Get Updates
Get notified of breaking news, exclusive insights, and must-see stories!

Bhargavi LLB: 'ಅಮೃತಧಾರೆ' ನಟನೊಂದಿಗೆ 'ಭಾರ್ಗವಿ ಎಲ್‌ಎಲ್‌ಬಿ' ಖ್ಯಾತಿಯ ಕಿರುತೆರೆ ನಟಿ ರಾಧಾ ಭಗವತಿ ನಿಶ್ಚಿತಾರ್ಥ

ಕನ್ನಡ ಕಿರುತೆರೆಯ ಜನಪ್ರಿಯ ನಟ ರಾಣವ್ ಮತ್ತು ರಾಧಾ ಭಗವತಿ ಅವರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕನ್ನಡ ಕಿರುತೆರೆಯ ಇಬ್ಬರು ಪ್ರತಿಭಾವಂತ ಕಲಾವಿದರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಖ್ಯಾತಿಯ ರಾಣವ್ ಗೌಡ (ಜೆಡಿ ಪಾತ್ರಧಾರಿ) ಹಾಗೂ ಕಲರ್ಸ್ ಕನ್ನಡದ 'ಭಾರ್ಗವಿ ಎಲ್​​ಎಲ್​​ಬಿ' ಖ್ಯಾತಿಯ ರಾಧಾ ಭಗವತಿ ಅವರ ನಿಶ್ಚಿತಾರ್ಥ ಸಂಭ್ರಮದಿಂದ ನೆರವೇರಿದೆ.

ಪ್ರೀತಿ ಚಿಗುರಿದ್ದು ಎಲ್ಲಿ?

ರಾಣವ್ ಮತ್ತು ರಾಧಾ ಅವರ ಪ್ರೇಮಕಥೆ ಶುರುವಾಗಿದ್ದು "ಅಮೃತಧಾರೆ" ಧಾರಾವಾಹಿಯ ಸೆಟ್‌ನಲ್ಲಿ. ಈ ಹಿಂದೆ ರಾಧಾ ಭಗವತಿ ಅವರು ಇದೇ ಸೀರಿಯಲ್‌ನಲ್ಲಿ 'ಮಲ್ಲಿ' ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಜೊತೆಯಾಗಿ ನಟಿಸುತ್ತಿದ್ದ ಇಬ್ಬರ ನಡುವೆ ಸ್ನೇಹ ಏರ್ಪಟ್ಟು, ಅದು ಪ್ರೀತಿಯಾಗಿ ಬದಲಾಯಿತು. ನಂತರ ರಾಧಾ ಅವರಿಗೆ ಕಲರ್ಸ್‌ನ "ಭಾರ್ಗವಿ ಎಲ್​​ಎಲ್​​ಬಿ" ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದ್ದರಿಂದ ಅವರು "ಅಮೃತಧಾರೆ" ತಂಡದಿಂದ ಹೊರಬಂದಿದ್ದರು.

Bhargavi LLB Kannada Serial

ಫೋಟೋ ಹಂಚಿಕೊಂಡ ಜೋಡಿ

ತಮ್ಮ ನಿಶ್ಚಿತಾರ್ಥದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಣವ್ ಗೌಡ ಹಾಗೂ ರಾಧಾ "ಫೈನಲಿ" (Finally) ಎಂದು ಬರೆದುಕೊಂಡು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಸಹ ಕಲಾವಿದರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಸುರಿಸುತ್ತಿದ್ದಾರೆ.

ಪ್ರಸ್ತುತ ರಾಣವ್ ಗೌಡ ಅವರು 'ಅಮೃತಧಾರೆ'ಯಲ್ಲಿ ಜೆಡಿ ಪಾತ್ರದ ಮೂಲಕ ವಿಲನ್ ಹಾಗೂ ಕಾಮಿಡಿ ಶೇಡ್‌ಗಳಲ್ಲಿ ಮನೆಮಾತಾಗಿದ್ದಾರೆ. ಇನ್ನೊಂದೆಡೆ ರಾಧಾ ಭಗವತಿ ಅವರು 'ಭಾರ್ಗವಿ ಎಲ್​​ಎಲ್​​ಬಿ'ಯಲ್ಲಿ ನ್ಯಾಯವಾದಿ ಭಾರ್ಗವಿಯಾಗಿ ಮಿಂಚುತ್ತಿದ್ದಾರೆ. ತೆರೆ ಮೇಲೆ ಜೊತೆಯಾಗಿ ಮೋಡಿ ಮಾಡಿದ್ದ ಈ ಜೋಡಿ ಈಗ ನಿಜಜೀವನದಲ್ಲೂ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮತ್ತು ಸಂಭ್ರಮ ತಂದಿದೆ.

"ಅಮೃತಧಾರೆ" ಧಾರಾವಾಹಿಯಲ್ಲಿ ರಾಣವ್ (ಜೆಡಿ) ಮತ್ತು ರಾಧಾ (ಮಲ್ಲಿ) ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಕ್ಯಾಮೆರಾ ಆಫ್ ಆದಾಗ ಇವರಿಬ್ಬರ ನಡುವೆ ಪ್ರೀತಿ ಅರಳುತ್ತಿತ್ತು ಎಂಬುದು ಈಗ ಬಯಲಾಗಿದೆ. ಸೆಟ್‌ನಲ್ಲಿ ಎಲ್ಲರಿಗೂ ಇವರ ಸ್ನೇಹದ ಬಗ್ಗೆ ತಿಳಿದಿತ್ತಾದರೂ, ಅದು ಮದುವೆಯವರೆಗೆ ಹೋಗುತ್ತದೆ ಎಂದು ಯಾರು ಊಹಿಸಿರಲಿಲ್ಲವಂತೆ!

ರಾಧಾ ಭಗವತಿ ಅವರು 'ಅಮೃತಧಾರೆ'ಯಲ್ಲಿ ಪೋಷಕ ಪಾತ್ರ ಮಾಡುತ್ತಿದ್ದಾಗ ಅವರಿಗೆ ಸಿಕ್ಕ ದೊಡ್ಡ ಅವಕಾಶವೆಂದರೆ 'ಭಾರ್ಗವಿ ಎಲ್​​ಎಲ್​​ಬಿ'. ನಾಯಕಿಯಾಗಿ ಬಡ್ತಿ ಸಿಕ್ಕ ಕಾರಣ ಅವರು ಅಮೃತಧಾರೆಯನ್ನು ಬಿಡಬೇಕಾಯಿತು. ವಿಶೇಷವೆಂದರೆ, ರಾಧಾ ಅವರು ಬೇರೆ ವಾಹಿನಿಗೆ ಹೋದರೂ ರಾಣವ್ ಜೊತೆಗಿನ ಸಂಬಂಧ ಮಾತ್ರ ಹಾಗೆಯೇ ಉಳಿಯಿತು. ದೂರವಿದ್ದರೂ ಪ್ರೀತಿ ಗಟ್ಟಿಯಾಯಿತು ಎಂಬುದಕ್ಕೆ ಈ ನಿಶ್ಚಿತಾರ್ಥವೇ ಸಾಕ್ಷಿ.

ರಾಣವ್ ಮತ್ತು ರಾಧಾ ಇಬ್ಬರೂ ತಮ್ಮ ಪ್ರೀತಿಯ ವಿಚಾರವನ್ನು ಬಹಳ ಗೌಪ್ಯವಾಗಿ ಇಟ್ಟಿದ್ದರು. ಯಾವುದೇ ಹಂತದಲ್ಲೂ ಅವರು ಡೇಟಿಂಗ್ ಮಾಡುತ್ತಿರುವ ಬಗ್ಗೆ ಸುಳಿವು ನೀಡಿರಲಿಲ್ಲ. ದಿಢೀರನೆ ನಿಶ್ಚಿತಾರ್ಥದ ಫೋಟೋಗಳನ್ನು ಹಾಕುವ ಮೂಲಕ ಇಡೀ ಕಿರುತೆರೆ ಲೋಕಕ್ಕೆ 'ಸಪ್ರೈಸ್' ನೀಡಿದ್ದಾರೆ. ಇಬ್ಬರೂ ಪ್ರತಿಭಾವಂತರು, ಕಿರುತೆರೆಯ "ಪವರ್ ಕಪಲ್" ಎಂದು ಕರೆಯುತ್ತಿದ್ದಾರೆ. ಸದ್ಯಕ್ಕೆ ಇಬ್ಬರೂ ತಮ್ಮ ತಮ್ಮ ಧಾರಾವಾಹಿಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ ಶೀಘ್ರದಲ್ಲೇ ಮದುವೆಯು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+