Actress Hema Arrest: ರೇವ್ ಪಾರ್ಟಿಗೆ ಹೋಗಿರಲಿಲ್ಲ ಎನ್ನುತ್ತಿದ್ದ ತೆಲುಗು ನಟಿ ಹೇಮಾ ಬಂಧನ
ಬೆಂಗಳೂರು, ಜೂನ್. 03: ಇತ್ತೀಚೆಗೆ ಬೆಂಗಳೂರಿನಲ್ಲಿ ರೇವ್ ಪಾರ್ಟಿಯೊಂದು ಭಾರಿ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಈ ಪಾರ್ಟಿಯಲ್ಲಿ ತೆಲುಗು ನಟ ನಟಿಯರು ಇದ್ದರು ಎನ್ನಲಾಗಿದೆ. ಪಾರ್ಟಿಯಲ್ಲಿ ಭಾಗಿಯಾಗಿ ಬಳಿಕ ನಾನು ಅಲ್ಲಿ ಇರಲಿಲ್ಲ ತೋಟದಲ್ಲಿ ಇದ್ದೆ ಎಂದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿದ್ದ ತೆಲುಗು ನಟಿ ಹೇಮಾ ಅವರನ್ನು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತೆಲುಗು ನಟಿ ಹೇಮಾರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೊದಲ ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ಆದರೂ ನಟಿ ವಿಚಾರಣೆಗೆ ಹಾಜರಾಗಿರಲಿಲ್ಲ. ಎರಡನೇ ನೋಟಿಸ್ ನೀಡಿದ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದರು.

ಸಿಸಿಬಿ ವಿಚಾರಣೆ ವೇಳೆ ಪ್ರಕರಣದ ಬಗ್ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಸೋಮವಾರ (ಜೂನ್ 3) ನಟಿ ಹೇಮಾ ಅವರನ್ನು ಬಂಧಿಸಲಾಗಿದೆ. ಡ್ರಗ್ಸ್ ಹಾಗೂ ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿ ಹೇಮಾ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಮಾಹಿತಿಯಿದೆ.
ಆದರೆ, ತಾವು ಅಲ್ಲಿ ಇರಲಿಲ್ಲ ಎಂಬುದನ್ನು ನಿರೂಪಿಸಲು ಹಲವು ಬಾರಿ ಪೊಲೀಸರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದರು. ಆದರೆ, ಸಿಸಿಬಿ ಪೊಲೀಸರು ತಮ್ಮ ತನಿಖೆಯಲ್ಲಿ ಮುಂದುವರೆದು ಇವತ್ತು ಅವರನ್ನು ಬಂಧಿಸಿದ್ದಾರೆ.

ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಇದ್ದರು ಎಂದು ಪೊಲೀಸರು ಅಧಿಕೃತವಾಗಿ ಘೋಷಣೆ ಮಾಡಿದ ನಂತರವೂ, ಹೇಮಾ ಅವರು ಪಾರ್ಟಿಯಲ್ಲಿ ಭಾಗವಹಿಸಿಲ್ಲ ಎಂದು ಖಚಿತಪಡಿಸಲು ಯತ್ನಿಸಿದ್ದರು. ಅವರ ರಕ್ತದ ಮಾದರಿಗಳನ್ನು ತೆಗೆದುಕೊಂಡು ಹೇಮಾ ಡ್ರಗ್ಸ್ ಸೇವಿಸಿದ್ದಾರೆ ಎಂಬ ಪಾಸಿಟಿವ್ ವರದಿ ಬಂದ ನಂತರ ಬೆಂಗಳೂರು ಪೊಲೀಸರು ಆಕೆಗೆ ನೋಟಿಸ್ ಜಾರಿ ಮಾಡಿದ್ದಾರೆ.
ಬುರ್ಖಾ ಧರಿಸಿ ವಿಚಾರಣೆಗೆ ಬಂದಿದ್ದ ನಟಿ ಹೇಮಾ
ಇನ್ನು, ನಟಿ ಹೇಮಾ ಅವರು ವಿಚಾರಣೆಗೆ ಹಾಜರಾಗಲು ಬುರ್ಖಾ ಧರಿಸಿ ಬಂಧಿದ್ದರು ಎಂಬುದು ಇನ್ನೊಂದು ವಿಶೇಷ. ಬಂಧನಕ್ಕೆ ಒಳಗಾಗಿರುವವ ನಟಿ ಹೇಮಾ ಅವರಿಗೆ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹೇಮಾಗೆ ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ನಾಳೆ ಬೆಳಗ್ಗೆ ಅವರನ್ನು ಆನೇಕಲ್ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ












Click it and Unblock the Notifications