ರಕ್ಷಕ್ ಬುಲೆಟ್‌ಗೆ ಅದೇ ಇಲ್ಲ: ವೇದಿಕೆಯಲ್ಲೇ ರಮೋಲಾ ಹೀಗಂದಿದ್ದೇಕೆ?
Bharjari Bachelors: ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಈಗ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಸಖತ್ ಮಿಂಚುತ್ತಿದ್ದಾರೆ. ರಕ್ಷಕ್ ಹಾಗೂ ರಮೋಲಾ ಅವರ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಪ್ರತಿ ಟಾಸ್ಕ್‌ನಲ್ಲಿ ಈ ಜೋಡಿ ಕಮಾಲ್ ಮಾಡುತ್ತಿದ್ದು, ವೇದಿಕೆಯಲ್ಲಿ ಆಗಾಗ ರಕ್ಷಕ್ ವಿಚಾರವಾಗಿ ಎಲ್ಲರೂ ಕಾಲೆಳೆಯುವುದೂ ಉಂಟು. ಇದೀಗ ರಕ್ಷಕ್ ಮೆಂಟರ್ ಆಗಿರುವ ರಮೋಲಾ ವೇದಿಕೆಯಲ್ಲೇ ಶೇಪ್‌ಔಟ್ ಆಗುವ ಹೇಳಿಕೆ ನೀಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಮುಜುಗರಕ್ಕೀಡಾಗಿರುವ ಸಂಗತಿಯೊಂದು ನಡೆದಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮಾತಿನ ಭರದಲ್ಲಿ ರಮೋಲಾ ಆಡಿರುವ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ. ಇದು ರಕ್ಷಕ್ ಬುಲೆಟ್‌ಗೆ ಶೇಪ್‌ಔಟ್ ಮಾಡುವಂತಿದೆ ಎಂದು ಕೆಲವರು ಅಭಿಪ್ರಾಯ ತಿಳಿಸಿದ್ದಾರೆ. ಇಷ್ಟಕ್ಕೂ ಆ ಪ್ರಸಂಗ ಏನು? ರಮೋಲಾ ಹೇಳಿದ ಮಾತಿನ ಅರ್ಥವೇನು? ಎಂಬ ವಿವರ ಇಲ್ಲಿದೆ. ರಕ್ಷಕ್-ರಮೋಲಾ ಅವರ ಇತ್ತೀಚಿನ ಪರ್ಫಾರ್ಮೆನ್ಸ್ ಬಗ್ಗೆ ಮಾತನಾಡುವಾಗ ರಮೋಲಾ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.

ರಕ್ಷಕ್ ಅವರ ಈ ಪರ್ಫಾರ್ಮೆನ್ಸ್‌ಗೆ ನನಗೆ ಮೆಂಟರಿಂಗ್ ಮಾಡೋದು ನಿಜಕ್ಕೂ ತುಂಬಾ ಕಷ್ಟವಾಗಿತ್ತು. ಯಾಕೆ ಅಂದ್ರೆ ರಕ್ಷಕ್‌ಗೆ ಅದೇ ಇಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿ ಆಂಕರ್ ನಿರಂಜನ್ ದೇಶಪಾಂಡೆ ಹಾಗೂ ಇತರೆ ಸ್ಪರ್ಧಿಗಳು ಶಾಕ್ ಆಗಿ ಜೋರಾಗಿ ನಕ್ಕಿದ್ದಾರೆ. ನಿರಂಜನ್ ಅವರೇ ನಿಮಗೆ ಇದೆಯಲ್ಲ ಅದೇ ಇಲ್ಲ, ಯಾರಾದರೂ ಅಪೋಸಿಟ್ ಜೆಂಡರ್ ಸಿಕ್ಕರೆ ಸಿಕ್ಕರೆ ಹಗ್ ಮಾಡ್ತೀರಲ್ಲ, ಅದನ್ನ ಏನಂತಾರೆ? ಅದು ರಕ್ಷಕ್‌ಗೆ ಇಲ್ಲ ಎಂದು ಮಾತನಾಡಲು ತೊದಲಿದ್ದಾರೆ.
ಇದು ಡ್ಯಾನ್ಸ್, ಕೆಲಸ ಮಾಡಬೇಕು, ಕೆಲಸ ಮಾಡಬೇಕು ಅಂತಾ ಇರ್ತೀಯಲ್ಲ. ಈಗ ಮಾಡು ಕೆಲಸಾನ, ಕೊಡು ಕೈನ ಅಂತ ರಕ್ಷಕ್ ಇಷ್ಟಿಷ್ಟೇ ಮಾಡ್ತಿದ್ದ ಎಂದು ರಮೋಲಾ ಹೇಳಿದ ಕೂಡಲೇ ನಿರಂಜನ್ ದೇಶಪಾಂಡೆ, ಅಯ್ಯೋ ಇವಳು ಏನೇನೋ ಹೇಳ್ತಿದಾಳೆ, ನಾನು ಇಲ್ಲಿಂದ ಹೊರಡುತ್ತೀನಿ ಎಂದು ಜೋಕ್ ಮಾಡಿದ್ದಾರೆ. ಬಳಿಕ ಕೆಲಸ ಎಲ್ಲಿವರೆಗೆ ಬಂತು ಅಂದ್ರೆ, ಕೆಲಸ ಅಲ್ಲಿಗೆ ನಿಂತಿತ್ತು. ಮುಂದಕ್ಕೆ ಬರಲೇ ಇರಲಿಲ್ಲ ಎಂದು ರಮೋಲಾ ಮತ್ತೆ ಅದೇ ಸ್ಟೈಲಲ್ಲಿ ಮಾತನಾಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಹೊಟ್ಟೆಹುಣ್ಣಾಗುವಂತೆ ನಕ್ಕಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೆಲವರು ರಮೋಲಾ ಪಡ್ಡೆಹುಡುಗರ ಭಾಷೆ ಬಳಸಿದ್ದಾರೆ ಎಂದಿದ್ದಾರೆ. ಹಲವರು ರಮೋಲಾ ಅವರಿಗೆ ಆ ವಾಕ್ಯವನ್ನು ಸರಿಯಾಗಿ ಉಚ್ಛರಿಸಲು ಬಂದಿಲ್ಲ. ಹಾಗಾಗಿ ಈ ರೀತಿ ಎಡವಟ್ಟಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ರಮೋಲಾ ಅವರು ಇಂಗ್ಲಿಷ್ ಮೀಡಿಯಂನಲ್ಲಿ ಜಾಸ್ತಿ ಓದಿರಬೇಕು, ಅದಕ್ಕೇ ಕನ್ನಡದಲ್ಲಿ ಭಾವನೆಗಳನ್ನು ಹೇಗೆ ಹೇಳಬೇಕು ಅನ್ನೋದನ್ನ ಹೇಳೋಕೆ ಒದ್ದಾಡಿದ್ದಾರೆ ಎಂದಿದ್ದಾರೆ. ಇವರಿಬ್ಬರ ಕಾಮಿಡಿ ನೋಡೋದೇ ಚೆಂದ ಎನ್ನುತ್ತಿದ್ದಾರೆ ಪ್ರೇಕ್ಷಕರು.












Click it and Unblock the Notifications