ಭಜರಂಗಿ ನಟಿಯ ದುಬಾರಿ ಡೈಮಂಡ್‌ ರಿಂಗ್‌, ವಾಚ್‌ ಇದ್ದ ಬ್ಯಾಗ್‌ ಕಳ್ಳತನ

ನಟ ಶಿವರಾಜ್‌ ಕುಮಾರ್‌ ನಟನೆಯ ಭಜರಂಗಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ರುಕ್ಮಿಣಿ ವಿಜಯ್‌ ಕುಮಾರ್‌ ಅವರ ಬ್ಯಾಗ್‌ ಕಳ್ಳತನವಾಗಿದ್ದು, ಈ ಬ್ಯಾಗ್‌ನಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರ, ವಾಚ್‌ ಇಟ್ಟಿದ್ದರು ಎಂದು ತಿಳಿದುಬಂದಿದೆ. ಭರತನಾಟ್ಯ ಕಲಾವಿದೆಯೂ ಆಗಿರುವ ರುಕ್ಮಿಣಿ ಅವರು ಬೆಂಗಳೂರಿನಲ್ಲಿ ವಾಯುವಿಹಾರಕ್ಕೆ ಬಂದಿದ್ದಾಗ ಕಾರಿನಲ್ಲಿ ಈ ಬ್ಯಾಗ್‌ ಇಟ್ಟ ಹೋಗಿದ್ದರು. ಈ ವೇಳೆ ಕಳ್ಳ ತನ್ನ ಕೈಚಳಕ ತೋರಿದ್ದಾನೆ. ಬೆಂಗಳೂರಿನ ಕೇಂದ್ರ ಭಾಗವಾದ ಕಬ್ಬನ್‌ಪಾರ್ಕ್‌ ಬಳಿ ಕಳ್ಳತನ ನಡೆದಿತ್ತು. ಬಳಿಕ ಕಬ್ಬನ್‌ ಪೊಲೀಸರು ಇದರ ತನಿಖೆ ಶುರು ಮಾಡಿದ್ದರು.

ಬೆಂಗಳೂರಿನವರೇ ಆದ ರುಕ್ಮಿಣಿ ವಿಜಯ್‌ ಕುಮಾರ್‌ ಅವರು ಮೇ 11ರಂದು ಬೆಳಗ್ಗೆ ನಟಿ ವಾಕಿಂಗ್‌ ಮಾಡಲು ಕಬ್ಬನ್‌ಪಾರ್ಕ್‌ಗೆ ಕಾರಿನಲ್ಲಿ ಬಂದಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ರುಕ್ಮಿಣಿ ಅವರು ತಮ್ಮ ಕಾರನ್ನು ನಿಲ್ಲಿಸಿದ್ದರು. ಕಾರಿನಲ್ಲಿದ್ದ ಹ್ಯಾಂಡ್‌ಬ್ಯಾಗ್‌ನಲ್ಲಿ 10 ಲಕ್ಷ ರೂಪಾಯಿ ಬೆಲೆ ಬಾಳುವ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ಮೌಲ್ಯದ ವಾಚ್‌ ಸೇರಿದಂತೆ ಇನ್ನಿತರೆ ಬೆಲೆಬಾಳುವ ವಸ್ತುಗಳನ್ನು ಇಟ್ಟಿದ್ದರು.

Bhajarangi Actress Rukmini Vijayakumar Robbery Case Accused Arrested Stealing Diamond Ring Watch Bag

ಆದರೆ ವಾಯುವಿಹಾರಕ್ಕೆ ಹೊರಟ ನಟಿ ತಮ್ಮ ಕಾರು ಡಿಕ್ಕಿ ಲಾಕ್ ಮಾಡದೆ ಹೋಗಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ್ದ ವ್ಯಕ್ತಿಯೊಬ್ಬ ಕಾರ್‌ ಬಾಗಿಲು ತೆಗೆದು ವಜ್ರದ ಆಭರಣ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಕಳ್ಳತನ ಮಾಡಿ ಎಸ್ಕೇಪ್‌ ಆಗಿದ್ದ. ವಾಯುವಿಹಾರ ಮುಗಿಸಿ ವಾಪಸ್‌ ಬಂದಾಗ ಕಾರ್‌ ಬಾಗಿಲು ತೆರೆದಿರುವುದನ್ನು ಕಂಡು ನಟಿ ಆತಂಕಕ್ಕೆ ಒಳಗಾಗಿದ್ದರು. ಬಳಿಕ ಒಳಗಿದ್ದ ತಮ್ಮ ಬ್ಯಾಗ್‌ ಕಳ್ಳತನವಾಗಿರುವುದು ತಿಳಿದು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

Take a Poll

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಅಸಲಿಗೆ ಈ ಕಳ್ಳತನ ಮಾಡಿರುವುದು ಕಾರು ಚಾಲಕ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಟಿ ತಮ್ಮ ಕಾರು ಲಾಕ್‌ ಮಾಡದೆ ಹೋಗಿರುವುದನ್ನು ಗಮನಿಸಿ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಕದ್ದ ಬ್ಯಾಗ್‌ ಮನೆಯಲ್ಲೇ ಇರುವುದಾಗಿ ತಿಳಿಸಿದ ಬೆನ್ನಲ್ಲೇ ಪೊಲೀಸರು ಆ ಬ್ಯಾಗ್‌ ವಶಪಡಿಸಿಕೊಂಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿ ವಾಸವಿರುವ ಕಾರು ಚಾಲಕ ಈ ನಟಿಯ ಬ್ಯಾಗ್‌ ಎಗರಿಸಿರುವುದು ಬಯಲಿಗೆ ಬಂದಿದೆ. ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಚಾಲಕನನ್ನು ಬಂಧಿಸಿ 22.50 ಲಕ್ಷ ರೂ. ಮೌಲ್ಯದ ವಜ್ರದ ಆಭರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 1,50,000 ರೂಪಾಯಿ ಮೌಲ್ಯದ ಬ್ಯಾಗ್, 75,000 ಬೆಲೆಯ ಪರ್ಸ್, 10 ಲಕ್ಷ ರೂಪಾಯಿ ಬೆಲೆಬಾಳುವ ಡಬಲ್ ಬ್ಯಾಂಡೆಡ್ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್, 3 ಲಕ್ಷ ಮೌಲ್ಯದ ಮತ್ತೊಂದು ಡೈಮಂಡ್ ರಿಂಗ್ ಸೇರಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+