದಿವೆ. ಇದು ಬಿಗ್‌ಬಾಸ್ ಕನ್ನಡ ಸೀಸನ್ 10ರ ವಿಜೇತ ಸ್ಪರ್ಧಿಗೆ ಸಿಕ್ಕ ಮತಕ್ಕಿಂತ ದುಪ್ಪಟ್ಟಾಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 10ರ ವಿಜೇತ ಸ್ಪರ್ಧಿಗೆ 2 ಕೋಟಿ ಚಿಲ್ಲರೆ ಮತಗಳು ಬಂದಿದ್ದವು.

ಇನ್ನೂ ಬಿಗ್‌ಬಾಸ್ ಕನ್ನಡ ಸೀಸನ್ 11ರ ಆರನೇ ಸ್ಪರ್ಧಿಗೆ ಅಂದರೆ ಭವ್ಯಾ ಗೌಡ ಅವರಿಗೆ 64 ಲಕ್ಷ 48 ಸಾವಿರದ 853 ಮತಗಳು ಬಂದಿವೆ. ಕಳೆದ ಬಾರಿ ಅಂದರೆ ಬಿಗ್‌ಬಾಸ್ ಕನ್ನಡ ಸೀಸನ್ 10ರ ಆರನೇ ವಿಜೇತರಿಗೆ 26 ಲಕ್ಷ ಚಿಲ್ಲರೆ ಮತಗಳು ಮಾತ್ರ ಬಂದಿದ್ದವು. ಈ ಬಾರಿ ಆ ಮತಗಳು ದುಪ್ಪಟ್ಟಾಗಿದ್ದು ಈ ಬಾರಿ ಎಲ್ಲಾ ಸೀಸನ್‌ಗಿಂತಲೂ ಹೆಚ್ಚು ಮತಗಳು ಬಂದಿವೆ ಎಂದು ಕಿಚ್ಚ ಸುದೀಪ್ ಬಹಿರಂಗಪಡಿಸಿದ್ದಾರೆ. ಇನ್ನೂ ಉಳಿದಂತೆ ನಾಲ್ಕು ಜನ ಸ್ಪರ್ಧಿಗಳು ಪಡೆದ ಮತದ ಮಾಹಿತಿಯನ್ನು ನಾಳಿನ ಸಂಚಿಕೆಯಲ್ಲಿ ಬಹಿರಂಗಪಡಿಸಲಾಗುತ್ತದೆ.
ಜೊತೆಗೆ 5 ಕೋಟಿ 23 ಲಕ್ಷ 89 ಸಾವಿರದ 318 ಮತಗಳನ್ನು ಪಡೆದ ವಿಜೇತರ ಹೆಸರು ಕೂಡ ನಾಳೆ ಹೇಳಲಾಗುವುದು. ಈ ಮತಗಳನ್ನು ಕಂಡು ಮನೆಯಲ್ಲಿ ಉಳಿದ ಸ್ಪರ್ಧಿಗಳು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಮತಗಳನ್ನು ಪಡೆದ ಸ್ಪರ್ಧಿ ನಾನೇ ಆಗಿರಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾರೆ.
ಭವ್ಯಾ ಗೌಡ ಔಟ್
ಇನ್ನೂ ಬಿಗ್‌ಬಾಸ್ ಮನೆಯಿಂದ ಭವ್ಯಾ ಗೌಡ ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ಮತ ಗಳಿಸಿ ಹೊರ ಬಂದಿದ್ದಾರೆ. ಮತ್ತೊಂದು ವಿಚಾರ ಏನು ಅಂದರೆ ಭವ್ಯಾ ಗೌಡ ಅವರಿಗೆ ತಾವು ಮನೆಯಿಂದ ಹೊರ ಬರುವುದು ಪಕ್ಕಾ ಆಗಿತ್ತು. ಯಾಕೆಂದರೆ ಕಳೆದ ವಾರ ಎಲಿಮಿನೇಟ್ ಆಗುವುದರಿಂದ ಭವ್ಯಾ ಗ್ರೇಟ್ ಬಚಾವ್ ಆಗಿದ್ದರು.
ಆಗಲೂ ಮನೆಯ ಎಲ್ಲಾ ಸ್ಪರ್ಧಿಗಳು ಭವ್ಯಾ ಗೌಡ ಅವರತ್ತ ಬೆರಳು ತೋರಿಸಿದ್ದರು. ಈ ಬಾರಿ ಭವ್ಯಾ ಅವರೇ ವಿನ್ನರ್ ಲಿಸ್ಟ್‌ನಿಂದ ತಮ್ಮನ್ನ ತಾವು ಆರನೇ ಸ್ಥಾನಕ್ಕೆ ಬರುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಅವರು ಹೆಚ್ಚೇನು ಬೇಸರ ಮಾಡಿಕೊಳ್ಳಲಿಲ್ಲ.
ಭವ್ಯಾನೇ ನಮಗೆ ದೊಡ್ಡ ಟ್ರೋಪಿ- ತಾಯಿ
ಇನ್ನೂ ಭವ್ಯಾ ಗೌಡ ಮನೆಯಿಂದ ಹೊರ ಬಂದಿದ್ದಕ್ಕೆ ಬೇಸರದಿಂದಲೇ ಮಾತನಾಡಿದ ಭವ್ಯಾ ತಾಯಿ, 'ಅವಳೇ ನಮಗೆ ಒಂದು ದೊಡ್ಡ ಟ್ರೋಫಿ. ಮತ್ಯಾವ ಟ್ರೋಫಿ ಕೂಡ ನಮಗೆ ಬೇಡ. ಅವಳು ಚೆನ್ನಾಗಿ ಆಡಿದ್ದಾಳೆ. ಬಿಗ್‌ಬಾಸ್ ಮನೆ ಅವಳಿಗೆ ತುಂಬಾ ಕಳಿಸಿಕೊಟ್ಟಿದೆ. ಅಷ್ಟು ಸಾಕು' ಎಂದಿದ್ದಾರೆ.
ಒಟ್ಟಿನಲ್ಲಿ ಇಂದು ಭವ್ಯಾ ಗೌಡ ಹೊರಬಂದಿದ್ದು, ನಾಳಿನ ಸಂಚಿಕೆಯಲ್ಲಿ ಯಾರು ಹೊರಬರಲಿದ್ದಾರೆ. ಯಾರಿಗೆ ಬಿಗ್‌ಬಾಸ್ ಟ್ರೋಫಿ ಸಿಗಲಿದೆ ಎಂದು ಕಾದು ನೊಡಬೇಕಿದೆ.












Click it and Unblock the Notifications